“ಮಹಾತ್ಮರ ಸ್ಮರಣೆಯೊಂದಿಗೆ ಆದರ್ಶ ಪಾಲಿಸಿ’

ಕಾರ್ಕಳಾದ್ಯಂತ ಸಂಭ್ರಮದ 73ನೇ ಸ್ವಾತಂತ್ರ್ಯೋತ್ಸವ

Team Udayavani, Aug 16, 2019, 5:45 AM IST

ಕಾರ್ಕಳ: ತಾಲೂಕಿನಾದ್ಯಂತ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ, ಸಡಗರದಿಂದ ಆಚರಿಸಲ್ಪಟ್ಟಿತು. ಬೆಳಗ್ಗೆ 9ರ ವೇಳೆ ಅನಂತಶಯನದಲ್ಲಿ ತಹಶೀಲ್ದಾರ್‌ ಪುರಂದರ ಹೆಗ್ಡೆ ಧ್ವಜಾರೋಹಣಗೈದರು.

ಪೊಲೀಸರು, ಗೃಹ ರಕ್ಷಕ ದಳ ಸಿಬಂದಿ ಪಥಸಂಚಲನ ನಡೆಸಿದರು. ಪೆರ್ವಾಜೆ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಜೇಸೀಸ್‌ ಆಂಗ್ಲ ಮಾಧ್ಯಮ ಶಾಲೆ, ಕಾಬೆಟ್ಟು ಪ್ರಾಥಮಿಕ ಹಾಗೂ ಪ್ರೌಢಶಾಲೆ, ಭುವನೇಂದ್ರ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಪಥಸಂಚಲನಕ್ಕೆ ಮೆರುಗು ನೀಡಿದರು.

ಅನಂತಶಯನದಿಂದ ಗಾಂಧಿ ಮೈದಾನಕ್ಕೆ ಭುವನೇಂದ್ರ ಕಾಲೇಜಿನ ಬ್ಯಾಂಡ್‌ನೊಂದಿಗೆ ಮೆರವಣಿಗೆ ಸಾಗಿತು. ಮಳೆಯನ್ನೂ ಲೆಕ್ಕಿಸದೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಮಹಾತ್ಮರ ಅನುಸರಣೆ ಮಾಡುತ್ತಿರಬೇಕು
ಗಾಂಧಿ ಮೈದಾನದಲ್ಲಿ ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ತಹಶೀಲ್ದಾರ್‌ ಪುರಂದರ ಹೆಗ್ಡೆ, ಹಲವಾರು ಹೋರಾಟಗಾರರ ತ್ಯಾಗ, ಬಲಿದಾನ ದಿಂದಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ, ದೇಶದ ರಕ್ಷಣೆಗಾಗಿ ಹುತಾತ್ಮರಾದ ಮಹಾತ್ಮರ ಸ್ಮರಣೆ ಜತೆ ಅವರ ಆದರ್ಶವನ್ನು ಅನುಸರಣೆ ಮಾಡಬೇಕೆಂದರು.

ಯುದ್ಧದಲ್ಲಿ ಭಾಗಿಗಳಾಗಿಯೇ ದೇಶಪ್ರೇಮ ವ್ಯಕ್ತಪಡಿ ಸಬೇಕೆಂದಿಲ್ಲ. ರಾಷ್ಟ್ರೀಯ ಹಬ್ಬಗಳ ಅರ್ಥಪೂರ್ಣ ಆಚರಣೆ, ರಾಷ್ಟ್ರಗೀತೆ, ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸುವುದು. ಪರಿಸರ ಸ್ವತ್ಛತೆ, ಮತದಾನ, ಸಾರ್ವಜನಿಕ ಆಸ್ತಿ ರಕ್ಷಣೆ, ಹಿರಿಯರನ್ನು ಪ್ರೀತಿಯಿಂದ ಕಾಣುವ ಮೂಲಕವೂ ದೇಶ ಪ್ರೇಮ ಮೆರೆಯಬಹುದೆಂದರು.

ಶಾಸಕ ವಿ. ಸುನಿಲ್‌ ಕುಮಾರ್‌, ಎಎಸ್‌ಪಿ ಪಿ. ಕೃಷ್ಣಕಾಂತ್‌, ತಾ.ಪಂ. ಇಒ ಡಾ| ಮೇ| ಹರ್ಷ ಕೆ.ಬಿ., ಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್‌., ಕ್ರೀಡಾಧಿಕಾರಿ ಫ್ರೆಡ್ರಿಕ್‌ ರೆಬೆಲ್ಲೋ, ಪುರಸಭಾ ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ, ಜಿ.ಪಂ. ಸದಸ್ಯರಾದ ಉದಯ್‌ ಕೋಟ್ಯಾನ್‌, ದಿವ್ಯಶ್ರೀ ಅಮೀನ್‌, ರೇಷ್ಮಾ ಶೆಟ್ಟಿ, ಸುಮಿತ್‌ ಶೆಟ್ಟಿ ಕೌಡೂರು, ತಾ.ಪಂ. ಮತ್ತು ಪುರಸಭಾ ಸದಸ್ಯರು, ಶಿಕ್ಷಕರು, ಇಲಾಖಾಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡರು. ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಪೂರ್ವ ನಿಗದಿಯಂತೆ ನಡೆಯಬೇಕಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜ್ಯದಲ್ಲಿ ಭೀಕರ ನೆರೆ ಸಂಭವಿಸಿದ ಹಿನ್ನೆಲೆಯಲ್ಲ ರದ್ದುಪಡಿಸಲಾಗಿತ್ತು. ತಾಲೂಕಿನ 254 ಶಾಲೆ, 34 ಗ್ರಾ.ಪಂ., ವಿವಿಧ ಸಂಘ-ಸಂಸ್ಥೆಗಳ ಕಚೇರಿಗಳಲ್ಲಿ ಧ್ವಜಾರೋಹಣ ನಡೆಸಿ, ಸಿಹಿತಿಂಡಿ ಹಂಚಲಾಯಿತು.

ಬೃಹತ್‌ ಬಾವುಟ
ಪುರಸಭಾ ಸದಸ್ಯ ಶುಭದಾ ರಾವ್‌ ನಿರ್ಮಿಸಿರುವ 20×14 ಅಡಿ ವಿಸ್ತಾರದ ತ್ರಿವರ್ಣ ಧ್ವಜ ಆಕರ್ಷಣೀಯವಾಗಿತ್ತು. ವಿದ್ಯಾರ್ಥಿಗಳು ಸಮವಸ್ತ್ರ, ಕೇಸರಿ, ಬಿಳಿ, ಹಸಿರು ಬಣ್ಣದ ಕ್ಯಾಪ್‌ ಧರಿಸಿ, ಬಾವುಟವನ್ನು ಮೆರವಣಿಗೆ ಮೂಲಕ ಗಾಂಧಿ ಮೈದಾನಕ್ಕೆ ತಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ