Udayavni Special

ಹಿಂದುಳಿದ ವರ್ಗಗಳ ಹಕ್ಕು ಕಬಳಿಕೆಯ ಹುನ್ನಾರ

ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯ ಕುಮಾರ್‌ ಆರೋಪ

Team Udayavani, Aug 21, 2021, 6:01 PM IST

ಹಿಂದುಳಿದ ವರ್ಗಗಳ ಹಕ್ಕು ಕಬಳಿಕೆಯ ಹುನ್ನಾರ

ಕುಣಿಗಲ್‌: ಸಂವಿಧಾನದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಹಕ್ಕುಗಳನ್ನು ಬಲಾಡ್ಯ ಜಾತಿಗಳು ಕಬಳಿಸಲು ಹುನ್ನಾರ ನಡೆಸಿವೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟಗಳ ಸಂಚಾಲಕ ಧನಿಯಕುಮಾರ್‌ ಆರೋಪಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಜನಾಂಗಗಳ ಹಕ್ಕುಗಳನ್ನು ಹಾಗೂ ಸೌಲಭ್ಯಗಳನ್ನು ಪ್ರಭಾವಿ ನಾಯಕರಿಂದ ಕಸಿದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಹೋರಾಟ ಅನಿವಾರ್ಯವಾಗಿದೆ. ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷವಾದರೂ, ಮಡಿವಾಳ, ಬೆಸ್ತ, ಅರಸ, ತಿಗಳ,ಕುಂಬಾರ, ಸವಿತಾ ಸಮಾಜ, ವಿಶ್ವಕರ್ಮ, ಕುರುಬ, ಉಪ್ಪಾರ, ದೇವ ಜನಾಂಗ, ಗೊಲ್ಲ, ಈಡಿಗ, ದೊಂಬಿದಾಸ, ಅಕ್ಕಿಪಿಕ್ಕಿ ಸೇರಿದಂತೆ ಇತರೆ ನೂರಾರು ಸಣ್ಣ ಜಾತಿಗಳ ವರ್ಗ ದವರಿಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯದಲ್ಲಿ ಅನ್ಯಾಯವಾಗಿದೆ ಎಂದು ದೂರಿದರು.

ಸಣ್ಣಪುಟ್ಟ ಜಾತಿಗಳಿಗೆ ಅನ್ಯಾಯ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನರು ಶೇ. 63ರಷ್ಟು ಜನ ಸಂಖ್ಯೆ ಇದ್ದರೂ, ಕೇವಲ ಶೇ.6ರಷ್ಟು ಸಂಖ್ಯೆ
ಇರುವ ಮೇಲ್ವರ್ಗದ ಪಂಚಮಸಾಲಿ ಲಿಂಗಾಯಿತರು, ಕುಂಚಿಟಿಗ ಒಕ್ಕಲಿಗ ಸಮುದಾಯವು ಹಿಂದುಳಿದ ವರ್ಗದ 2 ಎಗೆ ಸೇರಿಸುವಂತೆ ಒತ್ತಾ
ಯಿಸುತ್ತಿದ್ದಾರೆ. ಒಂದು ವೇಳೆ 2ಎಗೆ ಮೇಲ್ವರ್ಗ ದವರನ್ನು ಮೀಸಲಾತಿ ಪಟ್ಟಿಗೆ ಸೇರಿಸಿದರೆ, ಸಣ್ಣಪುಟ್ಟ ಜಾತಿಗಳಿಗೆ ಅನ್ಯಾಯವಾಗುತ್ತದೆ.
ಹೀಗಾಗಿ, ಈ ಧೋರಣೆಯನ್ನು ಖಂಡಿಸಿ ಈಗಾಗಲೇ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಸಂಘಟನೆ ನಡೆಯುತ್ತಿದ್ದು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಬೃಹತ್‌ ಸಭೆ ನಡೆದಿದ್ದು, ಆ. 21ರ ಶನಿವಾರ ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಭೆ ನಡೆಯಲಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ತಮ್ಮ ಹಕ್ಕು ಜಾಗೃತಿಗಾಗಿ ಹೋರಾಟ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ:ಪ್ರಭಾಸ್‍ ಅವರನ್ನು ಮದುವೆ ಆಗ್ತಾರಂತೆ ಈ ಬಾಲಿವುಡ್ ನಟಿ

ಪ್ರಸ್‌ ರಾಜಣ್ಣ ಮಾತನಾಡಿ, ನಮ್ಮ ಹೋರಾಟ ರಾಜಕೀಯ ರಹಿತವಾಗಿದೆ. ಹಿಂದುಳಿದ ವರ್ಗದವರ ಹಿತಕ್ಕಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಹಿಂದುಳಿದ ಸಮುದಾಯದ ಡಿ.ದೇವರಾಜ ಅರಸು, ಎಸ್‌.ಬಂಗಾರಪ್ಪ ಹಾಗೂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗ ಹಾಗೂ ದಲಿತರ ಅಭಿವೃದ್ಧಿಗೆ ಆನೇಕ ಯೋಜನೆ ಜಾರಿಗೆ ತಂದು ಈ
ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.

ಜಿಪಂ ಮಾಜಿ ಸದಸ್ಯ ದೊಡ್ಡಯ್ಯ, ತಾಪಂ ಮಾಜಿ ಅಧ್ಯಕ್ಷ ಎಸ್‌.ಆರ್‌.ಚಿಕ್ಕಣ್ಣ, ಎಂಜಿನಿಯರ್‌ ನಟರಾಜು, ಶ್ರೀನಿವಾಸ್‌, ಚಂದ್ರಶೇಖರ್‌ಗೌಡ, ಟಿ.ಎನ್‌.ಮಧುಕರ್‌, ಸುರೇಶ್‌, ಶ್ರೀನಿವಾಸ್‌ರಾವ್‌ ಸಿಂಧೆ,ಕುಮಾರ್‌, ಸೈಯದ್‌ ಶಹಬಾಸ್‌ ಇದ್ದರು.

ಮೀಸಲಾತಿಯಲ್ಲಿ ಅನ್ಯಾಯ
ವಿದ್ಯಾರ್ಥಿ ನಿಲಯಗಳು ಅವನತಿ ಸ್ಥಿತಿಗೆ ತಲುಪುತ್ತಿವೆ. ಜಿಪಂ ಹಾಗೂ ತಾಪಂನ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಶೇ. 6ರಷ್ಟು ಇರುವ ಲಿಂಗಾಯಿತ ವೀರಶೈವರಿಗೆ ಎಂಟು, ಒಕ್ಕಲಿಗ ಸಮುದಾಯಕ್ಕೆ ಏಳು ಹಾಗೂ ಶೇ. 63ರಷ್ಟು ಇರುವ ಹಿಂದುಳಿದ ವರ್ಗದವರಿಗೆ ಕೇವಲ 7 ಸಚಿವ ಸ್ಥಾನ ನೀಡಲಾಗಿದೆ. ಲಿಂಗಾ ಯಿತ, ಒಕ್ಕಲಿಗ ನಿಗಮ ಸ್ಥಾಪಿಸಿ ತಲಾ 500 ಕೋಟಿ ಮೀಸಲಿಟ್ಟಿದ್ದಾರೆ. ಆದರೆ, ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆಗೆ ಅನುದಾನ ನೀಡದೇ ಇರುವುದು ವಿಪರ್ಯಾಸವೇ ಸರಿ ಎಂದು ಪ್ರಸ್‌ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

hgjhjhgf

SAARC ಸಭೆಯಲ್ಲಿ ತಾನಿಬಾನ್ ಭಾಗವಹಿಸುವಂತೆ ಪಾಕ್ ಮನವಿ : ಸಭೆಯೇ ರದ್ದು

GJGHJKHGF

ಕನ್ನಡ ಸಿನಿಮಾ ಮಾಡಲು ರಶ್ಮಿಕಾಗೆ ಟೈಮ್‌ ಇಲ್ವಂತೆ!

Untitled-1

ಇ-ಸಂಜೀವಿನಿ: ಕರ್ನಾಟಕ ದ್ವಿತೀಯ

Untitled-1

#IPL2021.. ಮ್ಯಾಜಿಕ್‌ ಮಾಡಿದ ತ್ಯಾಗಿ : ರಾಜಸ್ಥಾನ್‌ ಗೆ 2 ರನ್‌ ಜಯ

Untitled-1

ಮಕ್ಕಳಿಗೆ ಅಕ್ಕನ ಅಕ್ಕರೆಯ ಮನೆ ಪಾಠ!

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

Untitled-1

ಒಂದೇ ಸೂರಿನಡಿ ಜುವೆಲರಿ ಸೇವೆ: ರಾಜ್ಯದಲ್ಲಿ ಜುವೆಲರಿ ಪಾರ್ಕ್‌ ನಿರ್ಮಾಣಕ್ಕೆ ಚಿಂತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಲ್ಲೆಯಲ್ಲಿ ಕಾಡುತ್ತಿವೆ ಸಾಂಕ್ರಾಮಿಕ ರೋಗ

ಜಿಲ್ಲೆಯಲ್ಲಿ ಕಾಡುತ್ತಿವೆ ಸಾಂಕ್ರಾಮಿಕ ರೋಗ

thumakuru news

ಉದ್ಯೋಗಕ ಕೌಶಲ್ಯ, ತರಬೇತಿ ಸಹಕಾರಿ

women

ಸ್ತ್ರೀಯರ ಸ್ವಯಂ ರಕ್ಷಣೆಗೆ ಮಾರ್ಗದರ್ಶನ ನೀಡಿ

ಹಿರಿಯ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆ ಸೌಂದರ್ಯ ಹೆಚ್ಚಳ

ಹಿರಿಯ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆ ಸೌಂದರ್ಯ ಹೆಚ್ಚಳ

ರೈತರಿಗಾಗಿ ಹಳ್ಳಿಗಳತ್ತ ಪಶು ಇಲಾಖೆ ಚಿತ್ತ

ರೈತರಿಗಾಗಿ ಹಳ್ಳಿಗಳತ್ತ ಪಶು ಇಲಾಖೆ ಚಿತ್ತ

MUST WATCH

udayavani youtube

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

udayavani youtube

ವೀಳ್ಯದೆಲೆಯಿಂದ ಸುಂದರ ಹಾರ ತಯಾರಿಸಿ – ಈ ವಿಧಾನ ಅನುಸರಿಸಿ

udayavani youtube

ಬೆಂಗಳೂರಿನ ವಸತಿ ಸಮುಚ್ಚಯದಲ್ಲಿ ಬೆಂಕಿ ಅವಘಡ : ಕಣ್ಣೆದುರೇ ಮಹಿಳೆ ಸಜೀವ ದಹನ

udayavani youtube

ಮೈಮೇಲೆ ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

udayavani youtube

ವಿಧಾನಸಭೆ​ ಕಲಾಪ ನೇರ ಪ್ರಸಾರ : 21-09-2021| Afternoon Session

ಹೊಸ ಸೇರ್ಪಡೆ

hgjhjhgf

SAARC ಸಭೆಯಲ್ಲಿ ತಾನಿಬಾನ್ ಭಾಗವಹಿಸುವಂತೆ ಪಾಕ್ ಮನವಿ : ಸಭೆಯೇ ರದ್ದು

GJGHJKHGF

ಕನ್ನಡ ಸಿನಿಮಾ ಮಾಡಲು ರಶ್ಮಿಕಾಗೆ ಟೈಮ್‌ ಇಲ್ವಂತೆ!

Untitled-1

ಇ-ಸಂಜೀವಿನಿ: ಕರ್ನಾಟಕ ದ್ವಿತೀಯ

Untitled-1

#IPL2021.. ಮ್ಯಾಜಿಕ್‌ ಮಾಡಿದ ತ್ಯಾಗಿ : ರಾಜಸ್ಥಾನ್‌ ಗೆ 2 ರನ್‌ ಜಯ

Untitled-1

ಮಕ್ಕಳಿಗೆ ಅಕ್ಕನ ಅಕ್ಕರೆಯ ಮನೆ ಪಾಠ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.