ದಲಿತ ಕುಟುಂಬಕ್ಕೆ ರಕ್ಷಣೆ ನೀಡಲು ಡೀಸಿಗೆ ಮನವಿ

ನೊಂದ ದಲಿತ ಕುಟುಂಬಕ್ಕೆ ಜಮೀನಿನಲ್ಲೇ ವಾಸಿಸಲು ಅವಕಾಶ ಮಾಡಿಕೊಡಿ: ವಿವಿಧ ದಲಿತ ಸಂಘಟನೆ

Team Udayavani, May 25, 2019, 5:41 PM IST

ದಲಿತ ಕುಟುಂಬಕ್ಕೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ಕೋರಿ ವಿವಿಧ ದಲಿತ ಸಂಘಟನೆಗಳು ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿದರು.

ತುಮಕೂರು: ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದ ದಲಿತ ಕುಟುಂಬಕ್ಕೆ ಮೇಲ್ವರ್ಗಕ್ಕೆ ಸೇರಿದಂತೆ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿರುವು ದರಿಂದ ಬೇಸತ್ತು, ದಲಿತ ಕುಟುಂಬ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆ ದಲಿತ ಕುಟುಂಬಕ್ಕೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ಕೋರಿ ವಿವಿಧ ದಲಿತ ಸಂಘಟನೆಗಳು ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿದರು.

ಕೊರಟಗೆರೆ ತಾಲೂಕು ಸಿಎನ್‌ ದುರ್ಗ ಹೋಬಳಿ ಬುಕ್ಕಾಪಟ್ಟಣ ಸರ್ವೆ ನಂಬರ್‌ 207ರ 3 ಎಕರೆ 15 ಕುಂಟೆ ಜಮೀನು ಪ್ರಸ್ತುತ ನ್ಯಾಯಾ ಲಯದಲ್ಲಿದೆ. ಉಚ್ಛ ನ್ಯಾಯಾಲಯ, ಲೋಕಾ ಯುಕ್ತ ನ್ಯಾಯಾಲಯ ಹಾಗೂ ಅನುಸೂಚಿತ ಜಾತಿ ವರ್ಗಗಳ ನ್ಯಾಯಾಲಯದಲ್ಲಿ ಪ್ರಕರಣ ವಿದ್ದು, ಅಲ್ಲಿಯೇ ಆ ಜಾಗದಲ್ಲಿ ಮನೆ ಕಟ್ಟಿ ಕೊಂಡು ವಾಸ ಮಾಡುತ್ತಿದ್ದಾರೆ. ಆದರೆ ಮೇಲ್ವರ್ಗದ ಮಹದೇವ್‌ ಅವರು ಕೆಲ ಸರ್ಕಾರಿ ಅಧಿಕಾರಿಗಳೊಂದಿಗೆ ಸೇರಿ ಮನೆ ಹಾಗೂ ಜಮೀನು ಸ್ವಾಧೀನ ಬಿಟ್ಟುಕೊಡಬೇಕು. ಇಲ್ಲದೇ ಹೋದಲ್ಲಿ ಮನೆಯನ್ನು ಜೆಸಿಬಿಯಿಂದ ಉರುಳಿಸುವುದಾಗಿ ದಲಿತ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದು, ದಲಿತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಖಾಸಗಿ ವ್ಯಕ್ತಿಗಳ ಕಿರುಕುಳದಿಂದ ಆ ಕುಟುಂಬಕ್ಕೆ ತೊಂದರೆ ಯಾದ್ದಲ್ಲಿ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.

ಪ್ರಕರಣ ಇತ್ಯರ್ಥಗೊಳಿಸಿ: ಜಿಲ್ಲಾಧಿಕಾರಿಗಳು ಪ್ರಕರಣ ಇತ್ಯರ್ಥವಾಗುವವರೆಗೂ ಆ ನೊಂದ ದಲಿತ ಕುಟುಂಬಕ್ಕೆ ಜಮೀನಿನಲ್ಲೇ ವಾಸಿಸಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ದಲಿತಪರ ಸಂಘಟನೆಗಳು ಸೇರಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ದಲಿತ ಸಂಘಟನೆ ಗಳು ಎಚ್ಚರಿಕೆ ನೀಡಿದ್ದು, ದಲಿತ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ಎಂ.ವಿಜಯ್‌ಕೃಷ್ಣ ಹಾಗೂ ಅವರ ಸಹಚರರ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಮರು ಮಂಜೂರಿಗೆ ಕ್ರಮ ಕೈಗೊಳ್ಳಿ: ಕೊರಟಗೆರೆ ತಾಲೂಕಿನಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ಸರ್ಕಾರದಿಂದ ಮಂಜೂರಾಗಿ ರುವ ಜಮೀನುಗಳನ್ನು ಊ.ಮಹಾದೇವ್‌ ಹಾಗೂ ಒ.ವಿಜಯಕೃಪ¡ ಅವರು ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಬಲವಂತದಿಂದ ಕ್ರಯಕ್ಕೆ ಪಡೆ ದಿದ್ದು, ಅಕ್ರಮವಾಗಿ ದಲಿತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿರುವ ಇವರ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ಕ್ರಮ ತೆಗೆದುಕೊಂಡು, ಮೂಲ ಮಂಜೂರುದಾರರಿಗೆ ಮರು ಮಂಜೂರು ಮಾಡಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ದಲಿತ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳದೇ ಹೋದರೆ, ಜಿಲ್ಲಾದ್ಯಂತ ದಲಿತ ಸಂಘಟನೆಗಳು ಹೋರಾಟ ರೂಪಿಸಲಾಗುತ್ತದೆ ಎಂದು ದಲಿತ ಸಂಘಟನೆಗಳ ಮುಖಂಡರಾದ ಜಟ್ಟಿ ಅಗ್ರಹಾರ ನಾಗರಾಜು, ಕೆ.ಎಚ್.ಶಿವಕುಮಾರ್‌, ಎ.ನಾಗೇಶ್‌, ಸಿ.ಮಹಾಲಿಂಗಯ್ಯ, ಯೋಗೀಶ್‌ ಸೋರೆ ಕುಂಟೆ, ಟಿ.ಸಿ.ರಾಮಯ್ಯ, ಗೂಳಹರಿವೆ ನಾಗ ರಾಜು, ಜೆಸಿಬಿ ವೆಂಕಟೇಶ್‌, ರಾಮಾಂಜಿನಪ್ಪ ಸೇರಿದಂತೆ ಇತರರು ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಶಿರಾ: ಆಸ್ಟ್ರೇಲಿಯಾದಲ್ಲಿ ಎಂಬಿಎ, ಎಂಐಟಿ ವ್ಯಾಸಂಗ ಮಾಡಿ ಕೈ ತುಂಬಾ ಸಂಪಾದಿಸುವ ಕೆಲಸ ತೊರೆದು ಹೈನುಗಾರಿಕೆಯಲ್ಲಿ ಯಶಸ್ಸು ಕಂಡಿದ್ದಾರೆ ಯುವ ರೈತ ಆಶೀಶ್‌...

  • ತುಮಕೂರು: ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ಅಪಾರ ಹಾನಿಯುಂಟಾಗಿ, ಸಾವಿರಾರು ಜನ ಮನೆ, ಮಠ ಕಳೆದುಕೊಂಡು 35,500 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದ್ದರೂ, ರಾಜ್ಯದಿಂದ...

  • ತಿಪಟೂರು: ಜನರ ನೋವಿಗೆ ಸ್ಪಂದಿಸುವುದೇ ನಿಜ ಧರ್ಮ. ಹೀಗೆ ನೊಂದವರ ಕಣ್ಣೀರೊರೆಸುವ ಕಾರ್ಯ ಮಾಡುವ ಮೂಲಕ ಧರ್ಮ ಪರಿಪಾಲಿಸಿಕೊಂಡು ಬರುತ್ತಿರುವ ಶ್ರೀ ಕಾಡಸಿದ್ಧೇಶ್ವರ...

  • ಹುಳಿಯಾರು: ಜಿಲ್ಲೆಯಲ್ಲೆ ಅತೀ ಹೆಚ್ಚು ರಾಗಿ ಬೆಳೆಯುವ ಪ್ರದೇಶವೆಂದು ಹೆಸರಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ...

  • ತುರುವೇಕೆರೆ: ರಾಜ್ಯದ ವಿವಿಧ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕೂಡಲೇ ಕಾಯಂಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು...

ಹೊಸ ಸೇರ್ಪಡೆ