ರಾಷ್ಟ್ರೀಯ ಉತ್ಸವದ ಪೂರ್ವಭಾವಿ ಸಭೆ

Team Udayavani, Sep 27, 2019, 6:11 PM IST

ಹುಳಿಯಾರು: ಕೋಡಿಪಾಳ್ಯದ ಧ್ಯಾನ ನಗರಿಯಲ್ಲಿರುವ ಕಂಕಾಳಿ ಮತ್ತು ತುಳಜಾ ಭವಾನಿ ದೇವಸ್ಥಾನದಲ್ಲಿ ತೃತೀಯ ವರ್ಷದ ನವರಾತ್ರಿ ಸಾಂಸ್ಕೃತಿಕ ರಾಷ್ಟ್ರೀಯ ಉತ್ಸವ ಆಯೋಜಿಸ ಲಾಗುತ್ತಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಮಾತಾ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಗಂಗಾಧರ್‌ ಮಾತನಾಡಿ, 9 ದಿನ ಉತ್ಸವದಲ್ಲಿ ಆರು ದಿನಗಳ ಕಾಲ ರಾಷ್ಟ್ರೀಯ ಹೆಸರಾಂತ ಕಲಾವಿದರ ತಂಡದಿಂದ ಉತ್ಸವ ನಡೆಯಲಿದೆ.

ಸ್ಥಳೀಯ ಕಲಾವಿದರಿಗೆ ಪ್ರಾತಿನಿಧ್ಯ ನೀಡ ಬೇಕೆಂಬ ಹಿನ್ನೆಲೆಯಲ್ಲಿ ಸಂಜೆ ಆರು ಗಂಟೆಯಿಂದ ಏಳು ಗಂಟೆಯವರೆಗೆ ಸ್ಥಳೀಯರಿಂದ ಹಾಡುಗಾರಿಕೆ, ಕೋಲಾಟ, ಮಹಿಳಾ ಭಜನಾ ತಂಡಗಳಿಂದ ಭಜನೆ, ತತ್ವ ಪದ, ನೃತ್ಯಕ್ಕೆ ಅವಕಾಶ ನೀಡ ಲಾಗಿದೆ ಎಂದು ಹೇಳಿದರು.

ರಂಗಚೇತನ ಸಾಂಸ್ಕೃತಿಕ ಕೇಂದ್ರದ ತೊಟ್ಟವಾಡಿ ನಂಜುಂಡಸ್ವಾಮಿ ಮಾತನಾಡಿ, ದಸರಾ ನಾಡಹಬ್ಬ ಹುಳಿಯಾರಿನ ಹಬ್ಬವಾಗಬೇಕು. ಹುಳಿಯಾರು ಸಾಂಸ್ಕೃತಿಕವಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳು ವಂತಾಗಬೇಕು ಎಂದರು. ಆದಿಶಕ್ತಿ ಸ್ವರೂಪಿಣಿ ಕಂಕಾಳಿ ಹಾಗೂ ತುಳುಜಾ ಭವಾನಿಗೆ ನವರಾತ್ರಿ ಸಮಯದಲ್ಲಿ 9 ದಿನ ನಿತ್ಯ ವಿಶೇಷ ಅಲಂಕಾರ ಮಾಡಲಾಗುವುದು ಎಂದರು.

ಬ್ಯಾಂಕ್‌ ಮರುಳಪ್ಪ, ಬಡಗಿ ರಾಮಣ್ಣ, ಹು.ಕೃ. ವಿಶ್ವನಾಥ್‌, ಕೆಂಕೆರೆ ಗಾಪಂ ಅಧ್ಯಕ್ಷೆ ಆಶಾ ಉಮೇಶ್‌ ,ರೈತ ಸಂಘದ ಕೆಂಕೆರೆ ಸತೀಶ್‌, ಚಂದ್ರಶೇಖರ್‌, ಮೋತಿನಾಯ್ಕ, ನಂದಿಹಳ್ಳಿ ಶಿವಣ್ಣ, ಎಸ್‌ಒ ಉಮೇಶ್‌ ನಾಯ್ಕ, ನಯಾಜ್‌, ಪ್ರಸನ್ನ, ಎಬಿ ವಿಪಿ ನರೇಂದ್ರಬಾಬು, ಕಲಾವಿದ ಗೌಡಿ, ಮೋಹನ್‌ ರೈ, ಚನ್ನಕೇಶವ, ರಾಜಣ್ಣ, ಬಿ.ವಿ. ಶ್ರೀನಿವಾಸ್‌, ರವೀಂದ್ರ, ಕವಿತಾ ಮತ್ತಿತರರು ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ