ಪಾತಾಳಕ್ಕಿಳಿದಿದೆ ಅಂತರ್ಜಲ ಮಟ್ಟ

ಸಾವಿರಾರು ಆಡಿ ಕೊಳವೆ ಬಾವಿ ಕೊರೆದರೂ ನೀರಿಲ್ಲ | ಮುಂದಿನ ವರ್ಷ ಹನಿ ನೀರಿಗೂ ಪರದಾಟ

Team Udayavani, May 15, 2019, 5:23 PM IST

tumkur-tdy-2..

ಕೊಳವೆ ಬಾವಿಗಳಿಗೆ ನೀರು ಇಂಗಿಸುವುದು.

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದೆ. ಬತ್ತಿ ಹೋಗಿರುವ ಕೊಳವೆ ಬಾವಿಗಳಿಗೆ ಮರುಜೀವ ನೀಡುವ ಸಂಜೀವಿನಿ ಇಂಗು ಗುಂಡಿ ಯೋಜನೆಯು ಅನುಷ್ಠಾನಕ್ಕೆ ಬಂದರೆ ಮಾತ್ರ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸುತ್ತದೆ ಹೊರತು, ಬೇರೆ ದಾರಿ ಇಲ್ಲವಾಗಿದೆ.

ಭೀಕರ ಬರದ ಛಾಯೆ ತಾಲೂಕಿನಲ್ಲಿ ಮನೆ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಅಂತರ್ಜಲ ಪಾತಾಳಕ್ಕಿಳಿಯುತ್ತಿದೆ. ಸಾವಿರ ಆಡಿ ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ. ಬಿಸಿಲಿಗೆ ದಿನದಿಂದ ದಿನಕ್ಕೆ ಬಹುತೇಕ ಕೊಳವೆ ಬಾವಿ ಬತ್ತಿ ಹೋಗುತ್ತಿದೆ. ಅಂತರ್ಜಲ ಕುಸಿತದಲ್ಲಿ ರಾಜ್ಯದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಎರಡನೇ ಸ್ಥಾನದಲ್ಲಿ ಇದೆ. ತಾಲೂಕಿನಲ್ಲಿ ಜಲಕ್ಷಾಮ ಆವರಿಸಿಕೊಂಡು ರೈತರನ್ನು ಕಂಗಾಲು ಮಾಡಿದೆ.

ಮಳೆ ನೀರು ಸಂಗ್ರಹಿಸಿ: ತಾಲೂಕಿನಲ್ಲಿ ಸರ್ಕಾರದ ಅಧಿನದಲ್ಲಿ ಕುಡಿಯುವ ನೀರಿನ ಸುಮಾರು 1475 ಕೊಳವೆ ಬಾವಿಗಳು ಇದೆ. ಇವುಗಳ ಪೈಕಿ ಸುಮಾರು 650 ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. 2 ಲಕ್ಷ ಜನಸಂಖ್ಯೆ ಇರುವ ತಾಲೂಕಿನಲ್ಲಿ ನೀರಿನ ಹಾಹಕಾರ ಹೆಚ್ಚಾಗಿದ್ದು, ಸಾವಿರಾರು ಆಡಿ ಕೊಳವೆ ಬಾವಿ ಕೊರೆಸುವ ಮುನ್ನ ಬತ್ತಿ ಹೋಗಿರುವ ಕೊಳವೆ ಬಾವಿಗಳಿಗೆ ಮಳೆ ನೀರು ಸಂಗ್ರಹವಾಗುವಂತೆ ಮಾಡಿದರೆ, ಅಂತರ್ಜಲ ಮಟ್ಟ ಸುಧಾರಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ನೀರು ಇಂಗಿಸುವ ಪದ್ಧತಿ ಆರಂಭಿಸಿ: ತಾಲೂಕಿನಲ್ಲಿ ಕಳೆದ 15 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ 450ರಿಂದ 750 ಮಿ.ಮಿ ಮಳೆಯಾಗುತ್ತಿದೆ. ಆದರೆ, ಮಳೆ ನೀರನ್ನು ಸಂಗ್ರಹಿಸುವಲ್ಲಿ ವಿಫ‌ಲವಾದ ಕಾರಣದಿಂದ ಇಂದು ಭೀಕರ ಬರ ಬಂದಿದೆ. ಪ್ರತಿ ಕೊಳವೆ ಬಾವಿಗಳಿಗೂ ಮಳೆ ಬಂದ ವೇಳೆ ನೀರನ್ನು ಇಂಗಿಸುವ ಪದ್ಧತಿ ಆರಂಭವಾಗಬೇಕಿದೆ. ನೀರು ಇಂಗಿಸುವ ಕ್ರಮವನ್ನು ಅನುಷ್ಠಾನಕ್ಕೆ ತಂದರೆ ಮಾತ್ರ ಮುಂದಿನ ದಿನಗಳಲ್ಲಿ ತಾಲೂಕಿನ ಅಂತರ್ಜಲ ಮಟ್ಟ ಸುಧಾರಿಸುತ್ತದೆ.

ನೀರು ಇಂಗಿಸುವುದು ಹೇಗೆ?: 8 ಆಡಿ ಆಗಲ 10 ಆಡಿ ಆಳದ ಕೊಳವೆ ಬಾವಿ ಹೊಂಡಕ್ಕೆ 180 ರಂಧ್ರಗಳಿರುವ ಕೇಸಿಂಗ್‌ ಪೈಪ್‌ ಆಳವಡಿಸಿಕೊಳ್ಳಬೇಕು. ಇದಕ್ಕೆ ನೈಲನ್‌ ಮೆಷ್‌ ಮರಳು ಹೊದಿಕೆಯ ಮೂರು ಫಿಲ್ಟರ್‌ಗಳನ್ನು ಆಳವಡಿಸಬೇಕು. 5 ಆಡಿ ಎತ್ತರದಷ್ಟು ದಪ್ಪ ಕಲ್ಲು, 40 ಎಂಎಂ ಜಲ್ಲಿಕಲ್ಲುನ್ನು ಒಂದು ಆಡಿ ಎತ್ತರಕ್ಕೆ ತುಂಬಬೇಕು. ಇದರ ಮೇಲ್ಬಾಗಕ್ಕೆ 20 ಎಂಎಂ ಜಲ್ಲಿಕಲ್ಲನ್ನು 1 ಆಡಿಗಳಷ್ಟು ತುಂಬಬೇಕು. ಮೇಲ್ಬಾಗದಲ್ಲಿ ಗೊಜ್ಜುಕಲ್ಲು ತುಂಬಬೇಕು. ಅನಂತರ ಮಳೆ ನೀರನ್ನು ನೇರವಾಗಿ ಇಂಗುಗುಂಡಿಗೆ ತುಂಬಿಸಬಹುದು. ಹೀಗೆ ಮಾಡುವುದರಿಂದ ಕೊಳವೆ ಬಾವಿ ಸುತ್ತಲೂ 1 ಕಿ.ಮೀ ವ್ಯಾಪ್ತಿಯ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಇದರಲ್ಲಿ 15 ಪ್ರಕಾರದ ಮಾದರಿಗಳಿವೆ. 20ರಿಂದ 40 ಸಾವಿರ ರೂ. ವೆಚ್ಚವಾಗಲಿದೆ.

ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಬತ್ತಿ ಹೋಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಾಲೂಕಿನಲ್ಲಿ ನೀರು ಇಂಗಿಸುವ ಪದ್ಧತಿಯನ್ನು ಜಾರಿಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿಯುವುದರಲ್ಲಿ ಅನುಮಾನವಿಲ್ಲ.

● ಚೇತನ್‌ ಪ್ರಸಾದ್‌

ಟಾಪ್ ನ್ಯೂಸ್

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Apply for Taluk Rajyotsava Award

ತಾಲೂಕು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ

1-ttt

ತಿಪಟೂರು: ಸಿಡಿಲು ಬಡಿದು ಕುರಿಗಾಹಿ ದುರ್ಮರಣ, ಇನ್ನೋರ್ವ ಗಂಭೀರ

Display a Quiet Image at the State Festival

ರಾಜ್ಯೋತ್ಸವದಲ್ಲಿ ಸ್ತಬ್ಧ ಚಿತ್ರ ಪ್ರದರ್ಶಿಸಿ

Warrior M Jayaram Nayak honored with Presidential Medal of Honor

ಯೋಧರಿಗೆ ಗೌರವ ಸಲ್ಲಿಕೆ ಎಲ್ಲರ ಕರ್ತವ್ಯ

ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಐದು ಮಂದಿ ಆರೋಪಿಗಳ ಬಂಧನ

ಹಲ್ಲೆ: ನಾಳೆ ತುಮಕೂರು ಬಂದ್‌

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.