ಜನರ ಸಂಕಷ್ಟ ಅರಿಯದ ರಾಜ್ಯ ಸರ್ಕಾರ

ನೀರು, ಮೇವಿನ ಸಮಸ್ಯೆ ಬಗೆಹರಿಸಲು ನೀತಿ ಸಂಹಿತೆ ಸಡಿಲಗೊಳಿಸಲು ಮಾಧುಸ್ವಾಮಿ ಆಗ್ರಹ

Team Udayavani, Apr 26, 2019, 4:43 PM IST

tumkur-tdy-2..

ತುಮಕೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ಜನರ ಸಂಕಷ್ಟ ಅರಿಯದ ಸ್ಥಿತಿಯಲ್ಲಿ ಸರ್ಕಾರ ಇದೆ. ಜಿಲ್ಲೆಯೂ ಸೇರಿದಂತೆ ರಾಜ್ಯದ 126 ತಾಲೂಕುಗಳು ಬರದಿಂದ ನಲುಗುತ್ತಿದ್ದು, ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಸಮಸ್ಯೆ ಬಗೆಹರಿಸಲು ಅಡ್ಡಿಯಾಗಿರುವ ಚುನಾವಣಾ ನೀತಿ ಸಂಹಿತೆ ಸಡಿಲ ಗೊಳಿಸಬೇಕು ಎಂದು ಬಿಜೆಪಿ ಮುಖಂಡ, ಶಾಸಕ ಜೆ.ಸಿ.ಮಾಧುಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಬಿಜಿಪಿ ಶಾಸಕರಾದ ಬಿ.ಸಿ. ನಾಗೇಶ್‌, ಮಸಾಲೆ ಜಯರಾಮ್‌, ಜಿ.ಬಿ.ಜ್ಯೋತಿ ಗಣೇಶ್‌ ಒಳಗೊಂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಮುಗಿದಿದ್ದರೂ ಮೇ 26ರ ವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದೆ ಎಂದು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದರೆ, ಜಿಲ್ಲೆಯಲ್ಲಿ ಬರಗಾಲ ತೀವ್ರವಾಗಿದೆ. ಈಗಿನ ಚುನಾವಣಾ ನೀತಿ ಸಂಹಿತೆ ಕಾನೂನು ನೋಡಿದರೆ ತುರ್ತು ಪರಿಸ್ಥಿತಿ ನೆನಪಾಗುತ್ತದೆ ಎಂದರು.

ನೀತಿ ಸಂಹಿತೆ ಸಡಿಲಗೊಳಿಸಿ: ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿರುವ ಸ್ಥಿತಿ ನೋಡಿದರೂ ಅವರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಶಾಸಕರೆಲ್ಲಾ ಅಸಹಾಯಕ ಸ್ಥಿತಿಯಲ್ಲಿರುವಂತಾಗಿದೆ. ಈಗಾಗಲೇ ಚುನಾವಣಾ ಆಯೋಗಕ್ಕೆ ಮೌಖೀಕವಾಗಿ ನೀತಿ ಸಂಹಿತೆ ಸಡಿಲಗೊಳಿಸುವಂತೆ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ನೀತಿ ಸಂಹಿತೆ ಸಡಿಲ ಗೊಳಿಸಬೇಕಾಗಿದೆ ಎಂದು ಮನವಿ ಮಾಡಿದರು.

ಟೆಂಡರ್‌ ಬೇಡ: ಬರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಈಗಿರುವಾಗ ಸರ್ಕಾರದ ಪ್ರಧಾನ ಕಾರ್ಯದರ್ಶಿ ಏ.23ರ ನಂತರ ಬೋರ್‌ವೆಲ್ಗಳನ್ನು ಟೆಂಡರ್‌ ಮೂಲಕ ಕೊರೆಸಿ ಎನ್ನುವ ದೇಶ ಹೊರಡಿ ಸಿದ್ದಾರೆ. ಈಗಿರುವ ಪರಿಸ್ಥಿತಿಗೆ ಈ ಆದೇಶ ಹೊಂದಾ ಣಿಕೆಯಾಗುವುದಿಲ್ಲ. ಇದರಿಂದ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಟೆಂಡರ್‌ ಕರೆದು ಒಂದು ಬೋರ್‌ವೆಲ್ ಕೊರೆಸಲು ವಾರಾನುಗಟ್ಟಲೆ ಸಮಯ ವಕಾಶ ಬೇಕಾಗುತ್ತದೆ. ಒಂದು ವೇಳೆ ಬೋರ್‌ವೆಲ್ ಫೇಲ್ ಆದರೆ ಮತ್ತೆಹೊಸ ಟೆಂಟರ್‌ಅನುಸಾರವೇ ಕೊರೆಸಬೇಕಾಗುತ್ತದೆ. ಹೀಗಾಗಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಬೋರ್‌ವೆಲ್ ಫೇಲ್ಆದಾಗಲೆಲ್ಲಾ ಹಳ್ಳಿಗಳಲ್ಲಿ ಘರ್ಷಣೆಯೂ ಆಗು ತ್ತದೆ. ಆದ್ದರಿಂದ ಈ ಹಿಂದಿನಂತೆಯೇ ಫೀಸ್‌ವರ್ಕ್‌ ಅನ್ವಯವೇ ಬೋರ್‌ ವೆಲ್ಕೊರೆಯುವ ಆದೇಶ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ರೊಟೀನ್‌ ವರ್ಕ್ಸ್ಗಾದರೂ ಅವಕಾಶ ಕೊಡಿ: ಟ್ಯಾಂಕರ್‌ ಮೂಲಕ ನೀರುಕೊಡುವುದಕ್ಕೂ ನೀತಿ ಸಂಹಿತೆ ಅಡ್ಡಿಯಾಗಿದೆ. ಕುಡಿಯುವ ನೀರುಕೊಡ ಲಾರದ ಅಸಹಾಯಕ ಸ್ಥಿತಿಗೆ ಶಾಸಕರು ಬಂದಿದ್ದೇವೆ. ಕ್ಷೇತ್ರದ ನೀರಿನ ಸಮಸ್ಯೆ ತಿಳಿಗೊಳಿಸಲು 65 ಬೋರ್‌ವೆಲ್ ಅವಶ್ಯಕತೆ ಪಟ್ಟಿಕೊಟ್ಟಿದ್ದರೂ, ಅಧಿಕಾರಿಗಳು 35 ಬೋರ್‌ವೆಲ್ ಕೊರೆಸುವ ಪಟ್ಟಿ ತಯಾರು ಮಾಡಿ ದ್ದಾರೆ. ಹೀಗಾಗಿ ಇಂಗ್ಲೀಷ್‌ನವರ ಕಾಲಕ್ಕಿಂತ ಕೆಟ್ಟದಾಗಿ ಬರಗಾಲ ಎದುರಿಸುವ ಪರಿಸ್ಥಿತಿ ಬಂದಿದೆ. ಹೊಸ ಯೋಜನೆಗಳನ್ನು ಮಾಡುವುದು ಬೇಡ. ಆದರೆ, ರೊಟೀನ್‌ ವರ್ಕ್‌ ಮಾಡುವುದಕ್ಕಾದರೂ ಅವಕಾಶ ಮಾಡಿಕೊಡಬೇಕು. ಇದಕ್ಕೂ ನೀತಿ ಸಂಹಿತೆ ಅಡ್ಡಿ ಯೆಂದರೆ ಎಷ್ಟು ಸರಿ ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ಬಗ್ಗೆ ಗಮನ ಕೊಡುತ್ತಿಲ್ಲ. ಕಳೆದ ಒಂಭತ್ತು ತಿಂಗಳಲ್ಲಿ ಒಂದು ಬಾರಿ ಸಭೆ ನಡೆಸುವುದನ್ನು ಹೊರತು ಪಡಿಸಿದರೆ ಮತ್ಯಾ ವುದೇ ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ. ಅವರಿಗೆ ರಾಜಕೀಯ ಬಿಟ್ಟರೆ ಬೇರೆ ಬೇಕಿಲ್ಲ. ಜಿಲ್ಲೆಯ ಬರಗಾಲ ಸ್ಥಿತಿ ಇದ್ದರೂ ಯಾವುದೇ ರೀತಿಯಗಮನಹರಿಸುತ್ತಿಲ್ಲ ಎಂದು ನುಡಿದರು.

35 ಹಳ್ಳಿಗಳ ಸ್ಥಿತಿ ಹೀನಾಯ: ಶಾಸಕ ಮಸಾಲೆ ಜಯರಾಮ್‌ ಮಾತನಾಡಿ, ಅಂತರ್ಜಲ ಕುಸಿತದಿಂದ 1200 ಅಡಿ ಆಳ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಒಂದುಕಡೆ ನೀರಿಲ್ಲದೆ ತೆಂಗು- ಅಡಕೆ ತೋಟಗಳು ಒಣಗುತ್ತಿದ್ದರೆ, ಮತ್ತೂಂದೆಡೆ ಬಿರುಗಾಳಿಗೆ 400-600 ತೆಂಗಿನ ಮರಗಳ ಸುಳಿಗಳು ಬಿದ್ದುಹೋಗಿವೆ. ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮ್ಗಳು ನೆಲಕ್ಕುರುಳಿವೆ. ಸರಿಪಡಿಸಲು ಅಧಿಕಾರಿಗಳು ಬರುತ್ತಿಲ್ಲ. ಇದಕ್ಕೂ ನೀತಿ ಸಂಹಿತೆ ಅಡ್ಡಿ ಯಾಗಿದೆ. ತಾಲೂಕಿನ 35 ಹಳ್ಳಿಗಳ ಸ್ಥಿತಿ ಹೀನಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಚಿಕೆಗೇಡಿನ ಸ್ಥಿತಿ: ಶಾಸಕ ಬಿ.ಸಿ.ನಾಗೇಶ್‌ ಮಾತನಾಡಿ, ಅಧಿಕಾರಿಗಳು ತುಂಬಾ ಅನಿವಾರ್ಯ ಸಂದರ್ಭವನ್ನು ಬಿಟ್ಟರೆ ಮತ್ಯಾವುದೇ ಕಾರಣಕ್ಕೂ ಶಾಸಕರ ಜತೆ ದೂರವಾಣಿ ಮೂಲಕವೂ ಸಂಪರ್ಕದಲ್ಲಿರ ಬಾರದೆಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಹೀಗಾದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾದರೂ ಹೇಗೆ? ಇದು ಪ್ರಜಾಪ್ರಭುತ್ವದ ನಾಚಿಕೆಗೇಡಿನ ಸ್ಥಿತಿಯಾಗಿದೆ ಎಂದರು.

ಜೂನ್‌ವರೆಗೂ ನೀರು: ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಮಾತನಾಡಿ, ನಗರದಲ್ಲಿ ಸುಮಾರು 500 ಬೋರ್‌ವೆಲ್ಗಳಿವೆ. ಅದರಲ್ಲಿ ಸುಮಾರು 140ಕ್ಕೂ ಹೆಚ್ಚು ಬೋರ್‌ವೆಲ್ಗಳು ನಿಂತು ಹೋಗಿವೆ. ಮೈದಾಳ ಕೆರೆಯಲ್ಲಿ 80 ಎಂಸಿಎಫ್ಟಿ, ಬುಗುಡನಹಳ್ಳಿ ಕರೆಯಲ್ಲಿ 70 ಎಂಸಿಎಫ್ಟಿ ನೀರಿದೆ. ಜೂನ್‌ವರೆಗೂ ನೀರುಕೊಡ ಬಹುದು. ಪಾಲಿಕೆಯಲ್ಲಿ ಏಳು ಟ್ಯಾಂಕರ್‌ ಮಾತ್ರ ಇವೆ. ಹೆಚ್ಚು ಟ್ಯಾಂಕರ್‌ ಮೂಲಕ ನೀರುಕೊಡುವ ವ್ಯವಸ್ಥೆ ಮಾಡಿ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿಜಿಲ್ಲಾ ಬಿಜೆಪಿ ಕಾರ್ಯ ದರ್ಶಿ ಹೆಬ್ಟಾಕ ರವಿಶಂಕರ್‌, ಟಿ.ಆರ್‌.ಸದಾಶಿವಯ್ಯ ಸೇರಿದಂತೆ ಹಲವರು ಇದ್ದರು.

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.