ಎತ್ತಿನಹೊಳೆ ನೀರು ಹಂಚಿಕೆಗೆ ಆಗ್ರಹ


Team Udayavani, Nov 3, 2020, 5:30 PM IST

ಎತ್ತಿನಹೊಳೆ ನೀರು ಹಂಚಿಕೆಗೆ ಆಗ್ರಹ

ತಿಪಟೂರು: ಎತ್ತಿನಹೊಳೆ ನೀರಿನಿಂದಲಾದರೂ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕೆಂದು ಆಗ್ರಹಿಸಿ ಎತ್ತಿನಹೊಳೆ ಹೋರಾಟ ಸಮಿತಿಯೊಂದಿಗೆ ನೂರಾರು ರೈತರು ತಾಲೂಕಿನ ನಾಗತೀಹಳ್ಳಿ ಗೇಟ್‌ನಿಂದ ಬಿದಿರೆಗುಡಿ ಮಾರ್ಗವಾಗಿ ತಿಪಟೂರು ಎಸಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿ ಮುತ್ತಿಗೆ ಹಾಕಲು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ತಾ. ಆಡಳಿತ ಬಿದರೆಗುಡಿ ಸರ್ಕಲ್‌ನಲ್ಲೇ ತಡೆಯೊಡ್ಡಿದ ಘಟನೆ ನಡೆಯಿತು.

ಚುನಾವಣಾ ನೀತಿ ಸಂಹಿತೆ ಹಾಗೂ ಪೊಲೀಸ್‌ ಕೊರತೆ ಬಗ್ಗೆ ತಾ. ಆಡಳಿತ ಹೋರಾಟಗಾರರ ಬಳಿ ಕಾನೂನು ಸುವ್ಯ ವಸ್ಥೆ ಕಾಪಾಡುವ ಬಗ್ಗೆ ಮಾತನಾಡಿ ಕಾಲ್ನಡಿಗೆ ಜಾಥಾವನ್ನು ಬಿದರೆ ಗುಡಿ ಸರ್ಕಲ್‌ನಲ್ಲೇ ಮುಕ್ತಾಯ ಗೊಳಿಸಬೇ ಕೆಂದು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಹೋರಾಟಗಾರರು ಅಲ್ಲಿಯೇ ಸಭೆ ನಡೆಸಿದರು.

ಉಪವಿಭಾಗಾಧಿಕಾರಿ ಪರವಾಗಿ ತಹ ಶೀಲ್ದಾರ್‌ ಚಂದ್ರಶೇಖರಯ್ಯ ಮನವಿ ಸ್ವೀಕರಿಸಲು ಸ್ಥಳಕ್ಕೇ ಆಗಿಮಿಸಿದ್ದರು. ಸಭೆಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿ ಹಾಗೂ ರೈತ ಮುಖಂಡ ಸಿ.ಬಿ.ಶಶಿಧರ್‌ ಮಾತನಾಡಿ, ತಾಲೂಕಿನ ಮೂಲಕವೇ ಹೇಮಾವತಿ ನಾಲೆಯಲ್ಲಿ ಕಳೆದ 30 ವರ್ಷಗಳಿಂದಲೂ ನೀರು ಹರಿಯುತ್ತಿದ್ದರೂ ತಾಲೂಕಿನ ಯಾವ ಕೆರೆಗಳಿಗೂ ನೀರು ಹರಿಯಲಿಲ್ಲ. ನಗರಕ್ಕೆ ಕುಡಿಯುವ ನೀರಿನ ಸಲುವಾಗಿ ಈಚ ನೂರು ಕೆರೆ ಮತ್ತು ನೊಣವಿನಕೆರೆ ಹೋಬಳಿಯ ಒಂದೆರಡು ಕೆರೆಗಳಿಗಳು ಮಾತ್ರ ಪ್ರತಿ ವರ್ಷ ತುಂಬುತ್ತಿದ್ದು ಉಳಿದಂತೆ ತಾಲೂಕಿನ ಶೇ.90ರಷ್ಟು ಕೆರೆಗಳು ಹತ್ತಾರು ವರ್ಷಗಳಿಂದಲೂ ನೀರಿಲ್ಲದೆ ಒಣಗಿ ನಿಂತಿವೆ.

ಹೊನ್ನವಳ್ಳಿ ಹಾಗೂ ಕಸಬಾ ಹೋಬಳಿಯ ಕೆಲವೇ ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ರೂಪಿಸಿದ್ದ ಹೊನ್ನವಳ್ಳಿ ಏತನೀರಾವರಿ ಯೋಜನೆ ಅವೈಜಾnನಿಕವಾಗಿರುವುದರಿಂದ ನೂರು ಕೋಟಿ ಹಣವನ್ನು ಸಮುದ್ರಕ್ಕೆ ಸುರಿದಂತಾಗಿದೆ. ಈ ಯೋಜನೆ ಚಾಲ್ತಿಯಾಗಿ 10 ವರ್ಷಗಳೇ ಕಳೆದಿದ್ದರೂ ಯಾವೊಂದೂ ಕೆರೆಗೂ ನೀರು ಹರಿಸಲಾಗಿಲ್ಲ. ಇಲ್ಲಿನ ಎಲ್ಲಾ ಜನಪ್ರತಿನಿಧಿಗಳೂ ಚುನಾವಣೆ ಸಮಯದಲ್ಲಿ ಮಾತ್ರ ಕೆರೆಗಳಿಗೆ ನೀರು ಹರಿಸುತ್ತೇವೆಂದು ರೈತರನ್ನು ವಂಚಿಸುತ್ತಲೇ ಅಧಿಕಾರ ಹಿಡಿಯುತ್ತಿದ್ದರೂ ಯಾರೊಬ್ಬರೂ ಈ ಬಗ್ಗೆ ಪ್ರಾಮಾಣಿಕ  ಕೆಲಸ ಮಾಡದೆ ರೈತರನ್ನು ನಿರಂತರವಾಗಿ ವಂಚಿಸುತ್ತಲೇ ಇದ್ದಾರೆ. ಆದರೂ ಇಲ್ಲಿನ ರೈತರು ತಾಳ್ಮೆ, ಸಹನೆಯಿಂದ ಈವರೆಗೂ ಇದ್ದು ಈಗ ಜನಪ್ರತಿನಿದಿಗಳ ಸುಳ್ಳು, ಮೋಸಗಳ ಬಗ್ಗೆ ಸಿಡಿದೆದಿದ್ದು ಮುಂದಿನ ದಿನಗಳಲ್ಲಿ ಈ ಹೋರಾಟ ಉಗ್ರರೂಪ ಪಡೆಯುವುದೆಂದು ಎಚ್ಚರಿಕೆ ನೀಡಿದರು.

ಕೂಡಲೆ ಇಲ್ಲಿನ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೆರೆಗಳಿಗೆ ನೀರು ತುಂಬಿಸಲು ಸರ್ಕಾರದಿಂದ ನೀರು ಹಂಚಿಕೆ ಮಾಡಿಸಿಕೊಂಡು, ವಿಶ್ವೇಶ್ವರಯ್ಯ ನೀರಾವರಿ ನಿಗಮದಿಂದ ಸಣ್ಣ ನೀರಾವರಿ ಇಲಾಖೆಗಳ ಮೂಲಕ ನೀರು ಹರಿಸಲು ಯೋಜನೆ ರೂಪಿಸುವ ಕೆಲಸಕ್ಕೆ ಮುಂದಾಗಬೇಕಲ್ಲದೆ ಭೂಮಿಕಳೆದುಕೊಳ್ಳುತ್ತಿರುವರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಎತ್ತಿನಹೊಳೆ ಹೋರಾಟ ಸಮಿತಿ ಅಧ್ಯಕ್ಷ ದೇವರಾಜು, ರೈತ, ಕೃಷಿ ಕಾರ್ಮಿಕ ಸಂಘಟನೆ ತಾ. ಅಧ್ಯಕ್ಷ ಎಸ್‌.ಎನ್‌. ಸ್ವಾಮಿ, ಮುಖಂಡ ಕುಂದೂರು ತಿಮ್ಮಯ್ಯ, ಜಿಪಂ ಸದಸ್ಯ ಜಿ. ನಾರಾಯಣ್‌, ಬೆಲೆ ಕಾವಲು ಸಮಿತಿಯ ಶ್ರೀಕಾಂತ್‌ ಕೆಳಹಟ್ಟಿ, ಎತ್ತಿನಹೊಳೆ ಹೋರಾಟ ಮುಖಂಡರುಗಳಾದ ಮನೋಹರ್‌ ಪಟೇಲ್‌, ಬಿ.ಬಿ. ಸಿದ್ಧಲಿಂಗ ಮೂರ್ತಿ, ಕನ್ನಡಪರ ಹೋರಾಟಗಾರ ವಿಜಯ್‌ಕುಮಾರ್‌, ಯೋಗಾ ನಂದಸ್ವಾಮಿ, ನಾಗತೀಹಳ್ಳಿ ಜಯಣ್ಣ, ಪ್ರಸಾ ದ್‌, ಶಿವಪ್ರಕಾಶ್‌, ಗಂಗಾಧರ್‌, ಹೊನ್ನ ವಳ್ಳಿ ಹೋರಾಟ ಸಮಿತಿ ಚಂದ್ರೇ ಗೌಡ, ನಾಗತೀಹಳ್ಳಿ ಕೃಷ್ಣಮೂರ್ತಿ ಇದ್ದರು.

ಟಾಪ್ ನ್ಯೂಸ್

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.