ಮಾವನಿಂದ ಅತ್ಯಾಚಾರ: ಬಾಲಕಿ ಗರ್ಭಿಣಿ
Team Udayavani, Jul 3, 2017, 3:45 AM IST
ಕೊರಟಗೆರೆ: ಸ್ವಂತ ಮಾವನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿಯೊಬ್ಬಳು 8 ತಿಂಗಳ ಗರ್ಭಿಣಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಗಂಟಿಗಾನಹಳ್ಳಿ ಗ್ರಾಮದ ನಾರಾಯಣಪ್ಪನ ಪುತ್ರ ಮಹೇಂದ್ರ ಬಾಬು(24) ಅತ್ಯಾಚಾರವೆಸಗಿದವ. ಕೊರಟಗೆರೆ ಪಟ್ಟಣದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದಿದ್ದ ಬಾಲಕಿ ಹದಿನೈದು ದಿನಕ್ಕೊಮ್ಮೆ ಗಂಟಿಗಾನ ಹಳ್ಳಿಯ ಅಜ್ಜಿಯ ಮನೆಗೆ ತೆರಳುತ್ತಿದ್ದಳು ಎನ್ನಲಾಗಿದೆ.
ಅಜ್ಜಿ ಮನೆಗೆ ತೆರಳಿದ್ದ ವೇಳೆ, 8 ತಿಂಗಳ ಹಿಂದೆ ಗಂಟಿಗಾನಹಳ್ಳಿ ಗ್ರಾಮದ ಹೊರವಲಯದ ಕಣಾÌ ಗಾರ್ಮೆಂಟ್ಸ್
ಸಮೀಪವಿರುವ ಜಮೀನಿನ ಮನೆಯಲ್ಲಿ ಮಹೇಂದ್ರಬಾಬು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಕೆಲ ದಿನಗಳಿಂದ ಬಾಲಕಿ ತನ್ನ ಪಾಲಕರಿಗೆ ಹೊಟ್ಟೆ ನೋವಿನ ವಿಷಯ ತಿಳಿಸಿದ್ದಾಳೆ. ಪಾಲಕರು ಮಗಳಿಗೆ ಚಿಕಿತ್ಸೆ ಕೊಡಿಸಲು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಕರೆತಂದ ವೇಳೆ ಬಾಲಕಿ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಕೊರಟಗೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿ