ಅಂಗನವಾಡಿಗಳಲ್ಲಿ ತೂಕದ ಯಂತ್ರಗಳೇ ಇಲ್ಲ

ನಿಗದಿತ ಅಳತೆಯಿಲ್ಲದೆ ಪೌಷ್ಟಿಕ ಆಹಾರ ವಿತರಣೆ ! ಅಳತೆ ಮೋಸದಿಂದ ಪಾರಾಗಲು ಯಂತ್ರ ಅವಶ್ಯಕ

Team Udayavani, Feb 12, 2021, 5:57 PM IST

Madgugiri Anganavadi

ಮಧುಗಿರಿ: ಸ್ವಾತಂತ್ರ್ಯ ಕಾಲದಿಂದಲೂ ಅಂಗನವಾಡಿ ನಾನಾ ಸಮಸ್ಯೆಗಳಿಂದ ಕೂಡಿದ್ದು, ಅಲ್ಲಿ  ನಡೆಯುವ ಲೋಪಗಳು ಶಿಕ್ಷಣ ಇಲಾಖೆಗೆ ತಲೆನೋವನ್ನುಂಟು ಮಾಡಿವೆ. ಹಲವು ಕಡೆ ಸರ್ಕಾರದ ಅಳತೆಗಿಂತ ಕಡಿಮೆ ಆಹಾರ ನೀಡುತ್ತಿರುವ ಪ್ರಕರಣವು ಸಾಮಾನ್ಯವಾಗಿದೆ. ಈ ಸಮಸ್ಯೆಯಿಂದ ಮುಕ್ತರಾಗಲು ಸರ್ಕಾರ ಪ್ರತಿ ಅಂಗನವಾಡಿಗೆ ತೂಕದ ಯಂತ್ರವನ್ನು ನೀಡಿಬೇಕಿದೆ.

ತಾಲೂಕಿನಲ್ಲಿ 428 ಅಂಗನವಾಡಿಗಳಿದ್ದು, 67 ಬಾಡಿಗೆ, 5 ಬಾಡಿಗೆರಹಿತ, ಶಾಲಾ ಕಟ್ಟಡದಲ್ಲಿ 11, ಸಮುದಾಯ ಭವನದಲ್ಲಿ 19 ಹಾಗೂ ಸ್ವಂತ ಕಟ್ಟಡದಲ್ಲಿ 326 ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ಅಂಗನವಾಡಿಗಳಲ್ಲಿ ಪ್ರಸ್ತುತ 1,450 ಬಾಣಂತಿಯರು, 1390 ಗರ್ಭಿಣಿಯರಿಗೆ ಆಹಾರವನ್ನು ನೀಡಲಾಗುತ್ತಿದ್ದು, ತೂಕದ ಯಂತ್ರದ ಸಮಸ್ಯೆಯಿಂದ ಅಳತೆಗಿಂತ ಕಡಿಮೆ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಕ್ಷೇತ್ರದಲ್ಲಿ 6-1 ವರ್ಷದ 1538, 1-2 ವರ್ಷದ 2966, 2-3 ವರ್ಷದ 2906, 3-5 ವರ್ಷದ 5485 ಹಾಗೂ 5-6 ವರ್ಷದ 1149 ಮಕ್ಕಳಿದ್ದು, 416 ಅಂಗನವಾಡಿ ಕಾರ್ಯ ಕರ್ತೆಯರು 365 ಸಹಾಯಕರು ಸೇರಿ ಒಟ್ಟು 17,665 ಮಕ್ಕಳಿಗೆ ಆಹಾರ ನೀಡಬೇಕಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವಿರಾರು ಕ್ವಿಂಟಲ್‌ ಆಹಾರ ಸಾಮಗ್ರಿ ಹಂಚಲು ಕನಿಷ್ಠ ಬೆಲೆಯ ತೂಕದ ಯಂತ್ರ ನೀಡದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಬಲ್ಪಿಗೆ ದುಡ್ಡು-ತೂಕದ ಯಂತ್ರಕ್ಕಿಲ್ಲ: 2019-20 ನೇ ಸಾಲಿನಲ್ಲಿ 16 ಲಕ್ಷ ಹಾಗೂ 2020-21 ರಲ್ಲಿ 18 ಲಕ್ಷ ಹಣವನ್ನು 326 ಸ್ವಂತ ಕಟ್ಟಡಗಳ ವಿದ್ಯುದೀಕರಣ ಮಾಡಲು ಹಣ ಬಿಡುಗಡೆಯಾಗಿದ್ದು, ಪ್ರತಿ ಕಟ್ಟಡಕ್ಕೆ 2 ಬಲ್ಪ್, 1 ಫ್ಯಾನ್‌, ಹಾಗೂ ಇತರೆ ಪರಿಕರಣಗಳ ಬಳಕೆಗೆ ಅನುಮತಿ ನೀಡಿದ ಸರ್ಕಾರ, ಕನಿಷ್ಠ ಬೆಲೆಯ ತೂಕದ ಯಂತ್ರ ಖರೀದಿಸಲು ನೀಡಿಲ್ಲ. ಎಲ್ಲ ಅಂಗನವಾಡಿಗಳು ಹಗಲಿನ ವೇಳೆ ತೆರೆದಿದ್ದು, ಬಳಕೆಯಾಗದ ಬಲ್ಪ್ ಗಳಿಗೆ ಹಣ ನೀಡಿದೆ. ಆದರೆ ಅಂಗನವಾಡಿಗಳ ಬಗ್ಗೆ ಸಾರ್ವಜನಿಕರಲ್ಲಿರುವ ಅಳತೆ ಮೋಸದ ಭಾವನೆ ತೊಡೆದು ಹಾಕಲು ತೂಕದ ಯಂತ್ರ ನೀಡಿದ್ದರೆ ಈ ಅಪವಾದದಿಂದ ದೂರವಾಗಬಹುದಿತ್ತು.

ಜಲಜೀವನ್‌ ಯೋಜನೆಯಲ್ಲಿ ನೀರು ಪೂರೈಕೆ: ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆಯಿಂದ ಜಲಜೀವನ್‌ ಯೋಜನೆಯಡಿ ತಾಲೂಕಿನ 310 ಶಾಲೆಗೆ 48.36 ಲಕ್ಷ, ಹಾಗೂ 313 ಅಂಗನವಾಡಿಗಳಿಗೆ ನೀರಿನ ಸಂಪರ್ಕ ಕಲ್ಪಿಸಲು 42.50 ಲಕ್ಷದ ವೆಚ್ಚದಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಇಲಾಖೆಯ ಎಇಇ ರಾಮದಾಸ್‌ ತಿಳಿಸಿದ್ದು, ತಲಾ ಕಟ್ಟಡಕ್ಕೆ 10-15 ಸಾವಿರ ವೆಚ್ಚ ಮಾಡಲಾಗುತ್ತಿದೆ. ಈ ಕಾಮಗಾರಿಯಲ್ಲಿ 1 ಸಿಂಟೆಕ್ಸ್‌, 3 ನಲ್ಲಿ ಸೇರಿದಂತೆ ವಿವಿಧ ಅನುಕೂಲ ಮಾಡುತ್ತಿದ್ದು, ಕೆಲಸ ಶೇ.70 ಪೂರ್ಣಗೊಂಡಿದೆ ಎಂದು ಜೆಇ ಕಿರಣ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.