ಆದ್ಯತೆ ಮೇರೆಗೆ ನೀರಿನ ಸಮಸ್ಯೆ ಬಗೆಹರಿಸಿ

Team Udayavani, Apr 14, 2021, 12:01 PM IST

ಆದ್ಯತೆ ಮೇರೆಗೆ ನೀರಿನ ಸಮಸ್ಯೆ ಬಗೆಹರಿಸಿ

ತುಮಕೂರು: ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಜಿಲ್ಲೆಯಲ್ಲಿ ಆದ್ಯತೆ ಮೇರೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿಗಾಗಿ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಓವರ್‌ಹೆಡ್‌ ಟ್ಯಾಂಕ್‌ಗಳ ಮೂಲಕ ನೀರು ಪೂರೈಕೆಗೆ ಒತ್ತು ಕೊಡಬೇಕು. ನರೇಗಾ ಯೋಜನೆಯಡಿ ಸಂಪ್‌, ನೀರಿನ ತೊಟ್ಟಿಗಳನ್ನು ನಿರ್ಮಿಸಿ ಕುಡಿಯುವ ನೀರಿನ ಪೂರೈಕೆ ಮಾಡಬೇಕು. ಒಟ್ಟಾರೆ ಜಿಲ್ಲಾದ್ಯಂತ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದರು.

ಕ್ರಮ ಕೈಗೊಳ್ಳಿ: ಜಿಲ್ಲೆಯಲ್ಲಿ ಹೊಸ ಬಡಾವಣೆನಿರ್ಮಾಣ ಮಾಡುವಾಗ ಸಿಎ(ಭೂ-ಬದಲಾವಣೆಯಾದ) ಸೈಟ್‌ನಲ್ಲಿ ಸಮುದಾಯ ಭವನಗಳಿಗೆ ಜಾಗ ಮೀಸಲಿಡುವಂತೆ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡುವ ಮೂಲಕಸಮುದಾಯ ಭವನ ನಿರ್ಮಾಣಕ್ಕೆ ಅಡಚಣೆಯಾಗಿರುವ ಜಾಗದ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರಿಗೆ ಸೂಚನೆ ನೀಡಿದರು.

ವಸತಿ ರಹಿತ ಅಲೆಮಾರಿ ಜನಾಂಗದವರಿಗೆ ವಸತಿಕಟ್ಟಿಕೊಳ್ಳಲು ನಿವೇಶನ ಕಲ್ಪಿಸಬೇಕು. ನಿವೇಶನ ರಹಿತ, ವಸತಿ ರಹಿತ ಫ‌ಲಾನುಭವಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಪಂಚಾಯಿತಿವಾರು ತಯಾರಿಸಿ ನಿವೇಶನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಬೇಸಿಗೆ ಅವಧಿಯಲ್ಲಿ ವಿದ್ಯುತ್‌ ಸಮಸ್ಯೆಯಾಗದಂತೆ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿರುವ ಫ‌ಲಾನುಭವಿಗಳ ಪಟ್ಟಿ ತಾಲೂಕುವಾರು ಮತ್ತು ಸ್ಟೇಷನ್‌(ಸ್ಥಾವರ)ವಾರುಮಾಹಿತಿ ಮತ್ತು ಜಿಲ್ಲೆಯಲ್ಲಿ ಸರಬರಾಜಾಗುತ್ತಿರುವ ವಿದ್ಯುತ್‌ ಪೂರೈಕೆಯ ಮಾಹಿತಿಯನ್ನು ಕೆಡಿಪಿ ಸಭೆಗೆ ಒದಗಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿ ಪ್ರಗತಿ ಆಗಿಲ್ಲ: ನರೇಗಾ ಯೋಜನೆಯಡಿ ಪಿಆರ್‌ಇಡಿ ವಿಭಾಗದಿಂದ ಕೈಗೊಂಡ ಕಾಮಗಾರಿಗಳು ಪ್ರಗತಿಯಾಗಿಲ್ಲ. ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ಶೀಘ್ರ ಮುಗಿಸುವುದರ ಜೊತೆಗೆ ಉಳಿದ ಇತರೆ ಎಲ್ಲಇಲಾಖೆಗಳ ಪ್ರಗತಿ ಕಾರ್ಯಗಳು ನೂರಕ್ಕೆ ನೂರರಷ್ಟು ಅನುಷ್ಠಾನಗೊಳ್ಳಬೇಕು. ಅಧಿಕಾರಿಗಳು ಕಾರ್ಯವ್ಯಾಪ್ತಿಯ ಬಗ್ಗೆ ಕನಿಷ್ಟ ಜ್ಞಾನ ಹೊಂದಿರಬೇಕು. ಕೆಡಿಪಿಸಭೆಗೆ ಸಮರ್ಪಕ ಮಾಹಿತಿ ಒದಗಿಸಬೇಕು ಎಂದು ನಿರ್ದೇಶಿಸಿದರು.

ಜಿಪಂ ಸಿಇಒ ವಿದ್ಯಾಕುಮಾರಿ ಮಾತನಾಡಿ, ಸಚಿವರು ನೀಡಿರುವ ಎಲ್ಲಾ ನಿರ್ದೇಶನಗಳನ್ನು ಪಾಲಿಸಬೇಕು. ಕೆಡಿಪಿ ಸಭೆಗೆ ಸಚಿವರ ನಿರ್ದೇಶನದಂತೆ ಸಮರ್ಪಕಮಾಹಿತಿ ಒದಗಿಸಬೇಕು ಎಂದರು. ಜಿಲ್ಲಾ ಪಂಚಾಯಿತಿಉಪ ಕಾರ್ಯದರ್ಶಿ ಟಿ.ಕೆ. ರಮೇಶ್‌ ಸೇರಿದಂತೆ ಮತ್ತಿತರ ಇಲಾಖಾವಾರು ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಅಭಿವೃದ್ಧಿ ಕಾಮಗಾರಿಗೆ ಒತ್ತು :

ಚಿಕ್ಕನಾಯಕನಹಳ್ಳಿ ಸೇರಿದಂತೆ ಜಿಲ್ಲೆಯ ಯಾವ ತಾಲೂಕಿನಲ್ಲಿಯೂ ಗ್ರಾಮ ವಿಕಾಸ ಯೋಜನೆ ಪ್ರಗತಿ ಕಂಡಿಲ್ಲ. ಹಾಗಾಗಿ ಯೋಜನೆಗೆ ಮೀಸಲಾಗಿರುವ ಪೂರ್ಣ ಪ್ರಮಾಣದ ಅನುದಾನ ಬಳಸಿ ಶೇ.100ರಷ್ಟು ಗುರಿ ಸಾಧಿಸಬೇಕು. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ತಾಲೂಕುವಾರು ಜಿಲ್ಲಾಭಿವೃದ್ಧಿಗೆಪೂರಕವಾದ ಮ್ಯಾಪಿಂಗ್‌ ರೂಪು-ರೇಷೆ ತಯಾರಿಸಬೇಕು. ಇದರಿಂದ ಆದ್ಯತೆ ಮೇರೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಒತ್ತು ಕೊಡಲು ಸುಲಭ ಸಾಧ್ಯವಾಗುತ್ತದೆ. ಮುಂದಿನ ಕೆಡಿಪಿ ಸಭೆಯೊಳಗೆ ಮ್ಯಾಪಿಂಗ್‌ ತಯಾರಿಸುವಂತೆಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

ಫ‌ಲಾನುಭವಿಗಳಿಗೆ ನೋಟಿಸ್‌ ನೀಡಿ :

ಗ್ರಾಮೀಣ ವಸತಿ ಯೋಜನೆಗಳಡಿ 2010-11ನೇ ಸಾಲಿನಿಂದ ಬಾಕಿ ಉಳಿದಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು. 2011-15ನೇ ಸಾಲಿನಲ್ಲಿ ವಸತಿ ಸೌಲಭ್ಯಕ್ಕೆ ಆಯ್ಕೆಯಾದ ಫ‌ಲಾನುಭವಿಗಳ ಪೈಕಿ ಈವರೆಗೂ ವಸತಿಯನ್ನು ನಿರ್ಮಿಸಿಕೊಳ್ಳದವರ ಫ‌ಲಾನುಭವಿಗಳಿಗೆ ನೋಟಿಸ್‌ ನೀಡಬೇಕು. ಅಲ್ಲದೆ, ಪೂರ್ಣವಾಗಿ ವಸತಿ ನಿರ್ಮಾಣ ಪ್ರಕ್ರಿಯೆ ಆರಂಭಿಸದ ಫ‌ಲಾನುಭವಿಗಳ ಮಂಜೂರಾತಿಯನ್ನು ರದ್ದುಗೊಳಿಸಿ ಪ್ರಸಕ್ತ ಸಾಲಿನ ಆಯ್ಕೆಯಲ್ಲಿ ಆದ್ಯತೆ ಕೊಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ. ಎಸ್‌.ಪಾಟೀಲ ಸೂಚಿಸಿದರು.

ಟಾಪ್ ನ್ಯೂಸ್

ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ: ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ

ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ; ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ

ಶೀಘ್ರವೇ BJP ಸೇರ್ಪಡೆ; ಕ್ಯಾ.ಅಮರೀಂದರ್ ಸಿಂಗ್ NDA ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?

ಶೀಘ್ರವೇ BJP ಸೇರ್ಪಡೆ; ಕ್ಯಾ.ಅಮರೀಂದರ್ ಸಿಂಗ್ NDA ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

ಬುಮ್ರಾ ವಿಶ್ವದಾಖಲೆ; ಬ್ರಾಡ್ ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬೂಮ್ ಬೂಮ್ ಬುಮ್ರಾ

ಬುಮ್ರಾ ವಿಶ್ವದಾಖಲೆ; ಬ್ರಾಡ್ ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬೂಮ್ ಬೂಮ್ ಬುಮ್ರಾ

ಉದಯಪುರ ಆಯ್ತು, ಪ್ರವಾದಿ ಬಗ್ಗೆ ಹೇಳಿಕೆ ನೀಡಿ ಕೊಲೆಯಾಗಿದ್ದ ತಿವಾರಿ ಪತ್ನಿಗೆ ಬೆದರಿಕೆ ಪತ್ರ

ಉದಯಪುರ ಆಯ್ತು, ಪ್ರವಾದಿ ಬಗ್ಗೆ ಹೇಳಿಕೆ ನೀಡಿ ಕೊಲೆಯಾಗಿದ್ದ ತಿವಾರಿ ಪತ್ನಿಗೆ ಬೆದರಿಕೆ ಪತ್ರ

ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ ಅಧಿಕೃತ ಆದೇಶ ಹೊರಡಿಸಿ: ಸಿದ್ದರಾಮಯ್ಯ ಆಗ್ರಹ

ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ ಅಧಿಕೃತ ಆದೇಶ ಹೊರಡಿಸಿ: ಸಿದ್ದರಾಮಯ್ಯ ಆಗ್ರಹ

ಸಾಗರ : ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ : ಪೇಪರ್ ವಿತರಣೆಗೆ ಹೋಗಿದ್ದ ಯುವಕ ಸ್ಥಳದಲ್ಲೇ ಸಾವು

ಸಾಗರ : ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ : ಪೇಪರ್ ವಿತರಣೆಗೆ ಹೋಗಿದ್ದ ಯುವಕ ಸ್ಥಳದಲ್ಲೇ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಚ್.ಡಿಡಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಕೆ.ಎನ್ ರಾಜಣ್ಣ ವಿರುದ್ಧ ಭುಗಿಲೆದ್ದ ಆಕ್ರೋಶ

ಹೆಚ್.ಡಿಡಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಕೆ.ಎನ್ ರಾಜಣ್ಣ ವಿರುದ್ಧ ಭುಗಿಲೆದ್ದ ಆಕ್ರೋಶ

178ರಲ್ಲಿ 132 ಕಾಮಗಾರಿ ಪೂರ್ಣ: ಶಾಸಕ

178ರಲ್ಲಿ 132 ಕಾಮಗಾರಿ ಪೂರ್ಣ: ಶಾಸಕ

1-hgfdgfdg

ವಿವಾದಾತ್ಮಕ ಹೇಳಿಕೆ : ಮಾಜಿ ಪ್ರಧಾನಿ ದೇವೇಗೌಡರ ಕ್ಷಮೆ ಯಾಚಿಸಿದ ಕೆ.ಎನ್.ರಾಜಣ್ಣ

2

ವಿವಿದ ಬೇಡಿಕೆಗೆ ಒತ್ತಾಯಿಸಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

suicide (2)

ಕೊರಟಗೆರೆ: ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ದೇಶದ ಮೊದಲ ಮಾನವ ರಹಿತ ವಿಮಾನ ಹಾರಾಟ ಯಶಸ್ವಿ

udayavani youtube

ಭಗವಂತನ ಅನುಗ್ರಹ ಸಂಪಾದಿಸುವುದು ಹೇಗೆ?

udayavani youtube

NEWS BULLETIN 01-07-2022

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

ಹೊಸ ಸೇರ್ಪಡೆ

tdy-26

ಅರಣ್ಯ ಸಿಬ್ಬಂದಿ- ರೈತರ ಜಟಾಪಟಿ

ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ: ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ

ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ; ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ

ಶೀತ -ಕೆಮ್ಮಿಗೆ ಈರುಳ್ಳಿಯೇ ಮದ್ದು

ಮಳೆಗಾಲ; ಶೀತ -ಕೆಮ್ಮಿಗೆ ಈರುಳ್ಳಿಯೇ ಮದ್ದು

ಶೀಘ್ರವೇ BJP ಸೇರ್ಪಡೆ; ಕ್ಯಾ.ಅಮರೀಂದರ್ ಸಿಂಗ್ NDA ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?

ಶೀಘ್ರವೇ BJP ಸೇರ್ಪಡೆ; ಕ್ಯಾ.ಅಮರೀಂದರ್ ಸಿಂಗ್ NDA ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.