ಕಾಂಗ್ರೆಸ್‌ನಿಂದ ದೇಶದ ಜನರಹಿತ ಕಡೆಗಣನೆ

ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎಂ.ಆರ್‌.ಹುಲಿನಾಯ್ಕರ್‌ ಕಿಡಿ

Team Udayavani, Aug 9, 2021, 5:06 PM IST

ಕಾಂಗ್ರೆಸ್‌ನಿಂದ ದೇಶದ ಜನರಹಿತ ಕಡೆಗಣನೆ

ತುಮಕೂರು: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೋವಿಡ್‌ ಮಹಾಮಾರಿಯಂತಹ ಗಂಭೀರ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಮಾಡುವ ಬದಲು ಪ್ರಮುಖ ವಿಪಕ್ಷ ಕಾಂಗ್ರೆಸ್‌ ಪಲಾಯನ ಮಾಡಿ ಬೇಜವಾಬ್ದಾರಿ ತೋರುತ್ತಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎಂ.ಆರ್‌. ಹುಲಿನಾಯ್ಕರ್‌ಕಿಡಿ ಕಾರಿದರು.

ನಗರದ ಪತ್ರಿಕಾಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನ ಕೋವಿಡ್‌ ದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಉದ್ಭವವಾಗಿರುವ ಆರ್ಥಿಕ ಸಮಸ್ಯೆ, ಉತ್ಪಾದನಾ ಕ್ಷೇತ್ರದ ಸವಾಲುಗಳ ಬಗ್ಗೆ ಚರ್ಚೆ ನಡೆಸಬೇಕಾದ ಪ್ರಮುಖ ವಿಪಕ್ಷ ಕಾಂಗ್ರೆಸ್‌ ದೇಶದ ಜನರ ಹಿತವನ್ನು ಕಡೆಗಣಿಸಿದೆ. ಪಾರ್ಲಿಮೆಂಟ್‌ ಅಧಿವೇಶನದಲ್ಲಿ ಕಾಂಗ್ರೆಸ್‌ ಭಾಗವಹಿಸಲಾಗದೆ ಗದ್ದಲ, ಗೋಜಲುಗಳಿಗೆ ಎಡೆಮಾಡಿಕೊಂಡು ಸಂವಿಧಾನಕ್ಕೆ ವಿರೋಧವಾಗಿ ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗುತ್ತಿದೆ ಎಂದು ಆರೋಪಿಸಿದರು.

ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ: ದೇಶದಲ್ಲಿ ಮತ್ತು ಗಡಿಯಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸ ಬೇಕಿದೆ. ದೇಶದ ಆಂತರಿಕ ಭದ್ರತೆ, ಗಡಿಯಾಚೆಗೆ ಉಲ್ಬಣಗೊಳ್ಳುತ್ತಿರುವ ಅಫ‌ಘಾನಿಸ್ತಾನದ ಸಮಸ್ಯೆಯ ಪರಿಣಾಮ, ನಮ್ಮ ದೇಶವನ್ನು ಅತಂತ್ರಗೊಳಿಸುವ ಪಾಕಿಸ್ತಾನ ಮತ್ತು ಚೀನಾದ ಷಡ್ಯಂತ್ರ ಹಾಗೂ ಇನ್ನಿತರ ಅನೇಕ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆ ಯುವ ಅಗತ್ಯವಿದೆ. ಅನೇಕ ಪ್ರಮುಖ ವಿಧೇಯಕಗಳ ಮಂಡನೆ ಆಗುವ ಈ ಸಂದರ್ಭದಲ್ಲಿ ಸದನದ ಕಲಾಪಗಳನ್ನು ಸ್ಥಗಿತಗೊಳಿಸುವ ಮತ್ತು ಚರ್ಚೆಗಳಿಂದ ಪಲಾಯನ ಮಾಡುವ ಕಾಂಗ್ರೆಸ್‌ನ ಈ ಮಾನಸಿಕತೆ ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರು.

ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ಒತ್ತಾಯಿಸುತ್ತಿದ್ದ ವಿಪಕ್ಷಗಳು ಈಗ ಸಂಸತ್ತಿನ ಅಧಿವೇಶನವು ನಡೆಯುವ ಸಂದರ್ಭದಲ್ಲಿ ಈ ಸಾಂಕ್ರಾಮಿಕ ರೋಗದಪರಿಣಾಮಗಳ ಕುರಿತು ಚರ್ಚಿಸಲು ಹಿಂದೇಟು ಹಾಕುತ್ತಿರುವುದು ವಿಪಕ್ಷಗಳ ರಾಜಕೀಯ ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಗೋವಾ ಕಾಂಗ್ರೇಸ್ ನ ಸಮನ್ವಯಕರನ್ನಾಗಿ ಚಿದಂಬರಂ ನಿಯುಕ್ತಿ

ಕೋವಿಡ್‌ ನಿರ್ವಹಣೆಯಲ್ಲಿ ಯಶಸ್ವಿ: ಬಿಜೆಪಿ ಜಿಲ್ಲಾ ವಕ್ತಾರ ಕೊಪ್ಪಳ್‌ ನಾಗರಾಜ್‌ ಮಾತನಾಡಿ, ಪ್ರಧಾನಿ ನೇತೃತ್ವದಲ್ಲಿ ಸರ್ಕಾರ ಕೈಗೆತ್ತಿಕೊಂಡಿರುವ ಕೋವಿಡ್‌ ನಿರ್ವಹಣೆಯ ಚಟುವಟಿಕೆಗಳು ಜಗತ್ತಿನಲ್ಲೇ ಮಾದರಿ ಎನಿಸಿಕೊಂಡಿ ರುವುದು ವಾಸ್ತವ. ಸುಪ್ರೀಂ ಕೋರ್ಟಿನ ಸಲಹೆ ಮತ್ತು ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಅನುಸರಿಸಿದ್ದು, ಕೋವಿಡ್‌ ಮಹಾಮಾರಿ ನಿರ್ವಹಣೆಯಲ್ಲಿ ಯಶಸ್ಸನ್ನು ಗಳಿಸಿದೆಎಂದರು. ಕೋವಿಡ್‌ ಸಾಂಕ್ರಾಮಿಕದಿಂದ ಹಲವಾರು ದೇಶಗಳು ಆರ್ಥಿಕವಾಗಿ ನೆಲಕಚ್ಚಿರುವ ಸಂದರ್ಭದಲ್ಲಿ ಹಲವಾರು ಸಂಕಷ್ಟಗಳು ಮತ್ತು ಸವಾಲುಗಳ ನಡುವೆಯೂ, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಣಾಯಕ ನಾಯಕತ್ವದಲ್ಲಿ ಭಾರತವು ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಸೋಲಿಸಲು ಕೈಗೊಂಡಿ ರುವ ಕ್ರಾಂತಿಕಾರಿ ನಿರ್ಣಯ ಅಭೂತ ಪೂರ್ವವಾಗಿದ್ದು ಜಗತ್ತಿನಲ್ಲೇ ಶ್ಲಾಘಿಸಲ್ಪಟ್ಟಿರುವುದು ಸ್ವಾಗತಾರ್ಹ ಬೆಳೆವಣಿಗೆ ಎಂದರು.

ಲಸಿಕಾ ಕಾರ್ಯಕ್ರಮ: ಕೋವಿಡ್‌ ಪರೀಕ್ಷೆ, ಯುಧ್ದೋಪಾದಿಯಲ್ಲಿಸೇನಾ ವಿಮಾನಗಳು, ಯುದ್ಧನೌಕೆಗಳು ಮತ್ತು ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲುಗಳ ಮೂಲಕ ಆಮ್ಲಜನಕದ ಸರಬರಾಜು, ಆಮ್ಲಜನಕ ಸ್ಥಾವರಗಳ ನಿರ್ಮಾಣ, ಆಮ್ಲಜನಕದ ಸಾಂದ್ರಕ ವ್ಯವಸ್ಥೆ, ವೆಂಟಿಲೇಟರ್‌ ವ್ಯವಸ್ಥೆ, ವೈದ್ಯಕೀಯ ನೆರವು, ವಿಶ್ವದಲ್ಲೇ ದಾಖಲೆ ಎನಿಸಿರುವ ಲಸಿಕಾಕಾರ್ಯಕ್ರಮ ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ವನ್ನು ಹತೋಟಿಗೆತರುವಲ್ಲಿ ಯಶಸ್ಸನ್ನು ಕಂಡಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ವಕ್ತಾರ ಕೊಪ್ಪಳ್‌ ನಾಗರಾಜ್‌, ಮಾಧ್ಯಮ ವಕ್ತಾರ ಶಿವಕುಮಾರ್‌, ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಪ್ರೇಮಾ ಹೆಗ್ಡೆ ಇದ್ದರು.

ವಿಪಕ್ಷಗಳು ನಡೆಸಿರುವ
ಕೃತ್ಯಗಳು ಸರಿಯಲ್ಲ
ಕಾಂಗ್ರೆಸ್‌ಗೆ ಸದನದಲ್ಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿ ಸರ್ಕಾರದಿಂದ ಜನಸಾಮಾನ್ಯರ ಪರವಾಗಿ ಸ್ಪಷ್ಟ ಉತ್ತರ ಪಡೆಯುವ ಎಲ್ಲ ಅವಕಾಶಗಳಿದ್ದರೂ, ಸದನಗೊಳಗೆ ಗದ್ದಲ, ಗಲಾಟೆ ಮತ್ತು ಅಸಂವಿಧಾನಿಕ ಪ್ರಕ್ರಿಯೆಗಳ ಮೂಲಕ ವಿಪಕ್ಷಗಳು ನಡೆಸಿರುವ ಕೃತ್ಯಗಳು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನದ ಆಶಯಗಳಿಗೆ ಮಾಡಿರುವ ದ್ರೋಹ ಎಂದು ಮಾಜಿ ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ. ಎಂ.ಆರ್‌. ಹುಲಿನಾಯ್ಕರ್‌ ಆಕ್ರೋಶ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

1-wwqwq

ಫ್ರೆಂಚ್‌ ಲೇಖಕಿ ಆ್ಯನಿ ಎರ್ನಾಕ್ಸ್‌ಗೆ ಒಲಿದ ಸಾಹಿತ್ಯ ನೊಬೆಲ್‌

1-ssdsdda

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ 38.53 ಲಕ್ಷ ರೂ. ಮೌಲ್ಯದ ಚಿನ್ನ ವಶ,

ಮಂಗಳೂರು ವಿಮಾನ ನಿಲ್ದಾಣದಲ್ಲಿ 38.53 ಲಕ್ಷ ರೂ. ಮೌಲ್ಯದ ಚಿನ್ನ ವಶ

ಜಪಾನ್‌ನತ್ತ ಉ.ಕೊರಿಯಾ ಕ್ಷಿಪಣಿ : ಭಾರತ ಖಂಡನೆ

ಜಪಾನ್‌ ಕಡೆಗೆ ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ : ಭಾರತ ಖಂಡನೆ

CM-@-4

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರಧಾನಿಗಳಿಂದ ಉದ್ಘಾಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

26

ಅವಹೇಳನಕಾರಿ ಪೋಸ್ಟ್‌ : ದೂರು

24

ಕುಣಿಗಲ್: ಹಾಳಾದ ರೈಲ್ವೆ ಮೇಲ್ಸೇತುವೆ: ಜೀವ ಭಯದಲ್ಲಿ ಸಂಚಾರ

accident

ಕೊರಟಗೆರೆ : ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವು

23

ಕುಣಿಗಲ್: ಯಲಿಯೂರು ಗ್ರಾ.ಪಂ. ಅಧ್ಯಕ್ಷರಾಗಿ ನಾಗವೇಣಿ ಕುಮಾರ್ ಅವಿರೋಧ ಆಯ್ಕೆ

1-sdsdad

ಕೊರಟಗೆರೆಯ ಈ ಕುಗ್ರಾಮ  ಮೂಲಭೂತ ಸೌಕರ್ಯ ವಂಚಿತವಾಗಿದೆ

MUST WATCH

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

ಹೊಸ ಸೇರ್ಪಡೆ

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

1-wwqwq

ಫ್ರೆಂಚ್‌ ಲೇಖಕಿ ಆ್ಯನಿ ಎರ್ನಾಕ್ಸ್‌ಗೆ ಒಲಿದ ಸಾಹಿತ್ಯ ನೊಬೆಲ್‌

1-sddsdsad

ಸಿಎಂ ಕೃಪೆಯಿಂದಾದರೂ ಕುಷ್ಟಗಿ ಮುಖ್ಯ ರಸ್ತೆ ಅಭಿವೃದ್ಧಿ ಹೊಂದುವುದೇ?

1-ssdsdda

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.