ಮಾಸಾಶನಕ್ಕಾಗಿ ವರ್ಷದಿಂದ ಅಲೆಯುತ್ತಿರುವ ವೃದ್ಧ

Team Udayavani, Sep 11, 2019, 12:43 PM IST

ಕೂಡಲೇ ಮಾಸಾಶನ ಆರಂಭಕ್ಕೆ ಚಿಕ್ಕತಿಮ್ಮಯ್ಯ ಮನವಿ ಮಾಡಲು ನಾಡಕಚೇರಿಗೆ ಬಂದಿರುವುದು.

ಹುಳಿಯಾರು: ಸ್ಥಗಿತಗೊಂಡಿರುವ ಮಾಸಾಶನವನ್ನು ಪುನರ್‌ ಆರಂಭಿಸು ವಂತೆ 1 ವರ್ಷದಿಂದ ಅಲೆಯುತ್ತಿದ್ದರೂ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಹುಳಿಯಾರು ಹೋಬಳಿಯ ಕಲ್ಲೇನ ಹಳ್ಳಿಯ 83ರ ಇಳಿ ವಯಸ್ಸಿನ ಚಿಕ್ಕ ತಿಮ್ಮಯ್ಯನ ಅಳಲಾಗಿದೆ.

ಕಾದುಕುಳಿತ ತಿಮ್ಮಯ್ಯ: ಚಿಕ್ಕತಿಮ್ಮಯ್ಯ ಅವರಿಗೆ 2-7-2007 ರಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ಮಂಜೂರಾಗಿತ್ತು. ಅಲ್ಲಿಂದ ಸೆಪ್ಟೆಂಬರ್‌ 2018 ರವರೆಗೆ ಪ್ರತಿ ತಿಂಗಳು ತಪ್ಪದೇ ಮಾಸಾಶನ ಬರುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಮಾಸಾಶನ ನಿಂತು ಹೋಗಿದೆ. ಈ ತಿಂಗಳ ಬರಬಹುದು, ಮುಂದಿನ ತಿಂಗಳು ಬರಬಹುದು ಎಂದು ವೃದ್ಧ ತಿಮ್ಮಯ್ಯ ಕಾದಿದ್ದಾರೆ.

ಬರೋಬ್ಬರಿ 6 ತಿಂಗಳಾದರೂ ಮಾಸಾ ಶನ ಬಾರದಿದ್ದಾಗ ಹುಳಿಯಾರು ನಾಡಕಚೇರಿಗೆ ಬಂದು ಮಾಸಾಶನ ಸ್ಥಗಿತಗೊಂಡಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸಂಬಂಧಪಟ್ಟವ ರಿಂದ ಬರುತ್ತೆ ಹೆದರಬೇಡಿ ಎನ್ನುವ ಭರವಸೆ ದೊರೆಯಿತೇ ವಿನಹಃ ಹಣ ಮಾತ್ರ ಬಂದಿಲ್ಲ. ಪರಿಣಾಮ ಪ್ರತಿ ತಿಂಗಳು ತಮ್ಮೂರಿಗೆ ಬರುವ ಅಂಚೆ ಸಿಬ್ಬಂದಿಯನ್ನು ಕೇಳಿ ಸೋತು ಹೋಗಿದ್ದಾರೆ.

ಪ್ರಯತ್ನ ಪಟ್ಟಿಲ್ಲ: ಅಂಚೆ ಸಿಬ್ಬಂದಿ ತಮಗೆ ಮಾಸಾಶನ ಬಂದಿಲ್ಲ ಎಂದಾ ಗಲೆಲ್ಲಾ ನಡೆದಾಡಲು ಶಕ್ತಿಯಿಲ್ಲದಿದ್ದರೂ ಮತ್ತೂಬ್ಬರ ಸಹಾಯ ಪಡೆದು ಬಸ್‌ ಏರಿ ನಾಡಕಚೇರಿಗೆ ಬಂದು ವಿಚಾರಿ ಸುತ್ತಿದ್ದರು. ಪ್ರತಿ ಬಾರಿ ಬಂದಾಗಲೆಲ್ಲಾ ಸಿಬ್ಬಂದಿ ಒಂದೊಂದು ಸಬೂಬು ಹೇಳಿ ಸಾಗಹಾಕುವುದು ಬಿಟ್ಟರೆ ಮಾಸಾ ಶನ ಪುನರ್‌ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಪಟ್ಟಿಲ್ಲ. ವಯೋಸಹಜ ಚಿಕ್ಕತಿಮ್ಮಯ್ಯಗೆ ಕಿವಿ ಅಸ್ಪಷ್ಟವಾಗಿ ಕೇಳಿಸುತ್ತದೆ. ಕಣ್ಣುಗಳು ಅಲ್ಪಸ್ವಲ್ಪ ಮಾತ್ರ ಕಾಣುತ್ತವೆ. ಓಡಾಡಲು ಮೊದಲಿನಷ್ಟು ಶಕ್ತಿ ಉಳಿದಿಲ್ಲ. ಜೊತೆಗೆ ವಯೋಸಹಜ ಕಾಯಿಲೆಗಳು ಕಾಡು ತ್ತಿವೆ. ಉದ್ಯೋಗ ನಿಮಿತ್ತ ಮಕ್ಕಳೆಲ್ಲರೂ ಮಂಗಳೂರಿಗೆ ಗುಳೆ ಹೋಗಿರುವು ದರಿಂದ ಊಟ, ತಿಂಡಿ, ಮಾತ್ರೆ ಹೀಗೆ ಪ್ರತಿಯೊಂದಕ್ಕೂ ಆಸರೆ ಯಾಗಿದ್ದ ಮಾಸಾಶನ ಈಗ ಸ್ಥಗಿತಗೊಂಡಿರುವು ದರಿಂದ ಜೀವನ ನಿರ್ವಹಣೆ ಕಷ್ಟ ವಾಗಿದೆ. ಇನ್ನಾ ದರೂ ಅಧಿಕಾರಿಗಳು ವೃದ್ಧನ ಕಷ್ಟಕ್ಕೆ ಸ್ಪಂದಿಸುವರೇ ಎಂದು ಕಾದು ನೋಡಬೇಕಿದೆ.

 

● ಎಚ್.ಬಿ.ಕಿರಣ್‌ ಕುಮಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಧುಗಿರಿ: ಹೈನುಗಾರರು ಗುಣಮಟ್ಟದ ಹಾಲು ಡೇರಿಗೆ ನೀಡಬೇಕು ಎಂದು ತುಮುಲ್‌ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ತಿಳಿಸಿದರು. ತಾಲೂಕಿನ...

  • ತಿಪಟೂರು: ತುಮಕೂರು ಜಿಲ್ಲೆಗೆ ನಿಗದಿಯಾಗಿರುವ 25 ಟಿಎಂಸಿ ಹೇಮಾವತಿ ನೀರು ಜಿಲ್ಲೆಯ ಬಹುತೇಕ ಕೆರೆಗಳಿಗೆ ಹರಿಯುವ ಮೂಲಕ ಈ ಭಾಗದ ಜನರ ಕುಡಿಯುವ ನೀರಿನ ಬವಣೆ ಕೆಲವೇ...

  • ತಿಪಟೂರು: ಮಹಾತ್ಮಾ ಗಾಂಧೀಜಿಯವರ ಗ್ರಾಮಾಭಿವೃದ್ಧಿ ಕಲ್ಪನೆ ಸಹಕಾರ ತತ್ವದಲ್ಲಿ ಅಡಗಿದೆ. ಸಹಕಾರ ಸಂಘಗಗಳು ಸರ್ಕಾರಗಳು ಮಾಡಲು ಸಾಧ್ಯವಾಗದ ಎಷ್ಟೋ ಜನೋಪಯೋಗಿ...

  • ಹುಳಿಯಾರು: ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿಸಿದ್ದರೆ, ಅದಕ್ಕಾಗಿ ಸಿದ್ಧಪಡಿಸಿರುವ ಫ್ರೂಟ್‌...

  • ಶಿರಾ: ಜನರಿಗೆ ಅನ್ನ ನೀಡುವ ಅನ್ನದಾತನಿಗೆ ಬೇಕಾಗಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡುವಂತ ಕಿಸಾನ್‌ ಸಮ್ಮಾನ್‌ ಯೋಜನೆ 2 ಸಾವಿರ ರೂ., ಕಳಪೆ ಬೀಜ,...

ಹೊಸ ಸೇರ್ಪಡೆ