ಹರಕೆ ರೂಪದಲ್ಲಿ ಬಿಟ್ಟ 26 ವರ್ಷ ಪ್ರಾಯದ ಬಸವ; ಹಿಲಿಯಾಣ ಗರೋಡಿ ಬಸವ ಇನ್ನಿಲ್ಲ


Team Udayavani, Jan 23, 2020, 11:01 PM IST

2101SIDE8-HILIYANA-GAROODI

ಸಿದ್ದಾಪುರ: ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರೋಡಿಗೆ ಹರಕೆ ರೂಪದಲ್ಲಿ ಬಿಟ್ಟ 26 ವರ್ಷ ಪ್ರಾಯದ ಬಸವ ವಯೋ ಸಹಜವಾಗಿ ಮಂಗಳ ವಾರ ಬೆಳಗ್ಗೆ ಮೃತಪಟ್ಟಿದೆ. ಮೃತಪಟ್ಟ ಬಸವವನ್ನು ಹಿಂದೂ ಸಂಪ್ರದಾಯದಂತೆ ವಿವಿಧ ಧಾರ್ಮಿಕ ವಿಧಿ ಕ್ರಿಯೆಯಿಂದ ಅಂತ್ಯ ಸಂಸ್ಕಾರ ನಡೆಸಲಾಯಿತು.

ಹಿಲಿಯಾಣ ಶಾಲೆ ಬಳಿ ನಿವಾಸಿ ಗೋಪಾಲ ಮಡಿವಾಳ ಅವರು 1994ರ ಅಗೋಸ್ಟ್‌ 16ರಂದು ಒಂದು ವರ್ಷ ಪ್ರಾಯದ ಗಂಡು ಕರುವನ್ನು ದೇವರಿಗೆ ಹರಕೆ ರೂಪದಲ್ಲಿ ಬಿಟ್ಟರು. ಅಂದಿನಿಂದ ಇಂದಿನ ತನಕ ಈ ಬಸವ ಹಿಲಿಯಾಣ ಗ್ರಾಮದಲ್ಲಿ ಮನೆ ಮನೆ ಸುತ್ತಾಡಿಕೊಂಡು ರಾತ್ರಿ ಗರೋಡಿಗೆ ಬಂದು ಮಲಗುತ್ತಿತ್ತು. ಸುಮಾರು 26 ವರ್ಷ ಪ್ರಾಯದಿಂದಲೂ ಸೌಮ್ಯ ಸ್ವಭಾವದಿಂದ ಕೂಡಿದೆ. ಹಿಲಿಯಾಣದ ಗ್ರಾಮದವರು ಬಸವ ಮನೆಗೆ ಬಂದಾಗ ಗರೋಡಿಯ ದೇವರು ಮನೆಗೆ ಬಂದಿದ್ದಾರೆ ಎಂದು ಭಕ್ತಿಯಿಂದ ಆಹಾರ ನೀಡಿ, ಕಾಲಿಗೆ ನಮಸ್ಕRರಿಸುತ್ತಿದ್ದರು. ಜನರಿಗೆ ಅಚ್ಚು ಮೆಚ್ಚಿನ ದೇವರ ಬಸವನಾಗಿದ ಎತ್ತನ್ನು ಗರೋಡಿಯಲ್ಲಿ ಪ್ರತಿ ಸಂಕ್ರಮಣ, ಕಾಯದಾ ಪೂಜೆ, ಗೋವು ಪೂಜೆ, ವಾರ್ಷಿಕ ನೇಮೋತ್ಸವದಂದು ಸ್ನಾನ ಮಾಡಿಸಿ, ಹೂ ಹಾರಗಳಿಂದ ಶೃಂಗ ರಿಸುವ ಮೂಲಕ ದೇವರ ಪ್ರಸಾದ ಹಾಕಿ ಪೂಜಿಸುತ್ತಿದ್ದರು. ಹಿಲಿಯಾಣ ಪರಿಸರದಲ್ಲಿ ತಿರುಗಾಡಿಕೊಂಡಿದ ಬಸವ ಹಿಲಿಯಾಣ ಪಕ್ಕದ ಗ್ರಾಮವಾದ ಹಳ್ಳಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಕೊನೆಯು ಸಿರೆಳಿದಿದೆ.

ಹಿಲಿಯಾಣ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವೈ. ಕರುಣಾಕರ ಶೆಟ್ಟಿ ಯರುಕೋಣೆ ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ, ಬಸವನಿಗೆ ಸ್ಥಾನ್ನಾಧಿಗಳನ್ನು ನೆರವೇರಿಸಿ, ಹೂವಿನ ಹಾರ ಹಾಕಿ, ಹೊಸ ಬಟ್ಟೆ ಹೋದಿಸಿ ವಿವಿಧ ಧಾರ್ಮಿಕ ಕ್ರೀಯೆ ನಡೆದಿದರು. ಅನಂತರ ಭಕ್ತರಿಂದ ನುಡಿ ನಮನ ಸಲ್ಲಿಸಲಾಯಿತು. ಅಂತಿಮ ಕಾರ್ಯ ಮುಗಿದ ಬಳಿಕ ದಫ‌ನ ಕಾರ್ಯ ಮಾಡಲಾಯಿತು.

ಬಸವ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ತರು ಹಳ್ಳಿಗೆ ಆಗಮಿಸಿ, ಪೂಜಿಸಿ ಅಂತಿಮದರ್ಶನ ಪಡೆದರು. ಗರೋಡಿಗೆ ಬಸವನ್ನು ಹರಕೆ ರೂಪವಾಗಿ ನೀಡಿದ ಗೋಪಾಲ ಮಡಿವಾಳ, ಸಿದ್ದಾರ್ಥ ನಾಯ್ಕ, ಸದಾಶಿವ ಶೆಟ್ಟಿ, ಕುಶಲ ಶೆಟ್ಟಿ ಹಾಗೂ ಸ್ಥಳೀಯರು ಮತ್ತು ಭಕ್ತರು ಬಸವನ ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.