Udayavni Special

ಅಂಗಡಿ ಮಳಿಗೆಗಳ ಹರಾಜಿಗೆ ಪುರಸಭೆ ಸಿದ್ಧತೆ


Team Udayavani, Feb 24, 2021, 2:45 PM IST

ಅಂಗಡಿ ಮಳಿಗೆಗಳ ಹರಾಜಿಗೆ ಪುರಸಭೆ ಸಿದ್ಧತೆ

ಚಿಕ್ಕನಾಯಕನಹಳ್ಳಿ: ಆದಾಯ ಹೆಚ್ಚಿಸಲು ಪುರಸಭೆ ಅಧಿಕಾರಿಗಳು, ಸದಸ್ಯರು ನಿರ್ಧರಿಸಿದ್ದು ಮಳಿಗೆಗಳನ್ನು ಹರಾಜು ಮಾಡಲು ಸಿದ್ಧತೆ ಕೈಗೊಂಡಿದ್ದಾರೆ. ಹಲವು ವರ್ಷಗಳಿಂದ ಹರಾಜಾಗದೇ ಮಳಿಗೆಗಳು ಉಳಿದಿವೆ. ಅಲ್ಲದೇ, ಅವಧಿ ಮುಗಿದ ಮಳಿಗೆಗಳಿಗೆ ಮುಖ್ಯಾಧಿಕಾರಿ ಶ್ರೀನಿವಾಸ್‌ ನೋಟಿಸ್‌ ಜಾರಿಗೊಳಿಸಿದ್ದಾರೆ. ಹೀಗಾಗಿ ವ್ಯಾಪಾರಿಗಳು ಒಂದು ವಾರ ಸಮಯಾವಕಾಶ ಕೇಳಿದ್ದಾರೆ.

ಪಟ್ಟಣದ ಹೃದಯ ಭಾಗದ ಅಂಗಡಿ ಮಳಿಗೆಗಳಿಂದ ಪುರಸಭೆಗೆ ಅತೀ ಕಡಿಮೆ ಬಾಡಿಗೆ ಸಂದಾಯವಾಗುತ್ತಿದ್ದು, 2009 ರಲ್ಲಿಯೇ ಪುರಸಭೆ ಮಳಿಗೆಗಳ ಬಾಡಿಗೆಕರಾರು ಮುಗಿದಿದ್ದರೂ ಮಳಿಗೆ ಹರಾಜು ನಡೆದಿಲ್ಲ. ಇನ್ನೂ 25 ವರ್ಷಗಳ ಹಿಂದಿನ ದರದಲ್ಲಿ ಬಾಡಿಗೆ ಸ್ವೀಕರಿಸುತ್ತಿರುವ ಪುರಸಭೆ,ಪ್ರತಿ ತಿಂಗಳು ಸುಮಾರು 2 ಲಕ್ಷ ನಷ್ಟ ಅನುಭವಿಸುತ್ತಿದೆ. ಮುಖ್ಯಾಧಿಕಾರಿ ಶ್ರೀನಿವಾಸ್‌, ಸರ್ವ ಸದಸ್ಯರು ಅಂಗಡಿಗಳನ್ನು ಖಾಲಿ ಮಾಡಿಸಿ ಪ್ರಸ್ತುತ ದರಕ್ಕೆ ಹರಾಜುಮಾಡಲು ತೀರ್ಮಾನಿಸಿದ್ದಾರೆ. ಯಾವ ವಿಘ್ನ ಬರದಿದ್ದರೆ ಸುಮಾರು 3-4 ಲಕ್ಷ ಪುರಸಭೆಗೆ ಆದಾಯ ಬರುವುದರಲ್ಲಿ ಅನುಮಾನವಿಲ್ಲ.

ವಾರ್ಷಿಕ 30 ಲಕ್ಷ ರೂ. ನಷ್ಟ: ಪುರಸಭೆಗೆ ಸಂಬಂಧಿಸಿದ 120 ಮಳಿಗೆಗಳಿದ್ದು ಇವುಗಳಲ್ಲಿ 29 ಮಳಿಗೆಗಳ ಹರಾಜಿಗೆ ಕೋರ್ಟ್‌ತಡೆಯಾಜ್ಞೆ ನೀಡಿದೆ. 60 ಮಳಿಗೆಗಳು ಹರಾಜಿಗೆ ಸಿದ್ಧವಾಗಿವೆ. ಉಳಿದ ಮಳಿಗೆಗಳ ಕಾಲಾವಧಿ ಇನ್ನೂ ಬಾಕಿ ಇದೆ. ಮಳಿಗೆಗಳಿಂದಕನಿಷ್ಠ 800 ರಿಂದ ಗರಿಷ್ಠ 2500 ಪುರಸಭೆಗೆ ಬಾಡಿಗೆ ಬರುತ್ತಿದೆ. ಪ್ರಸು§ತ ಇವುಗಳ ಬಾಡಿಗೆ ದರ ಹೆಚ್ಚಾಗಿದ್ದು ಇವುಗಳನ್ನು ಮರು ಹರಾಜು ಮಾಡಿದರೆ ಪುರಸಭೆ ಪ್ರತಿ ತಿಂಗಳು 2.5 ಲಕ್ಷದಿಂದ 3ಲಕ್ಷದವರೆಗೆ ಆದಾಯ ಬರುತ್ತದೆ. 2009ಕ್ಕೆ ಬಹುತೇಕ ಮಳಿಗೆಗಳ ಬಾಡಿಗೆ ಕರಾರು ಮುಗಿದು ಹೋಗಿದ್ದು, 2021 ಕಳೆಯುತ್ತಿದ್ದರೂ ಹರಾಜಿಗೆ ಮನಸ್ಸು ಮಾಡಿರಲಿಲ್ಲ. ಈಗಿನ ಮುಖ್ಯಾಧಿಕಾರಿ ಶ್ರೀನಿವಾಸ್‌, ಸದಸ್ಯರ ಬೆಂಬಲದೊಂದಿಗೆ ಹರಾಜು ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಕಾಲಾವಕಾಶ: ಕಾನೂನಾತ್ಮಕವಾಗಿ ಗಡುವು ಮುಗಿದಿರುವ ಅಂಗಡಿ ಮಳಿಗೆ ಖಾಲಿ ಮಾಡಲು ಮಾ.1ರವರೆಗೆ ಅಂಗಡಿ ಮಳಿಗೆ ವ್ಯಾಪಾರಿಗಳು ಸಮಯ ಕೇಳಿದ್ದಾರೆ.ಸೋಮವಾರ ಮಳಿಗೆ ಖಾಲಿ ಮಾಡದಿದ್ದರೆಪೊಲೀಸರ ಸಹಕಾರದೊಂದಿಗೆ ಖಾಲಿಮಾಡಿಸಲು ಮುಂದಾಗುತ್ತೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗಡಿ ಮಳಿಗೆಗಳನ್ನು ಹರಾಜು ಮಾಡಿದರೆ ಪುರಸಭೆ ಆದಾಯ ಹೆಚ್ಚುತ್ತದೆ. ಪಟ್ಟಣ ಅಭಿವೃದ್ಧಿಗೆ ಹಣವನ್ನು ಬಳಕೆ ಮಾಡಿಕೊಳ್ಳಬಹುದು,ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಳಿಗೆಹರಾಜಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳು ಸೋಮವಾರದವರೆಗೆ ಮಳಿಗೆ ಖಾಲಿ ಮಾಡಲು ಅವಕಾಶ ಕೇಳಿದ್ದಾರೆ. ಶ್ರೀನಿವಾಸ್‌, ಚಿಕ್ಕನಾಯಕನಹಳ್ಳಿ ಪುರಸಭೆ ಮುಖ್ಯಾಧಿಕಾರಿ

 

ಚೇತನ್‌

ಟಾಪ್ ನ್ಯೂಸ್

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

dthrtre

ಕೋವಿಡ್ ಪ್ರಕರಣಗಳ ಉಲ್ಬಣ : ತಮಿಳುನಾಡು-ಬಿಹಾರಿನಲ್ಲಿ ರಾತ್ರಿ ಕರ್ಫ್ಯೂ ಜಾರಿ

ಮಂಡ್ಯ : ಒಂದೇ ದಿನ ಮುನ್ನೂರರ ಗಡಿ ದಾಟಿದ ಕೋವಿಡ್ ಪಾಸಿಟಿವ್ ಪ್ರಕರಣ, ಓರ್ವ ಸಾವು

ಮಂಡ್ಯ : ಒಂದೇ ದಿನ 300ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ, ಓರ್ವ ಸಾವು

ಐಸಿಯು ಬೆಡ್ ಗಾಗಿ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಅಲೆದಾಡಿದ ಮಹಿಳೆ

ಐಸಿಯು ಬೆಡ್ ಗಾಗಿ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಅಲೆದಾಡಿದ ಮಹಿಳೆ

ಹವಾಮಾನ ವೈಪರೀತ್ಯ ಕಡಿವಾಣಕ್ಕೆ ಅಮೆರಿಕ- ಚೀನಾ ಜಂಟಿ ಹೆಜ್ಜೆ

ಹವಾಮಾನ ವೈಪರೀತ್ಯ ಕಡಿವಾಣಕ್ಕೆ ಅಮೆರಿಕ- ಚೀನಾ ಜಂಟಿ ಹೆಜ್ಜೆ

hghfdsa

ಕೋವಿಡ್ ರಣಕೇಕೆ : ರಾಜ್ಯದಲ್ಲಿಂದು 19067 ಮಂದಿಗೆ ಸೋಂಕು, 81 ಸಾವು!

ನಗಬವಬಬ

45 ವರ್ಷ ಮೇಲ್ಪಟ್ಟ ಪೊಲೀಸರಿಗೆ ಕೋವಿಡ್ ಲಸಿಕೆ ಕಡ್ಡಾಯ : ಪ್ರವೀಣ್ ಸೂದ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fire to the trees

ಸಂತೆ ಮೈದಾನದಲ್ಲಿನ ಮರಗಳಿಗೆ ಬೆಂಕಿ

road isuue at huliyara

ಹುಳಿಯಾರಿಗೆ ಬರುವ ಪ್ರತಿಯೊಬ್ಬರಿಗೂ ಧೂಳಿನ ಮಜ್ಜನ!

covid effect

ನೈಟ್‌ ಕರ್ಫ್ಯೂಗೂ ಕಮ್ಮಿ ಆಗದ ಕೋವಿಡ್

Colored cheer to the Government High School

ದೊಡ್ಡಬಾಣಗೆರೆ ಸರ್ಕಾರಿ ಪ್ರೌಢಶಾಲೆಗೆ ಬಣ್ಣದ ಮೆರಗು

covid: People who are not taken seriously

ಕೋವಿಡ್: ಗಂಭೀರವಾಗಿ ಪರಿಗಣಿಸದ ಜನ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

್ಗಹ್ಗ

ಕೋವಿಡ್‌ ಹೆಚ್ಚಳ ; ಮುಂಜಾಗ್ರತೆಗೆ ಸಚಿವ ಚವ್ಹಾಣ ಮನವಿ

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

ಜಹಹಹಗ

ಕರ್ತವ್ಯದಲ್ಲಿದ್ದ ಅಂಗರಕ್ಷಕ -ಚಾಲಕರಿಂದ ಮತದಾನ

ಮನಬವ್‍‍ರ

ಇನ್ನೇನಿದ್ದರೂ ಫಲಿತಾಂಶದತ್ತ ಎಲ್ಲರ ಚಿತ್ತ

ಹ್ಜಜ

ಜನಾಕರ್ಷಿಸಿದ “ಸಖೀ’ ಮತಗಟ್ಟೆ ಕೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.