ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ: ಗುಣಮಟ್ಟ ಶಿಕ್ಷಣಕ್ಕೆ ಕಲಿಕಾ ಚೇತರಿಕೆ: ಸಿಎಂ
Team Udayavani, May 16, 2022, 11:57 PM IST
ತುಮಕೂರು: ಕೋವಿಡ್‌ನಿಂದಾಗಿ ಶಾಲೆಗಳಲ್ಲಿ ಭೌತಿಕ ತರಗತಿ ನಡೆಯದ ಕಾರಣ ಪಠ್ಯ ಕ್ರಮ ಹಿಂದುಳಿದಿದೆ. ಇದನ್ನು ಸರಿದೂಗಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಕಲಿಕಾ ಅಂತರ ಸರಿದೂಗಿಸಲೆಂದೇ 2022-23ನೇ ಶೈಕ್ಷಣಿಕ ವರ್ಷವನ್ನು “ಕಲಿಕಾ ಚೇತರಿಕೆ’ ವರ್ಷ ಎಂದು ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಎಂಪ್ರಸ್ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಸೋಮವಾರ ಏರ್ಪಡಿಸಿದ್ದ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯ ಪುಸ್ತಕ ವಿತರಣೆ ಹಾಗೂ ಕಲಿಕಾ ಚೇತರಿಕೆ ವರ್ಷದ ಉದ್ಘಾಟನೆ ನೆರವೇರಿಸಿ ಸಿಎಂ ಮಾತನಾಡಿದರು.
ಶಾಲಾ ಪ್ರಾರಂಭೋತ್ಸವ ಮಹತ್ವದ ಕಾರ್ಯಕ್ರಮ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅತ್ಯವಶ್ಯಕ. ಮಕ್ಕಳಿಗೆ ಅಕ್ಷರ ಜ್ಞಾನ ಮತ್ತು ಸಂಖ್ಯಾ ಜ್ಞಾನದ ಕೊರತೆ ಉಂಟಾಗಬಾರದು. ಅಕ್ಷರ ಜ್ಞಾನ, ಸಂಖ್ಯಾ ಜ್ಞಾನ ಪಡೆದ ಮಕ್ಕಳು ಭವಿಷ್ಯದಲ್ಲಿ ಯಾವುದೇ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯಬಲ್ಲರು. ವಿಶೇಷ ಪಠ್ಯಕ್ರಮದ ಮೂಲಕ 2 ವರ್ಷದಿಂದ ಕಲಿಯದ್ದನ್ನು ಕಲಿಸಿ, ಭದ್ರ ಶೈಕ್ಷಣಿಕ ಬುನಾದಿ ಹಾಕುವುದೇ ಈ ಕಾರ್ಯಕ್ರಮದ ವಿಶೇಷತೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ಸಂಸದ ಜಿ.ಎಸ್. ಬಸವರಾಜು ಸೇರಿ ಹಲವರು ಉಪಸ್ಥಿತರಿದ್ದರು.
ಶಿಕ್ಷಣಕ್ಕೆ ಹೊಡೆತವಾಗಿದೆ
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಸಮೀಕ್ಷೆ ಪ್ರಕಾರ ಕೋವಿಡ್-19ನಿಂದ ಕಳೆದ 2 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹೊಡೆತ ಬಿದ್ದಿದೆ. ಕಲಿಕಾ ಚೇತರಿಕೆ ಕೇವಲ 15 ದಿನಗಳ ಕಾರ್ಯಕ್ರಮವಲ್ಲ, ಇದು ಇಡೀ ವರ್ಷದ ಕಾರ್ಯಕ್ರಮ. ಹತ್ತನೇ ತರಗತಿಯ ಮಕ್ಕಳಿಗೆ ಮತ್ತಷ್ಟು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ
ದೇಶ ಮತ್ತು ಧರ್ಮ ರಕ್ಷಣೆಗಾಗಿ ಅಗ್ನಿಪಥ ಯೋಜನೆಗೆ ಯುವಕರು ಸೇರಬೇಕು : ಶ್ರೀಶೈಲಗೌಡ ಪಾಟೀಲ
ಚಾಮುಂಡಿ ಬೆಟ್ಟದಲ್ಲಿರುವವರನ್ನು ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾಪ ಇಲ್ಲ; ಸ್ಪಷ್ಟನೆ
ತುರ್ತು ಅಗತ್ಯ ಸೇವೆಗೆ ಸಿಗಬೇಕಾದ ಅಂಬ್ಯುಲೆನ್ಸ್ ಗೇ ಆರೋಗ್ಯ ಸಮಸ್ಯೆ : 4 ದಿನಗಳಿಂದ ತಟಸ್ಥ!
ಈಶ್ವರಪ್ಪನವರ ಬಾಯಿ ಬಡಕುತನದಿಂದಲೇ ಸಚಿವ ಸ್ಥಾನ ಹೋಗಿರುವುದು: ಪ್ರಿಯಾಂಕ್ ಖರ್ಗೆ