ಕುಣಿಗಲ್ : ಸ್ನೇಹಿತನ ಅಂತ್ಯಕ್ರಿಯೆಗೆ ಬಂದವ ರಸ್ತೆ ಅಪಘಾತಕ್ಕೆ ಬಲಿ
ಅಪರಿಚಿತ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು
Team Udayavani, Jul 3, 2022, 5:41 PM IST
ಕುಣಿಗಲ್ : ಅಪಘಾತದಲ್ಲಿ ಮೃತಪಟ್ಟ ಸ್ನೇಹಿತನ ಶವ ಸಂಸ್ಕಾರಕ್ಕೆ ಬಂದ, ಸ್ನೇಹಿತನೊರ್ವನ್ನು ತಾನು ಸಹಾ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ರಾಜ್ಯ ಹೆದ್ದಾರಿ 33 ರ ಟಿ.ಎಂ ರಸ್ತೆ ಚಿಗಣಿಪಾಳ್ಯ ಸಮೀಪ ಭಾನುವಾರ ಸಂಭವಿಸಿದೆ.
ಮೂತಹಃ ಕುಣಿಗಲ್ ಟೌನ್ ಡಾ.ಅಂಬೇಡ್ಕರ್ ನಗರ, ಹಾಲಿ ಕುದೂರು ವಾಸಿ ಹೇಮಂತ್ ಕುಮಾರ್ (29) ಮೃತ ಯುವಕ.
ಶನಿವಾರ ರಾತ್ರಿ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಬಿಸೇಗೌಡನ ದೊಡ್ಡಿ ಗ್ರಾಮದ ಬಳಿ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಹೇಮತ್ ಕುಮಾರ್ ಅವನ ಆತ್ಮೀಯ ಗೆಳೆಯ ಜಬಿಉಲ್ಲಾ ಮೃತಪಟ್ಟಿದ್ದನ್ನು ಇದರಿಂದ ಗಾಸಿಗೊಂಡ ಹೇಮಂತ್‌ಕುಮಾರ್ ಶನಿವಾರ ರಾತ್ರಿ 10 ರ ಸಮಯದಲ್ಲಿ ಕುಣಿಗಲ್ ಗೆ ಬಂದು ತನ್ನ ಸ್ನೇಹಿತನ ಶವವನ್ನು ನೋಡಿ ಮತ್ತೆ ಭಾನುವಾರ ಆತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ದ್ವಿಚಕ್ರ ವಾಹನದಲ್ಲಿ ಕೊತ್ತಗೆರೆ ಮಾರ್ಗವಾಗಿ ತನ್ನ ಗ್ರಾಮಕ್ಕೆ ಹಿಂತಿರುಗುತ್ತಿರಬೇಕಾದರೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಹೇಮಂತ್‌ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಘಟನೆ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ: ಧ್ರುವನಾರಾಯಣ್ ಮನವಿ
ಸುಶಿಕ್ಷಿತರಲ್ಲಿಯೇ ಹೆಚ್ಚುತ್ತಿದೆ ವರದಕ್ಷಿಣೆ ಪಿಡುಗು
ಮುನಿರತ್ನಗೆ ದೊಡ್ಡ ಇತಿಹಾಸವಿದೆ, ಅವರ ಬಗ್ಗೆ ಮಾತನಾಡುವುದಿಲ್ಲ: ಡಿಕೆ ಸುರೇಶ್ ವ್ಯಂಗ್ಯ
ಮಾನ ಮರ್ಯಾದೆ ಇದೆಯೇನ್ರಿ…? ಕಾಮಗಾರಿ ವಿಳಂಬಿಸಿದ ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ
ಸಿದ್ದರಾಮಯ್ಯ- ಡಿಕೆಶಿ ಆಲಿಂಗನ: ಯತ್ನಾಳ್ ವ್ಯಂಗ್ಯವಾಗಿ ಹೇಳಿದ್ದೇನು?