ಪಾವಗಡ: ವಿದ್ಯುತ್ ತಂತಿ ತುಳಿದು ಯುವಕ ಸಾವು
Team Udayavani, Aug 7, 2022, 5:08 PM IST
ಪಾವಗಡ: ವಿದ್ಯುತ್ ತಂತಿ ತುಳಿದು ಯುವಕನೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೊಮ್ಮತನಹಳ್ಳಿ ಬಳಿಯ ತೋಟದಲ್ಲಿ ಭಾನುವಾರ ನಡೆದಿದೆ.
ರಮೇಶ್ (25) ಮೃತ ಯುವಕವೆಂದು ತಿಳಿದು ಬಂದಿದೆ.
ಬೆಳಿಗ್ಗೆ ತೋಟಕ್ಕೆ ಹೋಗಿದ್ದ ಯುವಕ ತುಂಡಾಗಿ ಬಿದ್ದಿದ್ದ ಹೈ ಟೆನ್ಷನ್ ವೈರ್ ತುಳಿದಿದ್ದಾನೆ. ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬೆಸ್ಕಾಂ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.