Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !


Team Udayavani, Sep 7, 2024, 8:00 AM IST

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

ಕಾಪು: ಇಲ್ಲೊಂದು ಯುವಕರ ತಂಡ ಅನಾಥಾಶ್ರಮಕ್ಕೆ ನೆರವಾಗುವುದಕ್ಕಾಗಿಯೇ ಅಷ್ಟಮಿ ವೇಳೆ ವೇಷ ಧರಿಸಿ ಊರೂರು ಸುತ್ತಿ ಹಣ ಸಂಗ್ರಹಿಸಿದೆ. ವಿದೂಷಕರ ವೇಷ ಧರಿಸಿದ ಕಾಪುವಿನ ಸಚಿನ್‌ ಶೆಟ್ಟಿ ನೇತೃತ್ವದ ತಂಡ ಸಂಗ್ರಹಿಸಿದ 14.33 ಲ.ರೂ.ಯನ್ನು ಕಾರ್ಕಳ ತಾಲೂಕಿನ ಬೈಲೂರು ಕೌಡೂರಿನಲ್ಲಿರುವ ಹೊಸ ಬೆಳಕು ಅನಾಥಾಶ್ರಮದ ಮುಖ್ಯಸ್ಥೆ ತನುಲಾ ತರುಣ್‌ ಅವರಿಗೆ ಬುಧವಾರ ಹಸ್ತಾಂತರಿಸಿದರು.

ತಂಡದ ಸಚಿನ್‌, ಚೇತನ್‌, ನಿತೇಶ್‌, ಸುದೀಪ್‌, ಅಭಿಷೇಕ್‌ ಅವರು ತಮ್ಮ ಸಂಗಡಿಗರ ಜತೆ ವೇಷ ಧರಿಸಿ ಉಡುಪಿ ಮತ್ತು ಮಂಗಳೂರಿನಲ್ಲಿ ತಿರುಗಾಡಿ ದೇಣಿಗೆ ಸಂಗ್ರಹಿಸಿದ್ದಾರೆ.

ಅನಾಥಾಶ್ರಮದ ಕ್ಯುಆರ್‌ ಕೋಡ್‌
ಈ ತಂಡವು ತಿರುಗಾಟದ ವೇಳೆ ಹೊಸ ಬೆಳಕು ಆಶ್ರಮದ್ದೇ ಕ್ಯುಆರ್‌ ಕೋಡ್‌ ಅನ್ನು ಬಳಸಿದ್ದು ವಿಶೇಷವಾಗಿತ್ತು. ವೇಷಕ್ಕೆ ಬೇಕಾದ ಖರ್ಚನ್ನು ತಂಡದ ಪ್ರೋತ್ಸಾಹಕರು ಭರಿಸಿದ್ದು, ನಗದು ರೂಪದಲ್ಲಿ ಸಂಗ್ರಹವಾದ ಹಣವನ್ನು ಕೂಡ ಆಶ್ರಮಕ್ಕೆ ನೀಡಿದ್ದಾರೆ.

ಹನ್ನೊಂದು ವರ್ಷದಿಂದ ಹೊಸ ಬೆಳಕು ಆಶ್ರಮವನ್ನು ಮುನ್ನಡೆಸುತ್ತಿದ್ದೇವೆ. ಕುಟುಂಬ ವರ್ಗದಿಂದ ದೂರವಾಗಿರುವ ಸುಮಾರು 180 ಮಂದಿಗೆ ಇಲ್ಲಿ ಸೇವೆ ನೀಡುತ್ತಿದ್ದು, ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಸಚಿನ್‌ ಮತ್ತು ಬಳಗದವರು ಇಲ್ಲಿಗೆ ಬಂದು ಆಶ್ರಮ ಮತ್ತು ಆಶ್ರಮವಾಸಿಗಳ ಚಟುವಟಿಕೆಗಳನ್ನು ನೋಡಿ, ಸಂಕಷ್ಟವನ್ನು ಗಮನಿಸಿ ವೇಷ ಹಾಕಿ ತಮ್ಮ ದೇಹವನ್ನು ದಂಡಿಸಿ ಹಣ ಸಂಗ್ರಹಿಸಿ ನೆರವಾಗಿದ್ದಾರೆ.
-ತನುಲಾ ತರುಣ್‌, ಹೊಸ ಬೆಳಕು ಆಶ್ರಮದ ಮುಖ್ಯಸ್ಥೆ

ಟಾಪ್ ನ್ಯೂಸ್

Rohit-SHarma-(2)

Test Series; ನ್ಯೂಜಿ ಲ್ಯಾಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

ISREL

UN posts ಮೇಲೆಯೇ ಇಸ್ರೇಲ್ ದಾಳಿ! ; 600 ಭಾರತೀಯ ಸೈನಿಕರು ಅಪಾಯದಲ್ಲಿ!!

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ರಕ್ಷಣಾಪುರ ಜವನೆರ್ ವತಿಯಿಂದ ಕಾಪು ಪಿಲಿ ಪರ್ಬ ಸ್ಪರ್ಧೆ ಉದ್ಘಾಟನೆ

Kaup: ರಕ್ಷಣಾಪುರ ಜವನೆರ್ ವತಿಯಿಂದ ಕಾಪು ಪಿಲಿ ಪರ್ಬ ಸ್ಪರ್ಧೆ ಉದ್ಘಾಟನೆ

19

Malpe: ವಿಜಯದಶಮಿಗೆ ದೇವಿ, ಪಂಜುರ್ಲಿ ಮೆರವಣಿಗೆ

Uchila Dasara: ಉಡುಪಿ ಉಚ್ಚಿಲ ದಸರಾ 2024: ಶೋಭಾಯಾತ್ರೆಗೆ ಅಂತಿಮ ಸಿದ್ಧತೆ

Uchila Dasara: ಉಡುಪಿ ಉಚ್ಚಿಲ ದಸರಾ 2024: ಶೋಭಾಯಾತ್ರೆಗೆ ಅಂತಿಮ ಸಿದ್ಧತೆ

Rathan Tata: 10 ವರ್ಷ ಹಿಂದೆ ಪುತ್ತಿಗೆ ಮೂಲ ಮಠಕ್ಕೆ ಆಗಮಿಸಿದ್ದ ರತನ್‌ ಟಾಟಾ

Ratan Tata: 10 ವರ್ಷ ಹಿಂದೆ ಪುತ್ತಿಗೆ ಮೂಲ ಮಠಕ್ಕೆ ಆಗಮಿಸಿದ್ದ ರತನ್‌ ಟಾಟಾ

8

ಇಂದ್ರಾಳಿ ಮೇಲ್ಸೇತುವೆ ನ.10ರೊಳಗೆ ಪೂರ್ಣಗೊಳಿಸಲು ಡಿಸಿ ನಿರ್ದೇಶನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

11

Kadaba: ಮನೆಗಳಲ್ಲಿ ಮಕ್ಕಳಿಂದಲೇ ಶಾರದಾ ಪೂಜೆ

Rohit-SHarma-(2)

Test Series; ನ್ಯೂಜಿ ಲ್ಯಾಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

10(2)

Bantwal: ಪಾಣೆಮಂಗಳೂರು ಶಾಲಾ ಶಾರದೋತ್ಸವಕ್ಕೆ ಶತಮಾನ

14

Punjalkatte; ಸರಕಾರಿ ಶಾಲೆ ಉಳಿಸಲು ನವರಾತ್ರಿ ವೇಷ!

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.