ಬ್ಯಾಂಕ್‌ ವ್ಯವಸ್ಥಾಪಕರ ವರ್ಗಾಯಿಸಲು ಆಗ್ರಹ

Team Udayavani, Sep 27, 2019, 6:02 PM IST

ಪಾವಗಡ: ಅನವಶ್ಯಕ ದಾಖಲೆ ಕೇಳಿ ರೈತರಿಗೆ ಬ್ಯಾಂಕ್‌ ಅಧಿಕಾರಿ ಕಿರುಕುಳ ನೀಡುತ್ತಿದ್ದ, ಕೂಡಲೇ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಚನ್ನಕೇಶವಪುರ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಶಾಖೆ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಬೆಳೆ ಸಾಲ ನವೀಕರಣ ಮಾಡಲು 14 ವರ್ಷದ ಪಹಣಿ ಕೇಳುತ್ತಿದ್ದು, ಎರಡು- ಮೂರು ದಿನ ವಿಳಂಬವಾದರೆ ದಾಖಲೆ ತೆಗೆದುಕೊಳ್ಳುವುದಿಲ್ಲ. ನಾನು ಹೇಳಿದ ದಿನವೇ ತರಬೇಕು ಎಂದು ದರ್ಪ ತೋರಿಸಿ ರೈತರನ್ನು ವಾಪಸ್‌ ಕಳುಹಿಸುತ್ತಿದ್ದಾರೆ ಎಂದು ದೂರಿದರು.

ತಾಲೂಕಿನ ಯಾವುದೇ ಬ್ಯಾಂಕ್‌ಗಳಲ್ಲಿ ಇಲ್ಲದ ಹೊಸ ನಿಯಮ ಇಲ್ಲಿದೆ. ಆದ್ದರಿಂದ ಕನ್ನಡ ಭಾಷೆ ತಿಳಿಯದ ಹಾಗೂ ಅನನುಭವಿ ಮ್ಯಾನೇಜರನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಕೃಷ್ಣಮೂರ್ತಿ ಕನ್ನಮೇಡಿ ಮಾತನಾಡಿ, ಬ್ಯಾಂಕ್‌ ವ್ಯವಸ್ಥಾಪಕರು ರೈತರನ್ನು ಗೌರವದಿಂದ ಕಾಣಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತರಿಗೆ ಸೂಕ್ತವಾಗಿ ಸ್ಪಂದಿಸುವುದಾಗಿ ವ್ಯವಸ್ಥಾಪಕರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ನಂತರ ಪೂಜಾರಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ರೈತರಾದ ತಿಮ್ಮಪ್ಪ, ಬೋಡಪ್ಪ, ಚಂದ್ರಪ್ಪ, ಉಗ್ರಪ್ಪ, ನರಸಣ್ಣ, ರಾಮಚಂದ್ರಪ್ಪ, ಪರಮೇಶ್ವರ ನಾಯಕ, ರಾಮಾಂಜಿ, ತಿಪ್ಪಣ್ಣ, ವೆಂಕಟೇಶ್‌ ಇತರರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ