Udayavni Special

83 ಕೋಟಿ ರೂ.ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ


Team Udayavani, Jun 29, 2021, 6:12 PM IST

83 ಕೋಟಿ ರೂ.ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ

ಗುಬ್ಬಿ: ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದಿಂದ 83 ಕೋಟಿ ರೂ.ಗಳ ಅನುದಾನ ಶೀಘ್ರದಲ್ಲಿಕಾರ್ಯರೂಪಕ್ಕೆ ಬರಲಿದ್ದು ಅವಶ್ಯವಿರುವ ಹಳ್ಳಿಗಾಡಿನ ರಸ್ತೆಗಳನ್ನು ಈ ಕಾಮಗಾರಿಗಳಯೋಜನೆಗೆ ಸೇರಿಸಿಕೊಳ್ಳಲಾಗಿದೆ ಎಂದು ಸಂಸದ ಜಿ. ಎಸ್‌.ಬಸವರಾಜು ಭರವಸೆ ನೀಡಿದರು.

ತಾಲೂಕಿನ ಜಿ.ಹೊಸಹಳ್ಳಿ ಮತ್ತು ಎನ್‌. ನಂದಿಹಳ್ಳಿ ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ್‌ ಸಡಕ್‌ ಯೋಜ ನೆಯ ಒಟ್ಟು 10 ಕೋಟಿ ರೂ.ಗಳ ಸುಮಾರು 13ಕಿ.ಮೀ. ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ರಸ್ತೆ ಅಭಿವೃದ್ಧಿಗೆ ಆದ್ಯತೆ: ಗ್ರಾಮೀಣ ಭಾಗದಲ್ಲಿ ಮೂಲಭೂತ ಸವಲತ್ತುಗಳ ಪೈಕಿ ರಸ್ತೆ ಅಭಿವೃದ್ಧಿಗೆಮೊದಲ ಆದ್ಯತೆ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೋವಿಡ್‌ ಸಂಕಷ್ಟದಿಂದ ವಿಳಂಬವಾದ ಹಿನ್ನೆಲೆ ತಡವಾಗಿ ಕಾಮಗಾರಿಗಳಿಗೆ ಗ್ರೀನ್‌ ಸಿಗ್ನಲ್‌ ಸಿಗುತ್ತಿದೆ ಎಂದು ತಿಳಿಸಿದರು.

ಗಳಗದಿಂದ ಕಡಬ ರಸ್ತೆ ಸಂಪರ್ಕಿಸುವ 9 ಕಿ.ಮೀ. ರಸ್ತೆಗೆ 6.76 ಕೋಟಿ ರೂ. ನೀಡಲಾಗಿದೆ. ಸಂಪಿಗೆ ರಸ್ತೆಯಿಂದಹೊಸಹಟ್ಟಿ ಸಂಪರ್ಕದ ರಸ್ತೆಗೆ2.4ಕೋಟಿ ರೂ. ಮಂಜೂರು ಮಾಡಲಾಗಿದ್ದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಚರ್ಚಿಸಿದ್ದೇನೆ: ಶಾಸಕ ಎಸ್‌.ಆರ್‌.ಶ್ರೀನಿವಾಸ್‌, ಮಾತನಾಡಿ ತಾಲೂಕಿನಲ್ಲಿ ಬಹುತೇಕ ಗ್ರಾಮಗಳ ಸಂಪರ್ಕ ರಸ್ತೆಗೆ ಅನುದಾನ ಹಾಕಲಾಗಿದೆ. ಗಡಿಭಾಗದ ಹಳ್ಳಿ ಗಳಿಗೆ ಮತ್ತಷ್ಟು ಅನುದಾನದ ಅವಶ್ಯವಿದೆ. ರಾಜ್ಯ ಸರ್ಕಾರದ ಹಣದೊಂದಿಗೆ ಕೇಂದ್ರ ಸರ್ಕಾರದ ಅನುದಾನದ ಅಗತ್ಯತೆ ಇದೆ. ಈ ಬಗ್ಗೆ ಸಂಬಂಧಿಸಿದ್ದ ಸಚಿವರೊಂದಿಗೆ ಚರ್ಚಿಸಿದ್ದೇನೆ.ಕೋವಿಡ್‌ ನಂತರ ಮತ್ತಷ್ಟು ಅನುದಾನ ಭರವಸೆ ಯಲ್ಲಿ ಕಾಯುತ್ತಿದ್ದೇವೆ. ಈ ಜತೆಗೆ ಶಾಸಕರ ಸ್ಥಳೀಯ ಅಭಿವೃದ್ಧಿ ಅನುದಾನ ಬಳಸಿ ಕೊಳ್ಳಲಾಗುತ್ತಿದೆ ಎಂದರು.

ಎಪಿ ಎಂಸಿ ಮಾಜಿ ಸದಸ್ಯ ಕಳ್ಳಿ ಪಾಳ್ಯ ಲೋಕೇಶ್‌, ಮುಖಂಡ ರಾದ ಎನ್‌.ಸಿ. ಪ್ರಕಾ ಶ್‌, ಜಿ.ಎನ್‌.ಬೆಟ್ಟಸ್ವಾಮಿ, ಜಿಪಂ ಸದಸ್ಯೆ ಡಾ. ನವ್ಯಾ, ಚಂದ್ರಶೇಖರ್‌, ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ಸಿದ್ದ ಗಂಗಮ್ಮ,ಕಿರಣ್‌, ಬಸವರಾಜು, ಚೇತನ್‌ ಇದ್ದರು.

ನೀರಾವರಿ ಯೋಜನೆಗೆ ಚಾಲನೆ :

ಅಭಿವೃದ್ಧಿ ಜತೆಗೆ ನೀರಾವರಿ ವಿಚಾರದಲ್ಲೂ ಹಲವು ಗಂಭೀರ ಚಿಂತನೆ ನಡೆಸಿ ಕೇಂದ್ರದ ಅನುದಾನಗಳೊಟ್ಟಿಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬಳಸಿ ಹೇಮಾವತಿ ನೀರು ಹರಿಸಲಾಗುತ್ತಿದೆ. ಜಿಲ್ಲೆಯಲ್ಲಿಕಳೆದೆರಡುವರ್ಷದಿಂದ ಸರಾಗವಾಗಿ ಹೇಮೆ ನೀರು ಹರಿಸಿಜನಮೆಚ್ಚುಗೆಗೆ ಪಾತ್ರವಾಗಿರುವ ಬಿಜೆಪಿ ಸರ್ಕಾರ, ಹೇಮಾವತಿ ನಾಲಾ ಅಭಿವೃದ್ಧಿಗೆಬಿಡುಗಡೆ ಮಾಡಿದ ಹಣ ಬಳಸಿ ನನೆಗುದಿಗೆಬಿದ್ದ ಎಲ್ಲಾ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಅಲ್ಲದೇ, ಗುಬ್ಬಿ ಅಮಾನಿಕೆರೆಮತ್ತುಕಡಬ ಕೆರೆಯನ್ನು ಮುಂದಿನ ಬಾರಿ ಸಂಪೂರ್ಣ ಭರ್ತಿ ಮಾಡಲು ಎಲ್ಲಾ ತಯಾರಿ ನಡೆಸಲಾಗಿದೆ ಎಂದು ಸಂಸದ ಜಿ.ಎಸ್‌. ಬಸವರಾಜು ತಿಳಿಸಿದರು.

ಟಾಪ್ ನ್ಯೂಸ್

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

fytryrty5

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

dghtrytr

ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಅಧಿಕೃತ ಆದೇಶ

fgdfgdfgd

ಚಿತ್ರರಂಗದಲ್ಲಿ ನಟಿಯರನ್ನು ಕೇವಲ ಬೋಗದ ವಸ್ತುಗಳಂತೆ ನೋಡುತ್ತಾರೆ : ನಟಿ ಮಹಿಕಾ ಶರ್ಮಾ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

dryryry5

ಬಿಎಸ್‌ವೈ ರಾಜೀನಾಮೆಗೆ ಅತಿಯಾದ ಭ್ರಷ್ಟಾಚಾರ ಕಾರಣ : ಮಾಜಿ ಸಿಎಂ ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumakuru news

ಜಿಲ್ಲೆ ಅಭಿವೃದ್ದಿಗೆ ಸಾವಿರಾರು ಕೋಟಿ ರೂ. ಅನುದಾನ

thumakuru news

5 ಜಿಲ್ಲೆ ಕೈಮುಖಂಡರ ಸಭೆಗೆ ಸಜ್ಜು

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

Agricultural activity

ನಿರಂತರ ತುಂತುರು ಮಳೆ ಕೃಷಿ ಚಟುವಟಿಕೆ ಕುಂಠಿತ

thumakuru news

ಸ್ಲಂ ಮಕ್ಕಳಿಗೆ ಬಾಲ್ಯ ವಿವಾಹ ವಿರೋಧಿಸುವ ಜಾಗೃತಿ ಅಗತ್ಯ

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

Untitled-1

ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ದಾಂಜಲಿ ಅರ್ಪಣೆ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

fytryrty5

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.