Udayavni Special

ತುಮಕೂರು: ಶತಕದತ್ತ ಸೋಂಕಿತರು


Team Udayavani, Jun 29, 2020, 7:39 AM IST

100 sonku

ತುಮಕೂರು: ಕಲ್ಪತರು ನಾಡಿನಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೋವಿಡ್‌ 19 ಕಡಿಮೆ ಯಾಗಿತು ಅಂದು ಕೊಂಡಿದ್ದ ಜನರಿಗೆ ಸೋಂಕು ಉಲ್ಬಣವಾಗು ತ್ತಲೇ ಇದ್ದು ಶತಕದತ್ತ ಮುನ್ನೆಡೆಯುತ್ತಾ  ಭಾನುವಾರ ಒಂದೇ ದಿನ 18 ಜನ ಜನರಿಗೆ ಸೋಂಕು ದೃಢವಾಗಿ ಸೋಂಕಿತರ ಸಂಖ್ಯೆ 93 ಕ್ಕೇರಿಕೆಯಾಗಿ, ಇನ್ನೂ ಒಬ್ಬರು ಮೃತಪಟ್ಟಿದ್ದು ಮೃತರ ಸಂಖ್ಯೆ 5ಕ್ಕೇರಿದೆ.

ಜನರಲ್ಲಿ ಹೆಚ್ಚಿದ ಆತಂಕ: ದೇಶದ ಎಲ್ಲಾಕಡೆ ಲಾಕ್‌ಡೌನ್‌ ತೆಗೆದಿರುವ ಹಿನ್ನೆಲೆಯಲ್ಲಿ ಜನರ ಓಡಾಟ ಜಾಸ್ತಿಯಾಗಿದೆ. ಹೊರ ರಾಜ್ಯ ದಿಂದ ಜಿಲ್ಲೆಗೆ ಬರುವವರೂ ಜಾಸ್ತಿಯಾಗು ತ್ತಿದ್ದಾರೆ. ಬಂದಿರುವವರಿಗೆ ಸೋಂಕು ಇರುವುದು  ಪತ್ತೆಯಾಗುತ್ತಲೇ ಇದೆ. ಇನ್ನೂ ಸಾವಿರಾರು ಜನರ ಲ್ಯಾಬ್‌ ವರದಿ ಬಾಕಿ ಇದ್ದು ಇನ್ನೂ ಹಲವರಲ್ಲಿ ಕೋವಿಡ್‌ 19 ಪಾಸಿಟಿವ್‌ ಬರುವ ಲಕ್ಷಣಗಳೇ ಹೆಚ್ಚು ಗೋಚರ ವಾಗುತ್ತಿದ್ದು, ಈಗಿನ ವಾತಾವರಣ ನೋಡಿದರೆ ಜಿಲ್ಲೆಯಲ್ಲಿ ಕೋವಿಡ್‌  19 ಸೋಂಕಿ ತರು ಸಂಖ್ಯೆ ನೂರನ್ನು ದಾಟಿ ಮುನ್ನೆಡೆಯುವ ಸಾಧ್ಯತೆ ಇದೆ ಎನ್ನುವ ಆತಂಕ ಜನರನ್ನು ಕಾಡುತ್ತಿದೆ.

ಮಾಸ್ಕ್ ಧರಿಸದ ಜನತೆ: ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರು ಹೆಚ್ಚುತ್ತಿರುವುದ ರಿಂದ ನಾಗರಿಕರು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು. ಆದ್ದರಿಂದ ಮಕ್ಕಳು, ವಯಸ್ಸಾದವರು ಮನೆಯಿಂದ ಹೊರಗಡೆ ಹೋಗಬಾರದು.  ಸಾರ್ವಜನಿಕರು ಸರ್ಕಾ ರದ ನಿರ್ದೇಶನಗಳನ್ನು ಪಾಲಿಸಿ ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ಮೂಡಿಸುತ್ತಿದೆ. ಆದರೆ ಜನ ಮಾತ್ರ ತಮ್ಮ ಪಾಡಿಗೆ ತಾವು ಸಾಮಾಜಿಕ ಅಂತರ ಬಿಟ್ಟು ಮುಖಕ್ಕೆ  ಮಾಸ್ಕ್ ಕೂಡಾ ಧರಿಸದೇ ಸಂಚಾರ ಮಾಡುವುದು ಕಂಡು ಬರುತ್ತಲೇ ಇದೆ.

ಕೋವಿಡ್‌ 19ದಿಂದ ಮೃತರ ಸಂಖ್ಯೆ 5ಕ್ಕೆ ಏರಿಕೆ: ಜಿಲ್ಲೆಯಲ್ಲಿ ಈ ವರೆಗೆ 17,399 ಜನರ ಗಂಟಲು ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಅದರಲ್ಲಿ 1,5369 ಜನರಿಗೆ ನೆಗೆಟಿವ್‌ ಬಂದಿದೆ, 93 ಜನರಿಗೆ ಕೋವಿಡ್‌ 19 ಪಾಸಿಟಿವ್‌ ಕಂಡು ಬಂದಿದ್ದು  ಈವರೆಗೆ ಈ ಸೋಂಕಿನಿಂದ 5 ಜನರು ಮೃತರಾಗಿದ್ದಾರೆ. 39 ಜನ ಗುಣಮುಖರಾಗಿದ್ದು, 49 ಜನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅದರಲ್ಲಿ ಇನ್ನೂ 1,747 ಜನರ ಲ್ಯಾಬ್‌ ವರದಿ ಬರಬೇಕಾಗಿದೆ.  ದರಲ್ಲಿ ಎಷ್ಟು ಜನರಿಗೆ ಸೋಂಕು ಇರುವುದೋ ತಿಳಿಯದಾಗಿದೆ.

ತುಮಕೂರು ಜಿಲ್ಲಾ ಕೋವಿಡ್‌ -19 ಆಸ್ಪತ್ರೆಯಲ್ಲಿ ಇರುವ ಆರ್‌.ಟಿ-ಪಿಸಿಆರ್‌ ಲ್ಯಾಬ್‌ನಲ್ಲಿ ಪ್ರತಿದಿನ 700 ಗಂಟಲು ದ್ರವ ಪರೀಕ್ಷೆಗೆ ಬರುತ್ತಿದೆ, ದಿನದ 24 ಗಂಟೆಯೂ ಪರೀಕ್ಷೆ ನಡೆಸಲಾಗು ವುದು, ಪ್ರತಿದಿನ 350 ಜನರ  ಗಂಟಲು ದ್ರವ ಪರೀಕ್ಷೆಯನ್ನು ಜಿಲ್ಲಾ ಆಸ್ಪತ್ರೆಯ ಕೋವಿಡ್‌ ಲ್ಯಾಬ್‌ನಲ್ಲಿ ಮಾಡಲಾಗುತ್ತಿದೆ, ಹೆಚ್ಚುವರಿಯನ್ನು ಬೆಂಗಳೂರಿಗೆ ಕಳುಹಿಸಲಾಗುವುದು. 
-ಡಾ.ವೀರಭದ್ರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ

* ಚಿ.ನಿ.ಪುರುಷೋತ್ತಮ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

ಪ್ರಾಣಿ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ ತಾಪಮಾನ

ಪ್ರಾಣಿ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ ತಾಪಮಾನ

ಚೀನದ ಚಳಿ ಬಿಡಿಸಲು ಸಿದ್ಧ; ಅಮೆರಿಕದಿಂದ ಚಳಿಗಾಲದ ಯುದ್ಧ ಸಂಬಂಧಿ ಕಿಟ್‌ ಖರೀದಿಸಿದ ಭಾರತ

ಚೀನದ ಚಳಿ ಬಿಡಿಸಲು ಸಿದ್ಧ; ಅಮೆರಿಕದಿಂದ ಚಳಿಗಾಲದ ಯುದ್ಧ ಸಂಬಂಧಿ ಕಿಟ್‌ ಖರೀದಿಸಿದ ಭಾರತ

ಸಚಿವೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಮಾಜಿ ಸಿಎಂ ಕಮಲ್‌ನಾಥ್‌ ವಿರುದ್ಧ ಬಿಜೆಪಿ ಆಕ್ರೋಶ

ಸಚಿವೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಮಾಜಿ ಸಿಎಂ ಕಮಲ್‌ನಾಥ್‌ ವಿರುದ್ಧ ಬಿಜೆಪಿ ಆಕ್ರೋಶ

ಬಾಂಡ್‌ಗಳಲ್ಲಿ ಸಂಪತ್ತು ಹೂಡಿಕೆಗೆ ಟೀಕೆ

ಬಾಂಡ್‌ಗಳಲ್ಲಿ ಸಂಪತ್ತು ಹೂಡಿಕೆಗೆ ಟೀಕೆ

IPLಚೆನ್ನೈ-ರಾಜಸ್ಥಾನ್ ಮುಖಾಮುಖಿ : ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು

ಐಪಿಎಲ್‌ ಪಂದ್ಯಗಳ “ದ್ವಿಶತಕ’ ಬಾರಿಸಿ ಧೋನಿ

ಐಪಿಎಲ್‌ ಪಂದ್ಯಗಳ “ದ್ವಿಶತಕ’ ಬಾರಿಸಿದ ಧೋನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಾಸಗಿ ಶಾಲೆಗಳಿಂದ 747 ಮಕ್ಕಳು ಸರ್ಕಾರಿ ಶಾಲೆಗೆ

ಖಾಸಗಿ ಶಾಲೆಗಳಿಂದ 747 ಮಕ್ಕಳು ಸರ್ಕಾರಿ ಶಾಲೆಗೆ

ಮೃತ ವಾರಿಯರ್ಸ್ ಕುಟುಂಬಕ್ಕೆ ಸಿಗದ ಪರಿಹಾರ

ಮೃತ ವಾರಿಯರ್ಸ್ ಕುಟುಂಬಕ್ಕೆ ಸಿಗದ ಪರಿಹಾರ

tk-tdy-1

ಪ್ರಾಮಾಣಿಕವಾಗಿ ಪದವೀಧರರ ಸಮಸ್ಯೆಗೆ ಸ್ಪಂದಿಸುವೆ

tk-tdy-1

ಸಮಸ್ಯೆ ಬಗೆ ಹರಿಸಲು ಕುಂದುಕೊರತೆ ಸಭೆ ಹೆಚ್ಚು ಸಹಕಾರಿ

tk-tdy-1

ರೈತ ವಿರೋಧಿ ನೀತಿಖಂಡಿಸಿ ಧರಣಿ

MUST WATCH

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani

udayavani youtube

ಹಸುವಿನ ಸಗಣಿ ಬಳಸಿ ಧೂಪ ತಯಾರಿಸುವುದು ಹೇಗೆ?

udayavani youtube

45 years journey of Pot maker from Karkala | Annumuli Pot maker | Udayavaniಹೊಸ ಸೇರ್ಪಡೆ

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

12 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಸೈಕಲ್‌ ಪಥ !

12 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಸೈಕಲ್‌ ಪಥ !

ದ.ಕ.: ಅಂತರ್‌ ಜಾತಿ ವಿವಾಹಕ್ಕೆ 1.48 ಕೋ.ರೂ. ಪ್ರೋತ್ಸಾಹಧನ

ದ.ಕ.: ಅಂತರ್‌ ಜಾತಿ ವಿವಾಹಕ್ಕೆ 1.48 ಕೋ.ರೂ. ಪ್ರೋತ್ಸಾಹಧನ

ಕಲ್ಲಡ್ಕ ಸಮೀಪದ ಬೊಂಡಾಲದಲ್ಲಿ 2 ಕೋ.ರೂ.ವೆಚ್ಚದಲ್ಲಿ ಬಾಲಕಿಯರ ಹಾಸ್ಟೆಲ್‌ ನಿರ್ಮಾಣ

ಕಲ್ಲಡ್ಕ ಸಮೀಪದ ಬೊಂಡಾಲದಲ್ಲಿ 2 ಕೋ.ರೂ.ವೆಚ್ಚದಲ್ಲಿ ಬಾಲಕಿಯರ ಹಾಸ್ಟೆಲ್‌ ನಿರ್ಮಾಣ

ಗ್ರಾಮೀಣ ಭಾಗದ ರೈತರಿಗೆ ಕಾಡು ಪ್ರಾಣಿಗಳ ಕಾಟ

ಗ್ರಾಮೀಣ ಭಾಗದ ರೈತರಿಗೆ ಕಾಡು ಪ್ರಾಣಿಗಳ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.