ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲವಾದ್ರೆ ಹೋಗಿ

ಕುಣಿಗಲ್ನ ಜೋಡಿಹೋಸಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಂಸದರಿಗೆ ಜನರು ಅಹವಾಲು ನೀಡಿದರು.

Team Udayavani, Aug 4, 2019, 4:22 PM IST

ಕುಣಿಗಲ್: ಕೈ ತುಂಬ ಸಂಬಳ ತೆಗೆದುಕೊಳ್ಳುತ್ತೀರ ಆದರೆ ವಿದ್ಯುತ್‌ ಕಲ್ಪಿಸಲು ಮೀನಮೇಷ ಎಣಿಸುತ್ತಿದ್ದೀರ ಎಂದು ಬೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದ ಡಿ.ಕೆ.ಸುರೇಶ್‌, ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲವಾದರೇ ಗಂಟು ಮೂಟೆ ಕಟ್ಟಿಕೊಂಡು ಹೋಗಿ ಎಂದು ಎಚ್ಚರಿಕೆ ನೀಡಿದರು. ಎಚ್ವಿಡಿಎಸ್‌ ಯೋಜನೆ ಯಡಿ ಅಳವಡಿಸಿರುವ ವಿದ್ಯುತ್‌ ಪರಿವರ್ತಕಕ್ಕೆ ತಿಂಗಳು ಕಳೆದರೂ ಕೇಬಲ್ ಹಾಕಿಲ್ಲ, ಇದರಿಂದ ಕುಡಿ ಯುವ ನೀರಿಗೆ ತೊಂದರೆ ಉಂಟಾಗಿದೆ ಎಂದು ಹುತ್ರಿದುರ್ಗ ಹೋಬಳಿ ಜೋಡಿಹೊಸಹಳ್ಳಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ರೈತರ ದೂರಿಗೆ ಸಂಸದರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಸಂಬಳ ತೆಗೆದುಕೊಂಡು ಗುತ್ತಿಗೆದಾರ ರಿಂದ ಹಣ ವಸೂಲಿ ಮಾಡುವುದಲ್ಲ ಎಂದು ಬೆಸ್ಕಾಂ ಎಇಇ ವೀರಭದ್ರಯ್ಯ, ಸೆಕ್ಷನ್‌ ಆಫೀಸರ್‌ ರಾಜು, ಕಾಮಗಾರಿ ಎಇ ಶಾಂತರಾಮು ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಯಾಗಿಲ್ಲ. ಪಿಡಿಒ ಬಿ.ಎಸ್‌.ಲೋಕೇಶ್‌ ಗಮನನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ವಾರದ ಒಳಗೆ ಕ್ರಮ ಕೈಗೊಂಡು ವರದಿ ನೀಡುವಂತೆ ಪಿಡಿಒಗೆ ಸಂಸದರು ಸೂಚಿಸಿದರು.

ಅಧಿಕಾರಿಗಳಿಗೆ ಬುದ್ಧಿ ಕಲಿಸಿ: ಹೊಸ ಐ.ಪಿ ಸೆಟ್‌ಗೆ ಚಾರ್ಜ್‌ ಮಾಡಲು ಹಾಗೂ ಮೀಟರ್‌ ಅಳವಡಿಸಲು ಹಣ ನೀಡಬೇಕು. ಇಲ್ಲವಾದಲ್ಲಿ ಬೆಸ್ಕಾಂ ಅಧಿಕಾರಿಗಳು ಬರುವುದಿಲ್ಲ ಎಂದು ಜನರು ಅಳಲು ತೋಡಿಕೊಂಡರು. ಹಣಕ್ಕಾಗಿ ಬಲವಂತ ಮಾಡುವ ಅಧಿಕಾರಿಗಳಿಗೆ ಬುದ್ಧಿ ಕಲಿಸಿ ನಾನಿದ್ದೇನೆ ಎಂದು ಸಂಸದರು ಹೇಳಿದರು.

ಪಂಚಾಯಿತಿಗೆ ಎಲ್ಲಾ ಅಧಿಕಾರ ಕೊಟ್ಟಿದೆ. ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸಬೇಕು. 20 ದಿನದ ಒಳಗೆ ಕೆಡಿಪಿ ಸಭೆ ಕರೆಯುತ್ತೇನೆ. ಮೂರು ತಿಂಗಳು ತಾಲೂಕಿನಾದ್ಯಂತ ಪ್ರವಾಸ ಮಾಡುತ್ತೇನೆ ಎಂದರು.

ಶಾಸಕ ಡಾ.ಎಚ್.ಡಿ.ರಂಗನಾಥ್‌, ಉಪವಿಭಾಗಾಧಿಕಾರಿ ಶಿವಕುಮಾರ್‌, ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌, ಇಒ ಶಿವರಾಜಯ್ಯ, ಸದಸ್ಯ ಐ.ಎ. ವಿಶ್ವನಾಥ್‌, ಗ್ರಾಪಂ ಅಧ್ಯಕ್ಷೆ ಬೋರಮ್ಮ, ಸದಸ್ಯರಾದ ಭಾಗ್ಯಮ್ಮ, ರಮೇಶ್‌, ಕೊಲ್ಲಾಪುರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಣ್ಣಗೌಡ, ಮುಖಂಡ ಕೆಂಪೀರೇ ಗೌಡ ಮತ್ತಿತರರು ಇದ್ದರು.

ಲಿಂಕ್‌ ಕೆನಾಲ್ ತಡೆಗೆ ಹುನ್ನಾರ:

ಜಿಲ್ಲೆಗೆ 24 ಟಿಎಂಸಿ ನೀರು ನಿಗದಿಪಡಿಸಲಾಗಿದೆ. ಈ ಪೈಕಿ ಕುಣಿಗಲ್ ತಾಲೂಕಿಗೆ ನಿಗದಿಪಡಿಸಿರುವ 3.5 ಟಿಎಂಸಿ ನೀರು 25 ವರ್ಷದಿಂದ ಹರಿದಿಲ್ಲ, ಹೀಗಾಗಿ ದೊಡ್ಡಕೆರೆಗೆ ನೀರು ಹರಿಸಲು ಲಿಂಕ್‌ ಕೆನಾಲ್ ಯೋಜನೆ ರೂಪಿಸಲಾಗಿದ್ದು, ಈಗಿನ ಸರ್ಕಾರದ ಕೆಲ ವ್ಯಕ್ತಿಗಳು ಕಾಮಗಾರಿ ತಡೆಯಲು ಕುತಂತ್ರ ನಡೆಸುತ್ತಿದ್ದಾರೆ. ನಮ್ಮ ಪಾಲಿನ ನೀರು ಪಡೆಯಲು ಜಿಲ್ಲೆಯ ಕೆಲವರೊಂದಿಗೆ ಹೋರಾಟ ಮಾಡುವಂತಾಗಿದೆ ಎಂದರು. ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಅಣಿಯಾಗಬೇಕು ಎಂದು ಸಂಸದರು ಕರೆ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ, ತಾಲೂಕಿಗೂ ಯಡಿಯೂರಪ್ಪ ಅವರಿಗೂ ಅವಿನಾಭಾವ ಸಂಬಂಧವಿದೆ. ಹಾಗಾಗಿ ಯೋಜನೆಗೆ ತೊಂದರೆ ಯಾಗಲ್ಲ ಎಂದು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೊರಟಗೆರೆ: ಎರಡು ತಿಂಗಳ ವೇತನ ಮತ್ತು 1 ವರ್ಷದ ವಿಶೇಷ ಭತ್ಯೆ ಜೊತೆ ಭವಿಷ್ಯ ನಿಧಿ ನೀಡದೆ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗಾರ್ಮೆಂಟ್ಸ್‌ ಎದುರು...

  • ತುಮಕೂರು: ನೂತನ ಮೋಟಾರ್‌ ಕಾನೂನು ಜಾರಿಯಾದ ಬಳಿಕ ಸಂಚಾರ ನಿಯಮಗಳು ಬಿಗಿ ಯಾಗಿದ್ದು, ಟ್ರಾಫಿಕ್‌ ಪೊಲೀಸರು ಕಾರ್ಯಪ್ರವೃತ್ತ ರಾಗಿರುವುದರಿಂದ ಎಮಿಷನ್‌, ಇನ್ಶೂರೆನ್ಸ್‌,...

  • ತುಮಕೂರು: ಜಿಲ್ಲೆಯಲ್ಲಿ ರಸ್ತೆ ಸುರಕ್ಷಾತಾ ನಿಯಮ ಉಲ್ಲಂಘಿಸಿರುವ 257 ವಾಹನ ಸವಾರರ ಚಾಲನಾ ಪರವಾನಗಿ ಹಾಗೂ 45 ವಾಹನ ಪರವಾನಗಿ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ...

  • ತುಮಕೂರು: ಜಿಲ್ಲೆಯಲ್ಲಿ ಮಳೆ ಬಾರದೆ ನೀರಿನ ಕೊರತೆ ಇರುವುದರಿಂದ ಜಲ ಸಂರಕ್ಷಣೆ ಆಂದೋಲನ ಪರಿಣಾಮಕಾರಿ ಯಾಗಿ ಕೈಗೊಳ್ಳಬೇಕು ಎಂದು ಜಲಶಕ್ತಿ ಅಭಿಯಾನ ಕೇಂದ್ರ...

  • ಕೊರಟಗೆರೆ: ತಾಲೂಕಿನ ರೈತರ ಅಭ್ಯುದಯಕ್ಕಾಗಿ ಜಾರಿ ಮಾಡಿರುವ ಕೇಂದ್ರ ಸರ್ಕಾರದ ರೈತರ ಪಿಂಚಣಿ ಯೋಜನೆಗೆ ಅರ್ಹ ರೈತ ಫ‌ಲಾ ನುಭವಿಗಳು ನೋಂದಾಯಿಸಿಕೊಳ್ಳ ಬೇಕೆಂದು...

ಹೊಸ ಸೇರ್ಪಡೆ

  • ಜಿ.ಎಸ್‌. ಕಮತರ ವಿಜಯಪುರ: ತ್ಯಾಜ್ಯಗಳಿಂದಾಗಿ ಕೊಳಕು ನಾರುತ್ತಿರುವ ನಗರದ ಅರೆಕಿಲ್ಲಾ ಪ್ರದೇಶದಲ್ಲಿರುವ ಐತಿಹಾಸಿಕ ಗಗನ ಮಹಲ್ ಕಂದಕದಲ್ಲಿ ಬೋಟಿಂಗ್‌ ಆರಂಭಿಸಿ...

  • ಕನಕಗಿರಿ: ಪಟ್ಟಣದಲ್ಲಿ ಖಜಾನೆ ಮತ್ತು ಉಪ ನೋಂದಣಿ ಕಚೇರಿಯನ್ನು ಪ್ರಾರಂಭಿಸಲು ಈಗಾಗಲೇ ಬಾಡಿಗೆ ಕಟ್ಟಡ ಪಡೆಯಲಾಗಿದೆ. ಶೀಘ್ರವೇ ಕಚೇರಿ ಪ್ರಾರಂಭಿಸಲಾಗುವುದು...

  • ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಕನಕಾಪೂರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಯಲ್ಲಾಲಿಂಗನ...

  • •ರವೀಂದ್ರ ಮುಕ್ತೇದಾರ ಔರಾದ: ಔರಾದ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡುವುದಕ್ಕಿಂತ ಸರ್ಕಾರ ಸಂತಪೂರ ಪಟ್ಟಣವನ್ನು ತಾಲೂಕು ಕೇಂದ್ರವಾಗಿಸಬೇಕು ಎಂದು ಜನಪ್ರತಿನಿಧಿಗಳು...

  • ಬಂಕಾಪುರ: ರಾಯಚೂರ ಗಲ್ಲಿಯಲ್ಲಿನ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೊಳಚೆ ನಿಂತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಪರಿಣಾಮ ಮಕ್ಕಳಲ್ಲಿ...