Udayavni Special

ಪಾಲಿಕೆ ಆಡಳಿತ ಜನ ಸ್ನೇಹಿ ಮಾಡುವ ಗುರಿ


Team Udayavani, Feb 28, 2021, 1:17 PM IST

ಪಾಲಿಕೆ ಆಡಳಿತ ಜನ ಸ್ನೇಹಿ ಮಾಡುವ ಗುರಿ

ತುಮಕೂರು: ಕಳೆದ ಹನ್ನೊಂದು ವರ್ಷಗಳ ಬಳಿಕ ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಪಡೆದಿದೆ, ನೂತನ ಮೇಯರ್‌ ಆಗಿ ಅವಿರೊಧವಾಗಿ ಆಯ್ಕೆಯಾಗಿರುವ ಬಿ.ಜಿ.ಕೃಷ್ಣಪ್ಪ ಶಾಸಕರ ಕಚೇರಿಯಲ್ಲಿ ಉದಯ ವಾಣಿಯೊಂದಿಗೆ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

15 ವರ್ಷದ ಬಳಿಕ ಬಿಜೆಪಿಗೆ ಅಧಿಕಾರ:

ಪಾಲಿಕೆಯಲ್ಲಿ ಹತ್ತು ಹದಿನೈದು ವರ್ಷಗಳಿಂದ ನಮ್ಮ ಬಿಜೆಪಿ ಪಕ್ಷ ಕ್ಕೆ ಅಧಿಕಾರ ದೊರೆತ್ತಿರಲಿಲ್ಲ, ಈ ಬಾರಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ದೊರೆಯಿತು ಸರ್ಕಾರ ಮೀಸಲಾತಿ ಹೊರಡಿಸಿತು ನಾನು ಒಬ್ಬನೇ ಇದ್ದುದರಿಂದ ಅವಿರೊಧವಾಗಿ ಆಯ್ಕೆ ಆಗುವ ಅವಕಾಶ ಬಂದಿತು, ಇದನ್ನು ತಪ್ಪಿಸಲು ಕೆಲವರು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದಲ್ಲಿ ನನಗೇ ಜಯ ಸಿಕ್ಕಿತು. ನಾವು ಉಪಮೇಯರ್‌ ಸ್ಥಾನಕ್ಕೆ ಸ್ಪರ್ಧೆ ಮಾಡದೇ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ್ದೇವೆ. ಚುನಾವಣೆಯಲ್ಲಿ ಎಲ್ಲ ಸದಸ್ಯರು ಬಾಗವಹಿಸಿದ್ದರು. ಚುನಾವಣೆ ಮುಗಿಯಿತು. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ನಗರದ ಅಭಿವೃದ್ಧಿಯ ಕಡೆ ಗಮನ ಹರಿಸಬೇಕು ಎಂದು ಕೊಂಡಿದ್ದೇನೆ ಎಂದು ಬಿ.ಜಿ.ಕೃಷ್ಣಪ್ಪ ತಿಳಿಸಿದರು.

 ನೀವು ಮೇಯರ್‌ ಆಗಿದ್ದೀರಿ ನಿಮ್ಮ ಮುಂದಿನ ಯೋಜನೆಗಳೇನು..?

ತುಮಕೂರು ಮಹಾನಗರ ಪಾಲಿಕೆಯಲ್ಲಿ ದಶಕಗಳ ನಂತರ ಬಿಜೆಪಿಗೆ ಅಧಿಕಾರ ಲಭಿಸಿದೆ ಉತ್ತಮ ಆಡಳಿತ ನೀಡಬೇಕು. ಎಲ್ಲಾ ಸದಸ್ಯರ ವಿಶ್ವಾಸ ಪಡೆದು ನಮ್ಮ ಪಕ್ಷದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌ ಮತು ಸಂಸ  ದರಾದ ಜಿ.ಎಸ್‌.ಬಸವರಾಜ್‌ ಅವರ ಸಹಕಾರ ಪಡೆದು ಉತ್ತಮ ಕಲಸ ಮಾಡಬೇಕು ಎಂದು ಕೊಂಡಿದ್ದೇನೆ.

ಪಾಲಿಕೆಯಲ್ಲಿ ಜನ ಕೆಲಸ ಆಗುವುದಿಲ್ಲ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ ಎನ್ನುವ ಮಾತಿದೆ ಇದನ್ನು ಹೇಗೆ ನಿಯಂತ್ರಿಸುವಿರಿ..?

ಪಾಲಿಕೆಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಜನರಿಗೆ ತೊಂದರೆಯಾಗಬಾರದು ಇಲ್ಲಿ ಸಣ್ಣ ಕೆಲಸಗಳಿಗೆ ಬಂದು ಕೆಲಸ ಆಗದೇ ಹೋಗುತ್ತಿರುವುದು ನನ್ನ ಗಮನದಲ್ಲಿದೆ. ಮುಂದೆ ಆ ರೀತಿ ಆಗಬಾರದು ಎನ್ನುವುದು ನನ್ನ ಉದ್ದೇಶ. ಜನರ ಕೆಲಸ ಬೇಗ ಆಗಬೇಕು ಆ ರೀತಿ ಕ್ರಮಕೈಗೊಳ್ಳುತ್ತೇವೆ ಜನಸ್ನೇಹಿ ಆಡಳಿತ ನೀಡಬೇಕು ಎನ್ನುವುದು ನನ್ನ ಗುರಿ.

ನಿಮ್ಮ ಮೊದಲ ಉದ್ದೇಶ ಏನು..?

ನಾನು ಈ ಹಿಂದೆ ಹೇಳಿರುವಂತೆ ನನ್ನ ಮೊದಲ ಉದ್ದೇಶ ಸರಳೀಕರಣ ಆಡಳಿತ, ನಾನು ಮೇಯರ್‌ ಆದ ತಕ್ಷಣ ಕಲವು ನಾಗರಿಕರು ಹೇಳುತ್ತಿದ್ದರು. ಅವರಿಗೆ ತಿಳಿಸಿದೆ ನೀವು ಕಾದು ನೋಡಿ ಎಂದು ಹೇಳಿದ್ದೇನೆ, ನಾನು ಉತ್ತಮ ಆಡಳಿತ ನೀಡಿದರೆನನಗೆ, ನಮ್ಮ ಶಾಸಕರಿಗೆ ಸಂಸದರಿಗೆ ಹೆಸರು ಬರುತ್ತದೆ ಮುಂದೆ ಅನುಕೂಲವಾಗಲಿದೆ ಆದ್ದರಿಂದ ಆರೀತಿ ಕೆಲಸ ಮಾಡಬೇಕು ಎಂದು ಕೊಂಡಿದ್ದೇನೆ.

ನಗರದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಯಾವರೀತಿ ಕ್ರಮ ಕೈಗೊಳ್ಳುತ್ತೀರಿ..?

ನಗರದಲ್ಲಿ ಸ್ವತ್ಛತೆಗೆ ಮೊದಲ ಆದ್ಯತೆ ನೀಡುತ್ತೇನೆ. ಸ್ವಚ್ಛ ತುಮಕೂರು ಆಗಬೇಕು ಈಗಾಗಲೇ ನಮ್ಮ ನಗರ ಸ್ವಚ್ಛತೆಯಲ್ಲಿ ಉತ್ತಮ ಹೆಸರು ಪಡೆದಿದೆ, ಅದು ಮುಂದುವರೆಯಬೇಕು. ವಿಶೇಷವಾಗಿ ಹಸಿರೀಕರಣ ಆಗಬೇಕು ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ.

ಮೇಯರ್‌ ಆಗೆಂದು ಆಶೀರ್ವದಿಸಿದ್ದ ಶ್ರೀಗಳು :  ನಾನು ಪಾಲಿಕೆಯ ಸದಸ್ಯ ಸ್ಥಾನಕ್ಕೆ ಚುನಾವಣೆ

ನಿಲ್ಲಲು ನಿರ್ಧರಿಸಿದೆ ಆ ವೇಳೆಯಲ್ಲಿ ನಾನು ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆಯಲು ಹೋದಾಗ ಶ್ರೀಗಳು ಮೇಯರ್‌ ಆಗಬೇಕು ಎಂದು ಆಶೀರ್ವಾದ ಮಾಡಿದ್ದರು. ಅದು ಇಂದು ನನಗೆ ನೆರವೇರಿದೆ ಎಂದು ಮೇಯರ್‌ ಬಿ.ಜಿ.ಕೃಷ್ಣಪ್ಪ ಸಂತಸ ವ್ಯಕ್ತ ಪಡಿಸುತ್ತಾ ನುಡಿದರು.

ನಗರದ ಮೂಲಭೂತ ಸೌಲಭ್ಯಕ್ಕೆ ಹೆಚ್ಚು ಒತ್ತು :  ನಗರದಲ್ಲಿ ವಾಸಿಸುವ ಜನರಿಗೆ ಅಗತ್ಯವಾಗಿ ಬೇಕಾಗಿರುವ ಕುಡಿಯುವ ನೀರು, ಸ್ವತ್ಛತೆ, ಬೀದಿ ದೀಪದ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಸಲು ಹೆಚ್ಚು ಒತ್ತು ನೀಡುತ್ತೇನೆ.ಪಾಲಿಕೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆತೆಗೆದುಕೊಂಡು ಶಾಸಕರು, ಸಂಸದರು ಇತರೆ ಮುಖಡರ ಸಲಹೆಗಳನ್ನು ಪಡೆದು ನಗರದ ಜನರಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ ಎಂದು ನೂತನ ಮೇಯರ್‌ ಬಿ.ಜಿ.ಕೃಷ್ಣಪ್ಪ ತಿಳಿಸಿದರು.

 

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

ಚಗಬಹ್ಗದಸ಻

ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಮೋದಿ ಟ್ವೀಟ್

್ಗ್ಹಗಹಜಗ್

ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ಮೀಸಲಿಡಬೇಕು : ಡಿ.ಕೆ. ಶಿವಕುಮಾರ್

Reached out to PM Modi for additional vaccines, medicines: Mamata

ಹೆಚ್ಚುವರಿ ಕೋವಿಡ್ ಲಸಿಕೆ ಪೂರೈಸಿ :  ಮೋದಿಗೆ ದೀದಿ ಪತ್ರ

ಕಜಹಯತಹಗರ4ತ

ರಮೇಶ್ ಜಾರಕಿಹೊಳಿ ಕೋವಿಡ್ ನಿಂದ ಗುಣಮುಖ : ನಾಳೆ SIT ವಿಚಾರಣೆಗೆ ಹಾಜರಾಗುವುದು ಡೌಟ್!

hfghfxc

ಕೋವಿಡ್ ಹೆಚ್ಚಳ ಹಿನ್ನೆಲೆ : ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

ghfgdgste

‘ಮಠ’ ನಿರ್ದೇಶಕನಿಗೆ ಕೋವಿಡ್ ದೃಢ : ಸರ್ಕಾರದ ವಿರುದ್ಧ ‘ಗುರ್’ ಎಂದ ಗುರು ಪ್ರಸಾದ್  

“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?

“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fire to the trees

ಸಂತೆ ಮೈದಾನದಲ್ಲಿನ ಮರಗಳಿಗೆ ಬೆಂಕಿ

road isuue at huliyara

ಹುಳಿಯಾರಿಗೆ ಬರುವ ಪ್ರತಿಯೊಬ್ಬರಿಗೂ ಧೂಳಿನ ಮಜ್ಜನ!

covid effect

ನೈಟ್‌ ಕರ್ಫ್ಯೂಗೂ ಕಮ್ಮಿ ಆಗದ ಕೋವಿಡ್

Colored cheer to the Government High School

ದೊಡ್ಡಬಾಣಗೆರೆ ಸರ್ಕಾರಿ ಪ್ರೌಢಶಾಲೆಗೆ ಬಣ್ಣದ ಮೆರಗು

covid: People who are not taken seriously

ಕೋವಿಡ್: ಗಂಭೀರವಾಗಿ ಪರಿಗಣಿಸದ ಜನ

MUST WATCH

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

ಹೊಸ ಸೇರ್ಪಡೆ

Ragi Malt Recipe For Weight Loss

ತೂಕ ಇಳಿಸಿಕೊಳ್ಳಲು ರಾಗಿ ಮಾಲ್ಟ್ ಬೆಸ್ಟ್..!

adBVC

ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಪ್ರಶಂಸಾ ಪತ್ರ

ಚಗಬಹ್ಗದಸ಻

ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಮೋದಿ ಟ್ವೀಟ್

vcsB

ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್‌ ಆ್ಯಪ್‌ನಲ್ಲಿ ಕನ್ನಡ

್ಗ್ಹಗಹಜಗ್

ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ಮೀಸಲಿಡಬೇಕು : ಡಿ.ಕೆ. ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.