Udayavni Special

ಮಳೆ ಇಲ್ಲದೆ ಜಿಲ್ಲೆಯಲ್ಲಿ ಬಿತ್ತನೆ ಕುಂಠಿತ

Team Udayavani, Jun 30, 2019, 1:51 PM IST

tk-tdy-2..

ಜಿಲ್ಲೆಯಲ್ಲಿ ಬಿತ್ತನೆ ಮಾಡಲು ರೈತರು ಭೂಮಿಯನ್ನು ಹಸನು ಮಾಡಿಕೊಂಡಿರುವುದು.

ತುಮಕೂರು: ಜಿಲ್ಲೆಯಾದ್ಯಂತ ಮುಂಗಾರು ಮಳೆ ಆಶಾದಾಯಕವಾಗಿ ಬರುತ್ತದೆ ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಬಿತ್ತನೆ ಮಾಡುವ ಸಮಯದಲ್ಲಿ ಮುಂಗಾರು ಮಳೆ ಮತ್ತೆ ಕೈ ಕೊಟ್ಟಿದೆ.

ಪೂರ್ವ ಮುಂಗಾರು ಮಳೆಯಲ್ಲಿ ಬಿತ್ತನೆ ಮಾಡಿದ್ದ ಅಲ್ಪ ಸ್ವಲ್ಪ ದ್ವಿದಳ ಧಾನ್ಯ ಬೆಳೆಗಳಾದ ಹೆಸರು, ಎಳ್ಳು, ಉದ್ದು, ಸೇರಿದಂತೆ ದ್ವಿದಳ ಧಾನ್ಯ ಮಳೆಯಿಲ್ಲದೆ ಒಣಗುತ್ತಿವೆ. ಜೊತೆಗೆ ಕಾಯಿ ಕಟ್ಟುವ ಸಮಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರನ್ನು ಆತಂಕ ಕ್ಕೀಡು ಮಾಡಿದೆ. ಈ ಬಾರಿ ಜಿಲ್ಲೆಯಾದ್ಯಂತ ವಾಡಿಕೆ ಮಳೆಗಿಂತ ಕಡಿಮೆ ಮಳೆ ಬಂದಿದ್ದು, 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 4,16,000ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇಲ್ಲಿಯವರೆಗೆ ಕೇವಲ 9921 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಚಿಕ್ಕನಾಯಕನಹಳ್ಳಿ 38264 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿತ್ತು. ಈವರೆಗೆ 832 ಹೆಕ್ಟೇರ್‌ ಪ್ರದೇಶ, ಗುಬ್ಬಿ ತಾಲೂಕಿನಲ್ಲಿ 31750 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕು ಈವರೆಗೆ 230 ಹೆಕ್ಟೇರ್‌ ಪ್ರದೇಶ, ಕುಣಿಗಲ್ ತಾಲೂಕಿನಲ್ಲಿ 44661 ಹೆಕ್ಟೇರ್‌ ಪ್ರದೇಶದಲ್ಲಿ ಈವರೆಗೆ 1952 ಹೆಕ್ಟೇರ್‌ ಪ್ರದೇಶ, ಮಧುಗಿರಿ ತಾಲೂಕಿನಲ್ಲಿ 38560 ಹೆಕ್ಟೇರ್‌ ಪ್ರದೇಶದಲ್ಲಿ 110 ಹೆಕ್ಟೇರ್‌ ಪ್ರದೇಶ, ಪಾವಗಡ ತಾಲೂಕಿನಲ್ಲಿ 73030 ಹೆಕ್ಟೇರ್‌ ಪ್ರದೇಶದಲ್ಲಿ ಈವರೆಗೆ 80 ಹೆಕ್ಟೇರ್‌ ಪ್ರದೇಶ, ಶಿರಾ ತಾಲೂಕಿನಲ್ಲಿ 61030 ಹೆಕ್ಟೇರ್‌ ಪ್ರದೇಶದಲ್ಲಿ ಈವರೆಗೆ 507 ಹೆಕ್ಟೇರ್‌ ಪ್ರದೇಶ, ತಿಪಟೂರು ತಾಲೂಕಿನಲ್ಲಿ 27720 ಹೆಕ್ಟೇರ್‌ ಪ್ರದೇಶದಲ್ಲಿ ಈವರೆಗೆ 3346 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತುಮಕೂರು ತಾಲೂಕಿನಲ್ಲಿ 38960 ಹೆಕ್ಟೇರ್‌ ಪ್ರದೇಶದಲ್ಲಿ ಈವರೆಗೆ 394 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ತುರುವೇಕೆರೆ ತಾಲೂಕಿ ನಲ್ಲಿ 27875 ಹೆಕ್ಟೇರ್‌ ಪ್ರದೇಶದಲ್ಲಿ ಈ ವರೆಗೆ 1230 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೊರಟಗೆರೆೆ ತಾಲೂಕಿನಲ್ಲಿ 34600 ಹೆಕ್ಟೇರ್‌ ಪ್ರದೇಶದಲ್ಲಿ 1240 ಹೆಕ್ಟೇರ್‌ ಪ್ರದೇಶ ದಲ್ಲಿಬಿತ್ತನೆಯಾಗಿದೆ. ಕಳೆದ ವರ್ಷ ಈ ವೇಳೆಗೆ 26 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.

ಶೇಂಗಾ ಬಿತ್ತನೆಯಲ್ಲಿ ಕುಂಠಿತ: ಜೂ.15ರಿಂದ ಜು.15 ರವರೆಗೆ ಶೇಂಗಾ ಬಿತ್ತನೆಗೆ ಸಕಾಲವಾಗಿದೆ. ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ ಶಿರಾ ತಾಲೂಕುಗಳಲ್ಲಿ ಶೇಂಗಾ ಬಿತ್ತನೆ ಮಾಡುತ್ತಾರೆ. ಈ ಭಾಗದಲ್ಲಿ ಮಳೆ ಕೊರತೆಯಾದ ಕಾರಣ ಶೇಂಗಾ ಬಿತ್ತನೆಯಲ್ಲಿ ಕುಂಠಿತವಾಗಿದ್ದು, ಶೇಂಗಾ ಬೆಳೆಯನ್ನು 121952 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲು ಗುರಿ ಹೊಂದಿದ್ದು, ಇಲ್ಲಿಯವರೆಗೆ 1172 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜು.15ರವೆರೆಗೆ ಬಿತ್ತನೆಗೆ ಕಾಲಾವ ಕಾಶವಿದೆ. ರೈತರು ಭೂಮಿ ಹಸನು ಮಾಡಿಕೊಂಡು ಬೀಜಗಳನ್ನು ಕೃಷಿ ಕೇಂದ್ರಗಳಲ್ಲಿ ಖರೀದಿಸಿದ್ದು, ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ.

ಬಿತ್ತನೆಯಲ್ಲಿ ಕುಂಠಿತ: ರಾಜ್ಯದ ವಿವಿಧ ಕಡೆ ಭ‌ರ್ಜರಿ ಮಳೆಯಾಗುತ್ತಿದೆ ಆದರೆ ಜಿಲ್ಲೆಯಲ್ಲಿ ಮುಂಗಾರು ಮಳೆ ಆಶಾದಾಯಕವಾಗಿ ಬರುತ್ತಿಲ್ಲ. ಜಿಲ್ಲೆಯ ರೈತರು ಪ್ರಧಾನ ಬೆಳೆಗಳಾದ ಶೇಂಗಾ ಹಾಗೂ ರಾಗಿ ಬೆಳೆ ಬಿತ್ತಲು ಭೂಮಿ ಹಸನು ಮಾಡಿಕೊಂಡು ಕಾಯುತ್ತಿದ್ದಾರೆ.

● ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

rdffggggf

40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್‌ ತುಂಡು ಹರಾಜು!

ಕಲ್ಲುಗಣಿ  ಪ್ರದೇಶಕ್ಕೆ  ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

fgdfgrr

ರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tytrytr

ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಜೆರಾಕ್ಸ್ ಅಂಗಡಿಯ ಲತಾ

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕುರುಬರ ಸಂಘದ ಒತ್ತಾಯ

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕುರುಬರ ಸಂಘದ ಒತ್ತಾಯ

thumakuru news

ಜಿಲ್ಲೆ ಅಭಿವೃದ್ದಿಗೆ ಸಾವಿರಾರು ಕೋಟಿ ರೂ. ಅನುದಾನ

thumakuru news

5 ಜಿಲ್ಲೆ ಕೈಮುಖಂಡರ ಸಭೆಗೆ ಸಜ್ಜು

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

MUST WATCH

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

udayavani youtube

ಅತಿವೃಷ್ಟಿ ಹೊಡೆತಕ್ಕೆ ನಲುಗಿದ ರೈತರು

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಹೊಸ ಸೇರ್ಪಡೆ

Untitled-1

ದ.ಕ. : ಏರುತ್ತಲೇ ಇದೆ ಕೋವಿಡ್ : 365 ಮಂದಿಗೆ ಸೋಂಕು, 7 ಸಾವು

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

rdffggggf

40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್‌ ತುಂಡು ಹರಾಜು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.