ರಾಷ್ಟ್ರೀಯ ಕ್ರೀಡಾಪಟುಗಳಿಂದ ಯುವಕರಿಗೆ ತರಬೇತಿ


Team Udayavani, Jan 19, 2022, 1:35 PM IST

ರಾಷ್ಟ್ರೀಯ ಕ್ರೀಡಾಪಟುಗಳಿಂದ ಯುವಕರಿಗೆ ತರಬೇತಿ

ಕುಣಿಗಲ್‌: ವಿದೇಶಿಯ ಕ್ರೀಡಾ ವ್ಯಾಮೋಹಕ್ಕೆ ಯುವ ಜನಾಂಗ ಒಳಗಾಗಿ ಗ್ರಾಮೀಣ ಕ್ರೀಡೆ ಕಬಡ್ಡಿ ಯನ್ನು ಮರೆಯುತ್ತಿದ್ದಾರೆ.

ಇದರಿಂದ ದೇಶಿಯ ಗ್ರಾಮೀಣ ಕ್ರೀಡೆ ಅಳುವಿನ ಹಂಚಿಗೆ ತಲುಪುವಂತಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಖೋ ಖೋ, ಕಬಡ್ಡಿ ಕ್ರೀಡಾಪಟುಗಳು ಯುವಕರಿಗೆ ಉಚಿತವಾಗಿ ಕಬಡ್ಡಿ ತರಬೇತಿ ನೀಡುತ್ತಿದ್ದಾರೆ. ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.

ನಾಡಿನ ಕ್ರೀಡಾ ಸಂಸ್ಕೃತಿ ಬಿಂಬಿಸುವ ಅಪ್ಪಟ ಗ್ರಾಮೀಣ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸುತ್ತಿವೆ. ಮುಂಬರುವ ದಿನಗಳಲ್ಲಿ ಆಧುನಿಕ ಅಬ್ಬರದಆಟಗಳ ಪ್ರವಾಹದಿಂದ ಗ್ರಾಮೀಣ ಆಟಗಳು ಮರೆ ಯಾಗಲಿವೆ. ಸಾಮಾನ್ಯವಾಗಿ 20 ರಿಂದ 25ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳ ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗಿದ್ದ ಅಪ್ಪಟ ಗ್ರಾಮೀಣ ಕ್ರೀಡೆ ಕಬಡ್ಡಿ ಮರೆಯಾಗುವ ಲಕ್ಷಣಗಳು

ಗೋಚರಿಸುತ್ತಿವೆ. ಈ ಕ್ರೀಡೆಯನ್ನು ಉಳಿಸಿ ಬೆಳೆಸುವನಿಟ್ಟಿನಲ್ಲಿ ತಾಲೂಕಿ ನವರೇ ಆದ ರಾಷ್ಟ್ರೀಯ ಖೋಖೋ ಹಾಗೂ ಕಬಡ್ಡಿ ಕ್ರೀಡಾಪಟುಗಳಾದ ರಂಗಣ್ಣ, ಜಬೀಉಲ್ಲಾಖಾನ್‌, ನವಾಜ್‌ಪಾಷ ಹಾಗೂ ಅನ್ಸರ್‌ ಪಾಷ, ಶ್ರೇಯಸ್, ಶಿವಕುಮಾರ್‌ ಅವರು ತಮ್ಮ ಶ್ರಮದಾನದ ಮೂಲಕ ಪಟ್ಟಣದ ಎಪಿಎಂಸಿಆವರಣದಲ್ಲಿ ಕಬಡ್ಡಿ ಅಂಗಳವನ್ನು ನಿರ್ಮಾಣ ಮಾಡಿ, ಸುಮಾರು 15ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಬಡ್ಡಿ ತರಬೇತಿ ನೀಡುತ್ತಿದ್ದಾರೆ.

ಉತ್ಸಹದಿಂದ ತರಬೇತಿಯಲ್ಲಿ ಭಾಗಿ: ಭಾನುವಾರ ಬೆಳಗ್ಗೆ 5ರಿಂದ 8 ಗಂಟೆವರೆಗೆ ತರಬೇತಿ ನೀಡಿದರೆ, ಉಳಿದ ದಿನದಲ್ಲಿ ಬೆಳಗ್ಗೆ 5ರಿಂದ 6ಗಂಟೆವರೆಗೆ ಒಂದುಗಂಟೆಗಳ ಕಾಲ ತರಬೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಉತ್ಸಹದಿಂದ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ತರಬೇತಿ ಜತೆಗೆ ಶಿಸ್ತು, ಸಂಯಮವನ್ನುಕ್ರೀಡಾಪಟುಗಳಿಗೆ ಹೇಳಿಕೊಡಲಾಗುತ್ತಿದೆ. ಕಬಡ್ಡಿತರಬೇತಿಗೆ ತಾಲೂಕಿನ ಮಾವೀನಕಟ್ಟೆ ಪಾಳ್ಯ ಗ್ರಾಮದಕೋಡಿಬಸವೇಶ್ವರ ದೇವಾಲಯ ಸಂಸ್ಥೆ ಸಂಪೂರ್ಣ ಸಹಕರಿಸುತ್ತಿದೆ.

ಕಬ್ಬಡಿಯಲ್ಲಿ ಯುವಕರಿಗೆ ಆದ್ಯತೆ: ಸಾಮಾನ್ಯವಾಗಿ 30ರಿಂದ 40 ವರ್ಷಗಳ ಹಿಂದೆ ಕುಣಿಗಲ್‌ ತಾಲೂಕಿನಲ್ಲಿ ಕಬಡ್ಡಿ ಆಟಕ್ಕೆ ಯುವ ಜನಾಂಗ ಆದ್ಯತೆ ನೀಡುತ್ತಿದ್ದರು. ಕಬಡ್ಡಿ ಆಟವನ್ನು ನೋಡಲು ಮನೆ ಮಂದಿಒಂದೆಡೆ ಕುಳಿತು ವೀಕ್ಷಿಸಿ ಸಂಭ್ರಮಪಟ್ಟು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ವಿ. ವೆಂಕಟಸುಬ್ಬಯ್ಯ, ಎಂ.ಆರ್‌. ಬೈರ ಶೆಟ್ಟಿ, ಕೆ.ಜಿ.ನಾರಾಯಣ್‌, ಬಿ.ಎಂ.ಹುಚ್ಚೇಗೌಡ, ಕೆ.ಎಸ್‌.ವೆಂಕಟಸುಬ್ಬಯ್ಯ, ರವಿ ಮೊದಲಾದ ಕ್ರೀಡಾ ಪಟುಗಳು ಕಬಡ್ಡಿಯನ್ನು ಕಲಿತು ರಾಜ್ಯ ಹಾಗೂರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಹಲವು ಪ್ರಶಸ್ತಿ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಜತೆಗೆ ಯುವಕರನ್ನು ಕಬಡ್ಡಿ ಆಟಕ್ಕೆ ಪ್ರೇರಣೆನೀಡಿ, ನೂರಾರು ಮಂದಿ ಕ್ರೀಡಾಪಟುಗಳಿಗೆತರಬೇತಿ ನೀಡಿ ಅವರನ್ನು ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟಕ್ಕೆ ಕಳಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಅಭೂತ ಪೂರ್ವವಾದ ಕ್ರೀಡೆಗೆ ಇತ್ತೀಚಿಗೆಮಕ್ಕಳು ಹಾಗೂ ಪೋಷಕರಿಂದ ಯಾವುದೇಪ್ರೋತ್ಸಾಹ ಸಿಗದ ಕಾರಣ ಈ ಕ್ರೀಡೆಯೂ ಮರೆಯಾಗುತ್ತಿದೆ.

ಕಬಡ್ಡಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಆಟವಾಗಿದೆ. ತನ್ನದೇ ಆದ ವೈಶಿಷ್ಟತೆ ಹೊಂದಿರುವ ಕಬಡ್ಡಿ ಆಟಗಾರಿಗೆ ದೈಹಿಕ ಶಕ್ತಿ ಬೆಳೆಯುಲು ಸಹಾಯಕ ವಾಗುವ ಜತೆಗೆ ಚತುರತೆ ಬೆಳೆಸುತ್ತದೆ. ಕಬಡ್ಡಿ ಆಟದ ವೇಳೆ ಶ್ರಮಿಶಿಸಿದ ಮೈಗೆ ಮಣ್ಣಿನ ಗುಣ ಅಂಟಿಕೊಂಡರೆ ಆರೋಗ್ಯದಿಂದ ಇರಬಹುದು. -ರಂಗಣ್ಣ, ರಾಷ್ಟ್ರೀಯ ಖೋ ಖೋ ಕ್ರೀಡಾಪಟು

ತಾಲೂಕಿನಲ್ಲಿ ಹಲವು ವರ್ಷಗಳಿಂದ ಖಾಸಗಿ ಕ್ಷೇತ್ರದಲ್ಲಿ ಕಬಡ್ಡಿ ಸೇರಿದಂತೆ ಗ್ರಾಮೀಣ ಕ್ರೀಡಾಕೂಟಗಳು ನಡೆಯದೇಇರುವುದು ಕಂಡು ಬಂದಿದೆ. ಆದರೆ,ಕಿಚ್ಚಾವಾಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆವಿದ್ಯಾರ್ಥಿಗಳು 2018-19ರಲ್ಲಿ ರಾಷ್ಟ್ರೀಯಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಕಳೆದಎರಡು ವರ್ಷದಿಂದ ತಾಲೂಕಿನ ಯಾವುದೇಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳುನಡೆಯುತ್ತಿಲ್ಲ. -ಕೆ.ಎಸ್‌.ಗೋಪಾಲಕೃಷ್ಣ ತಾಲೂಕು ದೈಹಿಕ ಶಿಕ್ಷಣಾಧಿಕಾರಿ

ಕ್ರೀಡೆಯು ಯುವ ಜನಾಂಗಕ್ಕೆರಾಷ್ಟ್ರೀಯ ಭಾವೈಕ್ಯತೆಗೆ ಪೂರಕವಾಗಿದೆ. ಇದಕ್ಕೆ ಯಾವುದೇ ಜಾತಿ, ಮತ,ಧರ್ಮ ಅಡ್ಡಿ ಬರಲಾಗದು. ಈ ನಿಟ್ಟಿಲ್ಲಿ ಕುಣಿಗಲ್‌ನಲ್ಲಿ ಯುವಕರಿಗೆ ಕಬಡ್ಡಿ ತರಬೇತಿನೀಡಿ, ಅವರನ್ನು ಪ್ರತಿಭಾವಂತ ಕಬಡ್ಡಿಕ್ರೀಡಾಪಟುಗಳನ್ನಾಗಿ ಮಾಡಿ, ಅವರಲ್ಲಿಇರುವಂತ ಕ್ರೀಡಾ ಪ್ರತಿಭೆ ಅನಾವರಣಗೊಳಿಸಿ ದೇಶಕ್ಕೆ ಕ್ರೀಡೆ ಮೂಲಕ ಸೇವೆಸಲ್ಲಿಸಲು ಪ್ರೇರಣೆ ನೀಡುವ ಉದ್ದೇಶವಿದೆ. – ಜಬೀಉಲ್ಲಾ ಖಾನ್‌ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು

 

-ಕೆ.ಎನ್‌.ಲೋಕೇಶ್‌

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.