ಆನ್‌ಲೈನಿಗಿಂತ ಆಫ್ ಲೈನ್ ಕ್ಲಾಸೇ ಲೇಸು
ಅಂತಿಮ ಪದವಿ 450 ವಿದ್ಯಾರ್ಥಿಗಳಲ್ಲಿ ಮೂರು ವಿದ್ಯಾರ್ಥಿಗಳಿಗೆ ಮಾತ್ರಕಾಲೇಜಿನಲ್ಲಿ ಉಪನ್ಯಾಸ
Team Udayavani, Nov 24, 2020, 5:06 PM IST
ತುಮಕೂರು: ಕೋವಿಡ್ ಲಾಕ್‌ಡೌನ್, ಅನ್ ಲಾಕ್ ಬಳಿಕ ಕಾಲೇಜುಗಳು ಪುನರಾರಂಭವಾಗಿಒಂದು ವಾರ ಕಳೆದಿದೆ. ಕಾಲೇಜುಗಳಿಗೆ ಬರುವವಿದ್ಯಾರ್ಥಿಗಳ ಸಂಖ್ಯೆ ತೀರಾ ವಿರಳವಾಗಿದೆ.ಒಂದು ಕಾಲೇಜಿನ ಅಂತಿಮ ವರ್ಷದ 450 ವಿದ್ಯಾರ್ಥಿಗಳಿಗೆ ಮೂವರು ವಿದ್ಯಾರ್ಥಿ ಗಳು ಮಾತ್ರ ಆಫ್ಲೈನ್‌ನಲ್ಲಿ ಪಾಠ ಕೇಳುತ್ತಿದ್ದಾರೆ.
ತುಮಕೂರು ವಿವಿ ವ್ಯಾಪ್ತಿಯ ಸರ್ಕಾರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಸಿದ್ಧ ಗಂಗಾ ಪದವಿಕಾಲೇಜು, ಸಿದ್ಧಗಂಗಾ ಡಿಪ್ಲೋಮಾಕಾಲೇಜು ಸೇರಿದಂತೆ ನಗರದ ವಿವಿಧಸ್ನಾತಕ ಪದವಿ, ಸ್ನಾತಕೋತ್ತರಪದವಿ, ಡಿಪ್ಲೋಮಾ ಕಾಲೇಜು ಗಳಲ್ಲಿ ತರಗತಿಗಳು ಸರ್ಕಾರದ ಆದೇಶದ ಹಿನ್ನೆಲೆ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ತರಗತಿಗಳನ್ನು ಆರಂಭಿಸಿವೆ.
ಕಾಲೇಜಿಗೆ ಬರುವ ಮನಸ್ಸಿಲ್ಲ: ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿ ಪ್ರವೇಶಕ್ಕೆ ಮುನ್ನಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಕಡ್ಡಾಯಗೊಳಿಸಿ, ತರಗತಿಗಳಲ್ಲಿ ಸಾಮಾಜಿಕ ಅಂತರಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ಆದರೆ ಪೋಷಕರು ಕಾಲೇಜು ಪ್ರಾರಂಭವಾಗಿ ಒಂದು ವಾರ ಕಳೆದರೂ ಮಕ್ಕಳನ್ನು ಕಾಲೇಜು ಗಳಿಗೆ ಕಳುಹಿಸಲು ಮನಸ್ಸು ಮಾಡುತ್ತಿಲ್ಲಪೋಷಕರ ಅನುಮತಿ ಪತ್ರ ನೀಡುತ್ತಿಲ್ಲ.ಬೆರಳೆಣಿಕೆಯಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರುಮಾತ್ರಕಾಲೇಜುಗಳತ್ತಮುಖಮಾಡಿದ್ದು,ಬಹುತೇಕ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರುವ ಮನಸ್ಸು ಮಾಡಿಯೇ ಇಲ್ಲ.ತುಮಕೂರು ವಿ.ವಿ. ಕುಲಸಚಿವ ಪ್ರೊ. ಗಂಗಾನಾಯಕ್ ಪ್ರತಿಕ್ರಿಯಿಸಿ, ಕೋವಿಡ್ ಈ ವೇಳೆಯಲ್ಲಿ ಸರ್ಕಾರ ಮತ್ತು ಯುಜಿಸಿ ಮಾರ್ಗಸೂಚಿ ಅನುಸರಿಸಿ ಕಾಲೇಜುಗಳನ್ನುಪ್ರಾರಂಭ ಮಾಡಿ ಒಂದು ವಾರವಾಗಿದೆ. ಈಗ ಶೇ.9 ರಿಂದ 10 ರಷ್ಟು ವಿದ್ಯಾರ್ಥಿಗಳುಕಾಲೇಜಿಗೆ ಹಾಜರಾಗುತ್ತಿದ್ದಾರೆ ಎಂದರು.
ಮಾರ್ಗಸೂಚಿ ಪ್ರಕಾರ ಎಲ್ಲ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳಲಾಗಿದೆ.ಕಾಲೇಜು ಆವರಣ ಹಾಗೂ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.ಅಗತ್ಯಮೂಲಭೂತಸೌಲಭ್ಯಕಲ್ಪಿಸಲಾಗಿದೆ,ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಮಾಡಿಸಲು ಸೂಚಿಸಲಾಗಿದೆ. ಕೋವಿಡ್ ಪರೀಕ್ಷೆ ಮಾಡಿಸಿಮಾಸ್ಕ್ ಧರಿಸಿ ಕಾಲೇಜಿಗೆ ಬರಬಹುದು ಎಂದರು. ಕಾಲೇಜಿಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳಿಗೆಆನ್‌ಲೈನ್‌ಪಾಠಮಾಡಲು ಸಹ ಕ್ರಮ ಕೈಗೊಳ್ಳಲಾ ಗಿದೆ. ಆನ್‌ಲೈನ್‌ನಲ್ಲಿ ಶೇ. 80 ವಿದ್ಯಾರ್ಥಿಗಳು ಪಾಠಕೇಳುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನಿಸಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳುಮತ್ತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ.ಎಲ್ಲ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾದರೆಹಂತ ಹಂತವಾಗಿ ಹಾಸ್ಟೆಲ್ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
ಆಫ್ಲೈನ್ ತರಗತಿಗೆ ವಿದ್ಯಾರ್ಥಿಗಳ ಒತ್ತಾಯ : ಪದವಿ ಕಾಲೇಜುಗಳಲ್ಲಿ ಇದುವರೆಗೂ ಶೇ.9 ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡು ಬರುತ್ತಿದ್ದು, ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಹಾಜರಾತಿಹೆಚ್ಚುತ್ತಿದೆ. ವಿದ್ಯಾರ್ಥಿಗಳಕೋವಿಡ್ ಪರೀಕ್ಷೆ ವರದಿಯನ್ನು ಆರೋಗ್ಯಇಲಾಖೆ ಅಧಿಕಾರಿಗಳು48 ಗಂಟೆ ಬದಲು 24 ಗಂಟೆಯೊಳಗೆ ನೀಡಲುಕ್ರಮಕೈಗೊಳ್ಳಬೇಕು.ಈನಿಟ್ಟಿನಲ್ಲಿ ಆರೋಗ್ಯ ಇಲಾಖೆ ತ್ವರಿತವಾಗಿ ಕೆಲಸ ಮಾಡಬೇಕು ಆಫ್ಲೈನ್ ತರಗತಿ ಮಾಡಲು ಒತ್ತಾಯವಿದೆ ಎಂದು ಉನ್ನತ ಶಿಕ್ಷಣಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಹೇಳಿದರು.
ಆಪ್‌ಲೈನ್- ಆನ್‌ಲೈನ್ ಎರಡರಲ್ಲೂ ಶಿಕ್ಷಣ : ತುಮಕೂರು ವಿವಿಯಲ್ಲಿ40 ಸಾವಿರ ಸ್ನಾತಕ5000 ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ. ಅಂತಿಮ ವರ್ಷದಲ್ಲಿ10 ಸಾವಿರ ಸ್ನಾತಕ 1500ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್‌ಲೈನ್ ಮತ್ತು ಆಫ್ಲೈನ್ ಎರಡೂ ನಡೆಯುತ್ತಿದೆ. ಹಂತಹಂತವಾಗಿ ವಿದ್ಯಾರ್ಥಿಗಳುಕಾಲೇಜಿಗೆ ಬರಲಿದ್ದಾರೆ ಎಂದು ತುಮಕೂರು ವಿವಿ ಕುಲಸಚಿವಕೆ.ಎನ್.ಗಂಗಾ ನಾಯಕ್ ತಿಳಿಸಿದರು.
ಪದವಿ ತರಗತಿ ಪ್ರಾರಂಭಿಸಿರುವುದು ಉತ್ತಮ ಬೆಳವಣಿಗೆ.ಮುಂಜಾಗ್ರತಾ ಕ್ರಮಗಳೊಂದಿಗೆ ಆಫ್ಲೈನ್ ತರಗತಿಗಳು ನಡೆಸುತ್ತಿರುವುದು ಅನುಕೂಲ. ನಾವು ಕೋವಿಡ್ ಪರೀಕ್ಷೆ ಮಾಡಿಸಿ ಮನೆಯವರ ಅನುಮತಿ ಪತ್ರ ಪಡೆದು ಬಂದಿದ್ದೇವೆ. –ಮೋನಿಕಾ, ವಿವಿ ವಿದ್ಯಾರ್ಥಿನಿ
ತುಮಕೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾಕಾಲೇಜಿನಲ್ಲಿಒಟ್ಟು 1208 ವಿದ್ಯಾರ್ಥಿಗಳಿದ್ದಾರೆ. ಅಂತಿಮ ವರ್ಷದ ಮೂರು ವಿದ್ಯಾಥಿನಿಯರುಕಾಲೇಜಿಗೆ ಬಂದಿದ್ದರು. ಅವರಿಗೆ ಪಾಠ ಆರಂಭ ಮಾಡಿದ್ದೇವೆ. –ಡಾ.ಟಿ.ಆರ್.ಲೀಲಾವತಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ
-ಚಿ.ನಿ.ಪುರುಷೋತ್ತಮ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ
ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ಹೊಸ ಸೇರ್ಪಡೆ
ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸಿ, ಯಶಸ್ಸು ಸಾಧಿಸಬೇಕು: ಡಿಸಿಎಂ ಅಶ್ವಥ್ನಾರಾಯಣ
ಹುಣಸೋಡು ಸ್ಫೋಟ ಪ್ರಕರಣ :ಕ್ರಷರ್ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು
ಮೇಲುಕೋಟೆ ವಜ್ರಾಂಗಿ ಆಭರಣ ಅವ್ಯವಹಾರ ಪ್ರಕರಣ: ಅರ್ಚಕ ನರಸರಾಜಭಟ್ ನೇಮಕಕ್ಕೆ ಹೈಕೋರ್ಟ್ ತಡೆ
145 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರಾಗಿಣಿ ಬಿಡುಗಡೆ
JDS ಜಿಲ್ಲಾಧ್ಯಕ್ಷರಿಂದ ಗ್ರಾ.ಪಂ. ನೂತನ ಸದಸ್ಯರಿಗೆ ಹಣ ಹಂಚಿಕೆ: ಫೋಟೋ ವೈರಲ್