ಕೋವಿಡ್: ಪ್ರಾಣಿಗಳ ಮೇಲಿನ ಮಮತೆಯೂ ದೂರ
Team Udayavani, Sep 30, 2020, 3:11 PM IST
ತುಮಕೂರು: ಮನುಷ್ಯ ತನ್ನ ಒತ್ತಡದ ಜೀವನವನ್ನು ಕೊಂಚ ಹಗುರಾಗಿಸಿಕೊಳ್ಳಲು ನಾಯಿಯಂತಹ ಸಾಕು ಪ್ರಾಣಿಗಳು ಸಹಕಾರಿ, ಆದರೆ ಇಂದು ಕೋವಿಡ್ ಮಹಾಮಾರಿಯಿಂದಾಗಿ ಪ್ರಾಣಿಗಳ ಮೇಲಿನ ಮಮತೆಯೂ ದೂರವಾಗುತ್ತಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ವ್ಯಕ್ತಪಡಿಸಿದರು.
ನಗರದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಆವರಣದಲ್ಲಿ ಜಿಪಂ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕಪಶುವೈದ್ಯಕೀಯ ಸಂಘಹಾಗೂಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಕು ಪ್ರಾಣಿ ಗಳಿಗೆ ರೇಬಿಸ್ ವಿರುದ್ಧ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ವಿಶ್ವಾಸಾರ್ಹ ಪ್ರಾಣಿ: ನಾಯಿ ಅತ್ಯಂತ ವಿಶ್ವಾ ಸಾರ್ಹ ಪ್ರಾಣಿ, ಹಾಗೆಂದ ಮಾತ್ರಕ್ಕೆ ಅದುಕಡಿದಾಗ ನಿರ್ಲಕ್ಷ್ಯ ವಹಿಸುವುದು ಬೇಡ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ, ಸಾಕಿದ ನಾಯಿಗಳಿ ಗಿಂತಲೂ ಬೀದಿ ನಾಯಿಗಳು ಕಚ್ಚಿದರೆ ಹೆಚ್ಚು ತೊಂದರೆಯಾಗುತ್ತಿದ್ದು ಇದಕ್ಕೆ ಜನರು ನಿರ್ಲಕ್ಷ್ಯ ವಹಿಸಿದೇ ನಾಯಿ ಕಚ್ಚಿದರೆ ತಕ್ಷಣ ಅದಕ್ಕೆ ಚಿಕಿತ್ಸೆ ಪಡೆಯಬೇಕು ಎಂದರು.
ಈಗ ಎಲ್ಲಾಕಡೆ ಬೀದಿನಾಯಿಗಳ ಕಾಟ ಜಾಸ್ತಿಯಾಗುತ್ತಿದೆ ಎಂದು ದೂರುಗಳು ಜನರಿಂದ ಬರುತ್ತಿವೆ ಅವುಗಳನ್ನು ತಡೆಯುವ ನಿಟ್ಟಿನಲ್ಲಿಕ್ರಮ ಕೈಗೊಳ್ಳಬೇಕಿದೆ ಎಂದರು.
ಪ್ರಯೋಜನ ಪಡೆಯಿರಿ: ಇಂದು ಎಲ್ಲವೂ ಕೋವಿಡ್ ಸೋಂಕಿನದ್ದೇ ಆಗಿದೆ ಇದರ ನಡುವೆ ಹಲವಾರು ರೋಗಗಳು ಇಂದು ಮೆರತೇ ಹೋಗಿವೆ. ರೇಬಿಸ್ ದಿನಾಚರಣೆ ಅಂಗವಾಗಿ ರೇಬಿಸಿ ನಂತಹ ಮಾರಾಣಾಂತಿಕ ರೋಗಗಳ ಬಗ್ಗೆ ಇಲಾಖೆ ಎಚ್ಚೆತ್ತು ಕೊಂಡು ತನ್ನ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಇಲಾಖೆಯ ಈ ಕಾರ್ಯಕ್ರಮ ಸಾರ್ಥಕವಾಗ ಬೇಕೆಂದರೆ ಸಾಕು ಪ್ರಾಣಿಗಳ ಮಾಲೀಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ನೆರವು ನೀಡಲು ಸಿದ್ಧ: ಮಹಾನಗರ ಪಾಲಿಕೆ ಮೇಯರ್ ಫರೀದಾ ಬೇಗಂ ಮಾತನಾಡಿ, ಈ ರೋಗದ ಬಗ್ಗೆ ಜಾಗೃತಿ ಅಗತ್ಯ.ಬೀದಿ ನಾಯಿಗಳಿಗೆ ರೇಬಿಸ್ ರೋಗದ ವಿರುದ್ಧ ಲಸಿಕೆ ಹಾಕಿಸುವ ಸಂಬಂಧ ಪಾಲಿಕೆ ವತಿಯಿಂದ ಎಲ್ಲಾ ರೀತಿಯ ನೆರವನ್ನು ಪಶುವೈದ್ಯಕೀಯ ಇಲಾಖೆಗೆ ನೀಡಲು ಸಿದ್ಧ ಎಂದರು.
ಡಿ.ಎಚ್.ಒ ಡಾ.ನಾಗೇಂದ್ರಪ್ಪ ಮಾತನಾಡಿ, ಪ್ರಾಣಿ ಜನ್ಯ ರೋಗಗಳಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಹಲವಾರು ಸವಲತ್ತುಗಳನ್ನು ಸರ್ಕಾರ ನೀಡಿದೆ. ಹುಚ್ಚು ನಾಯಿಕಡಿತದ ವಿರುದ್ಧ ಲಸಿಕೆ ಸಾಕಷ್ಟು ಲಭ್ಯವಿದ್ದು, ಒಂದು ವೇಳೆ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿದ್ದರೆ ತಕ್ಷಣವೇ ಕೊಂಡುಕೊಳ್ಳಲು ಅಗತ್ಯ ಮಂಜೂರಾತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಕ್ರೋಟೇಶಪ್ಪ, ಡಾ.ನವೀನ್ ಜವಳಿ, ಜಿಲ್ಲಾ ಪಶುವೈದ್ಯಕೀಯ ಸಂಘದಅಧ್ಯಕ್ಷಡಾ.ರುದ್ರಪಸಾದ್,ಕುರಿಅಭಿವೃದ್ಧಿ ಮಂಡಳಿಯ ಉಪನಿರ್ದೇಶಕ ಡಾ.ನಾಗಣ್ಣ, ಇನ್ನರ್ ವ್ಹೀಲ್ ಕ್ಲಬ್‌ನ ಪ್ರಿಯಾ ಪ್ರದೀಪ್, ಡಾ. ಲಕ್ಷ್ಮೀ ನಾರಾಯಣ್, ಪಶುವೈದ್ಯಕೀಯ ಸಂಘದ
ಉಪಾಧ್ಯಕ್ಷ ಡಾ.ದಿವಾಕರ್, ಡಾ.ಶಶಿಕಾಂತ್ ಬೂದಿಹಾಳ್, ಡಾ.ನಾಗಭೂಷಣ್ ಇದ್ದರು. ಉಚಿತ ಲಸಿಕೆ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಸಾಕು ಪ್ರಾಣಿಗಳಿಗೆ ಪಶುವೈದ್ಯ ರಾದ ಡಾ.ವೆಂಕಟೇಶಬಾಬು, ಡಾ. ವಿಶ್ವನಾಥ್, ಡಾ. ಪ್ರಿಯಾಂಕ ಮತ್ತು ಡಾ. ಶರ್ಮಿಳಾ ಚುಚ್ಚುಮದ್ದು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ
ಕೊರಟಗೆರೆ : ಆಸ್ಪತ್ರೆಯಲ್ಲಿ ಕೊಳೆತು ನಾರುತ್ತಿರುವ ಸ್ಯಾನಿಟರಿ ಪ್ಯಾಡ್ ಗಳು!
ಗರಿಷ್ಠ ಪ್ರಮಾಣದಲ್ಲಿ ಆಯುಷ್ಮಾನ್ ಕಾರ್ಡ್ ನೀಡಿ
ಬಡವರು, ರೈತರು ಉಸಿರಾಡಲು ಚಳವಳಿಯ ಅನಿವಾರ್ಯತೆ ಸೃಷ್ಟಿ
ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ: ಗುಣಮಟ್ಟ ಶಿಕ್ಷಣಕ್ಕೆ ಕಲಿಕಾ ಚೇತರಿಕೆ: ಸಿಎಂ