ತ್ಯಾಜ್ಯ ಸಂಗ್ರಹ ಘಟಕವಾಗಿದೆ ಕುಣಿಗಲ್ ಚಿಕ್ಕಕೆರೆ!

ಪ್ರಭಾವಿಗಳಿಂದ ಒತ್ತುವರಿ • ಕೆರೆ ಒಡಲು ಸೇರುತ್ತಿದೆ ಚರಂಡಿ ನೀರು, ತ್ಯಾಜ್ಯ •ಅಧಿಕಾರಿಗಳ ನಿರ್ಲಕ್ಷ್ಯ

Team Udayavani, Jun 20, 2019, 3:15 PM IST

ಕುಣಿಗಲ್ ಚಿಕ್ಕೆರೆ ಅಂಗಳಕ್ಕೆ ಚರಂಡಿ ನೀರು, ಕೋಳಿ ತ್ಯಾಜ್ಯ ಹಾಗೂ ಪುರಸಭೆ ಕಸ ಸೇರಿ ಸಂಪೂರ್ಣವಾಗಿ ತ್ಯಾಜ್ಯ ಸಂಗ್ರಹ ಘಟಕವಾದಂತಿದೆ.

ಕುಣಿಗಲ್: ಒಂದು ಕಾಲದಲ್ಲಿ ಪಟ್ಟಣದ ಚಿಕ್ಕಕೆರೆ ಒತ್ತುವರಿ ಮಾಡಿರುವುದು ಹಾಗೂ ರಾಜಕಾಲುವೆ ಮುಚ್ಚಿರುವುದರಿಂದ ಚರಂಡಿ ಕಲುಷಿತ ನೀರು ಕೆರೆಗೆ ಹರಿದು ಜನರು ಮೇಲೆ ಪರಿಣಾಮ ಬೀರುತ್ತಿದೆ.

ಅವನತಿ ಸ್ಥಿತಿ: ಒಂದು ಕಾಲದಲ್ಲಿ ಪಟ್ಟಣದ ಚಿಕ್ಕಕೆರೆ ನೀರು ಕೃಷಿ, ಕುಡಿಯಲು ಬಳಸಲಾಗುತಿತ್ತು. ಆದರೆ ಇಂದು ಕೆರೆ ಒತ್ತುವರಿ, ಮತ್ತೂಂದೆಡೆ ಮುಚ್ಚಿದ ರಾಜ ಕಾಲುವೆ, ಸಮರ್ಪಕ ನಿರ್ವಹಣೆ ಇಲ್ಲದ ಚರಂಡಿ ನೀರು ಕೆರೆಗೆ ಹರಿಯುತ್ತಿದೆ. ಅಲ್ಲದೆ ಕೋಳಿ ತ್ಯಾಜ್ಯ ಹಾಗೂ ಪುರಸಭೆ ಕಸ ಸುರಿಯುವ ತ್ಯಾಜ್ಯ ಸಂಗ್ರಹ ಘಟಕವಾಗಿ ಕೆರೆ ಅವನತಿ ಸ್ಥಿತಿಗೆ ತಲುಪಿದೆ.

ಜೀವನಾಡಿಯಾಗಿದ್ದ ಕೆರೆ: 238 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ 41ಎಂಸಿಎಫ್‌ಟಿ ನೀರು ಸಂಗ್ರಹ ಸಾರ್ಮಥ್ಯ ಹೊಂದಿದ್ದು, 206 ಹೆಕ್ಟೇರ್‌ ಪ್ರದೇಶಕ್ಕೆ ಅಚ್ಚುಕಟ್ಟು ಹೊಂದಿದೆ. ಕಳೆದ 10 ವರ್ಷದ ಹಿಂದೆ 206 ಹೆಕ್ಟೇರ್‌ ಜಮೀನಿಗೆ ನೀರುಣಿಸಿ ರೈತರ ಬದುಕಿಗೆ ಜೀವನಾಡಿ ಯಾಗಿದ್ದ ಕುಣಿಗಲ್ ಚಿಕ್ಕಕೆರೆ ಯಲ್ಲಿ ನೀರು ಕಡಿಮೆಯಾಗಿದೆ.

ಅಧಿಕಾರಿಗಳ ಮೌನ: 2011-12ರಲ್ಲಿ ಕಾವೇರಿ ನೀರಾವರಿ ನಿಗಮದಿಂದ ನೆಪಮಾತ್ರಕ್ಕೆ ಹೂಳು ಎತ್ತುವ ಕಾಮಗಾರಿ ನಡೆಸಿತು. ಆದರೆ ಕೆರೆ ಸಂಪೂರ್ಣವಾಗಿ ಹೂಳು ತುಂಬಿ ನೀರಿನ ಸಂಗ್ರಹ ಸಾರ್ಮಥ್ಯ ಕಳೆದು ಕೊಂಡಿದೆ. ಜೊತೆಗೆ ಗಿಡಗಂಟಿಗಳು ಬೆಳೆವೆ. ಮಳೆ ಯಾದರೇ ಮಾತ್ರ ಕೆರೆಗೆ ನೀರು ಹರಿದು ಬರಲಿದೆ. ತಾಲೂಕು ಅಡಳಿತದಿಂದ ಸರ್ವೇ ಕಾರ್ಯ ನಡೆಸಿ 6 ಎಕರೇ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಹೇಮಾವತಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ ಯಾವುದೇ ಒತ್ತುವರಿ ಆಗಿಲ್ಲ. ಕೆರೆಯ ಅಂಗಳ ಒತ್ತುವರಿ ಮಾಡಿ ಬೆಲೆ ಬೆಳೆಯುತ್ತಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ. ಎರಡು ದಶಕದ ಹಿಂದೆ ಸುರಿದ ಮಳೆಗೆ ಚಿಕ್ಕಕೆರೆ ಕೋಡಿಯಾಗಿ ಹೊಡೆಯುವ ಅಂತ ತಲುಪಿತ್ತು. ಈ ಬಾರಿಯೂ ಚೆನ್ನಾಗಿ ಮಳೆಯಾಗಿ ಹೆಚ್ಚಿನ ನೀರು ಹರಿ ದರೆ ಕೆರೆಯಲ್ಲಿ ಹೂಳು ಹಾಗೂ ತ್ಯಾಜ್ಯ ತುಂಬಿ ಕೊಂಡಿ ರುವುದರಿಂದ ಕೆರೆ ಒಡೆಯುವ ಸಾಧ್ಯತೆ ಹೆಚ್ಚಾಗಿದೆ.

ವಿದೇಶಿ ಪಕ್ಷಿಗಳಿಗೆ ಕಂಟಕ: ಚಿಕ್ಕಕೆರೆಗೆ ವಿದೇಶಿ ಪಕ್ಷಿಗಳು ಸಂತಾನೋತ್ಪತಿಗೆ ಪ್ರತಿ ವರ್ಷ ವಲಸೆ ಬರು ತ್ತವೆ. ಕೆರೆಯಂಗಳದಲ್ಲಿ ಪಕ್ಷಿಗಳೇ ತುಂಬಿ ಅವುಗಳ ಕಲರ ನೋಡುಗರ ಕಣ್ಮನ ಸೆಳೆಯುತ್ತಿದ್ದವು. ಈಗ ಕೆರೆಯಂಗಳದಲ್ಲಿ ಕೋಳಿ ತ್ಯಾಜ್ಯ ಕಸ ಹಾಗೂ ಚರಂಡಿ ನೀರು ತುಂಬಿ ಪಕ್ಷಿಗಳು ಮೃತಪಡುತ್ತವೆ.

ಕೋಳಿ ತಾಜ್ಯ, ಕಸ: ಪಟ್ಟಣದಲ್ಲಿ ನಾಯಿಕೊಡೆಗಳಂತೆ ಕೋಳಿ ಅಂಗಡಿಗಳು ಹೆಚ್ಚಿವೆ. ಇಲ್ಲಿ ಉತ್ಪತ್ತಿಯಾಗುವ ಕೋಳಿ ತ್ಯಾಜ್ಯವನ್ನು ಸಂಜೆ ವೇಳೆ ಕೆರೆ ಅಂಗಳದಲ್ಲಿ ಸುರಿಯುತ್ತಿದ್ದಾರೆ. ಇದರ ಜೊತೆಗೆ ಪುರಸಭೆಯವರೂ ಗವಿಮಠದ ಬಳಿ ಇರುವ ಘನತ್ಯಾಜ್ಯ ಘಟಕಕ್ಕೆ ಸುರಿಯಬೇಕಾದ ಕಸವನ್ನು ಕೆರೆಗೆ ಸುರಿದು ಹೋಗು ತ್ತಿದ್ದಾರೆ. ಈ ಬಗ್ಗೆ ಹೇಮಾವತಿ ಅಧಿಕಾರಿಗಳು ನೋಟಿಸ್‌ ನೀಡಿದರೂ ಪುರಸಭೆ ಎಚ್ಚೆತ್ತುಕೊಂಡಿಲ್ಲ. ಗುಜ್ಜಾರಿ ಮೊಹಲ್ಲಾ ಬಡಾವಣೆಯ ಚರಂಡಿ ನೀರು ಸಂಪೂರ್ಣವಾಗಿ ಕೆರೆ ಸೇರುತ್ತಿದೆ. ಇದರಿಂದ ಚಿಕ್ಕಕೆರೆ ತ್ಯಾಜ್ಯ ತೊಟ್ಟಿಯಾಗಿದೆ.

ಕಾವೇರಿ ನೀರಾವರಿ ನಿಗಮಕ್ಕೆ ಒಳಪಡುವ ಈ ಕೆರೆಯನ್ನು ರಕ್ಷಣೆ ಮಾಡುವ ಹಾಗೂ ಅಭಿವೃದ್ಧಿ ಪಡಿಸುವ ಕೆಲಸಕ್ಕೆ ಇಲಾಖ ಅಧಿಕಾರಿಗಳು ಮುಂದಾಗ ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ವಾಗಿದೆ. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕುಣಿಗಲ್ ಚಿಕ್ಕಕೆರೆಯನ್ನು ಮೂಡಲ್ ಕುಣಿಗಲ್ ಕೆರೆ ಮಾದರಿ ಯಲ್ಲಿ ಅಭಿವೃದ್ಧಿ ಮಾಡುವಂತೆ ಹಾಗೂ ಒತ್ತುವರಿ ತೆರವುಗೊಳಿಸಬೇಕೆಂಬುದು ನಾಗರಿಕರ ಒತ್ತಾಯ.

 

● ಕೆ.ಎನ್‌.ಲೋಕೇಶ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ