Udayavni Special

ಮಧುಗಿರಿ ಸಾರಿಗೆ ಕಚೇರಿ ವ್ಯಾಪ್ತಿಗೆ ಶಿರಾ ಸೇರ್ಪಡೆ

ರಾಜ್ಯ ಸರ್ಕಾರದಿಂದ ಆದೇಶ • ಸಚಿವ ತಮ್ಮಣ್ಣ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸಿದ ಶಾಸಕ

Team Udayavani, Jul 13, 2019, 12:59 PM IST

tk-tdy-2..

ಮಧುಗಿರಿಯ ಪ್ರಾದೇಶಿಕ ಸಾರಿಗೆ ಕಚೇರಿ.

ಮಧುಗಿರಿ: ತಾಲೂಕಿನಲ್ಲಿ ಆರಂಭವಾಗಿರುವ ಸಹಾಯಕ ಪ್ರಾದೇಶಿಕ ಕಚೇರಿ ಆರಂಭವಾಗಿದ್ದು, ಹೆಚ್ಚು ಆದಾಯ ತರುವ ಶಿರಾ ತಾಲೂಕನ್ನು ಮತ್ತೆ ಮಧುಗಿರಿ ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಸೇರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಸ್ವತಂತ್ರ ಪೂರ್ವದಲ್ಲೇ ಉಪವಿಭಾಗವಾಗಿ ಪರಿಗಣಿ ಸಲ್ಪಟ್ಟಿದ್ದ ಮಧುಗಿರಿಗೆ ಮಾಸ್ತಿ ವೆಂಕಟೇಶ್‌ ಅಯ್ನಾಂಗಾರ್‌ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಮದ್ದಗಿರಿ ಎಂಬ ಹೆಸರಿದ್ದ ಈ ಕ್ಷೇತ್ರಕ್ಕೆ ಮಧುಗಿರಿ ಎಂದು ನಾಮಕರಣ ಮಾಡಿದರು. ಇಂತಹ ಪುರಾತನ ಉಪವಿಭಾಗದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ, ಅಬಕಾರಿ, ಆದಾಯ ತೆರಿಗೆ, ಹಾಗೂ ಬೆಸ್ಕಾಂ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಉಪ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ.

ಕಳೆದ ಅವಧಿಯಲ್ಲಿ ಮಧುಗಿರಿಗೆ ಕಾಂಗ್ರೆಸ್‌ ಸರ್ಕಾರ ಪ್ರಾದೇಶಿಕ ಆಯುಕ್ತರ ಉಪ ಕಚೇರಿ ನೀಡಿತ್ತು. ಆದರೆ ರಾಜಕೀಯ ವೈಷಮ್ಯಕ್ಕೆ ಶಿರಾ ತಾಲೂಕು ಮಧುಗಿರಿ ಕಚೇರಿಯಿಂದ ಹೊರಗುಳಿ ಯಿತು. ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಮಧುಗಿರಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಶಿರಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಇವರಿಬ್ಬರ ನಡುವಿನ ಹೊಂದಾ ಣಿಕೆ ಕೊರತೆಯಿಂದ ಶೇ.60ರಷ್ಟು ಆದಾಯ ತರುತ್ತಿದ್ದ ಶಿರಾ ತಾಲೂಕು ಹೊರಗುಳಿಯಿತು. ನಂತರ ಇಲ್ಲಿನ ಎಆರ್‌ಟಿಒ ಆದಾಯ ಕಡಿಮೆಯಾಗಿದ್ದು, ಶಿರಾ ತಾಲೂಕಿನ ಜನತೆಗೂ ಸಮಸ್ಯೆಯಾಯಿತು. 80 ಕಿ.ಮೀ. ದೂರದ ತುಮಕೂರು ಜಿಲ್ಲಾ ಕೇಂದ್ರಕ್ಕೆ ಹೋಗಿ ಕೆಲಸ ಮಾಡಿಸಿಕೊಂಡು ಬರಲು ದಿನವೆಲ್ಲ ಕಳೆದು ಹೋಗುತ್ತಿತ್ತು. ಆದರೆ ಕೇವಲ 36 ಕಿ.ಮೀ. ದೂರದ ಮಧುಗಿರಿಗೆ ಶಿರಾವನ್ನು ಸೇರಿಸಿ ಎಂಬ ಆಗ್ರಹವಿದ್ದರೂ ಸಾಧ್ಯವಾಗಿರಲಿಲ್ಲ.

ಶಾಸಕರಿಂದ ಸಮಸ್ಯೆ ಇತ್ಯರ್ಥ: ಇಂತಹ ಜಟಿಲ ಸಮಸ್ಯೆಯನ್ನು ಶಿರಾ ಶಾಸಕ ಬಿ.ಸತ್ಯನಾರಾಯಣ ಜೊತೆಗೆ ಚರ್ಚಿಸಿದ ಶಾಸಕ ಎಂ.ವಿ.ವೀರಭದ್ರಯ್ಯ, ಶಿರಾ ಕ್ಷೇತ್ರ ಈ ಕಚೇರಿಯಿಂದ ಹೊರಗುಳಿದಿರುವುದು ಶಿರಾ ತಾಲೂಕಿನ ಜನತೆಗೆ ಅನಾನುಕೂಲವಾಗಿದೆ. ಹಾಗೂ ಇಲ್ಲಿನ ಪ್ರಾದೇಶಿಕ ಕಚೇರಿಯ ಆದಾಯವೂ ಇಳಿಮುಖವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಹೊರೆ ಯಾಗಲಿದೆ. ಇದನ್ನು ಅರಿತು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಜೊತೆಗೆ ಚರ್ಚಿಸಿ ಮಧುಗಿರಿ ಎಆರ್‌ಟಿಒ ಕಚೇರಿಗೆ ಶಿರಾ ಕ್ಷೇತ್ರವನ್ನು ಸೇರ್ಪಡೆ ಮಾಡ ಲಾಗಿದೆ. ಶಾಸಕರ ಕಾರ್ಯದಿಂದ ಮಧುಗಿರಿಗೆ ಜಿಲ್ಲಾ ಕೇಂದ್ರಕ್ಕೆ ಸಿಗುವ ಅರ್ಹತೆಯಲ್ಲಿ ಒಂದು ಹೆಚ್ಚಿನ ಗರಿ ಸಿಕ್ಕಿದೆ ಎಂದು ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

● ಮಧುಗಿರಿ ಸತೀಶ್‌

ಟಾಪ್ ನ್ಯೂಸ್

gಗರಗ

ಅಸ್ಸಾಂ 15ನೇ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾನ್ ಶರ್ಮಾ ಪ್ರಮಾಣ ವಚನ

ಮನೆಯಲ್ಲೇ ಸುರಕ್ಷಿತವಾಗಿರಿ : ನಿಯಮ ಉಲ್ಲಂಘಿಸಿದರೆ ಬಂಧನ, ವಾಹನ ಜಪ್ತಿ

ಮನೆಯಲ್ಲೇ ಸುರಕ್ಷಿತವಾಗಿರಿ : ನಿಯಮ ಉಲ್ಲಂಘಿಸಿದರೆ ಬಂಧನ, ವಾಹನ ಜಪ್ತಿ

ghghtutu

ಮಾಸ್ಟರ್‌ಶೆಫ್ ಆಗಲಿದ್ದಾರೆ ಕಿಚ್ಚ

18+ ಮೇಲ್ಪಟ್ಟವರಿಗೆ ಇಂದಿನಿಂದ ಲಸಿಕೆ : ಪ್ರತೀ ಕೇಂದ್ರದಲ್ಲಿ ನಿತ್ಯ 100-150 ಮಂದಿಗೆ ಮಾತ್ರ

18+ ಮೇಲ್ಪಟ್ಟವರಿಗೆ ಇಂದಿನಿಂದ ಲಸಿಕೆ : ಪ್ರತೀ ಕೇಂದ್ರದಲ್ಲಿ ನಿತ್ಯ 100-150 ಮಂದಿಗೆ ಮಾತ್ರ

ತವರು ಸೇರಿದ ಮುಂಬೈ ಇಂಡಿಯನ್ಸ್ ಆಟಗಾರರು

ತವರು ಸೇರಿದ ಮುಂಬೈ ಇಂಡಿಯನ್ಸ್ ಆಟಗಾರರು

ರಾಜ್ಯದ ಜನತೆಗೂ ಪ್ಯಾಕೇಜ್‌? ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಕಾರದಿಂದ ಚಿಂತನೆ

ರಾಜ್ಯದ ಜನತೆಗೂ ಪ್ಯಾಕೇಜ್‌? ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಕಾರದಿಂದ ಚಿಂತನೆ

18ವರ್ಷ ಮೇಲ್ಪಟ್ಟವರಿಗೆ ಕರಾವಳಿಯಲ್ಲಿ ಲಸಿಕಾ ಅಭಿಯಾನ: SMS ಬಂದವರಿಗೆ ಮಾತ್ರ ಲಸಿಕೆಗೆ ಅವಕಾಶ

18ವರ್ಷ ಮೇಲ್ಪಟ್ಟವರಿಗೆ ಕರಾವಳಿಯಲ್ಲಿ ಲಸಿಕಾ ಅಭಿಯಾನ: SMS ಬಂದವರಿಗೆ ಮಾತ್ರ ಲಸಿಕೆಗೆ ಅವಕಾಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Take action

ಸಿಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಿ

ಕೋವಿಡ್ ನಿಯಂತ್ರಣ ‌; ಸೋಂಕಿತರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ರಾಕೇಶ್ ಸಿಂಗ್ ಸೂಚನೆ

ಕೋವಿಡ್ ನಿಯಂತ್ರಣ ‌; ಸೋಂಕಿತರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ರಾಕೇಶ್ ಸಿಂಗ್ ಸೂಚನೆ

hjkukuui

ಕೋವಿಡ್ ಮಹಾಮಾರಿಗೆ ತುಮಕೂರು ಜಿಲ್ಲಾ ವಾರ್ತಾಧಿಕಾರಿ ಡಿ.ಮಂಜುನಾಥ್ ಬಲಿ

Request for biometric cancellation

ಬಯೋಮೆಟ್ರಿಕ್‌ ರದ್ದತಿಗೆ  ಆಗ್ರಹ

Opening of covid Care Center

ಕೋವಿಡ್‌ ಕೇರ್‌ ಸೆಂಟರ್‌ ತೆರೆದರೆ ಅನುಕೂಲ

MUST WATCH

udayavani youtube

ಬಾಕಿ ಉಳಿದ ಐಪಿಎಲ್ ಪಂದ್ಯಗಳ ಗತಿ ಏನು ?

udayavani youtube

ಕೋವಿಡ್ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ

udayavani youtube

ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ

udayavani youtube

ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಟ್ಲದಲ್ಲಿ ಪೊಲೀಸರಿಂದ ದಾಳಿಯ

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಹೊಸ ಸೇರ್ಪಡೆ

gಗರಗ

ಅಸ್ಸಾಂ 15ನೇ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾನ್ ಶರ್ಮಾ ಪ್ರಮಾಣ ವಚನ

ಮನೆಯಲ್ಲೇ ಸುರಕ್ಷಿತವಾಗಿರಿ : ನಿಯಮ ಉಲ್ಲಂಘಿಸಿದರೆ ಬಂಧನ, ವಾಹನ ಜಪ್ತಿ

ಮನೆಯಲ್ಲೇ ಸುರಕ್ಷಿತವಾಗಿರಿ : ನಿಯಮ ಉಲ್ಲಂಘಿಸಿದರೆ ಬಂಧನ, ವಾಹನ ಜಪ್ತಿ

ghghtutu

ಮಾಸ್ಟರ್‌ಶೆಫ್ ಆಗಲಿದ್ದಾರೆ ಕಿಚ್ಚ

18+ ಮೇಲ್ಪಟ್ಟವರಿಗೆ ಇಂದಿನಿಂದ ಲಸಿಕೆ : ಪ್ರತೀ ಕೇಂದ್ರದಲ್ಲಿ ನಿತ್ಯ 100-150 ಮಂದಿಗೆ ಮಾತ್ರ

18+ ಮೇಲ್ಪಟ್ಟವರಿಗೆ ಇಂದಿನಿಂದ ಲಸಿಕೆ : ಪ್ರತೀ ಕೇಂದ್ರದಲ್ಲಿ ನಿತ್ಯ 100-150 ಮಂದಿಗೆ ಮಾತ್ರ

ತವರು ಸೇರಿದ ಮುಂಬೈ ಇಂಡಿಯನ್ಸ್ ಆಟಗಾರರು

ತವರು ಸೇರಿದ ಮುಂಬೈ ಇಂಡಿಯನ್ಸ್ ಆಟಗಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.