ಮರ ಕಡಿದ ಅಧಿಕಾರಿಗಳ ಕ್ರಮ ಖಂಡಿಸಿ ಪ್ರತಿಭಟನೆ

Team Udayavani, Sep 11, 2019, 12:49 PM IST

ತುಮಕೂರು ಶಿರಾಗೇಟ್ ಬಳಿ ಇರುವ ಟಾಮ್ಲಿಸನ್‌ ಚರ್ಚ್‌ ಆವರಣದ ಹಳೆ ಮರಗಳನ್ನು ತೆರವುಗೊಳಿಸಲು ಮುಂದಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕ್ರಮ ಖಂಡಿಸಿ ಚರ್ಚ್‌ನ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ತುಮಕೂರು: ನಗರದ ಶಿರಾಗೇಟ್ ಬಳಿ ಇರುವ ಟಾಮ್ಲಿಸನ್‌ ಚರ್ಚ್‌ ಆವರಣದಲ್ಲಿ ಹಲವಾರು ವರ್ಷಗಳಿಂದ ಇರುವ ಹಳೆಯ ಮರಗಳನ್ನು ಏಕಾಏಕಿ ತೆರವುಗೊಳಿಸಲು ಮುಂದಾದ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳ ಕ್ರಮ ಖಂಡಿಸಿ ಮಂಗಳವಾರ ಚರ್ಚ್‌ನ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಟಾಮ್ಲಿಸನ್‌ ಚರ್ಚ್‌ನ ಆವರಣದ ಮರಗಳನ್ನು ಕಡಿದು ಜಾಗ ವಶಪಡಿಸಿಕೊಳ್ಳಲು ಮುಂದಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಮೋಹನಕುಮಾರ್‌ ಮತ್ತು ಸಿಬ್ಬಂದಿ ಧೋರಣೆ ವಿರೋಧಿಸಿದ ಚರ್ಚ್‌ನ ಪದಾಧಿಕಾರಿಗಳು, ಮರ ಕಡಿಯುವುದಕ್ಕೆ ಹಾಗೂ ವಿದ್ಯುತ್‌ ಕಂಬಗಳ ಸ್ಥಳಾಂತರಕ್ಕೆ ತಡೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ: ಮರ ಕಡಿಯುವ ಸಂಬಂಧ ಚರ್ಚ್‌ಗೆ ಯಾವುದೇ ನೋಟಿಸ್‌ ನೀಡಿಲ್ಲ. ಚರ್ಚ್‌ನ ದಾಖಲಾತಿ ಪರಿಶೀಲಿಸಿಲ್ಲ. ಏಕಾಏಕಿ ಮರಗಳ ತೆರವಿಗೆ ಬಂದಿರುವುದು ಸರಿಯಲ್ಲ ಎಂದು ವಿರೋಧಿಸಿದರು. ಚರ್ಚ್‌ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿ ಮರಗಳ ತೆರವಿಗೆ ಮುಂದಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ವಿರುದ್ಧ ಪೊಲೀಸ್‌ ಇಲಾಖೆ, ಅರಣ್ಯ ಇಲಾಖೆ ಹಾಗೂ ಬೆಸ್ಕಾಂಗೆ ದೂರು ನೀಡಿರುವುದಾಗಿ ಜಗದೀಶ್‌ ಮೋಹನ್‌ ತಿಳಿಸಿದರು.

ದೂರು ನೀಡಿದ್ದೇವೆ: ಚರ್ಚ್‌ಗೆ ಸಂಬಂಧಿಸಿದ ಸಿಎಸ್‌ಐ ಸಂಸ್ಥೆ ಇದೆ. ಈ ಬಗ್ಗೆ ನಮ್ಮ ಸಂಸ್ಥೆಗೆ ದೂರು ನೀಡಿದ್ದೇವೆ. ಸಂಸ್ಥೆಯಲ್ಲಿ ಲಭ್ಯ ಇರುವ ದಾಖಲಾತಿ ತಂದು, ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಯಾವುದೇ ಮಾಹಿತಿ ನೀಡದೆ ಏಕಾಏಕಿ ಅತಿಕ್ರಮ ಪ್ರವೇಶ ಮಾಡಿರುವುದು ಸರಿಯಲ್ಲ. ಸಿಎಸ್‌ಐ ಸಮಿತಿ ಒಪ್ಪಿದರೆ ನಮ್ಮ ಜಾಗಕ್ಕೆ ಸೂಕ್ತ ಪರಿಹಾರ ನೀಡಿದರೆ ಮಾತ್ರ ಸಮ್ಮತಿ ಸೂಚಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಚರ್ಚ್‌ನ ಪದಾಧಿಕಾರಿಗಳಾದ ಸಂಜೀವ ಕುಮಾರ್‌, ವಿಜಯರಾಜಕುಮಾರ್‌, ಜಿ.ಕೆ.ವಿನೋದಕುಮಾರ್‌, ನರಸೀಕುಮಾರ್‌, ನೆಲ್ಸನ್‌, ಸ್ಯಾಮ್ಸನ್‌, ಸುನೀಲ್ ಮತ್ತಿತರರು ಇದ್ದರು.

ಅಪಘಾತ ಹೆಚ್ಚಳ: ಟಾಮ್ಲಿಸನ್‌ ಚರ್ಚ್‌ ಮುಂಭಾಗ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ಸಾವು-ನೋವು ಸಂಭವಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಚರ್ಚ್‌ ಮುಂಭಾಗ ಇರುವ ಮರಗಳ ಕೊಂಬೆ ಕಡಿದು ವಿದ್ಯುತ್‌ ಕಂಬ ಸ್ಥಳಾಂತ ರಿಸುವಂತೆ ಸೂಚನೆ ನೀಡಿದ್ದರು.

ಹೀಗಾಗಿ ಚರ್ಚ್‌ ಮುಂಭಾಗ ಇರುವ ಮರಗಳ ಕೊಂಬೆ ಕಡಿದು ವಿದ್ಯುತ್‌ ಕಂಬಗಳ ಸ್ಥಳಾಂತರಕ್ಕೆ ಮುಂದಾಗಿದ್ದೆವು. ಆದರೆ ಅಲ್ಲಿನ ಜನತೆ ಬಂದು ಅಡ್ಡಿ ಪಡಿಸಿದರು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಡಿವೈಎಸ್ಪಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್‌ ಅವರ ಗಮನಕ್ಕೆ ತಂದಾಗ ಅವರು ಒಂದು ದಿನ ಕಾಲಾವಕಾಶ ಕೇಳಿದ್ದು, ಸ್ಥಳೀಯರ ಮನವೊಲಿಸಿ ಈ ಕಾರ್ಯಕ್ಕೆ ಅನುವು ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಧುಗಿರಿ: ಹೈನುಗಾರರು ಗುಣಮಟ್ಟದ ಹಾಲು ಡೇರಿಗೆ ನೀಡಬೇಕು ಎಂದು ತುಮುಲ್‌ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ತಿಳಿಸಿದರು. ತಾಲೂಕಿನ...

  • ತಿಪಟೂರು: ತುಮಕೂರು ಜಿಲ್ಲೆಗೆ ನಿಗದಿಯಾಗಿರುವ 25 ಟಿಎಂಸಿ ಹೇಮಾವತಿ ನೀರು ಜಿಲ್ಲೆಯ ಬಹುತೇಕ ಕೆರೆಗಳಿಗೆ ಹರಿಯುವ ಮೂಲಕ ಈ ಭಾಗದ ಜನರ ಕುಡಿಯುವ ನೀರಿನ ಬವಣೆ ಕೆಲವೇ...

  • ತಿಪಟೂರು: ಮಹಾತ್ಮಾ ಗಾಂಧೀಜಿಯವರ ಗ್ರಾಮಾಭಿವೃದ್ಧಿ ಕಲ್ಪನೆ ಸಹಕಾರ ತತ್ವದಲ್ಲಿ ಅಡಗಿದೆ. ಸಹಕಾರ ಸಂಘಗಗಳು ಸರ್ಕಾರಗಳು ಮಾಡಲು ಸಾಧ್ಯವಾಗದ ಎಷ್ಟೋ ಜನೋಪಯೋಗಿ...

  • ಹುಳಿಯಾರು: ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿಸಿದ್ದರೆ, ಅದಕ್ಕಾಗಿ ಸಿದ್ಧಪಡಿಸಿರುವ ಫ್ರೂಟ್‌...

  • ಶಿರಾ: ಜನರಿಗೆ ಅನ್ನ ನೀಡುವ ಅನ್ನದಾತನಿಗೆ ಬೇಕಾಗಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡುವಂತ ಕಿಸಾನ್‌ ಸಮ್ಮಾನ್‌ ಯೋಜನೆ 2 ಸಾವಿರ ರೂ., ಕಳಪೆ ಬೀಜ,...

ಹೊಸ ಸೇರ್ಪಡೆ