ಹೊರಗುತ್ತಿಗೆ ನೌಕರರಿಂದ ಅಕ್ರಮ

ಹೊಸ ನೌಕರರ ನೇಮಕಕ್ಕೆ ಶಾಸಕ ಮಾಧುಸ್ವಾಮಿ ಸೂಚನೆ

Team Udayavani, Jul 6, 2019, 5:01 PM IST

ತಾಲೂಕು ಪಂಚಾಯತಿ ಕೆಡಿಪಿ ಸಭೆ ಶಾಸಕ ಜೆ.ಸಿ.ಮಾಧುಸ್ವಾಮಿ ನೇತೃತ್ವ ದಲ್ಲಿ ನಡೆಯಿತು. ತಾಪಂ ಅಧ್ಯಕ್ಷ್ಷೆ ಚೇತನ ಗಂಗಾಧರ್‌ ಇತರರಿದ್ದರು.

ಚಿಕ್ಕನಾಯಕನಹಳ್ಳಿ: ಕೆಲ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಿಂದ ಅಕ್ರಮ ನಡೆಯುತ್ತಿದ್ದು, 3 ವರ್ಷ ಪೂರೈಸಿರುವ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ಹೊಸ ನೌಕರರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಶಾಸಕ ಜೆ.ಸಿ. ಮಾಧುಸ್ವಾಮಿ ಸೂಚಿಸಿದರು.

ತಾಲೂಕು ಪಂಚಾಯತಿ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ 26 ಇಲಾಖೆಗಳ ಪ್ರಗತಿ ವರದಿ ಪರಿಶೀಲಿಸಿ ಮಾತನಾಡಿದರು.

ಅಬಕಾರಿ ಇಲಾಖೆ ನಿರ್ಲಕ್ಷ್ಯದಿಂದ ಪೆಟ್ಟಿಗೆ ಅಂಗಡಿಗಳಲ್ಲಿಯೂ ಮದ್ಯ ಮಾರಟವಾಗುತ್ತಿದೆ. ವಾಹನಗಳಲ್ಲಿ ಅನಧಿಕೃತವಾಗಿ ಮದ್ಯ ಸಾಗಣೆ ನಿಲ್ಲಿಸಬೇಕು ಎಂದು ಹೇಳಿದರು.ಅಂಬೇಡ್ಕರ್‌ ಭವನಗಳ ನಿರ್ವಹಣೆ ಸರಿಯಿಲ್ಲದೆ ಪಾಳುಬಿದ್ದ ಮನೆಗಳಂತಾ ಗಿವೆ. ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರ್‌ನಲ್ಲಿನ ಅಂಬೇಡ್ಕರ್‌ ಭವನ ಸ್ವಚ್ಛಗೊಳಿಸಲು ಇಒ ನಾರಾಯಣ ಸ್ವಾಮಿಗೆ ಶಾಸಕರು ಸೂಚಿಸಿದರು.

ಜಾನುವಾರುಗಳ ತಪಾಸಣೆ ನಿಯ ಮಿತವಾಗಿ ಮಾಡಬೇಕು ಎಂದು ಪಶು ಇಲಾಖೆ ವೈದ್ಯಾಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು. ಭಾಗ್ಯಲಕ್ಷ್ಮೀ ಬಾಂಡ್‌ಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ, ಅಂಗನವಾಡಿಗಳಲ್ಲಿ ಆಹಾರ ಪದ್ಧತಿ ಬದಲಾಯಿಸಿಕೊಳ್ಳುವಂತೆ ಸಿಡಿಪಿಒ ತಿಪ್ಪಯ್ಯಗೆ ತಿಳಿಸಿದರು.

ಹುಳಿಯಾರಿನ ಬಸ್‌ ನಿಲ್ದಾಣದ ಒಳಭಾಗದಲ್ಲಿರುವ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಜಿಪಂ ಸದಸ್ಯ ವೈ.ಸಿ ಸಿದ್ದರಾಮಯ್ಯ ತಿಳಿಸಿ ದರು. ಇದಕ್ಕೆ ಉತ್ತರಿಸಿದ ಶಾಸಕರು ಬಸ್‌ ನಿಲ್ದಾಣದಲ್ಲಿನ ಅಂಗಡಿಗಳನ್ನು ಎರಡು ದಿನಗಳ ಒಳಗೆ ಖಾಲಿ ಮಾಡಿಸುವಂತೆ ಹುಳಿಯಾರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಚೇತನ ಗಂಗಾಧರ್‌, ತಹಶೀಲ್ದಾರ್‌ ತೇಜಸ್ವಿನಿ, ಜಿಪಂ ಸದಸ್ಯ ರಾದ ವೈ.ಸಿ.ಸಿದ್ದ ರಾಮಯ್ಯ, ಕಲ್ಲೇಶ್‌, ಮಹಾಲಿಂಗಯ್ಯ, ಹೊನ್ನೇಬಾಗಿ ಶಶಿಧರ್‌, ರಾಜ್‌ಕುಮಾರ್‌ ಮತ್ತಿತರರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಚಿಕ್ಕನಾಯಕನಹಳ್ಳಿ: ಪಟ್ಟಣದ ಸಮೀಪದ ಹೊನ್ನೇಭಾಗಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮಸಾಲ್ತಿ ಗುಡ್ಲು ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಇಲ್ಲದೇ ಗ್ರಾಮಸ್ಥರು ಸಾಂಕ್ರಾಮಿಕ...

  • ಕೊರಟಗೆರೆ: ಎಚ್‌ಐವಿ ಸೋಂಕು ತಡೆಗಟ್ಟುವಲ್ಲಿ ಯುವಜನತೆ ಪಾತ್ರ ಅತಿ ಮುಖ್ಯವಾಗಿದೆ. ಆರೋಗ್ಯವಂತೆ ಸಮಾಜವನ್ನು ನಿರ್ಮಿಸ ಬೇಕಾದರೆ ಪ್ರತಿಯೊಬ್ಬರೂ ಈ ಮಾರಕ ರೋಗದ...

  • ತುಮಕೂರು: ಧಾರ್ಮಿಕ, ಶೈಕ್ಷಣಿಕ ನಗರ ತುಮಕೂರಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳ...

  • ತುಮಕೂರು: ಮಾಂಸಹಾರಿಗಳಿಗೆ ಉತ್ಕೃಷ್ಟದ ಮಾಂಸ ನೀಡಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯದಲ್ಲೇ ಅತೀ ಹೆಚ್ಚು ಕುರಿ, ಮೇಕೆ ಸಾಕಾಣಿಕೆ ಕೇಂದ್ರವಾಗಿರುವ...

  • ಹುಳಿಯಾರು: ವಾಯುಭಾರ ಕುಸಿತದಿಂದ ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆ ರಾಗಿ ಬೆಳೆಗಾರರಿಗೆ ಸಂಭ್ರಮಕ್ಕೆ ಅಡ್ಡಿಯುಂಟು ಮಾಡಿದೆ. ಸಮಯಕ್ಕೆ ತಕ್ಕಂತೆ...

ಹೊಸ ಸೇರ್ಪಡೆ

  • ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್‌ ಗಾಂಧಿ ವಸತಿ ನಿಗಮದ ಬದಲು ಮತ್ತೆ...

  • ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...

  • ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ....

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...