ಗೂಡು ಕಳೆದುಕೊಂಡ ಪಕ್ಷಿಗಳ ಆರ್ತನಾದ
Team Udayavani, Mar 6, 2021, 5:10 PM IST
ಚಿಕ್ಕನಾಯಕನಹಳ್ಳಿ: ಪಟ್ಟಣದ ಬಿ. ಎಚ್ ರಸ್ತೆಯಲ್ಲಿನ ಸಾಲು ಮರಗಳಲ್ಲಿ ಹಲವಾರು ದಶಕಗಳಿಂದ ಸಾವಿರಾರು ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿದ್ದವು.ರಸ್ತೆ ಅಭಿವೃದ್ಧಿಗಾಗಿ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಕಾರಣ ಗೂಡು ಕಳೆದುಕೊಂಡ ವಿವಿಧ ಜಾತಿಯ ಪಕ್ಷಿಗಳು ಗಾಸಿಯಾಗಿ ಬಾನಲ್ಲಿಹಾರಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ರಸ್ತೆ ಅಭಿವೃದ್ಧಿಯಾಗಬೇಕು ಎಂದರೆ ರಸ್ತೆಗಳಿಗೆ ಅಡ್ಡವಾಗಿರುವ ಮರಗಳನ್ನು ಕಡಿಯುವುದು ಅನಿವಾರ್ಯ. ಪಟ್ಟಣದಲ್ಲಿ ಹಾದು ಹೋಗುತ್ತಿರುವ 150 ಎ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ನೂರಾರು ಮರಗಳು ಧರೆಗುರುಳಿವೆ. ಶೆಟ್ಟಿಕೆರೆ ಗೇಟ್ , ತಾತಯ್ಯನ ಗೋರಿ ಹಾಗೂ ಖಾಸಗಿ ಬಸ್‌ನಿಲ್ದಾಣದ ಬಳಿ ಹಲವಾರು ದಶಕಗಳಿಂದ ಬೆಳೆದು ನಿಂತಿದ್ದ ಅರಳಿ ಹಾಗೂ ಬೇವಿನ ಮರಗಳನ್ನೂ ಕತ್ತರಿಸಲಾಗಿದೆ . ಈ ಮರಗಳಲ್ಲಿವಿವಿಧ ಜಾತಿಯ ನೂರಾರು ಪಕ್ಷಿಗಳು ವಾಸ ಮಾಡುತ್ತಿದ್ದವು ಈಗ ಅವುಗಳಿಗೆ ರಾತ್ರಿ ಕಳೆಯಲು ಜಾಗವಿಲ್ಲದಾಗಿದೆ.
ಆಹಾರ ಹುಡುಕಿಕೊಂಡು ಬರುವಷ್ಟರಲ್ಲಿ ಗೂಡು ನಾಪತ್ತೆ: ಸೂರ್ಯ ಹುಟ್ಟುವ ಮೊದಲೇ, ಗೂಡು ಬಿಟ್ಟು ತನಗೆ ಹಾಗೂ ತನ್ನ ಮರಿಗಳಿಗೆ ಆಹಾರವನ್ನು ಸಂಗ್ರಹಿಸಿಕೊಂಡು ಬರಲು ಹೋದ ಪಕ್ಷಿಗಳಿಗೆ ಸಂಜೆ ಬಂದು ನೋಡಿದರೆ. ದಶಕಗಳಿಂದ ವಾಸಕ್ಕೆ ಆಸರೆಯಾಗಿದ್ದ ಮರವೇ ಧರೆಗುರುಳಿಬಿದ್ದಿರುವುದನ್ನು ಕಂಡು ದಿಕ್ಕು ತೋಚದೆ ಮರ ಇದ್ದ ಜಾಗದಲ್ಲಿ ನೂರಾರು ಪಕ್ಷಿಗಳುರೆಕ್ಕೆ ಬಡೆದುಕೊಂಡು ಅಸಾಯಕಥೆ ವ್ಯಕ್ತಪಡಿಸಿದವು.
ನಗರ ಸೌಂದರ್ಯಕ್ಕೆ ಮರಗಳು ಅಗತ್ಯ :
ಪಟ್ಟಣಗಳಲ್ಲಿ ನೆರಳು ನೀಡುವ ಮರಗಳನ್ನು ಕಡೆಯುವ ಬದಲು ಅಧುನಿಕತೆಯನ್ನು ಬಳಸಿಕೊಂಡು ಮರಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿಗೆ ಪ್ರಯತ್ನ ಪಡಬೇಕಾಗಿದೆ. ಗಿಡ ನೆಟ್ಟ ಕೆಲ ದಿನಗಳಲ್ಲಿ ಮರವಾಗಿ ನೆರಳು ನೀಡುವುದಿಲ್ಲ ಒಂದು ಮರ ಬೆಳೆದು ದೊಡ್ಡದಾಗಲು ಹಲವಾರು ವರ್ಷಗಳೆ ಬೇಕು. ಇದು ಎಲ್ಲಾರಿಗೂ ತಿಳಿದಿರುವ ವಿಷಯ. ರಸ್ತೆಅಗಲಿಕರಣವಾದರೂ ಮರಗಳು ಧರೆಗೆ ಬಿದ್ದ ಜಾಗದಲ್ಲಿ ಮರವನ್ನು ಬೆಳೆಸಿ ಪಟ್ಟಣದ ಸೌಂದರ್ಯವನ್ನು ಅಭಿವೃದ್ಧಿಪಡಿಸಬೇಕು ಎಂಬುವುದು ಸಾರ್ವಜನಿಕರ ಹಾಗೂ ಪರಿಸರ ಪ್ರೇಮಿಗಳ ಮನವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ
ಕೊರಟಗೆರೆ : ಆಸ್ಪತ್ರೆಯಲ್ಲಿ ಕೊಳೆತು ನಾರುತ್ತಿರುವ ಸ್ಯಾನಿಟರಿ ಪ್ಯಾಡ್ ಗಳು!
ಗರಿಷ್ಠ ಪ್ರಮಾಣದಲ್ಲಿ ಆಯುಷ್ಮಾನ್ ಕಾರ್ಡ್ ನೀಡಿ
ಬಡವರು, ರೈತರು ಉಸಿರಾಡಲು ಚಳವಳಿಯ ಅನಿವಾರ್ಯತೆ ಸೃಷ್ಟಿ
ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ: ಗುಣಮಟ್ಟ ಶಿಕ್ಷಣಕ್ಕೆ ಕಲಿಕಾ ಚೇತರಿಕೆ: ಸಿಎಂ
MUST WATCH
ಹೊಸ ಸೇರ್ಪಡೆ
ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ