ನೀರಾವರಿ ಯೋಜನೆಗೆ ಗೌರಿಶಂಕರ್‌ ಅಡ್ಡಗಾಲು

ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂಬ ಹೇಳಿಕೆ ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಾಗಿದೆ: ಸುರೇಶ್‌ಗೌಡ ವಾಗ್ದಾಳಿ

Team Udayavani, Oct 24, 2021, 4:26 PM IST

ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂಬ ಹೇಳಿಕೆ ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಾಗಿದೆ: ಸುರೇಶ್‌ಗೌಡ ವಾಗ್ದಾಳಿ

ತುಮಕೂರು: ಗ್ರಾಮಾಂತರ ಕ್ಷೇತ್ರದ ಹೆಬ್ಬೂರು- ಗೂಳೂರು ಹೋಬಳಿಗಳ ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂದು ಹೇಳಿಕೆ ನೀಡಿರುವ ಶಾಸಕ ಡಿ.ಸಿ. ಗೌರಿಶಂಕರ್‌ ವಿರುದ್ಧ ಹರಿಹಾಯ್ದಿರುವ ಮಾಜಿ ಶಾಸಕ ಬಿ.ಸುರೇಶ್‌ಗೌಡ, “ಕೆರೆಗೆ ಬರಬೇಕಾಗಿರುವ ನೀರು ಹರಿಸಿಕೊಳ್ಳಲು ತಾಕತ್ತು ಇಲ್ಲದೆ ಕ್ಷೇತ್ರಕ್ಕೆ ಕಷ್ಟ ಬಿದ್ದು ದಶಕ ಗಳ ಕಾಲ ಹೋರಾಟ ನಡೆಸಿ ಅನುಷ್ಠಾನ ಗೊಳಿಸಿದ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕಲು ಹೊರಟಿ ದ್ದಾರೆ’ ಎಂದು ವಾಗ್ಧಾಳಿ ನಡೆಸಿದರು.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂದು ಹೇಳಿರುವುದನ್ನು ಗಮನಿಸಿದರೆ ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಾಗಿದೆ. ಶಾಸಕ ಗೌರಿಶಂಕರ್‌ಗೆ ಇರುವ ನೀರನ್ನು ಹರಿಸಿಕೊಳ್ಳಲು ಶಕ್ತಿ ಇಲ್ಲ. ನರ ಸತ್ತು ಹೋಗಿದೆ ಎಂದು ಹರಿಹಾಯ್ದರು. ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ಕುಡಿಯುವ ನೀರಿಗಾಗಿ ಅನುಷ್ಠಾನಗೊಂಡಿದೆ. ಕೂಡಲೇ ಅಗತ್ಯ ಇರುವಷ್ಟು ನೀರನ್ನು ಹರಿಸಬೇಕು.

ಎಲ್ಲೋ ಇದ್ದ ವ್ಯಕ್ತಿಗೆ ಹೇಮಾವತಿ ನದಿ ನೀರಿಗಾಗಿ ಇಲ್ಲಿನ ಜನರು ಮಾಡಿರುವ ಹೋರಾಟ, ಪೊಲೀಸ ರಿಂದ ತಿಂದಿರುವ ಏಟುಗಳು ಹೇಗೆ ಗೊತ್ತಾಗಬೇಕು. ಸುಭಿಕ್ಷೆಯ ಕಾಲದಲ್ಲೂ ಗ್ರಾಮಾಂತರ ಕ್ಷೇತ್ರಕ್ಕೆ ಹಂಚಿಕೆ ಯಾಗಿರುವಷ್ಟು ಹೇಮಾವತಿ ನೀರನ್ನು ಬಿಡುವಂತೆ ಕೇಳದಷ್ಟು ತಾಕತ್ತು ಇಲ್ಲದ ಶಾಸಕರಾಗಿದ್ದಾರೆ. ನಾನು ಅಧಿಕಾರದಲ್ಲಿದ್ದರೆ ರಕ್ತ ಕೊಟ್ಟಾದರೂ ನೀರು ಹರಿಸುತ್ತಿದ್ದೆ ಎಂದರು.

ನೀರು ಹರಿದಿದೆ: ಗೊರೂರು ಜಲಾಶಯದಿಂದ ಜಿಲ್ಲೆಗೆ 2011-12 ರಲ್ಲಿ 19.594 ಟಿಎಂಸಿ, 2012-13 ರಲ್ಲಿ 12.975 ಟಿಎಂಸಿ, 2013-14 ರಲ್ಲಿ 21.127 ಟಿಎಂಸಿ, 2014-15 ರಲ್ಲಿ 20.401 ಟಿಎಂಸಿ, 2015- 16 ರಲ್ಲಿ 10.896 ಟಿಎಂಸಿ, 2016-17 ರಲ್ಲಿ 3.8534 ಟಿಎಂಸಿ, 2017-18 ರಲ್ಲಿ 8.856 ಟಿಎಂಸಿ, 2018- 19 ರಲ್ಲಿ 23.137 ಟಿಎಂಸಿ, 2019-20 ರಲ್ಲಿ 21.358 ಟಿಎಂಸಿ, 2020-21 ರಲ್ಲಿ 23.495 ಟಿಎಂಸಿ ಹಾಗೂ 2021-22 ರಲ್ಲಿ 12.086 ಟಿಎಂಸಿ ನೀರು ಹರಿದಿದೆ. 2016-17 ರಲ್ಲಿ ಬರಗಾಲ ಇದ್ದ ಕಾರಣ ಕೇವಲ 3 ಟಿಎಂಸಿ ನೀರು ಮಾತ್ರ ಜಿಲ್ಲೆಗೆ ಹರಿದಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ಷೇತ್ರಕ್ಕೆ ನೀರು ಹರಿಸದಿರುವುದು ಶಾಸಕರ ಹೊಣಗೇಡಿತನ ತೋರಿಸುತ್ತದೆ ಎಂದರು.

ತಿಳಿದು ಮಾತನಾಡಲಿ: ಗ್ರಾಮಾಂತರ ಕ್ಷೇತ್ರಕ್ಕೆ ನಾನು ಶಾಸಕನಾಗಿದ್ದಾಗ ನೀರೇ ಹರಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನಾನು 10 ವರ್ಷ ಶಾಸಕನಾಗಿದ್ದಾಗ 8 ವರ್ಷ ನಿರಂತರವಾಗಿ ನೀರು ಹರಿಸಿದ್ದೇನೆ. 2016- 17, 2017-18 ರಲ್ಲಿ ಬರಗಾಲ ಎದುರಾಗಿದ್ದರಿಂದ ಹೇಮಾವತಿ ಜಲಾಶಯದಲ್ಲಿ ನೀರು ಎಷ್ಟಿತ್ತು ಎಂಬುದನ್ನು ಮೊದಲು ತಿಳಿದುಕೊಂಡು ಮಾಹಿತಿ ನೀಡಬೇಕಿತ್ತು. ಆ ಬಗ್ಗೆ ತಿಳಿದುಕೊಳ್ಳುವ ವ್ಯವದಾನವೂ ಇಲ್ಲದಿದ್ದರೇ ಹೇಗೆ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ:- ಹಗ್ಗ-ಸೀಮೆ ಎಣ್ಣೆ ಹಿಡಿದು ಗ್ರಾಮಸ್ಥರ ಪ್ರತಿಭಟನೆ

 ಕೆರೆಗಳನ್ನು ನೋಡಿದರೆ ನೋವಾಗುತ್ತಿದೆ: ಶಾಸಕ ಗೌರಿಶಂಕರ್‌ಗೆ ಹೆಬ್ಬೂರು- ಗೂಳೂರು ಏತ ನೀರಾ ವರಿ ಮೂಲ ಯೋಜನೆ ಬಗ್ಗೆಯೇ ಅರಿವಿಲ್ಲ. ಆದರೆ ನಾವು ಈ ಯೋಜನೆ ಅನುಷ್ಠಾನವಾಗುವವರೆಗೂ ನಿದ್ದೆ ಮಾಡಿಲ್ಲ. ಪ್ರತಿ ಹಂತದ ಮಾಹಿತಿಯೂ ತಮಗೆ ಗೊತ್ತಿದೆ. ಪಕ್ಕದ ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಕೆರೆಗಳು ಹೇಮಾವತಿ ನೀರಿನಿಂದ ತುಂಬಿ ಕಂಗೊಳಿಸುತ್ತಿವೆ. ನಮ್ಮ ಕ್ಷೇತ್ರದ ಕೆರೆಗಳು ಖಾಲಿ ಇರುವುದನ್ನು ನೋಡಿದರೆ ನೋವಾಗುತ್ತದೆ ಎಂದರು.

ದುರುದ್ದೇಶ: ಹೇಮಾವತಿ ನದಿ ನೀರು ಕ್ಷೇತ್ರಕ್ಕೆ ಹರಿ ಯುವುದು ಅವರಿಗೆ ಬೇಕಾಗಿಲ್ಲ. ಹೀಗಾಗಿಯೇ ಯೋಜನೆಯೇ ಅವೈಜ್ಞಾನಿಕ ಎಂದು ಹೇಳುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸಿ ಮಕ್ಮಾಲ್‌ ಟೋಪಿ ಹಾಕುತ್ತಿದ್ದಾರೆ. ಯೋಜನೆಯನ್ನು ಹಾಳು ಮಾಡುವ ದುರುದ್ದೇಶದಿಂದಲೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಉಮೇಶ್‌ ಗೌಡ, ಮುಖಂಡ ರಾದ ನರಸಿಂಹಮೂರ್ತಿ, ಗೂಳೂ ರು ಶಿವ ಕುಮಾರ್‌, ವಿಜಯಕುಮಾರ್‌, ಸಿದ್ದೇಗೌಡ, ಪ್ರಭಾಕರ್‌, ಅರಕೆರೆ ರವೀಶ್‌ ಮತ್ತಿತರರಿದ್ದರು.

“ಗ್ರಾಮಾಂತರ ಕ್ಷೇತ್ರಕ್ಕೆ ಸಮರ್ಪಕವಾಗಿ ಬರಬೇಕಾಗಿರುವ ಹೇಮಾವತಿ ನೀರು ಬಿಡಿಸಲು ತಾಕತ್ಇಲ್ಲದಿದ್ದರೆ ರಾಜೀನಾಮೆ ನೀಡಲಿ. ನೀರು ಬಿಡಿಸುವ ಯೋಗ್ಯತೆ ಇಲ್ಲದವರಿಗೆ ಶಾಸಕ ಸ್ಥಾನ ಏಕೆ ಬೇಕು. ಶಾಸಕರು ಮೊದಲು ಕ್ಷೇತ್ರಕ್ಕೆ ನೀರು ಹರಿಸಿಕೊಳ್ಳುವತ್ತ ಚಿತ್ತ ಹರಿಸಲಿ. ಕ್ಷೇತ್ರಕ್ಕೆ ನೀರು ಹರಿಸಬೇಕು ಎಂಬುದನ್ನು ನಮ್ಮ ಉದ್ದೇಶವಷ್ಟೆ.” –  ಬಿ.ಸುರೇಶ್ಗೌಡ, ಮಾಜಿ ಶಾಸಕ.

ಟಾಪ್ ನ್ಯೂಸ್

farmer

78,303 ರೈತರ ಆತ್ಮಹತ್ಯೆ;ತೋಮರ್ ಸರ್, ವೈಫಲ್ಯ ಮರೆಮಾಡಬೇಡಿ ಎಂದ ಸುರ್ಜೆವಾಲಾ

ಪರಿಷತ್ ಫೈಟ್: ಹುಬ್ಬಳ್ಳಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕರ ನಡುವೆ ಹೊಯ್ ಕೈ!

ಪರಿಷತ್ ಫೈಟ್: ಹುಬ್ಬಳ್ಳಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕರ ನಡುವೆ ಹೊಯ್ ಕೈ!

ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೂ ಇಲ್ಲ: ಕೇಂದ್ರ

ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೂ ಇಲ್ಲ: ಕೇಂದ್ರ

ಐಪಿಎಲ್ ನ ಹರಾಜು ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕಿದೆ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ

ಐಪಿಎಲ್ ನ ಹರಾಜು ಪ್ರಕ್ರಿಯೆ ಸರಿಯಾಗಿಲ್ಲ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಅಸಮಾಧಾನ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

1-sfdsf

ಮಣಿಪಾಲ: ಹಲ್ಲೆಗೊಳಗಾದ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ಬಿಲ್ಚಾರ್ಚನೆ ಸ್ವಾಮೀಜಿ

ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ಪ್ರಕರಣ ; ಇಬ್ಬರ ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

ಕುಣಿಗಲ್: ನೀರಿನಲ್ಲಿ ನಾಲ್ವರು ಕೊಚ್ಚಿಹೋದ ಪ್ರಕರಣ; 2 ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

MUST WATCH

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

ಹೊಸ ಸೇರ್ಪಡೆ

farmer

78,303 ರೈತರ ಆತ್ಮಹತ್ಯೆ;ತೋಮರ್ ಸರ್, ವೈಫಲ್ಯ ಮರೆಮಾಡಬೇಡಿ ಎಂದ ಸುರ್ಜೆವಾಲಾ

aids victims in benglore rural

ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 3,771 ಮಂದಿ ಏಡ್ಸ್‌ ಪೀಡಿತರು..

ಪರಿಷತ್ ಫೈಟ್: ಹುಬ್ಬಳ್ಳಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕರ ನಡುವೆ ಹೊಯ್ ಕೈ!

ಪರಿಷತ್ ಫೈಟ್: ಹುಬ್ಬಳ್ಳಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕರ ನಡುವೆ ಹೊಯ್ ಕೈ!

ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೂ ಇಲ್ಲ: ಕೇಂದ್ರ

ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೂ ಇಲ್ಲ: ಕೇಂದ್ರ

ಐಪಿಎಲ್ ನ ಹರಾಜು ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕಿದೆ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ

ಐಪಿಎಲ್ ನ ಹರಾಜು ಪ್ರಕ್ರಿಯೆ ಸರಿಯಾಗಿಲ್ಲ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.