ರಮೇಶ್‌ಗೌಡ ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

Team Udayavani, Apr 25, 2019, 4:48 PM IST

ತುಮಕೂರು: ಶ್ರೀಲಂಕಾದಲ್ಲಿ ಭಾನು ವಾರ ನಡೆದ ಬಾಂಬ್‌ ಸ್ಫೋಟದಲ್ಲಿ ತುಮಕೂರಿನ ಸ್ವರಸ್ಪತಿ ಪುರಂನ ಉದ್ಯಮಿ ಎಲ್.ರಮೇಶ್‌ಗೌಡ ರವರ ಪಾರ್ಥಿವ ಶರೀರ ನಗರದ ಅವರ ನಿವಾಸಕ್ಕೆ ತರುತ್ತಲೇ ಅವರ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ರಮೇಶ್‌ಗೌಡರ ಮೃತದೇಹ ಬುಧವಾರ ಸಂಜೆ ಅವರ ತುಮಕೂರಿನ ಸರಸ್ವತಿಪುರಂ ಮನೆಗೆ ಆಗಮಿಸಿತು. ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಗಮಿಸಿ, ರಮೇಶ್‌ಗೌಡ ಮೃತದೇಹವನ್ನು ಎಕ್ಸ್‌ಕಾರ್ಟ್‌ ಮೂಲಕ ನೆಲಮಂಗಲ ಮಾರ್ಗವಾಗಿ ತುಮಕೂರಿಗೆ ಸಂಜೆ 5-30ರ ವೇಳೆಗೆ ತಲುಪಿತು.ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಜಿಲ್ಲಾಡಳಿತ ವತಿಯಿಂದ ತಹಶೀಲ್ದಾರ್‌ ನಾಗರಾಜ್‌, ಶಿರ‌ಸ್ತೇದಾರ ಜಯ ಪ್ರಕಾಶ್‌, ಡಾ. ಎಸ್‌.ಶರತ್‌ಚಂದ್ರ ಅವರು ತುಮಕೂರು ಸರಸ್ವತಿ ಪುರಂ ನಲ್ಲಿರುವ ಅವರ ನಿವಾಸಕ್ಕೆ ತರಲಾಗಿತ್ತು. ತಾಯಿ ರತ್ನಮ್ಮ, ಪತ್ನಿ ಮಂಜುಳಾ, ಮಗಳು ದೀಕ್ಷಾ, ಮಗ ಶೋಭಿತ್‌, ಸಹೋದರ ಪ್ರಕಾಶ್‌ ಸೇರಿ ದಂತೆ ಅವರ ಕುಟುಂಬದವರು, ಸ್ನೇಹಿ ತರು ಸೇರಿದಂತೆ ಅವರ ಬಂಧುಗಳ ರೋದನೆ ಹೆಚ್ಚಾಗಿತ್ತು.

ದುಬೈಗೆ ಹೋಗುತ್ತೇನೆ ಅಮ್ಮ ..
ರಮೇಶ್‌ಗೌಡ ಲೋಕಸಭಾ ಚುನಾವಣೆ ಮುಗಿಸಿಕೊಂಡು ಪ್ರವಾಸ ಮಾಡಲು ಶ್ರೀಲಂಕಾಕ್ಕೆ ತೆರಳಿದಿದ್ದರು. ಆದರೆ, ಶ್ರೀಲಂಕಾದಲ್ಲಿ ಸಂತಸದಿಂದ ಪ್ರವಾಸ ಮಾಡುವ ಮೊದಲೇ ಭಯೋತ್ಪಾದಕರ ಬಾಂಬ್‌ ಸ್ಫೋಟಕ್ಕೆ ಬಲಿಯಾಗಿದ್ದಾರೆ. ರಾಜ್ಯದಿಂದ ಪ್ರವಾಸಕ್ಕೆ ತೆರಳಿದ 7 ಜನರಲ್ಲಿ ಸರಸ್ವತಿಪುರಂ ನಿವಾಸಿ ರಮೇಶ್‌ ಗೌಡ ಒಬ್ಬರಾಗಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ಗೌಡರ ತಾಯಿ ರತ್ನಮ್ಮ, ತನ್ನ ಒಡಲ ನೋವನ್ನು ತೊಡಿಕೊಂಡು ನನ್ನ ಮಗನಿಗೆ ಇಬ್ಬರು ಮಕ್ಕಳು ಇಬ್ಬರು ಮಕ್ಕಳೂ ತಬ್ಬಲಿಯಾಗಿ ಬಿಟ್ಟರು ಎಂದು ಕಣ್ಣೀರು ಹಾಕಿದ್ದು ಎಂಥವರ ಮನ ಕಲಕುತ್ತಿತು. ದುಬೈಗೆ ಹೋಗುತ್ತೇನೆ ಅಮ್ಮ ಎಂದು ಹೇಳಿ ಶ್ರೀಲಂಕಾಗೆ ಹೋಗಿದ್ದಾನೆ. ಶನಿವಾರ 3ಗಂಟೆಗೆ ಮನೆ ಬಿಟ್ಟವನು, ಸಂಜೆ 7ಗಂಟೆಗೆ ಅಲ್ಲಿ ತಲುಪಿದ್ದ, ಅದು ಆದ ಮೇಲೆ ಒಮ್ಮೆಯೂ ಕರೆ ಮಾಡಲಿಲ್ಲ ಎಂದು ಕಣ್ಣೀರು ಹಾಕಿದರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌, ಸಚಿವ ಎಸ್‌.ಆರ್‌.ಶ್ರೀನಿವಾಸ್‌, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಶಾಸಕ ಜಿ.ಬಿ.ಜ್ಯೋತಿ ಗಣೇಶ್‌, ಸೇರಿದಂತೆ ಅಪರ ಬಂಧುಮಿತ್ರರು, ಸಾರ್ವಜನಿಕರು ಅವರ ಅಂತಿಮ ದರ್ಶನ ಪಡೆದರು. ಶ್ರೀಲಂಕಾದಲ್ಲಿ ನಡೆದ ಕೃತ್ಯ ಇಡೀ ವಿಶ್ವವೇ ಖಂಡಿಸುತ್ತಿದೆ. ಇಂಥ ಘಟನೆ ಎಲ್ಲಿಯೂ ನಡೆಯಬಾರದು. ವಿಧ್ವಂಸಕ ಕೃತ್ಯ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು. ರಮೇಶ್‌ ಗೌಡ ಆತ್ಮಕ್ಕೆ ಶಾಂತಿ ಸಿಗಲಿಮ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

ತುಮಕೂರಿನ ಸರಸ್ವತಿ ಪುರಂನಿಂದ ಮೃತದೇಹವನ್ನು ಕುಣಿಗಲ್ನ ಅವರ ನಿವಾಸದಲ್ಲಿ ಸ್ವಲ್ಪ ಸಮಯ ಸಾರ್ವ ಜನಿಕರ ದರ್ಶನಕ್ಕಿಟ್ಟು ಅಲ್ಲಿಂದ ನಾಗಮಂಗಲ ತಾಲೂಕು ಬೆಳ್ಳೂರು ಹೋಬಳಿಯ ಅವರ ಸ್ವಗ್ರಾಮವಾದ ಬೆಟ್ಟದ ಕೋಟೆಯಲ್ಲಿ ಅಂತ್ಯಕ್ರಿಯೆ ಮೃತ ರಮೇಶ್‌ಗೌಡನ ತಂದೆಯ ಸಮಾಧಿ ಪಕ್ಕದಲ್ಲಿ ನೆರವೇರಿತು.


ಈ ವಿಭಾಗದಿಂದ ಇನ್ನಷ್ಟು

  • ತಿಪಟೂರು: ನಗರದ ಗಾಂಧಿನಗರದ ಬೋವಿ ಕಾಲೋನಿ ರಸ್ತೆಯು ಮಳೆಯಿಂದ ಕೊಚ್ಚೆ ಗುಂಡಿಯಾಗಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದಷ್ಟು...

  • ಬರಗೂರು: ಹುಲಿಕುಂಟೆ ಹೋಬಳಿ ದೊಡ್ಡಬಾಣಗೆರೆ ಗ್ರಾಮದ ದಲಿತ ಕಾಲೋನಿಯ ಜನತೆ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದರೂ ಸಂಬಂಧ ಪಟ್ಟವರು ಗಮನಹರಿಸದಿರುವುದರಿಂದ...

  • ಚಿಕ್ಕನಾಯಕನಹಳ್ಳಿ: ತಾಲೂಕಿನ ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಪಾಳ್ಯದ ಪ್ರಾಥಮಿಕ ಶಾಲೆಯ ಛಾವಣಿ ಹಾಗೂ ಕಂಬ ಕುಸಿದು ಬಿದ್ದಿದ್ದು, ಅದೃಷ್ಟವಶಾತ್‌...

  • ಚಿಕ್ಕನಾಯಕನಹಳ್ಳಿ: ಪಟ್ಟಣದ ಸಮೀಪದ ಹೊನ್ನೇಭಾಗಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮಸಾಲ್ತಿ ಗುಡ್ಲು ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಇಲ್ಲದೇ ಗ್ರಾಮಸ್ಥರು ಸಾಂಕ್ರಾಮಿಕ...

  • ಕೊರಟಗೆರೆ: ಎಚ್‌ಐವಿ ಸೋಂಕು ತಡೆಗಟ್ಟುವಲ್ಲಿ ಯುವಜನತೆ ಪಾತ್ರ ಅತಿ ಮುಖ್ಯವಾಗಿದೆ. ಆರೋಗ್ಯವಂತೆ ಸಮಾಜವನ್ನು ನಿರ್ಮಿಸ ಬೇಕಾದರೆ ಪ್ರತಿಯೊಬ್ಬರೂ ಈ ಮಾರಕ ರೋಗದ...

ಹೊಸ ಸೇರ್ಪಡೆ

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫ‌ಸಲು ಕೊಯ್ಯುತ್ತಿದ್ದ....

  • ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ. ದಕ್ಷಿಣಭಾರತದವರಿಗೆ...

  • ನಗರದ ಕೇಂದ್ರ ಭಾಗವಾದ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಬಸ್‌ ನಿಲುಗಡೆಗೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ....