ರಾಗಿ ಹಣ ರೈತರ ಕೈಗೆ ಸೇರಿಲ್ಲ

Team Udayavani, May 16, 2019, 12:26 PM IST

ತಿಪಟೂರು: ತಾಲೂಕಿನ ರೈತರು ಸರ್ಕಾರದ ರಾಗಿ ಖರೀದಿ ಕೇಂದ್ರಕ್ಕೆ ಸಾವಿರಾರು ಕ್ವಿಂಟಲ್ ರಾಗಿ ಮಾರಿದ್ದು, ಮಾರಾಟ ಮಾಡಿರುವ ರಾಗಿ ಹಣ ಮಾತ್ರ ಇನ್ನೂ ರೈತರ ಕೈಗೆ ಸೇರಿಲ್ಲ. ಆದ್ದ ರಿಂದ ನಮ್ಮ ರಾಗಿ ಮಾರಿರುವ ಹಣಕ್ಕೂ ಚುನಾ ವಣಾ ನೀತಿಸಂಹಿತೆ ಅಡ್ಡಿಯಾಗಬೇಕೆ ಎಂದು ರೈತರು ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 2019 ಜನವರಿ 12ರಿಂದ ಮಾರ್ಚ್‌ ಅಂತ್ಯದವರೆಗೂ ತಾಲೂಕಿನಲ್ಲಿ ನಫೆಡ್‌ನ‌ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಕ್ವಿಂಟಲ್ ರಾಗಿಗೆ 2970ರಂತೆ ಬೆಂಬಲ ಬೆಲೆಗೆ ಸಾವಿರಾರು ಕ್ವಿಂಟಲ್ ರಾಗಿ ಖರೀದಿ ಮಾಡಿ ದ್ದಾರೆ. ಸರ್ಕಾರಕ್ಕೆ ನಾವು ರಾಗಿ ಮಾರಾಟ ಮಾಡುವುದ ರಿಂದ ಬೇಗ ಹಣ ಸಿಕ್ಕಿ, ನಮ್ಮ ಕಷ್ಟ ಗಳಿಗೆ ಅನುಕೂಲವಾಗುತ್ತದೆ ಎಂಬ ಆಸೆಯಿಂದ ರೈತರು ಸಹ ಮಾರಾಟ ಮಾಡಿದ್ದಾರೆ. ಆದರೆ, ಹಣ ಮಾತ್ರ ಇನ್ನೂ ಸಿಕ್ಕಿಲ್ಲ.

ರಾಗಿ ಕೇಂದ್ರಕ್ಕೆ ರೈತರ ಅಲೆದಾಟ: ಮನೆ ಖರ್ಚು, ವಿದ್ಯಾಭ್ಯಾಸದ ಖರ್ಚು, ಮುಂಗಾರು ಹಂಗಾಮಿಗೆ ಗೊಬ್ಬರ-ಬಿತ್ತನೆ ಬೀಜಗಳ ಖರ್ಚಿಗೆ ಹಣ ಸಿಗುವುದು ಎಂಬ ಆಸೆಯಿಂದ ರೈತರು ರಾಗಿ ಮಾರಿ, ನಿತ್ಯವೂ ದುಡ್ಡು ಬಂತಾ ಎಂದು ರೈತರು ನಫೆಡ್‌ ಕೇಂದ್ರಕ್ಕೆ ಅಲೆದಾಡು ವಂತಾಗಿದೆ. ಒಂದು ದಿನ ರಾಗಿ ಖರೀದಿ ಕೇಂದ್ರಕ್ಕೆ ಒಬ್ಬ ರೈತ ಬಂದು ಹೋಗಲು ನೂರು ರೂ. ಬೇಕಾಗುತ್ತದೆ. ಹಾಗಾಗಿ ರೈತರು ಸಿಕ್ಕಿದಷ್ಟು ಬೆಲೆಗೆ ಖಾಸಗಿ ವ್ಯಾಪಾರಿಗಳಿಗೆ ಮಾರಿದ್ದರೆ ಕೈ ಮೇಲೆ ದುಡ್ಡು ಕೊಡುತ್ತಿದ್ದರು. ಆದರೆ, ಸರ್ಕಾರ ನಂಬಿ ರಾಗಿ ಮಾರಿ 3-4 ತಿಂಗಳು ಅಲೆಯ ಬೇಕಾಗಿರುವುದು ಯಾವ ನ್ಯಾಯ. ರೈತನಿಗೆ ಬೇರೆ ಆದಾಯ ಇಲ್ಲವಾಗಿದ್ದು, ಮಾರಿರುವ 8-10 ಕ್ವಿಂಟಲ್ ರಾಗಿಗೂ ಸರ್ಕಾರ ನಮ್ಮನ್ನು ಅಲೆದಾಡಿಸುತ್ತಿರುವುದು ನೋಡಿದರೆ ರೈತರ ಮೇಲೆ ಕಾಳಜಿಯೇ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿಯಲ್ಲಿ ರಾಗಿ ಬೆಲೆ ಕ್ವಿಂಟಲ್‌ಗೆ 2500 ರೂ. ಇದ್ದು, ಮಾರಿದ ತಕ್ಷಣವೇ ಹಣ ನೀಡುತ್ತಾರೆ. ಆದರೆ, ಈ ಬೆಲೆ ನಮಗೆ ನಷ್ಟ ಎಂದು ಸರ್ಕಾರಕ್ಕೆ 2970 ರೂ.ಗೆ ವಾರಗಟ್ಟಲೆ ಅಲೆದು ರಾಗಿ ಮಾರಿ ಹಣಕ್ಕಾಗಿ ತಿಂಗಳುಗಟ್ಟಲೆ ಕಾಯುವ ಸ್ಥಿತಿ ಬಂದಿದೆ. 1 ಕ್ವಿಂಟಲ್‌ ರಾಗಿ ಬೆಳೆಯಲು 4 ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತಿದ್ದು, ಸರ್ಕಾರಕ್ಕೆ ಕೇವಲ 2970 ರೂ.ಗಳಿಗೆ ಮಾರಿದರೂ ಹಣ ಸಿಗಲು ಕಾಯಬೇಕಾಗಿದೆ. ನೀತಿ ಸಂಹಿತೆಗೂ ನಾವು ಮಾರಿರುವ ರಾಗಿ ಹಣಕ್ಕೂ ಯಾವ ಸಂಬಂಧವಿದೆ.
●ಕೈಲಾಸಸ್ವಾಮಿ, ಮಾರುಗೊಂಡನಹಳ್ಳಿ ರೈತ
ಹಣ ಜಮಾ ಮಾಡದಿದ್ದರೆ ಪ್ರತಿಭಟನೆ ರೈತರು ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದ ರಾಗಿಯನ್ನು ತಮ್ಮ ದೈನಂದಿನ ಕಷ್ಟ ಗಳನ್ನು ತೀರಿಸಿಕೊಳ್ಳುವ ಸಲುವಾಗಿ ಹಗಲು  ರಾತ್ರಿ ಖರೀದಿ ಕೇಂದ್ರದ ಮುಂದೆ ಕಾಯ್ದು ಕುಳಿತು ರಾಗಿ ಮಾರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ. ವರ್ಷವೆಲ್ಲಾ ಬಂಡ ವಾಳ ಮತ್ತು ಶ್ರಮ ಹಾಕಿ ಬೆಳೆದ ರಾಗಿಯನ್ನು ಕೊಂಡುಕೊಂಡ ನಿಗಮ ರೈತರ ಖಾತೆಗಳಿಗೆ ಹಣ ಜಮಾ ಮಾಡದೆ, ತಮ್ಮ ಕೆಲಸದಲ್ಲಿ ಉದಾಸೀನತೆ ತೋರಿದ್ದಾರೆ. ಕೂಡಲೇ ಹಣ ಜಮಾ ಆಗದ ರೈತರ ವಿವರಗಳನ್ನು ಕಲೆ ಹಾಕಿ, ರಾಗಿ ಖರೀದಿ ಮಾಡಿರುವ ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡಬೇಕು. ಇಲ್ಲ ವಾದಲ್ಲಿ ರೈತರ ಜೊತೆ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದು ಎಂದು ಜೆಡಿಎಸ್‌ ಮುಖಂಡ ಲೋಕೇಶ್ವರ ತಿಳಿಸಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

  • ತುಮಕೂರು: ಜಿಲ್ಲಾ ವ್ಯಾಪ್ತಿಯಲ್ಲಿರುವ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು ಎಂದು ಲೋಕೋಪ ಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ...

  • ತುಮಕೂರು: ಲೋಕ ಸಮರ ಮುಗಿಯಿತು. ಫ‌ಲಿತಾಂಶವೂ ಬಂದಿದ್ದು, ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿ.ಎಸ್‌.ಬಸವರಾಜ್‌ ಗೆಲುವಿನ ನಗೆ ಬೀರಿದ್ದಾರೆ....

  • ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿ ಸಂಸತ್‌ಗೆ ಪ್ರವೇಶ ಮಾಡುತ್ತಿರುವ ಸಂಸದ ಜಿ.ಎಸ್‌.ಬಸವರಾಜ್‌ ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ...

  • ಕೊರಟಗೆರೆ: ತುಮಕೂರು ಜಿಲ್ಲೆಯಲ್ಲಿ ಬರದ ತಾಲೂಕುಗಳ ಪಟ್ಟಿಯಲ್ಲಿರುವ ಕೊರಟಗೆರೆ ತಾಲೂಕು ಕುಡಿಯುವ ನೀರಿನ ಮೂಲ ಶೇ.99ರಷ್ಟು ಭಾಗ ಕೊಳವೆ ಬಾವಿಗಳನ್ನೇ ನಂಬಿ...

  • ತುಮಕೂರು: ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದ ದಲಿತ ಕುಟುಂಬಕ್ಕೆ ಮೇಲ್ವರ್ಗಕ್ಕೆ ಸೇರಿದಂತೆ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿರುವು ದರಿಂದ ಬೇಸತ್ತು,...

ಹೊಸ ಸೇರ್ಪಡೆ