ಜಿಲ್ಲೆಯಲ್ಲಿ ಕಾಡುತ್ತಿವೆ ಸಾಂಕ್ರಾಮಿಕ ರೋಗ

ಜ್ವರ, ತಲೆ ನೋವು, ಶೀತ ಪ್ರಕರಣಗಳು ಹೆಚ್ಚಳ ; ಸಾರ್ವಜನಿಕರೇ ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡಿ

Team Udayavani, Sep 21, 2021, 4:35 PM IST

ಜಿಲ್ಲೆಯಲ್ಲಿ ಕಾಡುತ್ತಿವೆ ಸಾಂಕ್ರಾಮಿಕ ರೋಗ

ಕಲ್ಪತರು ನಾಡಿನಲ್ಲಿ ಕೋವಿಡ್‌ ಎರಡನೇ ಅಲೆಯ ಅಬ್ಬರ ಸ್ಪಲ್ಪ ತಗ್ಗಿದೆ, ಮೂರನೇ ಅಲೆ ಬರುತ್ತದೆ ಎನ್ನುವ ಭೀತಿಯಲ್ಲಿ ಜನರಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಡೆಂಗ್ಯೂ ಚಿಕೂನ್‌ಗುನ್ಯಾ ಜೊತೆಗೆ ಮೆದುಳು ಜ್ವರ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಭೀತಿಗೊಳಿಸುತ್ತಿದೆ. ಮಕ್ಕಳಲ್ಲಿ ಜ್ವರ ಪ್ರಕರಣಗಳು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಮಳೆ ಬಂದು ನಿಂತಿರುವ ಪರಿಣಾಮ ಅಲ್ಲಲ್ಲಿ ನೀರು ನಿಂತು ಮಲಿನವಾಗಿ, ಸೊಳ್ಳೆಗಳ ಉತ್ಪತ್ತಿ ತಾಣಗಳಾಗುತ್ತಿದೆ. ಈ ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳು ಕಾಣಿಸುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ತುಮಕೂರು: ಮುಂಗಾರು ಮಳೆ ಆರಂಭವಾದರೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಕಾಟ ತೀವ್ರವಾಗುತ್ತದೆ. ಜೂನ್‌ನಿಂದ ಸೆಪ್ಟಂಬರ್‌ವರೆಗೆ ಈ ಹಿಂದಿನ ಅಂಕಿ-ಅಂಶ ಪರಿಶೀಲಿಸಿದರೆ, ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಡೆಂಗ್ಯೂ ಚಿಕೂನ್‌ಗುನ್ಯಾ, ಮಲೇರಿಯಾ, ಕರಳು ಬೇನೆ, ವಿಷಮ ಶೀತ ಜ್ವರ, ಮೆದುಳು ಜ್ವರ ಸೇರಿದಂತೆ ಹಲವು ಸಾಂಕ್ರಾಮಿಕ ರೋಗದಿಂದ ಜನ ಬಳಲುತ್ತಿದ್ದಾರೆ. ಈ ರೋಗಗಳು ಬಾರದಂತೆ ತಡೆಗಟ್ಟ ಬೇಕಾಗಿರುವ ಜವಾಬ್ದಾರಿ ವಿವಿಧ ಇಲಾಖೆಗಳ ಮೇಲಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸರ್ಕಾರಿ ಇಲಾಖೆಗಳು ವಿಫ‌ಲವಾಗಿದೆ.

ಪ್ರತಿವರ್ಷ ಸಹಜವಾಗಿಯೇ ಜೂನ್‌, ಜುಲೈ ತಿಂಗಳಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಆಶ್ರೀತ ರೋಗಗಳ ನಿಯಂತ್ರಾಣಾಧಿಕಾರಿಗಳ ಕಚೇರಿ, ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಘಟಕ ಸೇರಿದಂತೆ ವಿವಿಧ ಇಲಾಖೆಗಳು ಸಭೆ ನಡೆಸಿ, ಜಿಲ್ಲೆಯಲ್ಲಿ ಸಾಂಕ್ರಾ ಮಿಕ ರೋಗಗಳು ಬರದಂತೆ ತಡೆಗಟ್ಟಲು ಸಮನ್ವಯ ಸಮಿತಿ ಸಭೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತದೆ. ಪ್ರತಿ ಸಭೆಯಲ್ಲೂ ಜಿಲ್ಲೆಯಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾ ರೋಗಗಳನ್ನು ತಡೆಗಟ್ಟಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ ಸಭೆ, ಸಮಾರಂಭಗಳಲ್ಲಿ ಹೇಳುತ್ತಾ ಬರುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳಿಂದ ಬಳಲುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ.

ಮುಂಗಾರು ಮಳೆ ಆರಂಭ: ಜಿಲ್ಲೆಯಾದ್ಯಂತ ಈಗ ಮುಂಗಾರು ಮಳೆ ಆರಂಭವಾಗಿದೆ. ಆದರೆ, ಮಳೆ ಬಿರುಸಾಗಿ ಬೀಳುತ್ತಿಲ್ಲ. ಈ ಹಿಂದೆ ಪೂರ್ವ ಮುಂಗಾರಿ ನಲ್ಲಿ ಬಿದ್ದ ಮಳೆಯಿಂದ ಅಲ್ಲಲ್ಲಿ ಗುಂಡಿಗೊಟರುಗಳಲ್ಲಿ ನೀರು ನಿಂತಿದೆ. ನೀರು ನಿಲ್ಲದಂತೆ ಗಮನ ಹರಿಸಬೇಕಾ ಗಿರುವ ಸ್ಥಳೀಯ ಸಂಸ್ಥೆಗಳು ವಿಫ‌ಲವಾಗಿರುವ ಹಿನ್ನಲೆಯಲ್ಲಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗ ತೊಡಗಿದೆ. ಈ ಸೊಳ್ಳೆಗಳಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ.

ಇದನ್ನೂ ಓದಿ:‘ಅಕ್ಷಿ’ ಯಿಂದ ಬಂತು ಹಾಡು: ನೇತ್ರದಾನದ ಮಹತ್ವ ಸಾರುವ ಚಿತ್ರ

ಜಿಲ್ಲೆಯನ್ನು ಕಾಡುತ್ತಿದೆ ಡೆಂಗ್ಯೂ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜ್ವರದಿಂದ ಜನರು ಆತಂಕದಲ್ಲಿದ್ದಾರೆ. ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲೆಯಾದ್ಯಂತ ಜನವರಿ 2021ರಿಂದ ಸೆ.18ರವರೆಗೆ ಅಂತ್ಯದವರೆಗೆ ಸಮಶಯಾಸ್ಪದ ಜ್ವರ ಪ್ರಕರಣದಿಂದ 340 ರಕ್ತ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 71 ಡೆಂಗ್ಯೂ, 77 ಚಿಕೂನ್‌ಗುನ್ಯಾ ಪ್ರಕರಣಗಳು ಇವೆ ಎಂದು ದೃಢ ಪಟ್ಟಿದೆ. ಈ ಪ್ರಕರಣಗಳಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ತುಮಕೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗ್ಯೂ ಕಂಡುಬಂದಿದೆ. ತುಮಕೂರು ನಗರದಲ್ಲಿ – 21, ಗುಬ್ಬಿ- 1, ತುರುವೇಕೆರೆ – 3, ಶಿರಾ -12, ಮಧುಗಿರಿ -12 ಕೊರಟಗೆರೆ -4, ಪಾವಗಡ-11, ಕುಣಿಗಲ್‌-1, ಚಿಕ್ಕನಾಯಕನಹಳ್ಳಿ-1 ಇತರೆ 5 ಪ್ರಕರಣಗಳು ಇದ್ದು, ಒಟ್ಟು ಜಿಲ್ಲೆಯಲ್ಲಿ 71 ಜನರು ಡೆಂಗ್ಯೂ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದಾರೆ. ಕಳೆದ ವರ್ಷ 30 ಪ್ರಕರಣಗಳು ಮಾತ್ರ ಇದ್ದವು. ಆದರೆ, ಈ ವರ್ಷ ಹೆಚ್ಚಾಗಿದೆ.

ಅನೇಕ ಜನರು ಚಳಿ ಜ್ವರ. ಮೈ ಕೈನೋವು ಕಾಣಿಸಿಕೊಳ್ಳುತ್ತಲೇ ಇದು ಡೆಂಗ್ಯೂ ಇರಬಹುದೆಂದು ಭಯಭೀತರಾಗಿ ತುಮಕೂರು ನಗರದ ವಿವಿಧ ಖಾಸಗಿ ಆಸ್ಪತ್ರೆ ಮತ್ತು ಬೆಂಗಳೂರು ರಾಮಯ್ಯ ಆಸ್ಪತ್ರೆ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

77 ಮಂದಿಗೆ ಚಿಕೂನ್‌ಗುನ್ಯಾ: ಜಿಲ್ಲೆಯಲ್ಲಿ 77 ಜನರಿಗೆ ಚಿಕೂನ್‌ಗುನ್ಯಾ ಕಂಡು ಬಂದಿದ್ದು, ತುಮಕೂರಿನಲ್ಲಿ 22, ಗುಬ್ಬಿ- 4, ತುರುವೇಕೆರೆ- 1, ಶಿರಾ- 16, ಮಧುಗಿರಿ- 14, ಕೊರಟಗೆರೆ -2, ಪಾವಗಡ-10, ಕುಣಿಗಲ್‌-2, ಚಿಕ್ಕನಾಯಕನಹಳ್ಳಿ-2 ಇತರೆ 2 ಪ್ರಕರಣಗಳಿದ್ದು, ಒಟ್ಟು ಜಿಲ್ಲೆಯಲ್ಲಿ 77 ಜನರು ಚಿಕೂನ್‌ ಗುನ್ಯಾ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದಾರೆ. ಕಳೆದ ವರ್ಷವೂ 78 ಪ್ರಕರಣಗಳು ಇದ್ದವು.

ಚಿಕೂನ್‌ಗುನ್ಯಾ ತುಮಕೂರೇ ಮೊದಲು:
ತುಮಕೂರು ನಗರದಲ್ಲಿ ಸೊಳ್ಳೆಗಳ ಕಾಟ ತೀವ್ರವಾಗಿದೆ. ಗ್ರಾಮೀಣ ಪ್ರದೇಶಗಳಿಗಿಂತ ನಗರದಲ್ಲಿ ಹೆಚ್ಚು ಉತ್ಪತ್ತಿಯಾಗುವ ಲಾರ್ವಾ ಕಂಡು ಬಂದಿದೆ. ನಗರದ ಮರಳೂರು ದಿಣ್ಣೆ, ಜೆಸಿಆರ್‌ ಕಾಲೋನಿ, ಪಿಎಚ್‌ ಕಾಲೋನಿ, ಇಸ್ಮಾಯಿಲ್‌ ನಗರ, ಹೆಗ್ಡೆ ಕಾಲೋನಿ, ಕುರಿ ಪಾಳ್ಯ, ಶಾಂತಿ ನಗರ, ಅಗ್ರಹಾರ, ಚಿಕ್ಕಪೇಟೆ ಬನಶಂಕರಿ, ಕೋತಿತೋಪು, ಭಾಗ್ಯಲಕ್ಷ್ಮೀ ನಗರ, ಗುಬ್ಬಿಗೇಟ್‌ ಮೊದಲಾದ ಕಡೆಗಳಲ್ಲಿ ಸೊಳ್ಳೆಗಳಿಂದ ಜ್ವರ ಪೀಡೀತರ ಸಂಖ್ಯೆ ತೀವ್ರವಾಗಿದೆ.

ಕಡಿಮೆಯಾದ ಮಲೇರಿಯಾ: ಒಂದು ಕಾಲದಲ್ಲಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದ್ದ ಮಲೇರಿಯಾ ಕಾಯಿಲೆ ಜಿಲ್ಲೆಯಲ್ಲಿ ಈಗ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಹೋಗಿದೆ. ಅಂಕಿ- ಅಂಶಗಳಲ್ಲಿ ಕಡಿಮೆಯಾಗುತ್ತಿದ್ದು, ಆರೋಗ್ಯ ಇಲಾಖೆ ಪ್ರಕಾರ ಕೇವಲ 3 ಪ್ರಕರಣಗಳು ಮಾತ್ರ ಮಲೇರಿಯಾ ಪೀಡಿತರೆಂದು ವರದಿಯಾಗಿದೆ.

ಹೆಚ್ಚು ಮಂದಿಗೆ ಮೆದುಳು ಜ್ವರ: ಜಿಲ್ಲೆಯಲ್ಲಿ ಮೆದುಳು ಜ್ವರ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದು, ಸಾವು ನೋವುಗಳು ಆಗಿವೆ ಎಂದು ತಿಳಿದು ಬಂದಿದೆ. ಮೆದುಳು ಜ್ವರವು ವೈರಾಣುವಿಂದ ಉಂಟಾಗುವ ರೋಗ. ಈ ರೋಗವನ್ನು ಜಪಾನೀಸ್‌ ಎನ್ಸಿಫ‌ಲೈಟಿಸ್‌ ಎಂದೂ ಕರೆಯುತ್ತಾರೆ. ಈ ರೋಗವು ಸುಧಾರಣವಾಗಿ ಹಂದಿಗಳಿಗೆ ಕಚ್ಚಿದ ಸೊಳ್ಳೆ ಕಚ್ಚಿದರೆ, ಹರಡುತ್ತದೆ ಎಂದು ತಿಳಿದು ಬಂದಿದ್ದು, ಶೇ.30ರಿಂದ 50ರಷ್ಟು ಮಕ್ಕಳು ಮರಣ ಹೊಂದುವ ಸಂಭವವಿದೆ. ಈ ರೋಗದಿಂದ ನರದೌರ್ಬಲ್ಯ ಮತ್ತು ಬುದ್ಧಮಾಂದ್ಯತೆ ಉಂಟಾಗುತ್ತದೆ. 25 ಜನರಿಗೆ ಮೆದುಳು ಜ್ವರ ಕಂಡು ಬಂದಿದೆ.

ಸ್ವಚ್ಛತೆ ಕಾಪಾಡುವಲ್ಲಿ ವಿಫ‌ಲ: ಸ್ಮಾರ್ಟ್ ಸಿಟಿಯಾಗಲಿರುವ ತುಮಕೂರು ನಗರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಮಹಾನಗರ ಪಾಲಿಕೆ ವಿಫ‌ಲವಾಗಿದೆ ಎನ್ನುವ ಮಾತು ನಾಗರಿಕರಿಂದ ಕೇಳಿ ಬರುತ್ತಿದೆ. ಆದರೆ, ಪಾಲಿಕೆ ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಆದರೂ ನಗರದಲ್ಲಿ ಸೊಳ್ಳೆಗಳ ಕಾಟ ತೀವ್ರಗೊಂಡಿದೆ. ನಗರದಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಲು ಕ್ರಮ ವಹಿಸಲಾಗಿದೆ ಎನ್ನುತ್ತಾರೆ ಪಾಲಿಕೆ ಆಯುಕ್ತೆ ರೇಣುಕಾ.

ಇದನ್ನೂ ಓದಿ:ದಾರಿ ಯಾವುದಯ್ಯ ಶಾಲೆಗೆ ? ಶಾಲೆಗೆ ಹೋಗುವ ವಿದ್ಯಾರ್ಥಿಗಳ ನಿತ್ಯ ನರಕಯಾತನೆ

ಸ್ವಚ್ಛತೆಗೆ ಆದ್ಯತೆ ನೀಡಲಿ
ಜಿಲ್ಲೆಯಲ್ಲಿ ಸದ್ಯ ಕೊರೊನಾ 2ನೇ ಅಲೆ ಕಡಿಮೆಯಾಯಿತು ಎಂದುಕೊಂಡು ನೆಮ್ಮದಿ ಜೀವನ ಸಾಗಿಸಲು ಮುಂದಾಗಿದ್ದ ಜನರಿಗೆ ಈಗ ಸಾಂಕ್ರಾಮಿಕ ರೋಗಗಳು ಕಾಡುತ್ತಿವೆ. ಸ್ಮಾರ್ಟ್‌ ಸಿಟಿಯಾಗಲಿರುವ ತುಮಕೂರು ನಗರದಲ್ಲಿ ತೀವ್ರ ಸೊಳ್ಳೆಗಳ ಕಾಟ ಜಾಸ್ತಿಯಾಗುತ್ತಿದೆ.  ಡೆಂಗ್ಯೂ ಚಿಕೂನ್‌ಗುನ್ಯಾ, ಮೆದುಳು ಜ್ವರ ಪ್ರಕರಣಗಳು ನಗರದಲ್ಲಿ ಹೆಚ್ಚಿದ್ದು, ರೋಗ ಹರಡುವ ಸೊಳ್ಳೆಗಳ ನಿಯಂತ್ರಣ ಮಾಡುವಲ್ಲಿ ಮಹಾನಗರ ಪಾಲಿಕೆ ಹೆಚ್ಚು ಅಸಕ್ತಿ ತೋರಿದರೂ, ಜನ ಕೂಡಾ ತಮ್ಮ ಬಡಾವಣೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾವಿರಾರು ರೂ. ಖರ್ಚು ನಗರದ ಪ್ರತಿ ಬಡಾವಣೆಯಲ್ಲೂ ಜನ ವಿವಿಧ ಜ್ವರದಿಂದ ಬಳಲುತ್ತಿದ್ದಾರೆ. ಜಿಲ್ಲಾಸ್ಪತ್ರೆ ಮತ್ತು ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕೆಲವರು ಡೆಂಗ್ಯೂ ಇರಬಹುದೆಂದು ಆತಂಕದಿಂದ ಬೆಂಗಳೂರು ಆಸ್ಪತ್ರೆಗಳಿಗೆತೆರಳಿ ಸಾವಿರಾರು ರೂ. ಖರ್ಚು ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ವಚ್ಛತೆ ಕಾಣದ ಗ್ರಾಮಗಳು: ಗ್ರಾಮಗಳು ಸ್ವಚ್ಛತೆ ಇಲ್ಲದೇ ಇರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಲು ಕಾರಣವಾಗಿದೆ. ಗ್ರಾಮದ ಒಳಗೆಯೇ ತಿಪ್ಪೆಗುಂಡಿಗಳು, ಸ್ವಚ್ಛತೆ ಕಾಣದ ಚರಂಡಿಗಳು, ಅಲ್ಲಲ್ಲಿ ಬಚ್ಚಲು ನೀರು, ತೆಂಗಿನ ಚಿಪ್ಪು ಮತ್ತು ಟೈರ್‌ ಒಳಗೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿವೆ. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಅಲ್ಲಿಯ ಗ್ರಾಪಂಗಳು ವಿಫ‌ಲವಾಗಿವೆ. ಹಲವು ಗ್ರಾಮಗಳಲ್ಲಿ ಕಲುಷಿತ ನೀರು ಸೇವಿಸಿ, ಸಾಂಕ್ರಾಮಿಕ ರೋಗಗಳು ಹರಡಿರುವುದು ದೃಢಪಟ್ಟಿದೆ. ಇಷ್ಟಾದರೂ ಹಲವು ಗ್ರಾಪಂಗಳು ಗ್ರಾಮಗಳ ಸ್ವಚ್ಛತೆಯತ್ತ ಗಮನ ಹರಿಸಿಯೇ ಇಲ್ಲ.

ಮುಂಜಾಗ್ರತಾ ಕ್ರಮ ಅಗತ್ಯ: ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಪಂ, ಜಿಲ್ಲಾಡಳಿತ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯವಾಗಿದೆ. ಈ ಬಗ್ಗೆ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಶುದ್ಧ ಕುಡಿಯುವ ನೀರು ಕಲ್ಪಿಸಲು ಮುಂದಾಗಬೇಕಾಗಿದೆ. ಜ್ವರ ಪೀಡಿತ ಗ್ರಾಮಗಳಲ್ಲಿ ಅಗತ್ಯ ಚಿಕಿತ್ಸೆ ನೀಡುವುದರ ಜೊತೆಗೆ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಮನೆ ಸುತ್ತಮುತ್ತ ನೀರು ನಿಲ್ಲದಂತೆ, ತೊಟ್ಟಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಲಾರ್ವ ಪತ್ತೆಹಚ್ಚಿ, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಆಶಾ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳನ್ನು ನಾಶಪಡಿಸಲು, ಪರಿಸರ ಸ್ವತ್ಛತೆಗೆ ನಾಗರಿಕರು ಸಹಕಾರ ನೀಡಬೇಕು.
– ಡಾ.ಟಿ.ಎನ್‌.ಪುರುಷೋತ್ತಮ್‌, ಜಿಲ್ಲಾ ರೋಗವಾಹಕ
ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ

ತುಮಕೂರಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಬೇರೆ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾ ಗುತ್ತಿರುವ ಹಿನ್ನಲೆ ನಗರದಲ್ಲಿ ಅದು ತೀವ್ರವಾಗಬಾರದು ಎಂದು ಅಗತ್ಯ ಕ್ರಮ ಕೈಗೊಂಡಿದ್ದೇವೆ. ನೀರು ನಿಲ್ಲದಂತೆ ಕ್ರಮ ವಹಿಸಲು ಆದ್ಯತೆ ನೀಡಲಾಗಿದೆ.
-ರೇಣುಕಾ, ಪಾಲಿಕೆ ಆಯುಕ್ತರು

ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಅರಿವು ಆಂದೋಲನ, ಸ್ವಚ್ಛತಾ ಸಪ್ತಾಹವನ್ನು ಜಿಲ್ಲೆಯಾ ದ್ಯಂತ ಮಾಡಿದ್ದೇವೆ. ತುಮಕೂರಿನಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚುತ್ತಿದ್ದು, ಜ್ವರ ಪ್ರಕರಣಗಳು ಹೆಚ್ಚಾಗಿದೆ. ಜನರು ಸ್ವಚ್ಛತೆ ಕಾಪಾಡಲು ಮನವಿ ಮಾಡಿದ್ದೇವೆ.
-ಡಾ.ಎಂ.ಬಿ.ನಾಗೇಂದ್ರಪ್ಪ,
ಡಿಎಚ್‌ಒ, ತುಮಕೂರು

-ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

1-aaaa

2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ

14

LS Polls: ಮಂಜುನಾಥನಿಗೂ ನನಗೂ ವಯಕ್ತಿಕ ಗಲಾಟೆ, ರಾಜಕೀಯವಲ್ಲ: ಬೋರೇಗೌಡ

1-ewqeqweqw

Congress vs BJP+JDS :ಅಂಚೆಪಾಳ್ಯ, ನಡೆಮಾವಿನಪುರ ಘಟನೆಗೆ ಹೊಸ ತಿರುವು!!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

The Very Best Payment Techniques for Online Casinos

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.