ಜಿಲ್ಲೆಯಲ್ಲಿ 155 ಅರ್ಜಿ ಸ್ಥಳದಲ್ಲೇ ಇತ್ಯರ್ಥ


Team Udayavani, Feb 23, 2021, 4:12 PM IST

ಜಿಲ್ಲೆಯಲ್ಲಿ 155 ಅರ್ಜಿ ಸ್ಥಳದಲ್ಲೇ ಇತ್ಯರ್ಥ

ಗ್ರಾಮ ವಾಸ್ತವ್ಯದ ವೇಳೆ ವಾಲಿಬಾಲ್‌ ಆಟವಾಡಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌.

ತುಮಕೂರು: ರೈತರ ಮನೆ ಬಾಗಿಲಿಗೇ ಆಡಳಿತ ಎನ್ನುವ ದೃಷ್ಟಿಕೋನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎನ್ನುವ ಕಲ್ಪನೆಯಲ್ಲಿ ಪ್ರತಿ ತಿಂಗಳು3ನೇ ಶನಿವಾರ ನಡೆಸಲು ಉದ್ದೇಶಿಸಿರುವಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಮೊದಲ ಕಾರ್ಯಕ್ರಮದಲ್ಲಿಯೇ ಜಿಲ್ಲೆಯ ಮಧುಗಿರಿ ತಾಲೂಕಿನ ಲಕ್ಷ್ಮೀಪುರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಡೀ ದಿನ ಜಿಲ್ಲಾಧಿಕಾರಿ ವೈ. ಎಸ್‌.ಪಾಟೀಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋ.ನಂ.ವಂಸಿಕೃಷ್ಣ, ಜಿಪಂ ಸಿಇಒಗಂಗಾಧರಸ್ವಾಮಿ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ,ತಹಶೀಲ್ದಾರ್‌ ವಿಶ್ವನಾಥ್‌ ಸೇರಿದಂತೆ ಇತರೆ ಅಧಿಕಾರಿನಡೆಸಿದ ಗ್ರಾಮ ವಾಸ್ತವ್ಯದಲ್ಲಿ ಅಧಿಕಾರಿಗಳಿಂದಜನರಿಗೆ ಉತ್ತಮ ಸ್ಪಂದನೆ ದೊರೆತಿದ್ದು ಒಟ್ಟು 155ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ. ರೈತರು ತಮ್ಮ ಸಮಸ್ಯೆಗಳ ನಿವಾರಣೆಗೆ ಕಚೇರಿಯಿಂದ ಕಚೇರಿಗೆ ಅಲೆದರೂ ಅವರ ಕೆಲಸ ಮಾತ್ರ ಆಗುತ್ತಿರಲಿಲ್ಲ. ಹೀಗಾಗಿ ಪ್ರತಿ ತಿಂಗಳ 3ನೇ ಶನಿವಾರ ಜಿಲ್ಲಾಧಿಕಾರಿಗಳನಡೆ ಹಳ್ಳಿಯ ಕಡೆ ಎನ್ನುವ ಕಲ್ಪನೆಯೊಂದಿಗೆ ಸರ್ಕಾರಆರಂಭಿಸಿರುವ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲಾಡಳಿತವೇ ರೈತರ ಮನೆ ಬಾಗಿಲಿಗೆ ಹೋಗಿ ಉನ್ನತ ಅಧಿಕಾರಿಗಳು ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿ ಅಲ್ಲಿನ ರೈತರ ಜಮೀನುಗಳ ಪಹಣಿಲೋಪದೋಷ, ಪಿಂಚಣಿ, ರೇಷನ್‌ ಕಾರ್ಡ್‌ ಮತ್ತಿತರ ಜನರ ಸಮಸ್ಯೆ ಆಲಿಸಿದ್ದಾರೆ. ಹಳ್ಳಿ ಜನರ ಆರೋಗ್ಯತಪಾಸಣೆ ನಡೆದಿದ್ದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲಅವರು ವಿದ್ಯಾರ್ಥಿಗಳು, ರೈತರು, ಗ್ರಾಮಸ್ಥರೊಂದಿಗೆಸಂವಾದ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಅಂಗವಾಗಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ ನಡೆಸಿರುವ ಗ್ರಾಮ ವಾಸ್ತವ್ಯಕ್ಕೂ ಜನಸ್ಪಂದನೆ ದೊರೆತಿದೆ.

ಜಿಲ್ಲಾಧಿಕಾರಿಗಳ ಗ್ರಾಮ ಭೇಟಿಯಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ, ಮಧುಗಿರಿ ತಾಲೂಕಿನ ತಹಶೀಲ್ದಾರ್‌, ಕೃಷಿ, ತೋಟಗಾರಿಗೆ, ಆರೋಗ್ಯ,ಆಹಾರ, ಸಮಾಜ ಕಲ್ಯಾಣ, ಮತ್ತಿತರ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಆಯಾಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ,ಮಾಹಿತಿ ನೀಡಿ ಬಹುತೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು.

ಹಲವು ಸಮಸ್ಯೆಗೆ ಪರಿಹಾರ :

ಗ್ರಾಮ ವಾಸ್ತವ್ಯದಲ್ಲಿ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆಕಿದೆ. ಗ್ರಾಮ ಭೇಟಿ ವೇಳೆಗ್ರಾಮದಲ್ಲಿ ಕೆಲವು ರೈತರ ಪಹಣಿಯಲ್ಲಿನ ಲೋಪದೋಷ, ಪಹಣಿ ಕಾಲಂ ನಂಬರ್‌ 3ಮತ್ತು ಆಕಾರ್‌ ಬಂದ್‌ ತಾಳೆ ಹೊಂದಿರುವ ಬಗ್ಗೆ, ಕಾಲಂ ನಂ.3 ಮತ್ತು 9 ತಾಳೆ ಹೊಂದಿರುವ ಕುರಿತು, ಪೌತಿಖಾತೆ, ರೇಷನ್‌ ಕಾರ್ಡ್‌ಗೆಸಂಬಂಧಿಸಿದ ಸಮಸ್ಯೆ, ಮತದಾರರ ಪಟ್ಟಿ ಪರಿಷ್ಕರಣೆ, ಅರ್ಜಿ ನೀಡಿದ್ದಾರೆ. ಜತೆಗೆ ಆಶ್ರಯಯೋಜನೆಯಡಿ ವಸತಿ ಕಲ್ಪಿಸಿ, ಸರ್ಕಾರಿ ಜಮೀನು ಒತ್ತುವರಿ ಬಗ್ಗೆ, ಆಧಾರ್‌ ಕಾರ್ಡ್‌ನ ಅನುಕೂಲತೆ, ಹದ್ದುಬಸ್ತು, ಪೋಡಿ, ದರಕಾಸ್ತುಬಗ್ಗೆ ಮಾಹಿತಿ ನೀಡಿದ್ದು ಇಲ್ಲಿಯ ಶಾಲೆ,ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ, ಕಲಿಕಾಕ್ರಮ ಇತ್ಯಾದಿ ಅಂಶಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜತೆಗೆ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಒದಗಿಸಿದ್ದಾರೆ. ಕೆಲವು ಅಲ್ಲಿ ಪರಿಹರಿಸಲು ಸಾಧ್ಯವಾಗದ ಉಳಿದ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲು ಸ್ಥಳದಲ್ಲಿಯೇ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಅನುಭವ ಹೇಗಿತ್ತು? :

ಜಿಲ್ಲೆಯಲ್ಲಿ ಸರ್ಕಾರಿ ಮಾರ್ಗಸೂಚಿ ಅನ್ವಯಮೊದಲ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಘನ ಸರ್ಕಾರ ಘೋಷಣೆ ಮಾಡಿದ್ದು ನಮ್ಮ ಮೊದಲ ವಾಸ್ತವ್ಯ ಲಕ್ಷ್ಮೀಪುರದಲ್ಲಿ ನಡೆಯಿತು. ಎಸ್‌ಪಿ, ಸಿಇಒ ಎಲ್ಲಾ ಸೇರಿ ಗ್ರಾಮ ವಾಸ್ತವ್ಯ ಮಾಡಿದ್ದೆವು. ನಮಗೆ ಬಹಳ ಸಂತೊಷವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ತಿಳಿಸಿದರು.

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಅನೇಕ ಜನ ಸರ್ಕಾರಿ ಕಚೇರಿಗಳನ್ನೇ ನೋಡಿಲ್ಲ, ಇಲಾಖೆ ಸೌಲಭ್ಯ ಪಡೆದಿಲ್ಲ, ಸರ್ಕಾರದ ಮಾಸಾಶನ ಸೇರಿದಂತೆ ಇತರೆ ಸೌಲಭ್ಯವನ್ನು ಸ್ಥಳದಲ್ಲಿಯೇ ನೀಡಿದರೆಜನ ಸಂತಸಪಡುತ್ತಾರೆಂದರು. ನಾವು ಈವಾಸ್ತವ್ಯದಿಂದ ಅಲ್ಲಿಯ ಜನರ ಸಂಸ್ಕೃತಿ ಪರಂಪರೆ ಅರಿತೆವು, ಎಸ್‌ಸಿ, ಎಸ್‌ಟಿ ಸಮಸ್ಯೆಆಲಿಸಿದೆವು. ಜನರೊಂದಿಗೆ ಭಜನೆ ನಾಟಕಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದೆವು. ಜಿಲ್ಲಾಧಿಕಾರಿಗಳು ದೂರದವರಲ್ಲ ನಮಗೆ ನಿಲುಕುವವರು ಎನ್ನುವ ಭಾವನೆ ಬರುತ್ತದೆ ಎಂದು ತಿಳಿಸಿದರು.

ಗ್ರಾಮ ವಾಸ್ತವ್ಯದಲ್ಲಿ ಆಗಿರುವ ಲೋಪ ಸರಿಪಡಿಸಿಕೊಂಡು ಮುಂದೆಇನ್ನೂ ಪರಿಣಾಮಕಾರಿಯಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ತಹಶೀಲ್ದಾರ್‌ರಿಗೆತಿಳಿಸಿದ್ದೇನೆ ಎಂದು ಹೇಳಿದರು. ವಾಸ್ತವ್ಯಕ್ಕೆಮೊದಲೇ ಅರ್ಜಿ ಸ್ವೀಕರಿಸಿ ವಾಸ್ತವ್ಯದಂದುಅವರ ಅರ್ಜಿವಿಲೇವಾರಿ ಮಾಡಲು ಸೂಚನೆನೀಡಿದ್ದೇನೆ. ಕೃಷಿ, ತೊಟಗಾರಿಕೆ ಇಲಾಖೆಯೊಜನೆಗಳನ್ನೂ ಇಲ್ಲಿನ ಜನರಿಗೆ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರತಿ ತಿಂಗಳು ಮೂರನೇ ಶನಿವಾರ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ಮತ್ತು ಗ್ರಾಮ ವಾಸ್ತವ್ಯದ ಬಗ್ಗೆ ಸರ್ಕಾರದಿಂದ ಸುತ್ತೋಲೆ ಬಂದಿರುವ ರೀತಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಲಾಗಿದೆ. ಅಲ್ಲಿ ಗ್ರಾಮಸ್ಥರ ಮತ್ತು ರೈತರ ಸಮಸ್ಯೆ ಆಲಿಸಿ ಅಲ್ಲಿಯ ಚಿಕ್ಕಕೆರೆಯಿಂದ ಮಲ್ಲನಾಯಕನಹಳ್ಳಿ ಕೆರೆಗೆ ನೀರು ಬರಲು ರಾಜಕಾಲುವೆ ತೆರವು ಮಾಡಲು ಸೂಚಿಸಲಾಗಿದೆ.ಸರ್ಕಾರಿ ಶಾಲಾ ಕಾಂಪೌಂಡ್‌ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ. ವೈ.ಎಸ್‌.ಪಾಟೀಲ್‌, ಜಿಲ್ಲಾಧಿಕಾರಿ

 

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

1-aaaa

2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.