Udayavni Special

ಕಲ್ಪತರು ನಾಡಿಗೆ ಹರ್ಷ ನೀಡುತ್ತಾ ಕೇಂದ್ರ ಬಜೆಟ್


Team Udayavani, Jul 5, 2019, 12:11 PM IST

Udayavani Kannada Newspaper

ತುಮಕೂರು: ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ದಾಪು ಗಾಲು ಹಾಕುತ್ತಾ ದೇಶದ ಗಮನ ಸೆಳೆಯುತ್ತಿರುವ ತುಮಕೂರು ಜಿಲ್ಲೆಗೆ ಕೇಂದ್ರ ಸರ್ಕಾರ ಎಚ್ಎಎಲ್ ಮತ್ತು ಸೋಲಾರ್‌ ಪಾರ್ಕ್‌ ಹಾಗೂ ಸ್ಮಾರ್ಟ್‌ಸಿಟಿ, ಕೈಗಾರಿಕಾ ಕಾರಿಡಾರ್‌ ಘೋಷಣೆ ಮಾಡಿದೆ. ಈ ಮೂಲಕ ದೇಶದ ಗಮನ ಸೆಳೆದಿರುವ ಕಲ್ಪತರು ನಾಡಿಗೆ ಪ್ರಸಕ್ತ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಹೊಸ ಯೋಜನೆ ಘೋಷಿಸುತ್ತಾರೆಯೇ, ಇಲ್ಲ ಹಳೆ ಯೋಜನೆಗೆ ಇನ್ನು ಹೆಚ್ಚಿನ ಹಣ ಬಿಡುಗಡೆ ಮಾಡಿ ಚಾಲನೆ ಒತ್ತು ನೀಡುತ್ತಾರೆಯೇ ಎಂಬುದು ನಿರೀಕ್ಷೆ ಹುಟ್ಟಿಸಿದೆ.

ಪ್ರತಿವರ್ಷ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಬಜೆಟ್ ಮಂಡನೆಯಾದ ಮೇಲೆ ಸಾಮಾನ್ಯ ಬಜೆಟ್ ಮಂಡನೆಯಾಗುತ್ತಿತ್ತು. ಆದರೆ ಇದು 4ನೇ ಬಾರಿಗೆ ಸಾಮಾನ್ಯ ಬಜೆಟ್ ಜೊತೆಯಲ್ಲಿ ರೈಲ್ವೆ ಬಜೆಟ್ ಸೇರಿಸಿ ಮಂಡನೆಯಾಗುತ್ತಿದೆ. ಜಿಲ್ಲೆಗೆ ಕಳೆದ 2009-10 ರಲ್ಲಿ ಮಂಜೂರಾದ ಹಲವು ರೈಲ್ವೆ ಯೋಜನೆಗಳು ಇಂದಿಗೂ ಕಾರ್ಯಗತವಾಗಿಲ್ಲ. ಕಳೆದ ರೈಲ್ವೆ ಬಜೆಟ್‌ನಲ್ಲಿ ಮಂಡಿಸಿದ್ದ ಯೋಜನೆಗಳು ನಿಂತಲ್ಲೇ ನಿಂತಿವೆ. ಹೀಗಿರುವಾಗ ಈಗ ಮಂಡಿಸಲಿರುವ ಬಜೆಟ್‌ನಲ್ಲಿ ರೈಲ್ವೆ ಯೋಜನೆಯಲ್ಲಿ ಏನು ಕೊಡುಗೆ ನೀಡಬಹುದು ಎಂಬ ಕುತೂಹಲವಿದೆ.

ಈವರೆಗೂ ರೈಲ್ವೆ ಬಜೆಟ್‌ನಲ್ಲಿ ಮಂಡನೆಯಾಗಿರುವ ಹಲವು ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಕಳೆದ 2009-10ರಲ್ಲಿ ರೈಲ್ವೆ ಬಜೆಟ್‌ನಲ್ಲಿ ಘೋಷಣೆ ಯಾಗಿದ್ದ ತುಮಕೂರು-ದಾವಣಗೆರೆ ಮತ್ತು ತುಮಕೂರು-ರಾಯದುರ್ಗ ರೈಲು ಮಾರ್ಗಗಳು ಇನ್ನೂ ಮಂದಗತಿಯಲ್ಲಿಯೇ ಇದೆ.

ಕೇಂದ್ರ ಸರ್ಕಾರ ರೈಲ್ವೆ ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡುತ್ತದೆ. ಆದರೆ, ಆ ಯೋಜನೆಗಳು ಎಷ್ಟರ ಮಟ್ಟಿಗೆ ಕಾರ್ಯಗತವಾಗಿವೆ ಎನ್ನುವುದಕ್ಕೆ ಜಿಲ್ಲೆಗೆ ಬಜೆಟ್‌ನಲ್ಲಿ ಮಂಜೂರಾಗಿರುವ ಯೋಜನೆಗಳೇ ಸಾಕ್ಷಿ.

ತುರುವೇಕೆರೆ-ಚಿಕ್ಕನಾಯಕನಹಳ್ಳಿ- ಹುಳಿಯಾರು ಮಾರ್ಗವಾಗಿ ಮಂಜೂರಾಗಿದ್ದ ರೈಲ್ವೆ ಯೋಜನೆ ಇನ್ನೂ ಯಾವುದೇ ಹಂತದಲ್ಲೂ ಕಾರ್ಯಾರಂಭ ವಾಗಿಲ್ಲ. ಜಿಲ್ಲೆಯ ಮಟ್ಟಿಗೆ ಅಗತ್ಯವಾಗಿದ್ದ ಯೋಜನೆಗಳು ಮಂಜೂರಾಗಿವೆ. ಆದರೆ, ಅವು ಕಾರ್ಯಗತವಾಗದೇ ಇರುವುದು ನಿರಾಶೆ ಮೂಡಿದ್ದು, ಈ ವರ್ಷದ ರೈಲ್ವೆ ಬಜೆಟ್‌ನಲ್ಲಿ ಯಾವ ಯೋಜನೆಗೆ ಯಾವ ರೀತಿ ಹಣ ಮೀಸಲಿಡುವ‌ರು, ಯಾವ ಯೋಜನೆ ಶೀಘ್ರ ಕಾರ್ಯಪ್ರವೃತ್ತಿಗೆ ಚಾಲನೆ ದೊರೆಯುವುದು ಕಾದು ನೋಡಬೇಕಾಗಿದೆ.

ಮೋದಿ ಸರ್ಕಾರದಲ್ಲಿ ಜಿಲ್ಲೆಯ ಜನರ ನಿರೀಕ್ಷೆಯೇನು?: ಈ ಹಿಂದೆ ಕೇಂದ್ರ ನರೇಂದ್ರ ಮೋದಿ ಸರ್ಕಾರದಲ್ಲಿ ಜಿಲ್ಲೆಗೆ ಸ್ಮಾರ್ಟ್‌ ಸಿಟಿ ಯೋಜನೆ ಬಂದು ಅದರ ಕೆಲಸ ಆರಂಭಗೊಂಡಿದೆ. ಪಾಸ್‌ಪೋರ್ಟ್‌ ಕಚೇರಿ ಆರಂಭಗೊಂಡಿದೆ. ತುಮಕೂರು ಎಚ್ಎಂಟಿ ಕೈ ಗಡಿಯಾರ ಕಾರ್ಖಾನೆ ಜಾಗವನ್ನು ಇಸ್ರೋಗೆ ನೀಡಲಾಗಿದೆ. ಅದರ ಕಾರ್ಯ ಚಟುವಟಿಕೆ ಆರಂಭ‌ವಾಗಿದೆ. ಜಿಲ್ಲೆಯ ಗುಬ್ಬಿ ತಾಲೂಕು ನಿಟ್ಟೂರು ಬಳಿ ಎಚ್ಎಎಲ್ ಎಲಿಕ್ಯಾಪ್ಟರ್‌ ಘಟಕ ಪ್ರಾರಂಭಕ್ಕೆ ಸಿದ್ಧತೆ ನಡೆದಿದೆ. ಹಲವು ರೈಲ್ವೆ ಯೋಜನೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿ ಕಾಮಗಾರಿಗಳು ನಡೆಯುತ್ತಿವೆ. ಕೈಗಾರಿಕಾ ಕಾರಿಡಾರ್‌ ಯೋಜನೆಗೆ ಈ ಹಿಂದಿನ ಬಜೆಟ್‌ನಲ್ಲಿ ಘೋಷಣೆ ಯಾಗಿತ್ತು. ಅದು ಇನ್ನೂ ಅನುಷ್ಠಾನವಾಗಿಲ್ಲ. ಕೆಲವು ರೈಲ್ವೆ ಯೋಜನೆಗಳು ಘೋಷಣೆ ಆಗಿದ್ದರೂ ಅವುಗಳ ಕಾರ್ಯ ಆರಂಭ ವಾಗಿಲ್ಲ. ತುಮಕೂರು ಜಿಲ್ಲೆಯ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದು, ಈ ಬಜೆಟ್‌ನಲ್ಲಿ ತೆಂಗು ಬೆಳೆಗಾರರಿಗೆ ಅನುಕೂಲವಾಗುತ್ತಾ? ಏನೆಲ್ಲಾ ಬಜೆಟ್‌ನಲ್ಲಿ ಇರುತ್ತೆ ಎನ್ನುವುದೇ ಕುತೂಹಲ ಮೂಡಿದೆ.

 

ಹಲವು ಯೋಜನೆ ಬಗ್ಗೆ ಮಾಹಿತಿ ನೀಡಿದ್ದೇನೆ:

ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿರುವೆ ತುಮಕೂರು ನಗರದಲ್ಲಿ ಏಮ್ಸ್‌ ಮಾದರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು, ಏಷ್ಯಾ ಖಂಡ ದಲ್ಲಿಯೇ ಪ್ರಸಿದ್ಧಿ ಪಡೆದಿರುವ ಜಿಲ್ಲೆಯ ಮಧುಗಿರಿ ತಾಲೂಕಿನ ಏಕಾಶಿಲ ಬೆಟ್ಟದ ಪಕ್ಕ ಅಂತಾರಾಷ್ಟ್ರೀಯ ಪ್ರವಾ ಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ನೂತನ ಸಂಸದ ಜಿ.ಎಸ್‌.ಬಸವ ರಾಜ್‌ ಕೇಂದ್ರ ಸರ್ಕಾರವನ್ನು ಮನವಿ ಮಾಡಿದ್ದಾರೆ. ರಾಜ್ಯದ 29360 ಗ್ರಾಮ ಗಳಿಗೂ ಕುಡಿಯು ನೀರಿನ ಪೈಲಟ್ ಯೋಜನೆ, ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ತೆಂಗು ವಿಶೇಷ ಆರ್ಥಿಕ ವಲಯ ಸ್ಥಾಪನೆ, ತುಮಕೂರು ಕೇಂದ್ರ ಸ್ಥಾನವನ್ನಾಗಿ ಮಾಡಿ ಹಲಸು ಬೋರ್ಡ್‌ ಸ್ಥಾಪನೆ, ರಾಜ್ಯದ ರಾಜಧಾನಿ ಬೆಂಗಳೂರಿನಿಂದ ವಸಂತ ನರಸಪುರದ ನಿಮ್ಸ್‌ ವರೆಗೆ ಮೆಟ್ರೋ ಯೋಜನೆ, 2022 ರೊಳಗೆ ರೈತರ ಆದಾಯ ದುಪ್ಪಟ್ಟು ಗೊಳಿಸಲು ಜಿಲ್ಲೆ ಯಲ್ಲಿ ರೈತರ ಉತ್ಪನ್ನಗಳ ಫಾರ್ವರ್ಡ್‌ ಮತ್ತು ಲಿಂಕೇಜ್‌ಗಾಗಿ ಎಂಪಿಸಿಎಸ್‌ ಮಾದರಿಯಲ್ಲಿ ಸಹಕಾರಿ ಒಕ್ಕೂಟ ಸ್ಥಾಪಿ ಸುವ ಪೈಲಟ್ ಯೋಜನೆ ರೂಪಿಸಬೇಕು ಎಂದಿದ್ದಾರೆ. ಹಾಗೆಯೇ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ರಾಷ್ಟ್ರೀಯ ಮಟ್ಟದ ಆಯುಷ್‌ ಪಾರ್ಕ್‌, ತುರುವೇ ಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈನೋದ್ಯಮ ಹಬ್‌, ಚಿಕ್ಕನಾಯಕನಹಳ್ಳಿ ಅಥವಾ ಶಿರಾ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಿಲ್ಲೆಟ್ಸ್‌ ಪಾರ್ಕ್‌ ಸ್ಥಾಪನೆ ಮಾಡಲು ಮತ್ತು ಹಳೆ ರೈಲ್ವೆ ಯೋಜನೆಗಳ ಕಾಮಗಾರಿಗಳ ಚುರುಕು ಗೊಳಿಸಲು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

 

● ಚಿ.ನಿ. ಪುರುಷೋತ್ತಮ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

rcb

ಬೆಂಗಳೂರು-ಹೈದರಾಬಾದ್ ಬಿಗ್ ಫೈಟ್: ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ಕೆ

ಕೊಲ್ಹಾಪುರ ಏರ್‌ಪೋರ್ಟ್‌ ವಿಸ್ತರಣೆಗೆ 10 ಕೋಟಿ ರೂ. ಅನುದಾನ

ಕೊಲ್ಹಾಪುರ ಏರ್‌ಪೋರ್ಟ್‌ ವಿಸ್ತರಣೆಗೆ 10 ಕೋಟಿ ರೂ. ಅನುದಾನ

ಚಾಮರಾಜನಗರ: 22 ಹೊಸ ಕೋವಿಡ್ ಪ್ರಕರಣ ದೃಢ: 28 ಮಂದಿ ಗುಣಮುಖ

ಚಾಮರಾಜನಗರ: 22 ಹೊಸ ಕೋವಿಡ್ ಪ್ರಕರಣ ದೃಢ: 28 ಮಂದಿ ಗುಣಮುಖ

ಪಿರಿಯಾಪಟ್ಟಣ ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

ಪಿರಿಯಾಪಟ್ಟಣ ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

mullayanagiri-main

ಕೈಬೀಸಿ ಕರೆಯೋ ಮಂಜಿನ ಶೃಂಗಾರ ಸೌಂದರ್ಯದ ಮುಳ್ಳಯ್ಯನಗಿರಿ ಬೆಟ್ಟ!

ಅಂಧೇರಿ: ಕ್ರೇನ್‌ ಕುಸಿದು ಮಹಿಳೆಯ ಸಾವು, ಇಬ್ಬರಿಗೆ ಗಾಯ

ಅಂಧೇರಿ: ಕ್ರೇನ್‌ ಕುಸಿದು ಮಹಿಳೆ ಸಾವು, ಇಬ್ಬರಿಗೆ ಗಾಯ

tk-tdy-1

ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಿದ್ದೇ ನಾನು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tk-tdy-1

ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಿದ್ದೇ ನಾನು

ಕೋಟೆನಾಡಿನಲ್ಲಿ ರಂಗೇರಿದೆ ಉಪಕದನ:ಗುಟ್ಟು ಬಿಟ್ಟುಕೊಡದ ಮತದಾರ, ಶಿರಾ ಕಿರೀಟ ಯಾರಿಗೆ ಪಾಲಿಗೆ?

ಕೋಟೆನಾಡಿನಲ್ಲಿ ರಂಗೇರಿದೆ ಉಪಕದನ:ಗುಟ್ಟು ಬಿಟ್ಟುಕೊಡದ ಮತದಾರ, ಶಿರಾ ಕಿರೀಟ ಯಾರಿಗೆ ಪಾಲಿಗೆ?

ಶಿರಾ ಉಪಚುನಾವಣೆ: ಚೆಕ್‌ಪೋಸ್ಟ್‌ಗಳಿಗೆ ಸಿಇಒ ಭೇಟಿ

ಶಿರಾ ಉಪಚುನಾವಣೆ: ಚೆಕ್‌ಪೋಸ್ಟ್‌ಗಳಿಗೆ ಸಿಇಒ ಭೇಟಿ

ಮದಲೂರು ಕೆರೆ ತುಂಬಿಸಿ ಆರು ತಿಂಗಳೊಳಗೆ ಉದ್ಘಾಟನೆ ಮಾಡುತ್ತೇನೆ: ಬಿ ಎಸ್ ಯಡಿಯೂರಪ್ಪ

ಆರು ತಿಂಗಳೊಳಗೆ ಮದಲೂರು ಕೆರೆ ತುಂಬಿಸಿ ನಾನೇ ಉದ್ಘಾಟನೆ ಮಾಡುತ್ತೇನೆ: ಬಿ ಎಸ್ ಯಡಿಯೂರಪ್ಪ

ಗೂಂಡಾಗಿರಿ ಪ್ರವೃತ್ತಿ ಏನಿದ್ರೂ ಕಾಂಗ್ರೆಸ್‌ನವರದ್ದು : ನಳಿನ್‌ ಕುಮಾರ್‌ ಕಟೀಲ್

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಶತಸಿದ್ಧ: ಕಟೀಲ್

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

rcb

ಬೆಂಗಳೂರು-ಹೈದರಾಬಾದ್ ಬಿಗ್ ಫೈಟ್: ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ಕೆ

ಕೊಲ್ಹಾಪುರ ಏರ್‌ಪೋರ್ಟ್‌ ವಿಸ್ತರಣೆಗೆ 10 ಕೋಟಿ ರೂ. ಅನುದಾನ

ಕೊಲ್ಹಾಪುರ ಏರ್‌ಪೋರ್ಟ್‌ ವಿಸ್ತರಣೆಗೆ 10 ಕೋಟಿ ರೂ. ಅನುದಾನ

ಚಾಮರಾಜನಗರ: 22 ಹೊಸ ಕೋವಿಡ್ ಪ್ರಕರಣ ದೃಢ: 28 ಮಂದಿ ಗುಣಮುಖ

ಚಾಮರಾಜನಗರ: 22 ಹೊಸ ಕೋವಿಡ್ ಪ್ರಕರಣ ದೃಢ: 28 ಮಂದಿ ಗುಣಮುಖ

Ballary-tdy-1

ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯ

dg-tdy-2

ಸಮಾಜಕ್ಕೆ ಮಲ್ಲಪ್ಪನವರ ಕೊಡುಗೆ ಅಪಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.