Udayavni Special

ನೆಮ್ಮದಿ ಬದುಕಿಗೆ ನರೇಗಾ ಯೋಜನೆ ಸಹಕಾರಿ


Team Udayavani, Oct 21, 2020, 4:29 PM IST

tk-tdy-1

ತುಮಕೂರು: ಮಹಾತ್ಮ ಗಾಂಧಿ ‌ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2021-22ನೇ ಸಾಲಿನ ಕಾರ್ಮಿಕರ ಆಯವ್ಯಯತಯಾರಿಸುವ ಸಲುವಾಗಿ ಬುಕ್ಕಪಟ್ಟಣ ಗ್ರಾಪಂನಿಂದಹಮ್ಮಿಕೊಂಡಿದ್ದ ರೈತರ ಕ್ರಿಯಾಯೋಜನೆ ಅಭಿಯಾನದ ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಕೊರಟಗೆರೆ ತಾಪಂ ಸಹಾಯಕ ನಿರ್ದೇಶಕಕೆ.ಬಿ.ನಾಗರಾಜು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರು, ಗ್ರಾಮಸ §ರು ತಮ್ಮ ತಮ್ಮ ಸ್ವಂತ ಜಮೀನುಗಳಲ್ಲಿ ತಾವೇ ಕಾಮಗಾರಿ ಗಳನ್ನುಕೈಗೊಂಡು ಕೂಲಿ ಹಣ ಪಡೆಯುವ ಮೂಲಕ ನೆಮ್ಮದಿಯ ಬದುಕು ಸಾಗಿಸಲು ಮಹಾತ್ಮಗಾಂಧಿ ನರೇಗಾ ಯೋಜನೆಯು ಸಹಕಾರಿಯಾಗಿದೆ. ಈ ಯೋಜನೆಯಡಿ ದೊರೆಯುವಂತಹ ಸೌಲಭ್ಯಗಳನ್ನು ಗ್ರಾಮೀಣ ಭಾಗದ ಜನರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ರೈತರಿಗೆ ಉತ್ತಮ ಅವಕಾಶ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ರೈತರು ವೈಯಕ್ತಿಕ ಕಾಮಗಾರಿಗಳಾದ ಬಚ್ಚಲುಗುಂಡಿ ನಿರ್ಮಾಣ, ಪೌಷ್ಟಿಕ ಕೈತೋಟ ನಿರ್ಮಾಣ, ಅಣಬೆ ಬೇಸಾಯಕೃಷಿ ಷೆಡ್‌, ಕ್ಷೇತ್ರ ಬದು ನಿರ್ಮಾಣ, ಕೃಷಿಹೊಂಡ,ದನದ ಕೊಟ್ಟಿಗೆ, ಕುರಿ, ಮೇಕೆ ಷೆಡ್‌ ನಿರ್ಮಾಣಮಾಡಿಕೊಳ್ಳಬಹುದು. ಅಲ್ಲದೆ ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ದಾಳಿಂಬೆ, ಸೀಬೆ, ನುಗ್ಗೆ, ಕರಿಬೇವು, ಗುಲಾಬಿ ಮೊದಲಾದಕಾಮಗಾರಿಗಳನ್ನು ರೈತರು ಕೈಗೊಳ್ಳಲು ಅವಕಾಶವಿದೆ ಎಂದು ಸಲಹೆ ನೀಡಿದರು.

ಎಲ್ಲರಿಗೂ ಸಮಾನ ವೇತನ: ನರೇಗಾ ಯೋಜನೆಯಡಿ ಎಲ್ಲರಿಗೂ ಸಮಾನ ವೇತನ ನೀಡಲಾಗುವುದು. ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳುವ ರೈತರು ಅ. 2 ರಿಂದ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಇಟ್ಟಿರುವಂತಹ ಕಾಮಗಾರಿ ಬೇಡಿಕೆ ಪೆಟ್ಟಿಗೆಗಳಲ್ಲಿ ತಾವು ಮಾಡಲು ಇಚ್ಚಿಸಿರುವ ಕಾಮಗಾರಿಗಳ ವಿವರ, ಜಾಬ್‌ಕಾರ್ಡ್‌ ಸಂಖ್ಯೆ ಸೇರಿದಂತೆ ಇತರೆವಿಷಯಗಳನ್ನು ಭರ್ತಿ ಮಾಡಿ ಪೆಟ್ಟಿಗೆಯಲ್ಲಿ ಹಾಕಬಹುದು. ಆ ಅರ್ಜಿಗಳನ್ನು ಸ್ವೀಕರಿಸಿ 2021-22ನೇ ಸಾಲಿನ ಕ್ರಿಯಾಯೋಜನೆಗೆ ನಿಯಮಾನುಸಾರ ಬಂದಂತಹ ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದರು.

ಕಾಯಕಮಿತ್ರ ಮೊಬೈಲ್‌ ಆ್ಯಪ್‌: ಕೊರಟಗೆರೆ ತಾಲೂಕು ಐಇಸಿ ಸಂಯೋಜಕ ಟಿ.ಕೆ.ವಿನುತ್‌ ಮಾತನಾಡಿ, ರೈತರು ತಮ್ಮ ಜಮೀನುಗಳಲ್ಲಿಕೈಗೊಳ್ಳಬಹುದಾದ ಕಾಮಗಾರಿಗಳ ಬೇಡಿಕೆಯನ್ನು ಕಾಯಕಮಿತ್ರ ಮೊಬೈಲ್‌ ಆ್ಯಪ್‌ ಮೂಲಕವೂ ಸಲ್ಲಿಸಬಹುದು. ಅಲ್ಲದೆ ನರೇಗಾ ವೆಬ್‌ಸೈಟ್‌ https://www.mgnregakarnataka.com/ yojane ಮೂಲಕವೂ ಅರ್ಜಿ ಸಲ್ಲಿಸಬಹುದು. ಈ

ಸೌಲಭ್ಯವನ್ನು ಗ್ರಾಮೀಣ ಭಾಗದ ಜನರು ಸದುಪಯೋಗ ಪಡಿಸಿಕೊಂಡು ಮನೆಯಿಂದಲೇ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ತಾಂತ್ರಿಕ ಸಂಯೋಜಕ ಎಂ.ಡಿ.ರಂಗನಾಥ್‌, ಬುಕ್ಕಪಟ್ಟಣಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನೀಲ್‌ ಕುಮಾರ್‌ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

kalabuergi

ಕಲಬುರಗಿ: ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ

ಫ್ರೂಟ್‌ ಇರ್ಫಾನ್‌ ಕೊಲೆ ಆರೋಪಿ ಸೆರೆ : ದಯಾನಾಯಕ್‌ ನೇತೃತ್ವದ ತಂಡದಿಂದ ಕಾರ್ಯಾಚರಣೆ

ಫ್ರೂಟ್‌ ಇರ್ಫಾನ್‌ ಕೊಲೆ ಆರೋಪಿ ಸೆರೆ : ದಯಾನಾಯಕ್‌ ನೇತೃತ್ವದ ತಂಡದಿಂದ ಕಾರ್ಯಾಚರಣೆ

micromax

ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಮೈಕ್ರೋಮ್ಯಾಕ್ಸ್: ನೋಟ್-1 Sold Out, 1B ಇಂದು ಬಿಡುಗಡೆ

ನಿವಾರ್ ಚಂಡಮಾರುತದ ಅಬ್ಬರ: ಚೆನ್ನೈ,ಪಾಂಡಿಚೇರಿಯಲ್ಲಿ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ

ನಿವಾರ್ ಚಂಡಮಾರುತದ ಅಬ್ಬರ: ಚೆನ್ನೈ,ಪಾಂಡಿಚೇರಿಯಲ್ಲಿ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ

ನಿವಾರ್ ಅಬ್ಬರ: ಕರ್ನಾಟಕದಲ್ಲೂ ಭಾರಿ ಮಳೆ ಸಾಧ್ಯತೆ! ಹವಾಮಾನ ಇಲಾಖೆ ಎಚ್ಚರಿಕೆ

ನಿವಾರ್ ಅಬ್ಬರ: ಕರ್ನಾಟಕದಲ್ಲೂ ಭಾರಿ ಮಳೆ ಸಾಧ್ಯತೆ! ಹವಾಮಾನ ಇಲಾಖೆ ಎಚ್ಚರಿಕೆ

ಕಾರ್ಮಿಕ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ; ಪಶ್ಚಿಮಬಂಗಾಳದಲ್ಲಿ ಬಂದ್ ಗೆ ವಿರೋಧ, ಘರ್ಷಣೆ

ಕಾರ್ಮಿಕ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ; ಪಶ್ಚಿಮಬಂಗಾಳದಲ್ಲಿ ಬಂದ್ ಗೆ ವಿರೋಧ, ಘರ್ಷಣೆ

ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ಸರ್ವಶ್ರೇಷ್ಠ ಸಂವಿದಾನ ನಮ್ಮ ಮುಂದಿದೆ: ಡಿಸಿಎಂ

ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ಸರ್ವಶ್ರೇಷ್ಠ ಸಂವಿಧಾನ ನಮ್ಮ ಮುಂದಿದೆ: ಡಿಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Roadside-business

ರಸ್ತೆಬದಿ ವ್ಯಾಪಾರ: ಸವಾರರಿಗೆ ಕಿರಿಕಿರಿ

ಆನ್‌ಲೈನಿಗಿಂತ ಆಫ್ ಲೈನ್  ಕ್ಲಾಸೇ ಲೇಸು

ಆನ್‌ಲೈನಿಗಿಂತ ಆಫ್ ಲೈನ್ ಕ್ಲಾಸೇ ಲೇಸು

ಮಾದರಿ ಗ್ರಾಪಂ ಮಾಡಲು ಶ್ರಮ

ಮಾದರಿ ಗ್ರಾಪಂ ಮಾಡಲು ಶ್ರಮ

ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲ, ಬಿಎಸ್ ವೈ ಸಿಎಂ ಆಗಿ ಮುಂದುವರಿಯುತ್ತಾರೆ: ಅಶ್ವಥನಾರಾಯಣ

ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲ, ಬಿಎಸ್ ವೈ ಸಿಎಂ ಆಗಿ ಮುಂದುವರಿಯುತ್ತಾರೆ: ಅಶ್ವಥನಾರಾಯಣ

tk-tdy-1

ಮಕ್ಕಳ ಅನ್ನಕ್ಕೂ ಮುಖ್ಯ ಶಿಕ್ಷಕನ ಕೊಕ್ಕೆ

MUST WATCH

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

ಹೊಸ ಸೇರ್ಪಡೆ

ಹಾಲಿನ ಖರೀದಿ ಬೆಲೆ ಹೆಚ್ಚಿಸಲು ಒತ್ತಾಯ

ಹಾಲಿನ ಖರೀದಿ ಬೆಲೆ ಹೆಚ್ಚಿಸಲು ಒತ್ತಾಯ

kalabuergi

ಕಲಬುರಗಿ: ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ

ಕ್ಷಯರೋಗ ಪತ್ತೆಗೆ ಸಿದ್ಧತೆ ಮಾಡಿಕೊಳ್ಳಿ

ಕ್ಷಯರೋಗ ಪತ್ತೆಗೆ ಸಿದ್ಧತೆ ಮಾಡಿಕೊಳ್ಳಿ

80 ಲಕ್ಷ ಜನಧನ್‌ ಖಾತೆದಾರರಿಗೆ ಕೇಂದ್ರದ ಗಿಫ್ಟ್

80 ಲಕ್ಷ ಜನಧನ್‌ ಖಾತೆದಾರರಿಗೆ ಕೇಂದ್ರದ ಗಿಫ್ಟ್

bng-tdy-2

ಡಿ.5ರಂದು ರಾಜ್ಯ ಬಂದ್‌ಗೆ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.