ಈರುಳ್ಳಿ ಬೆಲೆ ದಿಢೀರ್ ಕುಸಿತ
Team Udayavani, Apr 8, 2021, 4:11 PM IST
ಹುಳಿಯಾರು: ಹುಳಿಯಾರಿನ ಖಾಸಗಿ ಈರುಳ್ಳಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ವಾರದಿಂದ ದಿಢೀರ್ ಕುಸಿತ ಕಂಡಿದ್ದು, ಕ್ವಿಂಟಲ್ ಈರುಳ್ಳಿಗೆ 200 ರೂ.ಗಳಿಂದ 1,500 ರೂ.ಗಳಿಗೆ ಮಾರಾಟವಾಗುತ್ತಿದೆ.
ಹೌದು, ಹುಳಿಯಾರು ಪಟ್ಟಣದ ಈರುಳ್ಳಿ ವ್ಯಾಪಾರಿ ಹಾರೂನ್ ಷರೀಫ್ ಅವರು ಕಳೆದ ಎರಡು ತಿಂಗಳಿಂದ ಖಾಸಗಿಯಾಗಿ ನಡೆಸುತ್ತಿರುವ ಈರುಳ್ಳಿ ಹರಾಜಿನಲ್ಲಿ ಬುಧವಾರ ಅತೀ ಕಡಿಮೆ ಬೆಲೆಗೆ ಈರುಳ್ಳಿ ಹರಾಜಾಗಿದೆ. ಜನವರಿ ಮತ್ತು ಫೆಬ್ರವರಿ ಮಾಹೆಯಲ್ಲಿ ಪ್ರತಿ ಕ್ವಿಂಟಲ್ ಈರುಳ್ಳಿ ದರ 5 ಸಾವಿರ ರೂ. ಇತ್ತು. ಮಾರ್ಚ್ ಮಾಹೆಯಲ್ಲಿ 3 ಸಾವಿರಕ್ಕೆ ಇಳಿದಿತ್ತು. ಈಗ ಅರ್ಧದಷ್ಟು ದರ ಕುಸಿದಿದ್ದು, ಪ್ರತಿ ಕ್ವಿಂಟಲ್‌ಗೆ ಸಣ್ಣ ಈರುಳ್ಳಿ 200 ರೂ. ಹಾಗೂ ದಪ್ಪ ಈರುಳ್ಳಿ 1500 ರೂ. ಹರಾಜಾಯಿತು.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಎಕರೆಗೆ 400 ಚೀಲ, ರಾಜ್ಯದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಸ್ಥಳೀಯ ರೈತರು ಎಕರೆಗೆ 250 ಚೀಲ ಈರುಳ್ಳಿ ಬೆಳೆದಿದ್ದಾರೆ. ಉತ್ಪಾದನೆ ಹೆಚ್ಚಾಗಿರುವ ಜೊತೆಗೆ ರಫ್ತು ಸ್ಥಗಿತವಾಗಿರುವ ಕಾರಣ ಬೆಲೆ ಕುಸಿದಿದೆ ಎಂದು ಈರುಳ್ಳಿ ವ್ಯಾಪಾರಿ ಹಾರೂನ್ ತಿಳಿಸಿದ್ದಾರೆ.
ಈರುಳ್ಳಿ ದರ ಏಕಾಏಕಿ ಕುಸಿತ ಆತಂಕ ಮೂಡಿಸಿದೆಯಾದರೂ, ಬೆಂಗಳೂರಿಗೆ ಹೋಗಿ ಮಾರಿದ್ದರೆ ಈ ಬೆಲೆ ನಷ್ಟವಾಗುತ್ತಿತ್ತು, ಆದರೆ, ಸ್ಥಳಿಯವಾಗಿ ಮಾರುಕಟ್ಟೆ ಇರುವುದರಿಂದ ಸಾಗಾಣಿಕೆ ವೆಚ್ಚ ಕಡಿಮೆಯಿದ್ದು, ಈಗಿನ ಬೆಲೆ ಉತ್ತಮ ಎನ್ನುವುದಕ್ಕಿಂದ ಪರ್ವಾಗಿಲ್ಲ ಎನ್ನುವಂತಿದೆ. ಈ ದರಕ್ಕಿಂತ ಕಡಿಮೆಗೆ ಇಳಿದರೆ ರೈತರಿಗೆ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ರೈತ ಚಿತ್ತಯ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುಣಿಗಲ್ : ಸ್ನೇಹಿತನ ಅಂತ್ಯಕ್ರಿಯೆಗೆ ಬಂದವ ರಸ್ತೆ ಅಪಘಾತಕ್ಕೆ ಬಲಿ
ಗಾಯಾಳು ಸಾವಿಗೆ ವೈದ್ಯರ ನಿರ್ಲಕ್ಷ್ಯದ ಆರೋಪ: ಸರ್ಕಾರಿ ಆಸ್ಪತ್ರೆ ಎದುರು ನಾಗರೀಕರ ಪ್ರತಿಭಟನೆ
ಕುಣಿಗಲ್ : ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಸಾವು
ಕೊರಟಗೆರೆ: ಬಸ್ ಸ್ಟ್ಯಾಂಡ್ ಆಯಿತು ಮಾರುಕಟ್ಟೆ; ಸಾರ್ವಜನಿಕರಿಗೆ ದಿನನಿತ್ಯ ಕಿರಿ ಕಿರಿ
ಹೆಚ್.ಡಿಡಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಕೆ.ಎನ್ ರಾಜಣ್ಣ ವಿರುದ್ಧ ಭುಗಿಲೆದ್ದ ಆಕ್ರೋಶ