ಸ್ಮಾರ್ಟ್‌ಸಿಟಿ: ರಸ್ತೆ ಕಾಮಗಾರಿ ಪರಿಶೀಲನೆ
Team Udayavani, Dec 12, 2020, 5:30 PM IST
ತುಮಕೂರು: ನಗರದ ಹಳೆಯ ಎನ್‌ಇಪಿಎಸ್ ಪೊಲೀಸ್ ಠಾಣೆಯ ಮುಂಭಾಗದ ಬಿ.ಹೆಚ್.ರಸ್ತೆಯಮುಂಭಾಗ ದಿಂದ ಎಸ್.ಎಸ್.ಪುರಂ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಡಾಂಬರು ಹಾಕುವ ಕಾರ್ಯ ಪ್ರಗತಿಯಲ್ಲಿದ್ದು, ಶುಕ್ರವಾರಪಾಲಿಕೆಯ15ನೇ ವಾರ್ಡಿನ ಸದಸ್ಯೆ ಗಿರಿಜಾ ಮತ್ತು ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯೆ ಗಿರಿಜಾ, ನಗರದ ಎಸ್.ಎಸ್.ಪುರಂ ಮತ್ತುಬಿ.ಹೆಚ್.ರಸ್ತೆಗೆ ಸಂಪರ್ಕ ಕಲ್ಪಿಸುವ ಅತಿ ಅಗಲವಾದ ರಸ್ತೆ ಇದಾಗಿದ್ದು, 585 ಮೀ. ಉದ್ದವಿದ್ದು,ಕಳೆದ 30 ವರ್ಷಗಳಿಂದ ಈ ರಸ್ತೆ ಡಾಂಬರು ಕಂಡಿರಲಿಲ್ಲ. ಕಳೆದ ಒಂದು ವರ್ಷಗಳಿಂದ ಈ ಭಾಗದಲ್ಲಿ ರಸ್ತೆಅಭಿವೃದ್ಧಿ ಕಾಮಗಾರಿಗಳು ನಡೆಯು ತ್ತಿದ್ದು, ಸಾರ್ವಜನಿಕರು ಸಹಕಾರ ನೀಡಿದ್ದಾರೆ ಎಂದರು.
ನಗರದ 15ನೇ ವಾರ್ಡಿಗೆ ಸಂಬಂಧಿಸಿದಂತೆ ಮುಖ್ಯರಸ್ತೆ, ಅಡ್ಡ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕೊನೆಯ ಹಂತದಲ್ಲಿದೆ.ಮುಂದಿನ ಒಂದೆರಡು ವಾರಗಳಲ್ಲಿಡಾಂಬರ್ ಕಾಮಗಾರಿ ಪೂರ್ಣಗೊಳ್ಳಲಿದೆ.ಅತ್ಯಾಧುನಿಕಸ್ಮಾರ್ಟಸಿಟಿಯಿಂದ ಡಕ್, ಸಿಸಿ. ಚರಂಡಿ, 24×7 ಕುಡಿಯುವ ನೀರು, ಪೈಪ್‌ಲೈನ್ ಮೂಲಕ ಮನೆ ಮನೆಗೆ ಗ್ಯಾಸ್ ಸಂಪರ್ಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು,ಇಡೀ ವಾರ್ಡು ಎಲ್ಲಾ ಸಮಸ್ಯೆಗಳಿಂದ ಮುಕ್ತವಾಗಲಿದೆ. ಈ ವೇಳೆ ವಾರ್ಡಿನ ನಾಗರಿಕ ಪಣೀಂದ್ರ ಸುರಬಿ ಮಾತನಾಡಿದರು. ಈ ವೇಳೆಸ್ಮಾರ್ಟ್‌ಸಿಟಿ ಎಇಇ ಚಲುವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಬೇಡ; ಬಿಬಿಎಂಪಿ ಆಯುಕ್ತ
ಲಂಚದ ಹಣ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಡಿಎಚ್ಓ ಕಛೇರಿ ವ್ಯವಸ್ಥಾಪಕ ಮನೋಹರ
ಅಲ್ಖೈದಾ ಜೊತೆ ಸೇರಿ ಹೊಸ ಉಗ್ರಸಂಘಟನೆ ಕಟ್ಟಲು ಹಖ್ಖಾನಿ ಸಂಚು?
“ತಾಂಡವ’ ತಂಡಕ್ಕೆ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಕಾರ
ಜೆಡಿಎಸ್ ನ ಹೊರಟ್ಟಿಗೆ ಸಭಾಪತಿ ಸ್ಥಾನ : ಬಿಜೆಪಿಯ ಪ್ರಾಣೇಶ್ ಉಪ ಸಭಾಪತಿ