ಕಸ ಸುರಿದರೆ ವಾಹನ ಪರವಾನಗಿ ರದ್ದು

ಗಾರೆ ನರಸಯ್ಯನಕಟ್ಟೆ-ಅಕ್ಕತಂಗಿಯರ ಕೆರೆಯಂಗಳದಲ್ಲಿ 2 ಆಟೋಗಳ ಜಪ್ತಿ ಮಾಡಿ 2 ಸಾವಿರ ರೂ. ದಂಡ: ಆಯುಕ್ತ

Team Udayavani, Jul 31, 2019, 2:39 PM IST

ತುಮಕೂರು: ಸಾರ್ವಜನಿಕ ಸ್ಥಳಗಳಲ್ಲಿ ಇನ್ನು ಮುಂದೆ ಕಸ ಸುರಿಯಲು ಯತ್ನಿಸಿದರೆ ಅಂತಹ ವಾಹನಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್‌ ಎಚ್ಚರಿಕೆ ನೀಡಿದರು.

ನಗರದ ಹೊರವಲಯದ ಗಾರೆ ನರಸಯ್ಯನಕಟ್ಟೆ ಹಾಗೂ ಅಕ್ಕತಂಗಿಯರ ಕೆರೆಯಂಗಳದಲ್ಲಿ ಕಸ ಸುರಿಯಲು ಯತ್ನಿಸುತ್ತಿದ್ದ 2 ಲಗೇಜ್‌ ಆಟೋಗಳನ್ನು ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದು 2 ಸಾವಿರ ರೂ.ದಂಡ ವಿಧಿಸಿದ್ದಾರೆಂದರು.

2 ಆಟೋ ವಶಕ್ಕೆ: ಇದೇ ರೀತಿ ಗಾರೆ ನರಸಯ್ಯನಕಟ್ಟೆ ಬಳಿ ಖಾಸಗಿ ಬ್ಯಾಂಕ್‌ವೊಂದರ ಸಿಬ್ಬಂದಿ ಲಗೇಜ್‌ ಆಟೋದಲ್ಲಿ ಪೇಪರ್‌ ಸೇರಿದಂತೆ ಇತರೆ ಕಸ ತುಂಬಿ ಕೊಂಡು ಬಂದು ಕಸ ಹಾಕಲು ಮುಂದಾ ಗಿದ್ದರು. ಈ ಬಗ್ಗೆ ಮಾಹಿತಿ ಅರಿತ ಪಾಲಿಕೆ ಅಧಿಕಾರಿಗಳು, ದಾಳಿ ನಡೆಸಿ ಆಟೋ ವಶಪಡಿಸಿಕೊಂಡು ಎರಡೂ ಆಟೋಗಳನ್ನು ಪಾಲಿಕೆ ಕಚೇರಿಗೆ ಕರೆ ತಂದು ಆಯುಕ್ತರ ಮುಂದೆ ಹಾಜರು ಪಡಿಸಿದ್ದಾರೆ.

ಸ್ವಚ್ಛತೆ ಕಾಪಾಡಲು ಮುಂದಾಗಿ: ಎರಡೂ ಕಡೆ ಆಟೋಗಳಲ್ಲಿ ಕಸ ಸುರಿಯಲು ಬಂದಿದ್ದವರಿಗೆ ನಗರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಅರಿವು ಮೂಡಿಸಿದ ಆಯುಕ್ತ ಟಿ.ಭೂಬಾಲನ್‌, ತುಮಕೂರು ನಗರವನ್ನು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛ ತುಮಕೂರನ್ನಾಗಿ ಮಾ ಡಲು ಶ್ರಮಿಸಲಾಗುತ್ತಿದೆ. ಕಸವನ್ನು ಎಲ್ಲೆಂ ದರಲ್ಲಿ ಸ್ಥಳಗಳಲ್ಲಿ ಎಸೆಯಬಾರದು. ಸಾರ್ವ ಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದೆ ಅನೈರ್ಮಲ್ಯ ಸೃಷ್ಟಿಸುವ ರೀತಿಯಲ್ಲಿ ಕಸವನ್ನು ಎಸೆದರೆ ಅಂತಹವರಿಗೆ ದಂಡ ಹಾಕಲಾಗುವುದು ಎಂದರು.

ಜಿಲ್ಲಾಧಿಕಾರಿಗೆ ಶಿಫಾರಸು ಮಾಡುವೆ: ರಸ್ತೆ, ಕೆರೆಯಂಗಳ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬಾರದು. ಒಂದು ವೇಳೆ ಪಾಲಿಕೆ ಆದೇಶ ಉಲ್ಲಂಘಿಸಿ ಕಸ ಹಾಕಿದರೆ ಅಂತಹ ವಾಹನ ಗಳಿಗೆ ಹೆಚ್ಚಿನ ಮೊತ್ತದಲ್ಲಿ ದಂಡ ವಿಧಿಸಿ, ವಾಹನಗಳ ಲೈಸೆನ್ಸ್‌ ರದ್ದುಪಡಿಸಲು ಜಿಲ್ಲಾಧಿ ಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು. ಗಾರೆ ನರಸಯ್ಯನಕಟ್ಟೆಗೆ ಖಾಸಗಿ ಬ್ಯಾಂಕ್‌ನವರು ಪೇಪರ್‌ ತುಂಬಿಕೊಂಡು ಕಸ ಹಾಕಲು ಬಂದಿದ್ದರು. ಅದೇ ರೀತಿ ಅಕ್ಕತಂಗಿ ಯವರ ಕೆರೆ ಬಳಿಗೆ ತರಕಾರಿ ತುಂಬಿಕೊಂಡು ಮತ್ತೂಂದು ವಾಹನ ಬಂದಿತ್ತು. ಈ ಎರಡೂ ವಾಹನವನ್ನು ಪಾಲಿಕೆ ಸಿಬ್ಬಂದಿ ಹಿಡಿದು ಪಾಲಿಕೆ ಆವರಣಕ್ಕೆ ಕರೆ ತಂದಿದ್ದರು. ಈ ಎರಡೂ ವಾಹನಗಳಿಗೆ ತಲಾ 2 ಸಾವಿರ ರೂ.ದಂಡ ವಿಧಿಸಿ, ಸ್ವಚ್ಛತೆ ಕಾಪಾಡುವಂತೆ ಅರಿವು ಮೂಡಿಸಲಾಗಿದೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ತುಮಕೂರು: ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ಅಪಾರ ಹಾನಿಯುಂಟಾಗಿ, ಸಾವಿರಾರು ಜನ ಮನೆ, ಮಠ ಕಳೆದುಕೊಂಡು 35,500 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದ್ದರೂ, ರಾಜ್ಯದಿಂದ...

  • ತಿಪಟೂರು: ಜನರ ನೋವಿಗೆ ಸ್ಪಂದಿಸುವುದೇ ನಿಜ ಧರ್ಮ. ಹೀಗೆ ನೊಂದವರ ಕಣ್ಣೀರೊರೆಸುವ ಕಾರ್ಯ ಮಾಡುವ ಮೂಲಕ ಧರ್ಮ ಪರಿಪಾಲಿಸಿಕೊಂಡು ಬರುತ್ತಿರುವ ಶ್ರೀ ಕಾಡಸಿದ್ಧೇಶ್ವರ...

  • ಹುಳಿಯಾರು: ಜಿಲ್ಲೆಯಲ್ಲೆ ಅತೀ ಹೆಚ್ಚು ರಾಗಿ ಬೆಳೆಯುವ ಪ್ರದೇಶವೆಂದು ಹೆಸರಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ...

  • ತುರುವೇಕೆರೆ: ರಾಜ್ಯದ ವಿವಿಧ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕೂಡಲೇ ಕಾಯಂಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು...

  • ಕೊರಟಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಬಿಕ್ಕೆಗುಟ್ಟೆ ಅಂಗನವಾಡಿ ಕಟ್ಟಡದ ಉನ್ನತೀಕರಣಕ್ಕೆ ಬಿಡುಗಡೆಯಾದ 2ಲಕ್ಷ ಅನುದಾನನವನ್ನು...

ಹೊಸ ಸೇರ್ಪಡೆ