Udayavni Special

ಜಂಪೇನಹಳ್ಳಿ ಮಗು ಪ್ರಕರಣ ಖಂಡಿಸಿ ಧರಣಿ


Team Udayavani, Mar 26, 2021, 5:06 PM IST

ಜಂಪೇನಹಳ್ಳಿ ಮಗು ಪ್ರಕರಣ ಖಂಡಿಸಿ ಧರಣಿ

ಕುಣಿಗಲ್‌: ಕೊರಟಗೆರೆ ತಾಲೂಕು ಜಂಪೇನ ‌ಹಳ್ಳಿಗ್ರಾಮದಲ್ಲಿ ದಲಿತ ಮೃತ ಮಗುವಿನ ಶವವನ್ನು ಹೊರತೆಗೆದು ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಅಮಾನವೀಯ ಘಟನೆ ಖಂಡಿಸಿ, ಕುಣಿಗಲ್‌ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.

ಜಂಪೇನಗಹಳ್ಳಿ ಗ್ರಾಮದಲ್ಲಿನ ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತ್ತಾಗಿದೆ. ಘಟನೆಗೆ ಸಂಬಂಧಿಸಿದ ಶಾಹಿ ಗಾರ್ಮೆಂಟ್ಸ್‌ ಮಾಲೀಕರು ಹಾಗೂ ಸರ್ಕಾರಿ ಅಧಿಕಾರಿಗಳ ಮೇಲೆಶಿಸ್ತುಕ್ರಮ ಜರುಗಿಸುವಂತೆ ಆಗ್ರಹಿಸಿ, ಪುರಸಭಾ ಸದಸ್ಯ ಆನಂದ್‌ ಕಾಂಬ್ಲಿ, ಶ್ರೀನಿವಾಸ್‌, ತಾಪಂ ಮಾಜಿ ಅಧ್ಯಕ್ಷ ಎಸ್‌.ಆರ್‌.ಚಿಕ್ಕಣ್ಣ, ಜಿಲ್ಲಾ ಡಿಎಸ್‌ಎಸ್‌ಸಂಚಾಲಕ ವಿ.ಶಿವಶಂಕರ್‌, ದಲಿತ್‌ನಾರಾಯಣ್‌ನೇತೃತ್ವದಲ್ಲಿ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ವಿರುದ್ಧ ಧಿಕ್ಕಾರ ಕೂಗಿದರು.

ಹೀನಾಯ ಕೃತ್ಯ: ಎತ್ತಿನಹೊಳೆ ಕಾಮಗಾರಿ ಬ್ಲಾಸಿಂಗ್‌ ಶಬ್ದಕ್ಕೆ ಜಂಪೇನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಮೂರು ತಿಂಗಳ ಹೆಣ್ಣು ಮೃತಪಟ್ಟಿತ್ತು. ಘಟನೆ ಬಗ್ಗೆ ಪ್ರಶ್ನಿಸಲು ಶಕ್ತಿ ಇಲ್ಲದ ದಲಿತ ಕುಟುಂಬ ಸುವರ್ಣ ಮುಖೀ ನದಿಗೆ ಹೊಂದುಕೊಂಡತ್ತೇ ಇರುವ ಸರ್ಕಾರಿ ಜಮೀನಿನಲ್ಲಿ ಮೃತ ಮಗುವಿನ ಶವ ಸಂಸ್ಕಾರವನ್ನು ಮಾಡಿದ್ದರು. ಶಾಹಿ ಗಾರ್ಮೆಂಟ್ಸ್‌ ಮಾಲೀಕರು ನಮ್ಮ ಜಾಗದಲ್ಲಿ ಶವ ಸಂಸ್ಕಾರ ಮಾಡಿದ್ದಾರೆಂದು ಗುಂಡಿಯಿಂದ ಶವವನ್ನು ಸೆಕ್ಯುರಿಟಿ ಮೂಲಕ ಹೊರ ತೆಗೆಸಿ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂñಹ ‌ ಹೀನಾಯ ಕೃತ್ಯ ಎಸಗಲಾಗಿದೆ ಎಂದು ದಲಿತ ಮುಖಂಡರು ಕಿಡಿಕಾರಿದರು.

ದಲಿತರು ಎಲ್ಲ ಸಮುದಾಯವನ್ನು ಪ್ರೀತಿಸುವಂತಹ ಸಮುದಾಯ. ಆದರೆ, ನಮ್ಮಲ್ಲೇ ಎತ್ತುಕಟ್ಟುವಂತಹ ಕೆಲಸ ನಡೆಯುತ್ತಿದೆ. ಇದನ್ನುಖಂಡಿಸುತ್ತೇವೆ. ನಮಗೆ ಎಲ್ಲರ ಸ್ನೇಹ ಬೇಕು ಸಂಘರ್ಷ ಬ್ಯಾಡ ಎಂದ ಮುಖಂಡರು, ದೇಶಕ್ಕೆ ಸ್ವಾತಂತ್ರ ಬಂದು 74 ವರ್ಷ ಕಳೆದರೂ ಇಂತಹಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ. ದಲಿತನ್ನು ಮನುಷ್ಯರಂತೆ ನೋಡುತ್ತಿಲ್ಲ. ಇದು ನಮ್ಮ ಸಂಸ್ಕೃತಿಯಲ್ಲ ಎಂದು ಆಕ್ರೋಶ ವ್ಯಕಪಡಿ‌¤ ಸಿದರು.

ಪರಿಹಾರದ ಭಿಕ್ಷೆ ಬೇಕಿಲ್ಲ: ನೊಂದ ಸಮಾಜದ ಮನುಷ್ಯರು ಘನತೆಯಿಂದ ಬದುಕುವ ವ್ಯವಸ್ಥೆ ಇಲ್ಲ. ಜಂಪೇನಹಳ್ಳಿ ಘಟನೆ ಹಿನ್ನೆಲೆ ಸಂತ್ರಸ್ತರಿಗೆ ಪರಿಹಾರದಭಿಕ್ಷೆ ನಮಗೆ ಬೇಕಿಲ್ಲ, ಸ್ವಾಭಿಮಾನ ಬೇಕು. ಸಮಾಜದಲ್ಲಿ ಎಲ್ಲರಂತೆ ಸಮಾನತೆಯಿಂದಬದುಕುವಂತಹ ವ್ಯವಸ್ಥೆ ಸರ್ಕಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಕಚೇರಿ ಶಿರಸ್ತೇದಾರ್‌ ಜಯಪ್ಪಚಾರ್‌ ಅವರಿಗೆ ಮನವಿ ಸಲ್ಲಿಸಿದರು. ದಲಿತ ಮುಖಂಡ ಜಿ.ಕೆ.ನಾಗಣ್ಣ, ವರದರಾಜು, ನರಸಿಂಹಮೂರ್ತಿ, ಎಸ್‌.ಟಿ. ಕೃಷ್ಣರಾಜು, ರಾಮಲಿಂಗಯ್ಯ, ಆನಂದ್‌, ಎನ್‌.ರಾಜೇಶ್‌, ನಂಜಪ್ಪ ವಿನಯ್‌, ತಿಮ್ಮಪ್ಪ, ಗೋವಿಂದರಾಜು ಇದ್ದರು.

ಟಾಪ್ ನ್ಯೂಸ್

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

tyryry

ಚಿತ್ರರಂಗದ ಕಾರ್ಮಿಕರಿಗೆ ‘ಉಚಿತ ಕೋವಿಡ್ ಲಸಿಕೆ ಅಭಿಯಾನ’ ಪ್ರಾರಂಭಿಸಿದ ನಟ ಚಿರಂಜೀವಿ

ಭಾರತದಲ್ಲಿ ಬಿಡುಗಡೆಗೊಂಡಿದೆ ಪೊಕೊ ಎಂ 2 ರಿಲೋಡೆಡ್ ಸ್ಮಾರ್ಟ್ ಫೋನ್ ..!

fgfg

ನಿಮ್ಮ ಜಿಲ್ಲೆಯ ಕೋವಿಡ್ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಿ : ಸಚಿವರಿಗೆ ಸಿಎಂ ಪತ್ರ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

್ಗಗ್ದಸ

ಅಸಹಾಯಕರಾಗಿದ್ದೇವೆ, ಬೆಡ್-ಆಕ್ಸಿಜನ್ ಇಲ್ಲ, ಮುನ್ನೆಚ್ಚರಿಕೆಯಿಂದ ಇರಿ : ವೈದ್ಯೆ ಕಣ್ಣೀರು

utuytruyt

‘ರಣಧೀರ’ ಚಿತ್ರದ ಪೋಸ್ಟರ್ ಡಿಸೈನರ್ ಕೋವಿಡ್‍ನಿಂದ ಸಾವು







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರದ ಕೊರತೆ

ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರದ ಕೊರತೆ

Awareness Campaign by MLA

ಕೋವಿಡ್: ಶಾಸಕರಿಂದ ಜಾಗೃತಿ ಅಭಿಯಾನ

Kannada Sahitya Council

ಕಸಾಪ ಕೆಲವರ ಸತ್ವಲ್ತ , ಬಹುಜನರ ಸ್ವತ್ತು: ರಾಮೇಗೌಡ

Fire to the trees

ಸಂತೆ ಮೈದಾನದಲ್ಲಿನ ಮರಗಳಿಗೆ ಬೆಂಕಿ

road isuue at huliyara

ಹುಳಿಯಾರಿಗೆ ಬರುವ ಪ್ರತಿಯೊಬ್ಬರಿಗೂ ಧೂಳಿನ ಮಜ್ಜನ!

MUST WATCH

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

ಹೊಸ ಸೇರ್ಪಡೆ

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

21-12

ಕೊರೊನಾ ಸೋಂಕು ತಡೆಗೆ ಶ್ರಮಿಸಿ: ದೇವರಮನೆ ಶಿವಕುಮಾರ್‌

21-11

ಪಾಲಿಕೆ ವ್ಯಾಪ್ತಿಯಲ್ಲಿ ಉದ್ಯಮ ಪರವಾನಗಿ ಮೇಳ: ವೀರೇಶ್‌

21-10

ಜಿಲ್ಲಾಧಿಕಾರಿಯಿಂದ ಜಾಗೃತಿ ಪಾಠ

tyryry

ಚಿತ್ರರಂಗದ ಕಾರ್ಮಿಕರಿಗೆ ‘ಉಚಿತ ಕೋವಿಡ್ ಲಸಿಕೆ ಅಭಿಯಾನ’ ಪ್ರಾರಂಭಿಸಿದ ನಟ ಚಿರಂಜೀವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.