ಹೂವು, ತರಕಾರಿ ಕೇಳುವವರೇ ಇಲ್ಲ!


Team Udayavani, May 1, 2021, 4:41 PM IST

ಹೂವು, ತರಕಾರಿ ಕೇಳುವವರೇ ಇಲ್ಲ!

ತುಮಕೂರು: ಶೈಕ್ಷಣಿಕ ನಗರದಲ್ಲಿ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಬಂದ್‌ ನಿಂದ ಹಲವರಿಗೆ ತೊಂದರೆ ಆಗುತ್ತಿದೆ. ಸರ್ಕಾರದ ನಿಯಮದಂತೆ 10ಗಂಟೆಗೆ ತರಕಾರಿ ಮಾರುಕಟ್ಟೆಗಳು ಸಂಪೂರ್ಣ ಬಂದ್‌ ಆಗುತ್ತಿರುವುದರಿಂದ ಮಾರುಕಟ್ಟೆಗೆ ರೈತರು ತಂದಿದ್ದ ತರಕಾರಿ, ಹೂ,ಹಣ್ಣುಗಳು ಮಾರಾಟವಾಗದೇ ಅನ್ನದಾತರು ಸಂಕಷ್ಟ ಪಡುತ್ತಿದ್ದಾರೆ.

ನಗರದ ಅಂರಸನಹಳ್ಳಿ ಹೂ, ಹಣ್ಣು ತರಕಾರಿ ಮಾರುಕಟ್ಟೆ ಶ್ರೀ ಸಿದ್ಧಿವಿನಾಯಕ ತರಕಾರಿ ಮಾರುಕಟ್ಟೆಹೊರ ಪೇಟೆ ತರಕಾರಿ ಮಾರುಕಟ್ಟೆಗಳಲ್ಲಿ ಬೆಳಗ್ಗೆ 6ಗಂಟೆಯಿಂದ 10ರವರೆಗೆ ಹೂ,ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶವಿದ್ದು, ಬೆಳಗ್ಗೆ 10 ಗಂಟೆಯ ನಂತರ ಮಾರಾಟಕ್ಕೆ ಅವಕಾಶವಿಲ್ಲ. ಇದರಿಂದ ಬೆಳಗಿನ ಜಾವವೇ ಎದ್ದು ತರಕಾರಿ ತೆಗೆದುಕೊಂಡು ಮಾರುಕಟ್ಟೆಗೆ ಬಂದಿ ರುವ ರೈತರಿಗೆ ಸಂಕಷ್ಟ ಎ‌ದುರಾಗಿದೆ. ಮಾರುಕಟ್ಟೆಗೆ ಬಂದಿರುವ ಹೂವು ಕೇಳುವವರಿಲ್ಲ, ತರಕಾರಿ ಕೊಳ್ಳುವ ವರಿಲ್ಲ ಮಾರುಕಟ್ಟೆಗೆ ಹೂ, ತರಕಾರಿ ತಂದಿದ್ದ ರೈತರು ಪರದಾಟ ನಡೆಸಿದ ದೃಶ್ಯ ಶುಕ್ರವಾರ ಕಂಡು ಬಂದಿತು.

ಗ್ರಾಹಕರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ: ಸದಾ ಜನರಿಂದ ತುಂಬಿರುತ್ತಿದ್ದ ಅಂತರಸನಹಳ್ಳಿ ಹೂ, ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿ ಬೆಳಗ್ಗೆ 6 ರಿಂದ 10ಗಂಟೆ ವರೆಗೆ ತರಕಾರಿ ಮಾರಾಟ ಮಾಡಲು ಅವಕಾಶವಿದ್ದರೂ, ಮಾರುಕಟ್ಟೆ ಬಂದ್‌ ರೀತಿಯೇ ಇದ್ದು ನಿರೀಕ್ಷೆಯಷ್ಟು ಗ್ರಾಹಕರು ಮಾರುಕಟ್ಟೆಯತ್ತ ಸುಳಿಯಲಿಲ್ಲ. ನಗರ ಸೇರಿದಂತೆ ಜಿಲ್ಲಾದ್ಯಂತ ಕೋವಿಡ್ ಸೋಂಕು ಪ್ರಕರಣ ಗಳು ತ್ವರಿತಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಕೈಗೊಂಡಿರುವ ಕೆಲ ಕಟ್ಟುನಿಟ್ಟಿನ ಕ್ರಮಗಳಿಂದ ರೈತ ಸಮೂಹ ಪರದಾಡುವಂತಾಗಿದೆ.

ಅಂತರಸನಹಳ್ಳಿ ಮಾರುಕಟ್ಟೆ ಸುಸಜ್ಜಿತವಾಗಿದ್ದುವಿಶಾಲ ವಾಗಿದೆ. ತರಕಾರಿ ಮಾರಾಟ ಮಾಡುವ ರೈತರು ಮತ್ತು ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಸ್ಥಳ ‌ ಇದಾಗಿದೆ. ಆದರೂ ಏಕಾಏಕಿ ತರಕಾರಿ ಮಾರಾಟ ದಲ್ಲಿ ಏರುಪೇರು ಆಗಿರುವುದರಿಂದ ತರಕಾರಿ ತಂದಿರುವ ರೈತರು ಮಾರಾಟವಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ತುಮಕೂರು ಸುತ್ತಮುತ್ತ ತರಕಾರಿಬೆಳೆದು ಜೀವನ ನಡೆಸುವ ಕುಟುಂಬಗಳೇ ಹೆಚ್ಚು ಇದ್ದು, ಪ್ರತಿದಿನ ಮಾರುಕಟ್ಟೆಗೆ ತಂದು ತರಕಾರಿ, ಸೊಪ್ಪು, ಹೂವು, ಹಣ್ಣು ಮಾರಿ ಜೀವನ ನಡೆಸುತ್ತಿದ್ದರು.

ನಿರೀಕ್ಷಿತ ಬೆಲೆ ಸಿಗುತ್ತಿಲ್ಲ: ಈ ಮಾರುಕಟ್ಟೆಗೆ ದೂರದ ಊರು ಗಳಿಂದ ಈರುಳ್ಳಿ ಸೇರಿದಂತೆ ಇನ್ನಿತರೆ ತರಕಾರಿ ಗಳನ್ನು ಮಾರುಕಟ್ಟೆಗೆ  ಬಾಡಿಗೆ ವಾಹನ ಮಾಡಿಕೊಂಡು ರೈತರು ಮಾರುಕಟ್ಟೆ ತರುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಖರೀದಿ ಸ್ಥಗಿತ ‌ಗೊಂಡಿರುವುದಕ್ಕೆರೈತರು ಬೇಸರ ವ್ಯಕ್ತಪಡಿಸುತ್ತಿದ್ದರು. ಮಾರುಕಟ್ಟೆಯಲ್ಲಿ ತರಕಾರಿ ಮಾರಾಟವಾಗದೇ ರಸ್ತೆಯಲ್ಲಿ ಮಾರಾಟ ಮಾಡಲೂ ಅವಕಾಶವಿಲ್ಲ. ಇಂದು ತಂದ ತರಕಾರಿ ಇಂದೇಮಾರಾಟವಾಗಬೇಕು. ಆದರೆ, ಮಾರಾಟಕ್ಕೆ ನೀಡಿರುವ

ಸಮಯ ತೀರಾ ಕಡಿಮೆ ಇದೆ. ದೂರದ ಊರುಗಳಿಂದ ಹೊತ್ತು ತಂದಿದ್ದ ತರಕಾರಿಯನ್ನು ರಸ್ತೆ ಬದಿಯಲ್ಲಿ ಮಾರಾಟಕ್ಕೆ ಮುಂದಾದ ರೈತರಿಗೆ ಅವಕಾಶ ನೀಡದೆ ಪೊಲೀ ಸರು ತರಕಾರರು ತೆಗೆದಿದ್ದರು. ಇದಕ್ಕೆ ತರಕಾರಿ ಬೆಳೆದ ರೈತರ ನೋವು ಹೇಳತೀರದಾಗಿದೆ. ತರಕಾರಿ ಯನ್ನು ಮಾರುಕಟ್ಟೆಗೆ ತಂದಿರುವ ರೈತರು ಆಡಳಿತ ನಡೆಸುವ ಅಧಿಕಾರಿಗಳು ಮತ್ತು ಕರ್ತವ್ಯ ನಿರತ ಪೊಲೀಸರ ಕೆಲ ಧೋರಣೆಗೆ ಆಕ್ರೋಶ ವ್ಯಕ್ತಪಡಿ‌ಸುತ್ತಿದ್ದರು.

ಹೂವಿನ ಬೆಲೆ ಕುಸಿತ: ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ನಿರೀಕ್ಷೆಯಂತೆ ಕಂಡುಬರಲಿಲ್ಲ. ಹೂವಿನ ದರ ಪಾತಾಳಕ ಕ್ಕೆ  ಕುಸಿದಿದ್ದರಿಂದ ‌ ಹೂವು ಬೆಳೆಗಾ ರರುಬೇಸರ ವ್ಯಕ್ತಪಡಿಸಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಊರುಗಳಿಗೆ ತೆರಳಿದರು. ಕನಕಾಂಬರ, ಕಾಕಡ, ಸೇವಂತಿಗೆ ಸೇರಿದಂತೆ ಇನ್ನಿತರೆ ಹೂವುಗಳ ಸಂಪೂರ್ಣ ಕುಸಿದಿದ್ದು, ಹೂ ಕೇಳುವವರೇ ಇಲ್ಲ 10 ರೂ.ಗೆ ಮಾರು ಎಂದರೂ ಬೇಡ ಎನ್ನುತ್ತಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆ ಯಾವುದೇ

ದೇವತಾ ಕಾರ್ಯಗಳು, ಸಭೆ, ಸಮಾರಂಭಗಳು ನಡೆಯದಿರು ವುದು ಹೂವಿನ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಹಾಲಿನ ಮತ್ತು ಹಾಲಿನ ಉತ್ಪನ್ನಗ ‌ಳಿಗೆ ರಾತ್ರಿವರೆಗೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣುಗಳ ಮಾರಾಟಕ್ಕೆ ಸಾಮಾಜಿಕ ಅಂತರದಲ್ಲಿ ಮಾರಾಟ ಮಾಡಲು ಅವಕಾಶ ನೀಡಬೇಕು. ಈ ಬಗ ಜಿಲ್ಲಾಡಳಿತ, ಜಿಲ್ಲಾ ಸಚಿವರು ಗಮನ ಹರಿಸಬೇಕು ಎಂದು ರೈತರು, ಮಂಡಿ ವರ್ತಕರು ಆಗ್ರಹಿಸಿದ್ದಾರೆ.

ಲಾಕ್‌ಡೌನ್‌ನಿಂದ ಅತಂತ್ರ :

ಜಿಲ್ಲೆಯಲ್ಲಿ 30,009 ಹೆಕ್ಟೇರ್‌ ಪ್ರದೇಶದಲ್ಲಿ ಹಣ್ಣಿನಬೆಳೆಗಳನ್ನು ರೈತರು ಬೆಳೆಯುತ್ತಾರೆ. 7,057 ಹೆಕ್ಟೇರ್‌ ಪ್ರದೇಶದಲ್ಲಿ ತರಕಾರಿ, 2,047 ಹೆಕ್ಟೇರ್‌ ಪ್ರದೇಶ ದಲ್ಲಿ ಹೂವಿನ ಬೆಳೆಗಳನ್ನು ರೈತರುಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ಟೊಮೇಟೊ,ಬೆಂಡೆ ಕಾಯಿ, ಗೆಣಸು, ಸೌತೇಕಾಯಿ, ಕ್ಯಾರೇಟ್‌, ಹುರಳಿ ಕಾಯಿ, ಮೆಣಸಿನಕಾಯಿ, ಹಾಗಲಕಾಯಿ,ಸೊಪ್ಪು ಸೇರಿದಂತೆ ವಿವಿಧ ಬಗೆಯ ತರಕಾರಿಯನ್ನು ಜಿಲ್ಲೆಯ ರೈತರು ಬೆಳೆಯುತ್ತಾರೆ.ತುಮಕೂರು ಸುತ್ತ ಮುತ್ತ ಹೆಚ್ಚು ತರಕಾರಿ ಸೊಪ್ಪು ಬೆಳೆಯುವ ರೈತರಿದ್ದಾರೆ. ಅವರ ಬದುಕು ಲಾಕ್‌ ಡೌನ್‌ನಿಂದ ಅತಂತ್ರವಾಗಿದೆ.

ಜಿಲ್ಲಾಡಳಿತ ಗಮನ ಹರಿಸಲಿ :

ನಾವು ಲಕ್ಷಾಂತರ ರೂ. ಖರ್ಚುಮಾಡಿ ತರಕಾರಿ ಬೆಳೆದಿದ್ದೇವೆ. ಲಾಕ್‌ಡೌನ್‌ನಿಂದ ಬೆಳೆದ ತರಕಾರಿ ಬೆಳೆ ಮಾರಲು ಅವಕಾಶ ವಿಲ್ಲ. ಸರ್ಕಾರ ಇದಕ್ಕೆ ಅನುಕೂಲ ಮಾಡಬೇಕು. ಈ ಬಗ್ಗೆ  ಜಿಲ್ಲಾಡಳಿತ ಗಮನ ಹರಿಸಬೇಕು. ಹಾಲು ಮಾರಾಟಕ್ಕೆ ಅವಕಾಶ ನೀಡಿರುವಂತೆ ಹೂವು, ತರಕಾರಿ ಹಣ್ಣು ಮಾರಾಟ ಮಾಡಲು ಅವಕಾಶ ಕಲ್ಪಿಸಲಿ ಎನ್ನುತ್ತಾರೆ ರೈತ ಶ್ರೀನಿವಾಸ್‌.

ನಂದಿನಿ ಹಾಲಿನ ಮಳಿಗೆಯಲ್ಲಿ ಹಾಲಿನ ಮಾರಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 8 ಗಂಟೆಯವರೆಗೆ ಸರ್ಕಾರ ಅವಕಾಶ ನೀಡಿದೆ. ಅದೇ ರೀತಿ ನಮ್ಮ ರೈತರುಮಾರುಕಟ್ಟೆಗೆ ತರುವ ತರಕಾರಿ, ಹೂವು,ಹಣ್ಣು ಮಾರಿಕೊಳ್ಳಲು ಅವಕಾಶಕಲ್ಪಿಸಬೇಕು. ಇದರಿಂದ ತರಕಾರಿ ಬೆಳೆದಿರುವ ರೈತರಿಗೆ ಹೆಚ್ಚು ಅನುಕೂಲ ಆಗುತ್ತದೆ. – ಶಂಕರಪ್ಪ, ರೈತ ಮುಖಂಡ

ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ತರಕಾರಿಬೆಳೆದಿರುವ ರೈತರಿಗೆತೊಂದರೆ ಉಂಟಾಗುತ್ತಿದೆ. ಆದ್ದರಿಂದ ಅವರಿಗೆ ತೊಂದರೆ ಆಗಬಾರದು ಎಂದು ತೋಟಗಾರಿಕೆ ಇಲಾಖೆಯಿಂದ ಸಹಾಯವಾಣಿ 0816-2970310ತೆರೆದಿದ್ದು, ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲಾಗುವುದು.ಇತರೆ ಮಾಹಿತಿಗೆ ರೂತರು ಸಂಪರ್ಕಿಸಬಹುದು.– ಬಿ.ರಘು, ಉಪನಿರ್ದೇಶಕ, ತೊಟಗಾರಿಕೆ ಇಲಾಖೆ

 

– ಚಿ.ನಿ.ಪುರುಷೋತ್ತಮ್‌.

ಟಾಪ್ ನ್ಯೂಸ್

1-dssdsa

ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ

dr-sdk

ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ

ಡಿಕೆಶಿ

ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಿದ್ದತೆ ಮುಖ್ಯವೆಂದ ಡಿಕೆಶಿ

1-fdgg

ಕರ್ನಾಟಕ- ಕೊರಿಯಾ ಗಣರಾಜ್ಯ ಬಾಂಧವ್ಯ ವೃದ್ಧಿ: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

7landsilde—–1

ಮಂಗಳೂರು: ಗುಡ್ಡ ಕುಸಿದು ಮನೆಗಳಿಗೆ ಹಾನಿ; 5 ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!

ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿಗೆ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳಾ ಸಬಲೀಕರಣವೇ ನಮ್ಮ ಉದ್ದೇಶ : ಡಾ| ವೀರೇಂದ್ರ ಹೆಗ್ಗಡೆ

ಮಹಿಳಾ ಸಬಲೀಕರಣವೇ ನಮ್ಮ ಉದ್ದೇಶ : ಡಾ| ವೀರೇಂದ್ರ ಹೆಗ್ಗಡೆ

ಪಾವಗಡ : ಆಟೋ ರಿಕ್ಷಾ – ಬೊಲೆರೋ ನಡುವೆ ಅಪಘಾತ : ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

ಪಾವಗಡ : ಆಟೋ ರಿಕ್ಷಾ – ಬೊಲೆರೋ ನಡುವೆ ಅಪಘಾತ : ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

1-sadd

ಕೊರಟಗೆರೆ: ಬೆಳೆಗಾರರಿಗೆ ಖುಷಿ ನೀಡದ ಹಲಸಿನ ದಿನ

7bike

ಬೈಪಾಸ್ ರಸ್ತೆಯಲ್ಲಿ ಬೈಕ್ ವೀಲಿಂಗ್: ಯುವಕನಿಗೆ 7 ಸಾವಿರ ರೂ. ದಂಡ

tdy-20

ಆರ್ಥಿಕ ಪ್ರಗತಿಗಾಗಿ ಹಲವು ಸೌಲಭ್ಯ

MUST WATCH

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

ಹೊಸ ಸೇರ್ಪಡೆ

1-dssdsa

ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ

dr-sdk

ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ

8theft

ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು

ಡಿಕೆಶಿ

ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಿದ್ದತೆ ಮುಖ್ಯವೆಂದ ಡಿಕೆಶಿ

1-fdf-dsf

ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಗೆ 19 ಕೋ ರೂ ಲಾಭ : ತೇಲ್ಕೂರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.