Udayavni Special

ಕೇಂದ್ರ-ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗೆ ಖಂಡನೆ


Team Udayavani, Nov 7, 2020, 4:29 PM IST

tk-tdy-1

ತುಮಕೂರು: ಶಿರಾ ಉಪಚುನಾವಣೆ ಮತದಾರನ ಕೈ ಇಂಕು ಆರುವ ಮುನ್ನವೇ ಕರ್ನಾಟಕ ಭೂ ಸುಧಾರಣೆಗಳ 2ನೇ ತಿದ್ದುಪಡಿ ಆದೇಶ ಜಾರಿ ಮತ್ತು ವಿದ್ಯುತ್‌ ದರ ಹೆಚ್ಚಳ ಮಾಡುವ ಮೂಲಕ ರೈತ ಮತ್ತು ಗ್ರಾಹಕರಿಗೆ ತಾನು ನೀಡಿದ ಆಶ್ವಾಸನೆಯನ್ನು ಗಾಳಿಗೆ ತೂರಿ ರಾಜ್ಯದ ಮುಖ್ಯಮಂತ್ರಿಗಳು ಇಡೀನಾಡಿಗೆ ದ್ರೋಹ ಬಗೆದಿದ್ದಾರೆ ಎಂದು ರೈತರು ಕಿಡಿಕಾರಿದರು.

ಅಖೀಲಭಾರತರೈತಸಂಘರ್ಷಸಮನ್ವಯ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದಗುಬ್ಬಿ ಗೇಟ್‌ ರಿಂಗ್‌ ರಸ್ತೆ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಂಧನ, ಬಿಡುಗಡೆ:ಪ್ರತಿಭಟನೆ ವೇಳೆ ರಾಜ್ಯಸರ್ಕಾರದ2ನೇ ಸುಗ್ರೀವಾಜ್ಞೆ ಆದೇಶದ ಪ್ರತಿ  ಸುಡುವ ಮೂಲಕ ಹೆದ್ದಾರಿ ತಡೆ ನಡೆಸಲು ಮುಂದಾದ ರೈತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಎಐಕೆಎಸ್‌ಸಿಸಿ ಸಂಚಾಲಕ ಸಿ.ಯತಿರಾಜ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳು ರೈತರ ಹೆಸರು ಹೇಳಿ ಕಾರ್ಪೋರೇಟ್‌ ಪರ ಆಡಳಿತ ನಡೆಸುತ್ತಿರುವುದನ್ನು ಖಂಡಿಸಿದರು. ಕೋವಿಡ್‌ ಸೋಂಕಿನ ಸಂದರ್ಭದಲ್ಲಿ ಜನರ ಆತಂಕ ಲೆಕ್ಕಿಸದೆ ರಕ್ಷಿಸದೆ ಗುತ್ತಿಗೆ ಕೃಷಿ ಕಾಯ್ದೆ, ಕೃಷಿ ದಾಸ್ತಾನು ಸಂಗ್ರಹಿಸುವ ಸ್ವಾತಂತ್ರ್ಯ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಎಪಿಎಂಸಿ ಬೈಪಾಸ್‌ ಕಾಯ್ದೆ ಜಾರಿ ಮಾಡುತ್ತಿರುವುದರಿಂದ ತಿಳಿಯುತ್ತದೆ. ಹಾಲಿ ಕಾಯ್ದಗಳಿಂದ ಅಲ್ಪ-ಸ್ವಲ್ಪ ರೈತರು ಮತ್ತು ಗ್ರಾಹಕರಿಗೆ ಇದ್ದ ರಕ್ಷಣೆಯನ್ನು ಗಾಳಿಗೆ ತೂರಿ ಕೃಷಿಅಸ್ತಿತ್ವಕೆ ಧಕ್ಕೆ ತಂದು ರೈತರಿಗೆ ಮರಣ ಶಾಸನ ಬರೆಯುತ್ತಿದ್ದಾರೆ. ಸರ್ಕಾರದ ವಿರುದ್ಧ ರೈತರ ಹೋರಾಟ ನಿರ್ಣಾಯಕವಾಗಬೇಕೆಂದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಕೇಂದ್ರ- ರಾಜ್ಯ ಸರ್ಕಾರಗಳು ಲೋಕಸಭೆ ಮತ್ತು ವಿಧಾನ ಸಭೆಯಲ್ಲಿಚರ್ಚಿಸದೇ ಸಾರ್ವಜನಿಕವಾಗಿಉತ್ತರಿಸದೇಜಾರಿಮಾಡುತ್ತಿರುವುದನ್ನು ವಿರೋಧಿಸಿ 3 ತಿಂಗಳಿಂದ ಅನೇಕ ಹೋರಾಟ ಮಾಡಿದ್ದಲ್ಲದೇ ಕರ್ನಾಟಕ ಬಂದ್‌ ನಡೆಸಲಾಗಿತ್ತು. ನಿರಂತರ ಹೋರಾಟದ ಭಾಗವಾಗಿ ಹೆದ್ದಾರಿ ತಡೆ ಸಹ ನಡೆಸುತ್ತಿದೆ ಎಂದರು. ಪ್ರಾಂತ ರೈತ ಸಂಘದ ಸಂಚಾಲಕ ಅಜ್ಜಪ್ಪ, ರೈತರ ಕಷ್ಟ ಕೇಳದ ಸರ್ಕಾರಗಳು ಅಧಿಕಾರದಲ್ಲಿ ಹೆಚ್ಚು ದಿನ ಉಳಿಯುದಿಲ್ಲವೆಂದು ಇತಿಹಾಸ ತಿಳಿಸಿದೆ ಎಂದರು.

ಸಂಕಷ್ಟದಲ್ಲಿ ರೈತರು:ರೈತ ಕೃಷಿ ಕಾರ್ಮಿಕ ಸಂಘಟನೆ ಮುಖಂಡ ಎಸ್‌.ಎನ್‌.ಸ್ವಾಮಿ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರದ ನೀತಿಗಳು ರೈತ ವಿರೋಧಿಯಷ್ಟೇ ಅಲ್ಲ. ಜನ ವಿರೋಧಿಗಳಾಗಿದ್ದುಜನರಕಷ್ಟಪರಿಹರಿಸುವ ಬದಲು ಹೆಚ್ಚಿನ ಸಂಕಷ್ಟಕ್ಕೆ ದೂಡುತ್ತಿವೆ. ಇದನ್ನು ಪ್ರತಿರೋಧಿಸಿ ನಿಲ್ಲಲೇಬೇಕಾದ ಸಂದರ್ಭ ಬಂದಿದೆ ಎಂದರು.

ಎಐಕೆಎಸ್‌ನಕಂಬೇಗೌಡ,ಕೃಷಿ ವಸ್ತುಗಳ ಬೆಲೆ ಕುಸಿಯುತ್ತಿದ್ದು, ರೈತರ ಬದುಕು ದುಸ್ಥಿ ತಿಗೆ ತಳ್ಳಿದೆ. ಚುನಾವಣೆಗಳಲ್ಲಿ ಆಡಳಿತ ಪಕ್ಷದ ಮುಖಂಡರುಕಮಲಅರಳಿಸುವಷ್ಟೇ ಆದ್ಯತೆಯಾಗಿ ಉತ್ತರ ಕರ್ನಾಟಕದ ನೆರೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನರ ಬದುಕನ್ನು ಉಳಿಸಲು ಮುಂದಾಗಬೇಕು. ವಿದ್ಯುತ್‌ ದರ ಪೆಟ್ರೋಲ್‌-ಡೀಸಲ್‌ ದರ ಅಗತ್ಯ ವಸ್ತುಗಳ ದರ ಏರಿಕೆ ಹೆಚ್ಚಿದಂತೆ ಜನರಿಗೆ ಕೂಲಿ, ರೈತರ ಬೆಳೆಗೆ ಬೆಲೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಬೇಕೆಂದರು. ನೇತೃತ್ವವನ್ನು ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಂಕರಪ್ಪ, ವೆಂಕಟೇಗೌಡ, ರಂಗಸ್ವಾಮಿ, ಜಯ ರಾಮಯ್ಯ, ಪ್ರಾಂತ ರೈತ ಸಂಘದ ಜಯಣ್ಣ, ಶಂಕರಪ್ಪ ಆರ್‌.ಕೆ.ಎಸ್‌ನ ಕಲ್ಯಾಣಿ ಅಶ್ವಿ‌ನಿ ಮುಂತಾದವರು ವಹಿಸಿದ್ದರು.

ಕೇಂದ್ರ-ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ನ. 26 ರಂದು ಪಾರ್ಲಿಮೆಂಟ್‌ ಚಲೋಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆ ಈಡೇರುವ ವರೆಗೆ ನಿರಂತರ ನಡೆಯುತ್ತಿರುತ್ತದೆ. ನಮ್ಮ ಅಸ್ತಿತ್ವ ಉಳಿಯುವವರೆಗೂ ಹೋರಾಟ ಮುಂದುವರಿಸಬೇಕು. ಎ.ಗೋವಿಂದರಾಜ್‌, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

DCC

ಕಲಬುರಗಿ: ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ಮಡಿಲಿಗೆ; ಬಿಜೆಪಿಗೆ ಮುಖಭಂಗ

love

ಭಾರತೀಯ ಯುವಕನಿಂದ ಲವ್ ಪ್ರಪೋಸ್; ಒಪ್ಪಿಗೆ ನೀಡಿದಳಾ ಆಸೀಸ್ ಯುವತಿ ? ವಿಡಿಯೋ ವೈರಲ್

uttaraprdesh

ಸುಗ್ರೀವಾಜ್ಞೆಯ ಮರುದಿನವೇ ‘ಲವ್ ಜಿಹಾದ್ ತಡೆ ಕಾಯ್ದೆಯಡಿ’ ಮೊದಲ ಪ್ರಕರಣ ದಾಖಲು

ct-ravi

ಉಗ್ರರಿಗೆ ಬಿರಿಯಾನಿ ಕೊಡುವ ಕಾಲ ಹೋಗಿದೆ;ದೇಶದ್ರೋಹಿಗಳನ್ನು ಮಟ್ಟ ಹಾಕುವುದು ಖಂಡಿತಾ: CT ರವಿ

101

ವ್ಯರ್ಥವಾದ ಕೊಹ್ಲಿ,ರಾಹುಲ್ ಆಟ : ಭಾರತ ವಿರುದ್ಧ ಸರಣಿ ಗೆದ್ದ ಫಿಂಚ್ ಪಡೆ

ಅಣ್ಣನನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಾರ್ದಿಕ್‌ ಪಾಂಡ್ಯ ಪರೋಕ್ಷ ಸಂದೇಶ

ಅಣ್ಣನನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಾರ್ದಿಕ್‌ ಪಾಂಡ್ಯ ಪರೋಕ್ಷ ಸಂದೇಶ

raitha

ರೈತಹೋರಾಟದಲ್ಲಿ ಪಾಲ್ಗೊಳ್ಳಲು ತೆರಳಿದವರ ಕಾರಿಗೆ ಬೆಂಕಿ: ಓರ್ವ ಸಜೀವ ದಹನ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ತ್ಯಜಿಸಿ

ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ತ್ಯಜಿಸಿ

ಗುಣಮಟ್ಟದ ಕಾಮಗಾರಿಗೆ ಆದ್ಯತೆ

ಗುಣಮಟ್ಟದ ಕಾಮಗಾರಿಗೆ ಆದ್ಯತೆ

ಮರಳೂರು ಕೆರೆ ಪರಿಸರ ಸಂರಕ್ಷಿಸಿ: ರೇಣುಕಾ

ಮರಳೂರು ಕೆರೆ ಪರಿಸರ ಸಂರಕ್ಷಿಸಿ: ರೇಣುಕಾ

ದಶಕದ ನಂತರ ಶೆಟ್ಟಿಕೆರೆ ಭರ್ತಿ: ರೈತರ ಮೊಗದಲ್ಲಿ ಸಂತಸ

ದಶಕದ ನಂತರ ಶೆಟ್ಟಿಕೆರೆ ಭರ್ತಿ: ರೈತರ ಮೊಗದಲ್ಲಿ ಸಂತಸ

846 ಅಂಗನವಾಡಿಗೆ ಸ್ವಂತ ಕಟ್ಟಡವೇ ಇಲ್ಲ!

846 ಅಂಗನವಾಡಿಗೆ ಸ್ವಂತ ಕಟ್ಟಡವೇ ಇಲ್ಲ!

MUST WATCH

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

ಹೊಸ ಸೇರ್ಪಡೆ

DCC

ಕಲಬುರಗಿ: ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ಮಡಿಲಿಗೆ; ಬಿಜೆಪಿಗೆ ಮುಖಭಂಗ

mumbai-tdy-1

ಮುಂಬಯಿ: ಸ್ಥಳೀಯ ರೈಲು ಸಂಚಾರ : ಟಿಕೆಟ್‌ ಇಲ್ಲದೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳ!

love

ಭಾರತೀಯ ಯುವಕನಿಂದ ಲವ್ ಪ್ರಪೋಸ್; ಒಪ್ಪಿಗೆ ನೀಡಿದಳಾ ಆಸೀಸ್ ಯುವತಿ ? ವಿಡಿಯೋ ವೈರಲ್

ಸ್ತನಗಳ ಬಗ್ಗೆ  ಇರಲಿ ಅರಿವು, ಎಚ್ಚರಿಕೆ

ಸ್ತನಗಳ ಬಗ್ಗೆ ಇರಲಿ ಅರಿವು, ಎಚ್ಚರಿಕೆ

ಸೋಂಕು ಕಾಲದಲ್ಲಿ ಮಧುಮೇಹ ನಿರ್ವಹಣೆ

ಸೋಂಕು ಕಾಲದಲ್ಲಿ ಮಧುಮೇಹ ನಿರ್ವಹಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.