ಇರುವ ನೀರು ಬೇಸಿಗೆಗೆ ಸಾಲುವುದಿಲ್ಲ

15 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು • ನಿರೀಕ್ಷೆಯಷ್ಟು ಮಳೆಯಾಗದೇ ಬೆಳೆ ಸಂಪೂರ್ಣ ನಾಶ

Team Udayavani, May 15, 2019, 5:18 PM IST

tumkur-tdy-1..

ಮಧುಗಿರಿ ತಾಲೂಕಿನಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿರುವುದು.

 

ತುಮಕೂರು: ಬಹುತೇಕ ಬಯಲು ಸೀಮೆ ಪ್ರದೇಶವಾಗಿರುವ ಮಧುಗಿರಿಯಲ್ಲಿ ಬರದ ಬರ ಸಿಡಿಲು ಜಾನುವಾರುಗಳ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ದನ ಕರುಗಳನ್ನು ಸಾಕಲು ರೈತರು ಪಡಬಾರದ ಪಾಟಲು ಬೀಳುತ್ತಿದ್ದಾರೆ. ಎಲ್ಲಿ ಹೋದರೂ ಮೇವಿಲ್ಲ, ಇರುವ ನೀರು ಈ ಬೇಸಿಗೆ ಎದುರಿಸಲು ಸಾಕಾಗುವುದಿಲ್ಲ. ಮುಂದೇನು ಮಾಡುವುದೇ ಎನ್ನುವುದೇ ರೈತರ ಅಳಲಾಗಿದೆ.

ಅತಿ ಕಡಿಮೆ ಮಳೆ: ಕೃಷಿ ಪ್ರಧಾನವಾಗಿರುವ ಮಧುಗಿರಿ ತಾಲೂಕಿನಲ್ಲಿ ಶೇಂಗಾ ಬೆಳೆಯೇ ಹೆಚ್ಚಾಗಿದ್ದು, ಕಳೆದ ವರ್ಷವೂ ನಿರೀಕ್ಷೆಯಷ್ಟು ಮಳೆಯಾಗದೇ ಬೆಳೆ ಸಂಪೂರ್ಣವಾಗಿ ವಿಫ‌ಲವಾಗಿತ್ತು. ಈ ವರ್ಷ ಮಳೆ ಬರುತ್ತದೆ ಎಂದು ನಿರೀಕ್ಷೆಯಿಟ್ಟಿದ್ದ ಈ ತಾಲೂಕಿನ ರೈತರಿಗೆ ನಿರಾಶೆಯಾಗುವಂತೆ ಮಳೆ ಬಿದ್ದಿದೆ. 2019ರ ಜನವರಿಯಿಂದ ಮೇ ತಿಂಗಳ ಈವರೆಗೆ ಬಿದ್ದಿರುವ ಮಳೆಯ ಪ್ರಮಾಣ ನೋಡಿದರೆ. ವಾಡಿಕೆ ಮಳೆಗಿಂತ ಅತಿ ಕಡಿಮೆ ಮಳೆ ಬಿದ್ದಿದೆ. ಈ ವೇಳೆಗೆ ವಾಸ್ತವಾಗಿ 63,2 ಮಿ.ಮೀ ಮಳೆಯಾಗಬೇಕಿತು. ವಾಡಿಕೆಯಂತೆ 47,6 ಮಿ.ಮೀ ಮಳೆಯಾಗಬೇಕಿತು. ಆದರೆ, ಈ ತಾಲೂಕಿನಲ್ಲಿ ಬಿದ್ದಿರುವ ಮಳೆ 32,9 ಮಿ.ಮೀ ಮಳೆ ಬಿದ್ದಿದ್ದು ವಾಸ್ತವಿಕ ಮತ್ತು ವಾಡಿಕೆ ಮಳೆಗಿಂತಲೂ ಅತಿ ಕಡಿಮೆ ಮಳೆಯಾಗಿದೆ.

ಈ ತಾಲೂಕಿನಲ್ಲಿ ಬಹುವಾರ್ಷಿಕ ಬೆಳೆಗಳಾದ ತೆಂಗು, ಅಡಕೆ, ದಾಳಿಂಬೆ ಸೇರಿದಂತೆ ವಿವಿಧ ಬೆಳೆಗಳು ಮಳೆ ಕೊರತೆಯಿಂದ 1925 ಹೆಕ್ಟೇರ್‌ ಪ್ರದೇಶ ಹಾನಿಗೊಳಗಾಗಿದೆ. ವಾರ್ಷಿಕ ತೋಟಗಾರಿಕಾ ಬೆಳೆಗಳಾದ ಬಾಳೆ, ಟೊಮೆಟೋ, ಹೂ- ತರಕಾರಿ ಬೆಳೆಗಳು 295 ಹೆಕ್ಟೇರ್‌ ಪ್ರದೇಶ ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.

ತಾಲೂಕಿನಲ್ಲಿ ಜಾನುವಾರುಗಳು ಎಷ್ಟು?: ತಾಲೂಕಿನಲ್ಲಿ ಕಳೆದ 2012ರ ಜಾನುವಾರು ಜನಗಣತಿಯಂತೆ ತಾಲೂಕಿನಲ್ಲಿ 50501 ದನಗಳಿದ್ದು, 12852 ಎಮ್ಮೆಗಳಿವೆ. ಇದಲ್ಲದೇ 94463 ಕುರಿಗಳು, 28820 ಮೇಕೆಗಳು ತಾಲೂಕಿನಲ್ಲಿವೆ. ಪ್ರತಿವರ್ಷ ಮಳೆಗಾಲದಲ್ಲಿ ಕನಿಷ್ಠ ದನ ಕರುಗಳಿಗೆ ಮೇವಾಗುವಂತೆ ಅಲ್ಲಲ್ಲಿ ಮಳೆಯಾಗುತ್ತಿತ್ತು. ಆದರೆ, ಈ ವರ್ಷ ತಾಲೂಕಿನಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಈ ತಾಲೂಕಿನ ಅಲ್ಲಲ್ಲಿ ಹಸಿರು ಹುಲ್ಲು ದೊರೆತ್ತಿದ್ದರೆ. ದನ, ಎಮ್ಮೆ, ಕುರಿ ಮೇಕೆಗಳಿಗೆ ಮೇವು ಸಿಗುತ್ತಿತ್ತು. ಆದರೆ, ಈ ವರ್ಷ ಮೇ ತಿಂಗಳು ಕೊನೆಯಾಗುತ್ತಾ ಬಂದು ಜೂನ್‌ ತಿಂಗಳು ಬರುತ್ತಿದ್ದರೂ ಇನ್ನೂ ಮಳೆ ಕೊರತೆಯುಂಟಾಗಿ ಬಿಸಿಲ ಝಳ ತೀವ್ರವಾಗಿ ದನ ಕರುಗೆ ಮೇವು ಸಿಗದಂತಾಗಿದೆ.

ಕಳೆದ ವರ್ಷ ಭೀಕರ ಬರ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಈ ವರ್ಷ ಪೂರ್ವ ಮುಂಗಾರು ಮಳೆ ಆರಂಭವಾದರೂ ಮಳೆ ಬರದ ಹಿನ್ನೆಲೆಯಲ್ಲಿ ಕೆರೆ, ಕಟ್ಟೆ, ಹಳ್ಳ, ಕೊಳ್ಳಗಳಲ್ಲಿ ನೀರಿಲ್ಲದೇ ದನ ಕರುಗಳು ಪರಿತಪಿಸುತ್ತಿವೆ. ಈ ತಾಲೂಕಿನಲ್ಲಿ ಆರಂಭದಲ್ಲಿ ಬಂದ, ಅಲ್ಪ, ಸ್ವಲ್ಪ ಮಳೆಯಿಂದಾಗಿ, ಇಲ್ಲಿಯವರೆಗೆ ದನ‌ಕರುಗಳಿಗೆ ಅಷ್ಟು ನೀರಿನ ಸಮಸ್ಯೆ ಕಂಡು ಬರಲಿಲ್ಲ. ಈ ತಾಲೂಕಿನಲ್ಲಿ 63353 ದನ, ಎಮ್ಮೆಗಳಿಗೆ 7 ವಾರಗಳಿಗೆ ಆಗುವಷ್ಟು 2217 ಟನ್‌ ಮೇವು ಲಭ್ಯವಿದೆ. ತಾಲೂಕಿನ 6 ಕಡೆಗಳಲ್ಲಿ ಮೇವಿನ ಬ್ಯಾಂಕ್‌ ಪ್ರಾರಂಭ ಮಾಡಲಾಗಿದೆ.

ಕೊಡಿಗೇನಹಳ್ಳಿ ಪೊಲೀಸ್‌ ಮೈದಾನ, ಬಡವನಹಳ್ಳಿ ತೋಟಗಾರಿಕಾ ಫಾರಂ, ಮಿಡಿಗೇಶಿ ವಾಲೀಕಿ ಭವನ, ಪುರವರ ದೊಡ್ಡ ಹೊಸಹಳ್ಳಿ ಹುಣಸೇತೋಟ, ಕಸಬಾ ಎಪಿಎಮ್‌ಸಿ ಯಾರ್ಡ್‌, ಐಡಿಹಳ್ಳಿಯಲ್ಲಿ ಮೇವು ಬ್ಯಾಂಕ್‌ ಆರಂಭ ಮಾಡಲಾಗಿದೆ. ಇಲ್ಲಿಯ ಜಾನುವಾರುಗಳಿಗೆ ಅನುಗುಣವಾಗಿ ಮೇವು ಬ್ಯಾಂಕ್‌ ಇನ್ನು ಇದ್ದು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎನ್ನವುದು ಇಲ್ಲಿನ ರೈತರ ಒತ್ತಾಯವಾಗಿದೆ.

ಜಾನುವಾರಿಗೆ ಮೇವಿನ ಭೀಕರತೆ ಹೆಚ್ಚಲಿದೆ: ತಾಲೂಕಿನಲ್ಲಿ ಈ ವರ್ಷ ಆರಂಭದಲ್ಲಿ ಮಳೆ ಬಂದಿತು. ಆದ್ದರಿಂದ ಈ ತಾಲೂಕಿನಲ್ಲಿ ಅಲ್ಲಲ್ಲಿ ನೀರು ನಿಂತ ಪರಿಣಾಮ ಜನ, ಜಾನುವಾರುಗಳಿಗೆ ಈವರೆಗೆ ನೀರಿನ ಸಮಸ್ಯೆ ಕಂಡಿಲ್ಲ. ಆದರೆ, ದಿನೇ ದಿನೆ ಬಿಸಿಲಿನ ಬೇಗೆ ತೀವ್ರವಾಗುತ್ತಿದೆ. ಮುಂದೆ ಜಾನುವಾರುಗಳಿಗೆ ಸಂಕಷ್ಟ ಎದುರಾಗಲಿದೆ. ಮಳೆ ಇಲ್ಲದೇ ಯಾವ ರೈತರು ಬಣವೆಗಳನ್ನು ಒಟ್ಟಿ ಹುಲ್ಲು ಶೇಖರಣೆ ಮಾಡಿಕೊಂಡಿಲ್ಲ. ಅಲ್ಲಲ್ಲಿ ಅಲ್ಪ, ಸ್ವಲ್ಪ ಇದ್ದ ಮೇವನ್ನು ಮೇವರೆಗೆ ಕೆಲ ಹೋಬಳಿಗಳ ರೈತರು ಜಾನುವಾರುಗಳ ನಿಗಾ ವಹಿಸಿದ್ದರು. ಆದರೆ, ಜೂನ್‌ ಆರಂಭಕ್ಕೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇನ್ನೂ ತೀವ್ರಗೊಳ್ಳಲಿದೆ. ಇಲಾಖೆ ಅಧಿಕಾರಿಗಳು ಹೇಳುವಂತೆ ಮುಂದಿನ 7 ವಾರಗಳ ವರೆಗೆ ಮಧುಗಿರಿ ತಾಲೂಕಿನಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ, ಆದರೆ ಮೇ ನಂತರ ಇಲ್ಲಿಯೂ ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ತೀವ್ರಗೊಳ್ಳುವ ಲಕ್ಷಣಗಳಿವೆ.

ನೀರಿಗೆ ತೊಟ್ಟಿ ನಿರ್ಮಾಣ: ತಾಲೂಕಿನಲ್ಲಿ ಮಳೆ ಬಾರದೆ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಜನುವಾರುಗಳಿಗೆ ಎಲ್ಲಿಯೂ ಕುಡಿಯುವ ನೀರು ಸಿಗದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜನ ವಸತಿ ಪ್ರದೇಶದಲ್ಲಿ ಜಾನುವಾರುಗಳಿಗಾಗಿ ಕುಡಿಯವ ನೀರಿನ ತೊಟ್ಟಿಗಳನ್ನು ಮಾಡಲಾಗಿದೆ. ಒಟ್ಟಾರೆಯಾಗಿ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಲ್ಲಿ ಸಮರ್ಪಕವಾಗಿ ಮಳೆ ಬರುತ್ತಿರಲಿಲ್ಲ. ಬರಗಾಲ ಮುಂದುವರಿದೇಯಿತ್ತು. ಆದರೆ, ಈ ವರ್ಷ ತೀವ್ರರೀತಿಯ ಬರಗಾಲ ಎದುರಾಗಿದೆ.

ಕುಡಿಯುವ ನೀರಿಗೂ ತಾತ್ವಾರ: ಮಧುಗಿರಿ ತಾಲೂಕಿನಲ್ಲಿ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಂಡು ಬಂದಿರಲಿಲ್ಲ. ಈ ಬಾರಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಹಿಂದೆ ಕೆರೆಗಳಲ್ಲಿ ಮಳೆ ನೀರು ನಿಂತು ಅಂತರ್ಜಲ ಹೆಚ್ಚಿಸಿದ ಪರಿಣಾಮ ಈವರೆಗೆ ಕುಡಿಯುವ ನಿರಿನ ಸಮಸ್ಯೆ ಕಂಡು ಬಂದಿರಲಿಲ್ಲ. ತಾಲೂಕಿನಲ್ಲಿ ಈ ವರ್ಷ ಹೊಸದಾಗಿ 100 ಹೊಸದಾಗಿ ಕೊಳವೆ ಬಾವಿಗಳನ್ನು ಕೊರಸಲಾಗಿದ್ದು, ಆದರೆ ಅದರಲ್ಲಿ 65 ಸಫ‌ಲಾವಗಿ 35 ಕೊಳವೆಬಾವಿಗಳು ವಿಫ‌ಲಗೊಂಡಿವೆ. ತಾಲೂಕಿನಲ್ಲ 216 ಶುದ್ಧ ಕುಡಿಯುವ ನೀರಿನ ಘಟಕ ಆಳವಡಿಸಬೇಕಾಗಿದ್ದು, ಈ ವರೆಗೆ 213 ಘಟಕಗಳನ್ನು ಆಳವಡಿಸಲಾಗಿದೆ. 211 ಘಟಕಗಳು ಕಾರ್ಯ ಆರಂಭಗೊಂಡಿವೆ. 2 ಘಟಕಗಳು ಇನ್ನು ಕಾರ್ಯಾರಂಭ ಮಾಡಬೇಕಾಗಿದೆ. ಮುಂದೆ ಇನ್ನು 50 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆಗಳು ಇದ್ದು, ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಕ್ರಿಯಾಯೋಜನೆ ತಯಾರಿಸಲಾಗಿದೆ.

ಮಧುಗಿರಿ ಪಟ್ಟಣದಲ್ಲಿಯೂ ಕುಡಿಯುವ ನೀರಿಗೆ ತೀವ್ರ ಹಾಹಕಾರ ಉಂಟಾಗಿದೆ. ಪುರಸಭೆಯ 23 ವಾರ್ಡ್‌ಗಳ ಪೈಕಿ 2 ವಾರ್ಡ್‌ಗಳಿಗೆ 3 ದಿನಕ್ಕೆಮ್ಮೆ, ಇನ್ನ 21 ವಾರ್ಡ್‌ಗಳಿಗೆ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ. ಹೆಚ್ಚು ನೀರಿನ ಸಮಸ್ಯೆ ಇರುವ ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಂಡು ಬರುವ ಲಕ್ಷಣಗಳಿವೆ.

ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ:

ಮಧುಗಿರಿ ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈ ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ಹತಾಶರಾಗಿಗಬೇಡಿ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಗಳನ್ನು ಕೈಗೊಂಡಿದ್ದು, ಜಾನುವಾರುಗಳಿಗೆ ಮೇವನ್ನು ಪ್ರತಿ ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು, ಮೇವು ವಿತರಣೆಯಲ್ಲಿ ಮಧುಗಿರಿ ಮಾದರಿ ಕ್ಷೇತ್ರವಾಗಿದೆ. ಹಾಗೆಯೇ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದ್ದಾರೆ.
● ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.