ತುಮಕೂರು : ರೌಡಿ ಶೀಟರ್ ಟೆಂಪಲ್ ರಾಜನ ಕಾಲಿಗೆ ಗುಂಡು
Team Udayavani, Nov 2, 2019, 8:21 PM IST
ತುಮಕೂರು : ಕೊಲೆ ಆರೋಪಿ, ರೌಡಿ ಶೀಟರ್ ಟೆಂಪಲ್ ರಾಜನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೋಹನ್ ಕುಮಾರ್ ಅಲಿಯಾಸ್ ಮನು ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟೆಂಪಲ್ ರಾಜನನ್ನು ಬಂಧಿಸಲು ಪೊಲೀಸರು ತೆರಳಿದ್ದರು.
ಈ ವೇಳೆ ಪೊಲೀಸರ ಮೇಲೆಯೇ ದಾಳಿಗೆ ಮುಂದಾದ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನು.
ಈ ವೇಳೆ ವಡ್ಡರಹಳ್ಳಿ ಸಮೀಪ ಟೆಂಪಲ್ ರಾಜನ ಕಾಲಿಗೆ ಕ್ಯಾತ್ಸಂದ್ರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್ ಗುಂಡು ಹಾರಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ ಮೋಹನ್ ಅಲಿಯಾಸ್ ಮನು ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಲ್ಯವಿವಾಹ ತಡೆಗೆ ರಾಜ್ಯಾದ್ಯಂತ ಸ್ಫೂರ್ತಿ: ಹೆಚ್ಚುತ್ತಿರುವ ಪಿಡುಗು ನಿಯಂತ್ರಣಕ್ಕೆ ಈ ಕ್ರಮ
ರಸಪ್ರಶ್ನೆ ಸ್ಪರ್ಧೆ: 10 ಲ.ರೂ. ಬಂಪರ್ ಬಹುಮಾನ!
ಪದವಿ ಕಾಲೇಜು ಶುಲ್ಕ ನಿಗದಿ ಮಾಡಿದ ಕಾಲೇಜು ಶಿಕ್ಷಣ ಇಲಾಖೆ
ಅಗ್ನಿಪಥ ಯೋಜನೆ ಜಾರಿ ವಿರೋಧಿಸಿ ರಾಜಭವನ ಮುತ್ತಿಗೆಗೆ ಯುವ ಕಾಂಗ್ರೆಸ್ ಯತ್ನ
ಪೊಲೀಸ್ ಕಾನ್ಸ್ಟೇಬಲ್ : ಕನಿಷ್ಠ ಸೇವೆ 6ರಿಂದ 5 ವರ್ಷಕ್ಕೆ ಇಳಿಕೆ: ಡಿಸಿಪಿ ನಿಶಾ ಜೇಮ್ಸ್