Udayavni Special

ರೈತರಿಗೆ ಜಮೀನಿನ ಖಾತೆ ಮಾಡಿಕೊಡಿ


Team Udayavani, Aug 3, 2019, 4:47 PM IST

tk-tdy-3

ಮಧುಗಿರಿಯ ಸಜ್ಜೆಹೊಸಹಳ್ಳಿಯಲ್ಲಿ ನಡೆದ 3ನೇ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಜನರ ಅಹವಾಲು ಸ್ವೀಕರಿಸಿದರು.

ಮಧುಗಿರಿ: ಅಗತ್ಯ ದಾಖಲೆ ಸರಳೀಕರಣ ಗೊಳಿಸಿ ರೈತರಿಗೆ ಜಮೀನಿನ ಖಾತೆ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಶಾಸಕ ಎಂ.ವಿ. ವೀರಭದ್ರಯ್ಯ ಸೂಚಿಸಿದರು.

ದೊಡ್ಡೇರಿ ಹೋಬಳಿಯ ಗಡಿ ಭಾಗದ ಸಜ್ಜೆಹೊಸಹಳ್ಳಿ ಗ್ರಾಪಂನಲ್ಲಿ 3ನೇ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರು ಅಲೆದಾಟ ತಪ್ಪಿಸಲು ಪಂಚನಾಮೆ ಮೂಲಕ ದಾಖಲೆ ಸಿದ್ಧಪಡಿಸಿಕೊಂಡು ಸಮಸ್ಯೆಗೆ ಮುಕ್ತಿ ತೋರಬೇಕು. ಇದರಿಂದ ಸುಮಾರು 10 ಸಾವಿರ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಗುರುತಿಸಲು ತಾಲೂಕಿನಲ್ಲಿ ಆಂದೋ ಲನ ಹಮ್ಮಿಕೊಳ್ಳಲಾಗುವುದು. 70-80 ವರ್ಷ ವಾದರೂ ವೃದ್ಧಾಪ್ಯ ಯೋಜನೆಯ ಆದೇಶಪತ್ರ ಈಗ ನೀಡುತ್ತಿರುವುದು ಇಲಾಖೆಗೆ ನಾಚಿಕೆ ಗೇಡು. ಹಲವು ಪಿಂಚಣಿಯ ಹಣ ಬಡವರಿಗೆ ಬರಗಾಲದಲ್ಲಿ ವರದಾನವಾಗಿದೆ. ಇಂತಹ ಸುಮಾರು 5-10 ಸಾವಿರ ಫ‌ಲಾನುಭವಿಗಳು ಕ್ಷೇತ್ರದಲ್ಲಿದ್ದು, ಅವರನ್ನು ಗುರುತಿಸಿ ಆದೇಶ ಪತ್ರ ಕೊಡಿಸುವ ಕಾರ್ಯಕ್ಕೆ ಮುಂದಿನ ದಿನ ಗಳಲ್ಲಿ ಚಾಲನೆ ನೀಡಲಾಗುವುದು ಎಂದರು.

ನಿವೇಶನ ಹಂಚಲು ಸೂಚನೆ: ಜನಸ್ಪಂದನೆ ಕಾರ್ಯಕ್ರಮದಲ್ಲಿ ವಿವಿಧ ಪಿಂಚಣಿಯ 62 ಅರ್ಜಿ, ಸಾಗುವಳಿ ಸಕ್ರಮಗೊಳಿಸುವುದು, ಗಂಗಾಕಲ್ಯಾಣ ಹಾಗೂ ಮನೆ ಮತ್ತು ನಿವೇಶನಕ್ಕೆ ಬೇಡಿಕೆಗಳು ಬಂದವು. ಬಗರ್‌ ಹುಕುಂ ಸಮಿತಿ ರಚಿಸಿ ಕೆಲವನ್ನು ಸ್ಥಳದಲ್ಲೇ ಬಗೆಹರಿಸಿದ ಶಾಸಕರು ನಿವೇಶನಕ್ಕೆ ಸಜ್ಜೆ ಹೊಸಹಳ್ಳಿಯಲ್ಲಿ 1.10 ಎಕರೆ ಜಮೀನು ಗುರುತಿಸಿದ್ದು, ನಿವೇಶನ ಹಂಚಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಅರ್ಜಿ ಮರುಕಳಿಸಿದರೆ ಶಿಸ್ತು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಎಚ್ಚರಿಸಿದರು. ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಮಾತನಾಡಿ ತಾಲೂಕು ಆಡಳಿತವೆ ಜನರ ಮನೆ ಬಾಗಿಲಿಗೆ ಬಂದು ಸಮಸ್ಯೆ ಆಲಿಸಿ, ಬಗೆಹರಿಸು ವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.

ತಹಶೀಲ್ದಾರ್‌ ನಂದೀಶ್‌ ಮಾತನಾಡಿ, 60ಕ್ಕೂ ಹೆಚ್ಚು ವಿವಿಧ ಪಿಂಚಣಿಯ ಆದೇಶ ಪತ್ರ ವಿತರಿಸಿದ್ದೇವೆ. ಸಾರ್ವಜನಿಕರ ಸಮಸ್ಯೆ ಸ್ಥಳ ದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ತಹಶೀಲ್ದಾರ್‌ ನಂದೀಶ್‌, ಇಒ ದೊಡ್ಡಸಿದ್ದಯ್ಯ, ಕೃಷಿ, ಪಶು ಸಂಗೋಪನೆ, ತೋಟಗಾರಿಕೆ, ರೇಷ್ಮೆ, ಸಹಾಯಕ ನಿರ್ದೇಶಕ ರಾದ ಹನುಮಂತರಾಯಪ್ಪ, ನಾಗಭೂಷಣ್‌, ವಿಶ್ವನಾಥಗೌಡ, ನಾಗರಾಜು, ಗ್ರಾಪಂ ಅಧ್ಯಕ್ಷ ಮಹಾಲಿಂಗಯ್ಯ, ಪಿಡಿಒ ಪ್ರಶಾಂತ್‌, ಕಂದಾ ಯಾಧಿಕಾರಿ ಮಹೇಶ್‌, ಸಹಾಯಕರಾದ ರಾಮಗಿರಿ, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್‌, ಎಪಿಎಂಸಿ ಮಾಜಿ ಸದಸ್ಯ ಸಣ್ಣಮಲ್ಲಪ್ಪ, ಮುಖಂಡರಾದ ಮಂಜಣ್ಣ, ವೆಂಕಟೇಶ್‌ಗೌಡ, ಗೋವಿಂದರೆಡ್ಡಿ, ಗಂಗಣ್ಣ, ರಫೀಕ್‌ ಇದ್ದರು.

ಟಾಪ್ ನ್ಯೂಸ್

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

Untitled-1

ಜುಲೈ 31ವರೆಗೂ ವ್ಯಾಪಕ ಮಳೆ

ಗಂಗಾವಳಿ ಪ್ರವಾಹ: ಕೊಚ್ಚಿಹೋದ ನೆರೆ ಪೀಡಿತ ಜನರ ಬದುಕು

ಗಂಗಾವಳಿ ಪ್ರವಾಹ: ಕೊಚ್ಚಿ ಹೋದ ನೆರೆ ಪೀಡಿತ ಜನರ ಬದುಕು

ghtryrtyr

ಬೊಮ್ಮಾಯಿ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳು ; ಯಾರಿಗೆ ಒಲಿದಿದೆ ಡಿಸಿಎಂ ಪಟ್ಟ ?

hrtyrtyrtr

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬೊಮ್ಮಾಯಿ : ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ

fgdfgretgre

ಬಸವರಾಜ್ ಬೊಮ್ಮಾಯಿ ನೂತನ ಸಿಎಂ: ಶಾಸಕ ಯತ್ನಾಳ ಪ್ರತಿಕ್ರಿಯೆ ಏನು ?

htytrytr

‘ಬಡವರ ಏಳಿಗೆ ನನ್ನ ಮೊದಲ ಪ್ರಾಶಸ್ತ್ಯ’ : ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಮೊದಲ ಮಾತುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumakuru news

ಜಿಲ್ಲೆ ಅಭಿವೃದ್ದಿಗೆ ಸಾವಿರಾರು ಕೋಟಿ ರೂ. ಅನುದಾನ

thumakuru news

5 ಜಿಲ್ಲೆ ಕೈಮುಖಂಡರ ಸಭೆಗೆ ಸಜ್ಜು

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

Agricultural activity

ನಿರಂತರ ತುಂತುರು ಮಳೆ ಕೃಷಿ ಚಟುವಟಿಕೆ ಕುಂಠಿತ

thumakuru news

ಸ್ಲಂ ಮಕ್ಕಳಿಗೆ ಬಾಲ್ಯ ವಿವಾಹ ವಿರೋಧಿಸುವ ಜಾಗೃತಿ ಅಗತ್ಯ

MUST WATCH

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

udayavani youtube

ಮಳೆಯ ಆರ್ಭಟಕ್ಕೆ ಯಾಣದ ಶ್ರೀ ಭೈರವೇಶ್ವರ ದೇವಾಲಯದ ರಸ್ತೆಯ ಸ್ಥಿತಿ

udayavani youtube

ಎರಡೇ ದಿನದಲ್ಲಿ closeಆಗಿ ನಿಮ್ಮನ್ನು ಯಾಮಾರಿಸ್ತಾರೆ..ಜಾಗ್ರತೆ !!

ಹೊಸ ಸೇರ್ಪಡೆ

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

Untitled-1

ರ್ಯಾಗಿಂಗ್‌ ಪಿಡುಗು: 7 ತಿಂಗಳುಗಳಲ್ಲಿ 40 ಮಂದಿ ವಿದ್ಯಾರ್ಥಿಗಳ ಬಂಧನ

ಗೋಶಾಲೆಗಳು ಭರ್ತಿ; ಶೀಘ್ರ ಜಿಲ್ಲಾ ಗೋಶಾಲೆ 

ಗೋಶಾಲೆಗಳು ಭರ್ತಿ; ಶೀಘ್ರ ಜಿಲ್ಲಾ ಗೋಶಾಲೆ 

ಇನ್ನೂ  ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಬಸ್‌ ಸಂಚಾರ

ಇನ್ನೂ  ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಬಸ್‌ ಸಂಚಾರ

ಹೊಸಮಠ: ನೆನಪಾಗಿ ಕಾಡುತ್ತಿದೆ ಮುಳುಗು ಸೇತುವೆ

ಹೊಸಮಠ: ನೆನಪಾಗಿ ಕಾಡುತ್ತಿದೆ ಮುಳುಗು ಸೇತುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.