ಎಪ್ಲಾಸ್ಟಿಕ್‌ ಅನಿಮಿಯಾಕ್ಕೆ ತುತ್ತಾದ ವಿದ್ಯಾರ್ಥಿನಿ

Team Udayavani, Jul 20, 2019, 5:13 PM IST

ಚಿಕ್ಕನಾಯಕನಹಳ್ಳಿ: ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದ 3ನೇ ತರಗತಿಯ ವಿದ್ಯಾರ್ಥಿನಿ ಚೈತ್ರಾ ಅಪರೂಪದ ಕಾಯಿಲೆ ಎಪ್ಲಾಸ್ಟಿಕ್‌ ಅನಿಮಿಯಾದಿಂದ ಬಳಲುತಿದ್ದು, ಹೆತ್ತವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ದಾನಿಗಳ ನೆರವಿಗೆ ಕಾಯುತ್ತಿದ್ದಾರೆ.

ದೇಹದಲ್ಲಿ ರಕ್ತಕಣಗಳ ಉತ್ಪಾದನೆ ಕಡಿಮೆ ಯಾದಾಗ ಈ ಕಾಯಿಲೆ ಬರುವ ಸಾಧ್ಯತೆ ಇದ್ದು, ನಿಗದಿತ ಕಾರಣವಿರುವುದಿಲ್ಲ. 3 ಸಾವಿರ ಜನರಲ್ಲಿ ಒಬ್ಬರಿಗೆ ಬರಬಹುದಾದ ಕಾಯಿಲೆ. ಮೂಳೆ ಮಜ್ಜೆಯ ವೈಫ‌ಲ್ಯ ಎಂದು ಎಂದು ವೈದ್ಯರು ಹೇಳುತ್ತಾರೆ.

ಕಾಯಿಲೆ ಲಕ್ಷಣಗಳು: ದೇಹದ ತೂಕ ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ. ರಕ್ತಸ್ರಾವ, ಮೂಗು ಚರ್ಮ, ಮೂತ್ರದಲ್ಲಿ ರಕ್ತ ಕಂಡುಬರುತ್ತದೆ. ಆಯಾಸ, ಉಸಿರಾಟದ ತೊಂದರೆ, ಶೀತ, ಮೂಳೆ ಮಜ್ಜೆಯ ವೈಫ‌ಲ್ಯಗಳ ಲಕ್ಷಣ ಕಾಣಬಹುದಾಗಿದೆ.

ಕಾಯಿಲೆಗೆ ಕಾರಣ: ಅಪೌಷ್ಟಿಕತೆಯಿಂದ ಕಾಯಿಲೆ ಬರುತ್ತದೆ. ಅನುವಂಶಿಕ ಮೂಳೆ ಮಜ್ಜೆಯ ವೈಫ‌ಲ್ಯ, ರಕ್ತಹೀನತೆ, ದೇಹದಲ್ಲಿನ ರಕ್ತಕಣಗಳ ಉತ್ಪಾದನೆ ನ್ಯೂನತೆಯಿಂದ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿದೆ. ಗಾಣಧಾಳು ಮೇಲನಹಳ್ಳಿ ಗ್ರಾಮದ ಗುರುವಯ್ಯ ಎಂಬುವವರ ಮಗಳು ಚೈತ್ರಾಳಿಗೆ ಕಾಯಿಲೆ ಬಂದಿದ್ದು, ಚಿಕಿತ್ಸೆಗೆ 15 ಲಕ್ಷ ರೂ. ಬೇಕಾಗಬಹುದು.

ಆರೋಗ್ಯ ಇಲಾಖೆಗೆ ಮಾಹಿತಿ ಇಲ್ಲ: ಅಪರೂಪದ ಎಪ್ಲಾಸ್ಟಿಕ್‌ ಅನಿಮಿಯಾ ಕಾಯಿಲೆ ತಾಲೂಕಿನಲ್ಲಿ ವಿದ್ಯಾರ್ಥಿನಿಗೆ ಬಂದಿರುವ ಬಗ್ಗೆ ತಾಲೂಕು ವೈದ್ಯಾದಿಕಾರಿಗಳಿಗೆ ತಿಳಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕಾಯಿಲೆಯಿಂದ ಬಳಲುತ್ತಿರುವ ವಿದ್ಯಾರ್ಥಿನಿಗೆ ಸಹಾಯ ಮಾಡುವಂತೆ ಕೆಲವರು ಸಂದೇಶ ವೈರಲ್ ಆಗಿದ್ದರಿಂದ ವಿಷಯ ಗೊತ್ತಾಗಿದೆ. ಅಪೌಷ್ಟಿಕತೆ, ರೋಗಗಳ ಬಗ್ಗೆ ಜನರಿಗೆ ತಿಳಿಸಬೇಕಾದ ತಾಲೂಕು ಆರೋಗ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಅನುಮಾನ ಪಡುವಂತಾಗಿದ್ದು, ಇನ್ನು ಮುಂದಾ ದರೂ ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿ ಸುವುದೇ ಎಂಬುದನ್ನು ಕಾದುನೋಡಬೇಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹುಳಿಯಾರು: ಜಿಲ್ಲೆಯಲ್ಲೆ ಅತೀ ಹೆಚ್ಚು ರಾಗಿ ಬೆಳೆಯುವ ಪ್ರದೇಶವೆಂದು ಹೆಸರಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ...

  • ತುರುವೇಕೆರೆ: ರಾಜ್ಯದ ವಿವಿಧ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕೂಡಲೇ ಕಾಯಂಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು...

  • ಕೊರಟಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಬಿಕ್ಕೆಗುಟ್ಟೆ ಅಂಗನವಾಡಿ ಕಟ್ಟಡದ ಉನ್ನತೀಕರಣಕ್ಕೆ ಬಿಡುಗಡೆಯಾದ 2ಲಕ್ಷ ಅನುದಾನನವನ್ನು...

  • ಕುಣಿಗಲ್‌: ಸರ್ಕಾರಿ ರಸ್ತೆ ಹಾಗೂ ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗ ತೆರವುಗೊಳಿಸದ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರ ವಿರುದ್ಧ ಕ್ರಿಮಿನಲ್‌ ಪ್ರಕರಣ...

  • ತುಮಕೂರು: ಸರಿ ತಪ್ಪುಗಳ ವಿವೇಚನೆಯಿಂದ ಜಾಗೃತ ಮನಸ್ಸಿನಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ...

ಹೊಸ ಸೇರ್ಪಡೆ