
ಎಂಟು ಕೋವಿಡ್ ರೋಗಿಗಳ ಸ್ಥಿತಿ ಗಂಭೀರ
Team Udayavani, Jul 7, 2020, 7:20 AM IST

ತುಮಕೂರು: ಸಮುದಾಯದಲ್ಲಿ ಕೋವಿಡ್ 19 ತೀವ್ರವಾಗುತ್ತಿದೆ. ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಇನ್ನೂ 8 ಜನರ ಸ್ಥಿತಿ ಗಂಭೀರವಾಗಿದೆ. ಜಿಲ್ಲಾಡಳಿತದಿಂದ ಏನ್ನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡರೂ ನಮ್ಮ ಕೈತಪ್ಪುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ತಡೆಗಟ್ಟಲು ಜಿಲ್ಲಾಡಳಿತ ದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಕೋವಿಡ್-19 ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರು ವುದು ಕಳವಳಕಾರಿ ಸಂಗತಿ ಎಂದು ಆತಂಕ ವ್ಯಕ್ತ ಪಡಿಸಿದರು.
61 ಮಂದಿ ಗುಣಮುಖ: ಜಿಲ್ಲೆಯಲ್ಲಿ ಈವರೆಗೆ ಒಟ್ಟು 252 ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಭಾನುವಾರ ಒಂದೇ ದಿನದಲ್ಲಿ 31 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದುವರೆಗೆ ವರದಿಯಾದ 252 ಸೋಂಕಿತರ ಪೈಕಿ 61 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿದ್ದು, ಉಳಿದಂತೆ 183 ಸಕ್ರಿಯ ಪ್ರಕರಣಗಳಿದ್ದು, 8 ಮಂದಿ ಮರಣ ಹೊಂದಿದ್ದಾರೆ. ಈವರೆಗೆ 20512 ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳ ಪಡಿಸಲಾಗಿದ್ದು, 1395 ಜನರನ್ನು ನಿಗಾವಣೆ ಯಲ್ಲಿಡಲಾಗಿದೆ. ಈ ಪೈಕಿ 16,879 ಮಾದರಿ ಗಳು ನೆಗೆಟಿವ್ ಪ್ರಕರಣವೆಂದು ವರದಿ ಯಾಗಿದೆ ಎಂದರು.
200 ಹಾಸಿಗೆ ವ್ಯವಸ್ಥೆ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆಗಾಗಿ 200 ಹಾಸಿಗೆಗಳ ವ್ಯವಸ್ಥೆಯಿದ್ದು, ಹೆಚ್ಚುವರಿಯಾಗಿ 150 ಸೇರಿ ಒಟ್ಟು 350 ಹಾಸಿಗೆಗಳ ಹಾಗೂ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಠ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವೈದ್ಯಕೀಯ ಕಾಲೇಜು ಗಳಲ್ಲಿ 500 ಹಾಸಿಗೆಗಳು ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಿಗೂ ಹಾಸಿಗೆಗಳ ವ್ಯವಸ್ಥೆ ಒದಗಿ ಸಲು ಮನವಿ ಮಾಡಲಾಗಿದೆ ಎಂದರು.
93ಕೋವಿಡ್ ಕೇರ್ ಸೆಂಟರ್: ಜಿಲ್ಲೆಯಲ್ಲಿ 93ಕೋವಿಡ್ ಕೇರ್ ಸೆಂಟರ್‌ಗಳಿದ್ದು, ಈ ಸೆಂಟರ್‌ನಲ್ಲಿ ರೋಗ ಲಕ್ಷಣಗಳಿ ಲ್ಲದ ಅಥವಾ ಸಣ್ಣ-ಪುಟ್ಟ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವವ ರಿಗೆ ಈ ಸೋಂಕು ತಗುಲಿದರೆ ಗುಣಪಡಿ ಸುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಉದಾಸೀನ ಮಾಡದೇ ಕೆಮ್ಮು, ನೆಗಡಿ, ಶೀತ, ಜ್ವರ, ಮತ್ತಿತರ ರೋಗಲಕ್ಷಣಗಳು ಕಂಡುಬಂದರೆ ಕೂಡಲೇ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೊರ ಜಿಲ್ಲೆಯಿಂದ ಬಂದ್ರೆ ಮಾಹಿತಿ ನೀಡಿ: ಸಾರ್ವಜನಿಕರು ಗೃಹ ದಿಗ್ಬಂಧನ ಹೋಂ ಕ್ವಾರಂಟೈನ್ ವನ್ನು ಗಂಭೀರವಾಗಿ ಪರಿಗಣಿ ಸದೇ ಇರುವುದೂ ಸಹ ಸೋಂಕು ಹೆಚ್ಚಾಗಿ ಹರಡಲು ಕಾರಣವಾಗಿದೆ. ಸಾಂಸ್ಥಿಕ ದಿಗ್ಬಂಧನ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕ್ಕೊಳಗಾಗಲು ಜನರು ಸಹಕರಿಸುತ್ತಿಲ್ಲ. ಹೋಂ ಕ್ವಾರಂಟೈನ್ ಆದವರು ಇತರರೊಂದಿಗೆ ನಿಕಟ ಸಂಪರ್ಕ ಹೊಂದುವುದನ್ನು ತಪ್ಪಿಸದಿದ್ದರೆ ಮುಂದೆ ಬಹು ಕ್ಲಿಷ್ಟಕರ ಸಮಸ್ಯೆ ಎದುರಾಗುವುದರಲ್ಲಿ ಸಂದೇಹವಿಲ್ಲ.
ಈಗಾಗಲೇ ಸೋಂಕು ಗ್ರಾಮಗಳಿಗೂ ಕಾಲಿಟ್ಟಿರುವುದರಿಂದ ಸಾರ್ವಜನಿ ಕರು ತಮ್ಮ ಕುಟುಂಬದ ಸದಸ್ಯನೇ ಆಗಿದ್ದರೂ ಸಹ ಹೊರಗಿನಿಂದ ಬಂದವರನ್ನು ತಪಾಸಣೆ ಗೊಳಪಡಿಸದೇಮನೆಯಲ್ಲಿಟ್ಟುಕೊಳ್ಳಬಾರದು. ಹೊರ ಜಿಲ್ಲೆಯಿಂದ ಬರುವವರ ಬಗ್ಗೆ ಜಿಲ್ಲಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು. ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಡೀಸಿ ಡಾ. ಕೆ. ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾ ಕಲ್ಯಾಣ್, ಉಪ ವಿಭಾಗಾಧಿಕಾರಿ ಅಜಯ್ ಇದ್ದರು.
ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರ ಪೈಕಿ ಉಸಿರಾಟದ ಸಮಸ್ಯೆಯಿಂದ 8 ಮಂದಿ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಹಾಗೂ 8 ಮಕ್ಕಳು ಗುಣಮುಖರಾಗುತ್ತಿದ್ದಾರೆ.
-ಡಾ.ವೀರಭದ್ರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಪೇಶಾವರದಲ್ಲಿ ತಾಲಿಬಾನ್ ಅಟ್ಟಹಾಸ: 46 ಸಾವು,150ಕ್ಕೂ ಹೆಚ್ಚು ಮಂದಿಗೆ ಗಾಯ

ಗೋರಖ್ನಾಥ್ ದೇಗುಲ ದಾಳಿ: ಆರೋಪಿ ಅಹ್ಮದ್ ಮುರ್ತಾಜಾಗೆ ಮರಣದಂಡನೆ ಶಿಕ್ಷೆ

ಡಿಕೆಶಿ, ಸಿದ್ದರಾಮಯ್ಯ ಮಕ್ಕಳು ಬಿಜೆಪಿಗೆ: ನಳಿನ್ ಕುಮಾರ್ ಕಟೀಲ್

ಬಿಜೆಪಿಯಲ್ಲೇ ಕುಟುಂಬ ರಾಜಕಾರಣ ಹೆಚ್ಚು… ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆದರೆ ತಪ್ಪೇನು?

ಫೆ.6ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ; ಕಾರ್ಯಕ್ರಮದ ವಿವರ ಹೀಗಿದೆ